ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಅಕ್ಟೋಬರ್-ಡಿಸೆಂಬರ್
“ಮಕ್ಕಳನ್ನು ಜವಾಬ್ದಾರಿಯುತ ವಯಸ್ಕರಾಗುವಂಥ ರೀತಿಯಲ್ಲಿ ಬೆಳೆಸುವುದು ಖಂಡಿತವಾಗಿಯೂ ಒಂದು ದೊಡ್ಡ ಸವಾಲು. ಇದರಲ್ಲಿ ಹೆತ್ತವರು ಹೇಗೆ ಯಶಸ್ವಿಗಳಾಗಬಹುದೆಂದು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಈ ಬಗ್ಗೆ ದೇವರ ವಾಕ್ಯದಲ್ಲಿ ಒಳ್ಳೇ ಬುದ್ಧಿವಾದ ಇದೆ. ಅದನ್ನು ನಿಮಗೆ ತೋರಿಸಲೊ? [ಮನೆಯವನಿಗೆ ಆಸಕ್ತಿ ಇರುವಲ್ಲಿ ಎಫೆಸ 6:4 ಓದಿ.] ಇದರ ಬಗ್ಗೆ ಮತ್ತು ಹೆತ್ತವರಿಗೆ ನೆರವಾಗಬಲ್ಲ ಇನ್ನಿತರ ಸೂತ್ರಗಳ ಬಗ್ಗೆ ಈ ಲೇಖನ ಚರ್ಚಿಸುತ್ತದೆ.” ಪುಟ 30ರ ಲೇಖನ ತೋರಿಸಿ.
ಎಚ್ಚರ! ಅಕ್ಟೋಬರ್-ಡಿಸೆಂಬರ್
“ಈಗೀಗ ಜನರ ಜೀವನದಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿರುವಂತೆ ತೋರುತ್ತಿದೆ, ಅಲ್ಲವೇ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಇದಕ್ಕಿರುವ ಒಂದು ಕಾರಣವನ್ನು ಅನೇಕರು ಈ ಮಾತುಗಳಲ್ಲಿ ಕಂಡುಕೊಂಡಿದ್ದಾರೆ. ಇದನ್ನು ನಿಮಗೆ ಓದಿತೋರಿಸಲಾ? [ಮನೆಯವನು ಒಪ್ಪುವಲ್ಲಿ 2 ತಿಮೊಥೆಯ 3:1 ಓದಿ.] ಮಾನಸಿಕ ಒತ್ತಡ ನಮ್ಮನ್ನು ಹೇಗೆ ಬಾಧಿಸಬಲ್ಲದೆಂಬ ವಿಷಯವನ್ನು ಈ ಪತ್ರಿಕೆ ಚರ್ಚಿಸುತ್ತದೆ. ಅದನ್ನು ನಾವು ಹೇಗೆ ನಿಯಂತ್ರಿಸಬಹುದೆಂಬ ಕೆಲವು ಕಿವಿಮಾತುಗಳೂ ಇದರಲ್ಲಿವೆ.”