ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಜುಲೈ-ಸೆಪ್ಟೆಂಬರ್
“ಶುಚಿತ್ವ ಮತ್ತು ದೈಹಿಕ ಸ್ವಚ್ಛತೆಯ ಕುರಿತು ಜನರಿಗೆ ಭಿನ್ನಾಭಿಪ್ರಾಯಗಳಿರುವುದನ್ನು ನೀವು ಗಮನಿಸಿದ್ದೀರೋ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಶುಚಿತ್ವವು ಏಕೆ ಮಹತ್ವ ಎಂಬುದಕ್ಕೆ ನಾನೊಂದು ಶಾಸ್ತ್ರೀಯ ಕಾರಣವನ್ನು ತೋರಿಸಲೋ? [ಮನೆಯವನು ಒಪ್ಪುವುದಾದರೆ, ಮತ್ತು ಒಳ್ಳೇ ಪ್ರತಿಕ್ರಿಯೆ ತೋರಿಸಿದ್ದಲ್ಲಿ 1 ಪೇತ್ರ 1:16 ಓದಿ.] ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಈ ಲೇಖನವು ಕೆಲವು ವ್ಯಾವಹಾರಿಕ ಸಲಹೆಗಳನ್ನು ನೀಡುತ್ತದೆ.” ಪುಟ 9ರಲ್ಲಿರುವ ಲೇಖನವನ್ನು ತೋರಿಸಿರಿ.
ಎಚ್ಚರ! ಜುಲೈ-ಸೆಪ್ಟೆಂಬರ್
“ನಮ್ಮ ಮಕ್ಕಳಿಗೆ ಕಲಿಯಲು ಎಷ್ಟೊಂದು ಪಾಠಗಳಿವೆ ಎಂಬುದನ್ನು ನೋಡುವಾಗ ಅವರು ಒತ್ತಡದ ಸುಳಿಯಲ್ಲಿ ಸಿಲುಕಿದ್ದಾರೆಂದು ನೀವು ನೆನಸುವುದಿಲ್ಲವೇ? [ಪ್ರತಿಕ್ರಿಯೆಗೆ ಅವಕಾಶಕೊಡಿ] ನಮ್ಮ ಮಕ್ಕಳಿಗೆ ನೆರವಾಗಬಲ್ಲ ಒಂದು ಸಹಾಯಕಾರಿ ಸಲಹೆಯನ್ನು ಬೈಬಲಿನಿಂದ ನಾನು ತೋರಿಸಲೋ? [ಮನೆಯವನು ಒಪ್ಪುವುದಾದರೆ ಜ್ಞಾನೋಕ್ತಿ 21:5 ಓದಿ.] ಈ ಪತ್ರಿಕೆಯು, ನಾವು ನಮ್ಮ ಮಕ್ಕಳಿಗೆ ಅಂಥಾ ಒತ್ತಡವನ್ನು ಎದುರಿಸಲು ಹೇಗೆ ಸಹಾಯ ಮಾಡಬಹುದು ಎಂಬ ವಿಷಯದಲ್ಲಿ ಹಲವಾರು ವ್ಯಾವಹಾರಿಕ ಸಲಹೆಗಳನ್ನು ಕೊಡುತ್ತದೆ.”