ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
ಕನ್ನಡ ಪ್ರಕಾಶನಗಳು (1987-2026)
ಲಾಗ್ ಔಟ್
ಲಾಗಿನ್
ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಸ್ವಾಗತ.
ಇದು ಯೆಹೋವನ ಸಾಕ್ಷಿಗಳು ಬೇರೆಬೇರೆ ಭಾಷೆಯಲ್ಲಿ ತಯಾರಿಸಿರುವ ಪ್ರಕಾಶನಗಳ ಸಂಶೋಧನಾ ಸಾಧನ.
ಪ್ರಕಾಶನಗಳನ್ನು ಡೌನ್‌ಲೋಡ್‌ ಮಾಡಲು ದಯವಿಟ್ಟು jw.orgಗೆ ಭೇಟಿ ಮಾಡಿ.
  • ಇಂದು

ಶುಕ್ರವಾರ, ಅಕ್ಟೋಬರ್‌ 16

ನಿನ್ನ ಹೃದಯ ಅವಳ ದಾರಿ ಹಿಡಿಯೋಕೆ ಬಿಡಬೇಡ. ಅಪ್ಪಿತಪ್ಪಿನೂ ಅವಳ ಬೀದಿಗೆ ಹೋಗಬೇಡ.—ಜ್ಞಾನೋ. 7:25.

ಸೊಲೊಮೋನ ಹೇಳಿದ ಈ ಉದಾಹರಣೆಯಿಂದ ನಮಗೇನು ಗೊತ್ತಾಗುತ್ತೆ? ಯೆಹೋವನ ಯಾವುದೇ ಒಬ್ಬ ಸೇವಕನಿಗೂ ಹೀಗೆ ಆಗೋ ಸಾಧ್ಯತೆ ಇದೆ ಅಂತ ಗೊತ್ತಾಗುತ್ತೆ. ಒಬ್ಬ ವ್ಯಕ್ತಿ ಪಾಪ ಮಾಡಿದ್ಮೇಲೆ ಅದು ತಕ್ಷಣ ಆಗಿಬಿಡ್ತು, ನನಗೆ ಗೊತ್ತಿಲ್ಲದೇ ಆಗಿಬಿಡ್ತು ಅಂತ ಹೇಳಬಹುದು. ಆದ್ರೆ ಆಮೇಲೆ ಅವನು ಕೂತು ಯೋಚ್ನೆ ಮಾಡಿದಾಗ, ಆ ಪಾಪ ಮಾಡೋ ಮುಂಚೆ ಕೆಲವೊಂದು ತಪ್ಪಾದ ಹೆಜ್ಜೆಗಳನ್ನ ತಗೊಂಡಿದ್ದ ಅಂತ ಅವನಿಗೆ ಗೊತ್ತಾಗುತ್ತೆ. ತಪ್ಪಾದ ಹೆಜ್ಜೆಗಳು ಅಂದ್ರೆ, ಕೆಟ್ಟ ಸಹವಾಸ ಮಾಡಿರಬಹುದು, ಕೆಟ್ಟ ಮನೋರಂಜನೆ ಆರಿಸ್ಕೊಂಡಿರಬಹುದು, ತಪ್ಪು ಆಸೆ ಹುಟ್ಟಿಸೋ ವೆಬ್‌ಸೈಟನ್ನ ನೋಡಿರಬಹುದು ಮತ್ತು ತಪ್ಪಾದ ಜಾಗದಲ್ಲಿ ಇದ್ದಿರಬಹುದು. ಅಷ್ಟೇ ಅಲ್ಲ ಅವನು ಪ್ರಾರ್ಥನೆ ಮಾಡೋದನ್ನ, ಬೈಬಲ್‌ ಓದೋದನ್ನ, ಕೂಟಗಳಿಗೆ ಹೋಗೋದನ್ನ, ಸೇವೆ ಮಾಡೋದನ್ನ ನಿಲ್ಲಿಸಿರಬಹುದು. ಹೀಗೆ ಜ್ಞಾನೋಕ್ತಿಯಲ್ಲಿ ಹೇಳಿದ ಆ ಯುವಕನ ತರ ಅವನು ತಕ್ಷಣ ಪಾಪ ಮಾಡದೇ ಇರಬಹುದು, ಆದ್ರೆ ಅದಕ್ಕಿಂತ ಮುಂಚೆ ಕೆಲವು ತಪ್ಪಾದ ಹೆಜ್ಜೆಗಳನ್ನ ತಗೊಂಡಿರ್ತಾನೆ. ಇದ್ರಿಂದ ನಮಗೇನು ಪಾಠ? ನಾವು ಪಾಪ ಮಾಡೋದ್ರಿಂದಷ್ಟೇ ಅಲ್ಲ ಪಾಪಕ್ಕೆ ನಡಿಸೋ ಹೆಜ್ಜೆಗಳಿಂದಾನೂ ದೂರ ಇರಬೇಕು. ಸೊಲೊಮೋನ ಆ ಹುಡುಗನ ಘಟನೆ ಹೇಳಿದ ಮೇಲೆ ಇದೇ ಸಲಹೆ ಕೊಟ್ಟ.—ಮತ್ತಾ. 5:29, 30. w24.07 16 ¶10-11

ದಿನದ ವಚನ ಓದಿ ಚರ್ಚಿಸೋಣ—2026

ಶನಿವಾರ, ಅಕ್ಟೋಬರ್‌ 17

ನಾವು ಮಣ್ಣಿನ ಪಾತ್ರೆಗಳ ತರ ಇದ್ರೂ ನಮ್ಮಲ್ಲಿ ಈ ನಿಧಿ ಇದೆ.—2 ಕೊರಿಂ. 4:7.

ಇಲ್ಲಿ ಹೇಳಿರೋ ನಿಧಿ ಅಂದ್ರೆ ಏನು? ಜನ್ರ ಜೀವ ಉಳಿಸೋ ದೇವರ ಸಂದೇಶ ಸಾರೋ ಕೆಲಸನೇ ಈ ನಿಧಿ. (2 ಕೊರಿಂ. 4:1) ಹಾಗಾದ್ರೆ ಮಣ್ಣಿನ ಪಾತ್ರೆ ಅಂದ್ರೆ ಯಾರು? ಈ ಸಂದೇಶ ಸಾರೋ ಯೆಹೋವನ ಸೇವಕರು. ಪೌಲನ ಕಾಲದಲ್ಲಿ ವ್ಯಾಪಾರಿಗಳು ಮಣ್ಣಿನ ಪಾತ್ರೆಯಲ್ಲಿ ತುಂಬ ಬೆಲೆಬಾಳೋ ವಸ್ತುಗಳನ್ನ ತಗೊಂಡು ಹೋಗ್ತಿದ್ರು. ಉದಾಹರಣೆಗೆ ಆಹಾರ, ದ್ರಾಕ್ಷಾಮದ್ಯ ಮತ್ತು ಹಣ. ಇವತ್ತು ಯೆಹೋವ ನಮಗೆ ಒಂದು ಬೆಲೆಬಾಳೋ ನಿಧಿ ಕೊಟ್ಟಿದ್ದಾನೆ. ಅದೇ ಸಾರೋ ಕೆಲಸ. ಹಾಗಾಗಿ ಆ ಸಿಹಿಸುದ್ದಿನ ಧೈರ್ಯವಾಗಿ ಸಾರೋಕೆ ಆತನು ನಮಗೆ ಖಂಡಿತ ಶಕ್ತಿ ಕೊಡ್ತಾನೆ. ಕೆಲವೊಮ್ಮೆ ನಮಗೆ ಜನ್ರ ಹತ್ರ ಮಾತಾಡೋಕೆ ಭಯ ಆಗುತ್ತೆ. ಆಗ ಏನು ಮಾಡಬೇಕು? ಅಪೊಸ್ತಲರು ಏನು ಮಾಡಿದ್ರು ನೋಡಿ. ಅವ್ರಿಗೆ ಸಾರಲೇಬಾರದು ಅಂತ ಕೆಲವು ಅಧಿಕಾರಿಗಳು ಆಜ್ಞೆ ಕೊಟ್ರು. ಆಗ ಅಪೊಸ್ತಲರು ಯೆಹೋವನ ಹತ್ರ “ನಿನ್ನ ಮಾತನ್ನ ಧೈರ್ಯವಾಗಿ ಹೇಳ್ತಾ ಇರೋಕೆ ಸಹಾಯ ಮಾಡು” ಅಂತ ಪ್ರಾರ್ಥನೆ ಮಾಡಿದ್ರು. ಯೆಹೋವ ಅವ್ರ ಪ್ರಾರ್ಥನೆಗೆ ತಕ್ಷಣ ಉತ್ರ ಕೊಟ್ಟನು. (ಅ. ಕಾ. 4:18, 29, 31) ಭಯ ಆದಾಗ ನೀವೂ ‘ಜನ್ರ ಮೇಲಿರೋ ಭಯಕ್ಕಿಂತ ಪ್ರೀತಿ ಜಾಸ್ತಿ ಆಗೋ ತರ ಮಾಡಪ್ಪಾ’ ಅಂತ ಕೇಳ್ಕೊಳಿ. w24.04 16 ¶8-9

ದಿನದ ವಚನ ಓದಿ ಚರ್ಚಿಸೋಣ—2026

ಭಾನುವಾರ, ಅಕ್ಟೋಬರ್‌ 18

ಸ್ವರ್ಗದಲ್ಲಿರೋ ಅಪ್ಪಾ, ನಿನ್ನ ಹೆಸ್ರು ಪವಿತ್ರವಾಗಲಿ.—ಮತ್ತಾ. 6:9.

ಯೆಹೋವನ ಮೇಲೆ ನಮಗಿರೋ ಪ್ರೀತಿ ಆತನ ಹೆಸ್ರನ್ನ ಪವಿತ್ರೀಕರಿಸೋಕೆ ಸಹಾಯ ಮಾಡುತ್ತೆ. ಅಂದ್ರೆ ಯೆಹೋವನ ಬಗ್ಗೆ ಸೈತಾನ ಹೇಳಿರೋದೆಲ್ಲ ಸುಳ್ಳು ಅಂತ ನಾವು ಬೇರೆಯವ್ರಿಗೆ ಹೇಳೋಕೆ ಇಷ್ಟಪಡ್ತೀವಿ. (ಆದಿ. 3:1-5; ಯೋಬ 2:4; ಯೋಹಾ. 8:44) ನಾವು ಸಿಹಿಸುದ್ದಿ ಸಾರುವಾಗ ಯೆಹೋವನ ಬಗ್ಗೆ ಸತ್ಯ ತಿಳಿಸೋಕೆ ತುಂಬ ಇಷ್ಟಪಡ್ತೀವಿ. ಆತನು ನಮ್ಮನ್ನ ಎಷ್ಟು ಪ್ರೀತಿಸ್ತಾನೆ, ಆತನು ನ್ಯಾಯ ಮತ್ತು ನೀತಿಯಿಂದ ಆಳ್ತಾನೆ ಮತ್ತು ತನ್ನ ಆಳ್ವಿಕೆಯಲ್ಲಿ ಈಗಿರೋ ಎಲ್ಲ ಕಷ್ಟಗಳನ್ನ ತೆಗೆದುಹಾಕಿ ಜನ್ರೆಲ್ಲ ಶಾಂತಿ ನೆಮ್ಮದಿಯಿಂದ ಇರೋ ತರ ಮಾಡ್ತಾನೆ ಅಂತ ಹೇಳೋಕೆ ಇಷ್ಟಪಡ್ತೀವಿ. (ಕೀರ್ತ. 37:10, 11, 29; 1 ಯೋಹಾ. 4:8) ಈ ತರ ನಾವು ಯೆಹೋವನ ಬಗ್ಗೆ ಬೇರೆಯವ್ರಿಗೆ ಹೇಳುವಾಗ ಆತನ ಹೆಸರು ಪವಿತ್ರ ಆಗೋಕೆ ಸಹಾಯ ಮಾಡ್ತೀವಿ. ಅಷ್ಟೇ ಅಲ್ಲ ಯೆಹೋವನ ಸಾಕ್ಷಿಗಳು ಅನ್ನೋ ಹೆಸ್ರಿಗೆ ತಕ್ಕ ಹಾಗೆ ನಾವು ನಡ್ಕೊಂಡಾಗ ನಮಗೆ ಖುಷಿನೂ ಆಗುತ್ತೆ. w24.05 18 ¶12

ದಿನದ ವಚನ ಓದಿ ಚರ್ಚಿಸೋಣ—2026
ಸ್ವಾಗತ.
ಇದು ಯೆಹೋವನ ಸಾಕ್ಷಿಗಳು ಬೇರೆಬೇರೆ ಭಾಷೆಯಲ್ಲಿ ತಯಾರಿಸಿರುವ ಪ್ರಕಾಶನಗಳ ಸಂಶೋಧನಾ ಸಾಧನ.
ಪ್ರಕಾಶನಗಳನ್ನು ಡೌನ್‌ಲೋಡ್‌ ಮಾಡಲು ದಯವಿಟ್ಟು jw.orgಗೆ ಭೇಟಿ ಮಾಡಿ.
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2026 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ