ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w26 ಜುಲೈ ಪು. 31
  • ಆದಷ್ಟು ಬೇಗ ಸಮಸ್ಯೆನ ಸರಿ ಮಾಡ್ಕೊಳ್ಳಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆದಷ್ಟು ಬೇಗ ಸಮಸ್ಯೆನ ಸರಿ ಮಾಡ್ಕೊಳ್ಳಿ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
  • ಅನುರೂಪ ಮಾಹಿತಿ
  • ಯೆಹೋವನು—ನಿಮ್ಮ ಪರಿಚಯಸ್ಥನೋ ಅಥವಾ ನಿಮ್ಮ ಸ್ನೇಹಿತನೋ?
    ಕಾವಲಿನಬುರುಜು—1992
  • ನಾನು ಮಿತ್ರರೊಂದಿಗೆ ಏಕೆ ಸ್ನೇಹದಿಂದಿರಲಾರೆ?
    ಎಚ್ಚರ!—1996
  • “ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಸ್ನೇಹಿತರನ್ನು ನೀವು ಹೇಗೆ ಮಾಡಿಕೊಳ್ಳಬಹುದು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
w26 ಜುಲೈ ಪು. 31
ಮನೆಲಿ ಒಬ್ಬ ಸಹೋದರಿ ಇನ್ನೊಬ್ಬ ಸಹೋದರಿಗೆ ಮನಸಾರೆ ಕ್ಷಮೆ ಕೇಳ್ತಿದ್ದಾರೆ.

ಆದಷ್ಟು ಬೇಗ ಸಮಸ್ಯೆನ ಸರಿ ಮಾಡ್ಕೊಳ್ಳಿ!

ಒಬ್ಬ ಸಹೋದರನೋ ಅಥವಾ ಸಹೋದರಿನೋ ನಿಮಗೆ ಬೇಜಾರು ಮಾಡಿದ್ದಾರಾ? ಇದ್ರಿಂದ ಅವ್ರ ಜೊತೆಗಿರೋ ಸ್ನೇಹ ಹಾಳಾಗಿದ್ಯಾ? ಸಮಸ್ಯೆನ ಸರಿ ಮಾಡ್ಕೊಂಡು ನಿಮ್ಮ ಸ್ನೇಹನ ಕಾಪಾಡ್ಕೊಬೇಕಂದ್ರೆ ನೀವು ತಕ್ಷಣ ಹೆಜ್ಜೆ ತಗೋಬೇಕು, ಸರಿಯಾದ ಉದ್ದೇಶದಿಂದ ಹೆಜ್ಜೆ ತಗೋಬೇಕು.a

ಇದು ಯಾಕೆ ಮುಖ್ಯ ಅಂತ ಅರ್ಥಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡೋಣ. ನಿಮ್ಮ ಮೂಳೆ ಮುರಿದು ಹೋಗಿದೆ ಅಂದ್ಕೊಳ್ಳಿ. ನೀವು ಅದಕ್ಕೆ ತಕ್ಷಣ ಚಿಕಿತ್ಸೆ ಕೊಡಿಸಬೇಕು. ಆಗ ನಿಧಾನವಾಗಿ ನೋವು ಕಮ್ಮಿ ಆಗುತ್ತೆ, ಆಮೇಲೆ ಅದು ಸರಿ ಹೋಗುತ್ತೆ. ಒಂದುವೇಳೆ ಚಿಕಿತ್ಸೆ ಕೊಡಿಸಲಿಲ್ಲಾಂದ್ರೆ ನೋವು ಹಾಗೇ ಇರುತ್ತೆ, ಮೂಳೆ ಯಾವತ್ತೂ ಸರಿಯಾಗಲ್ಲ.

ಅದೇ ತರ ಸಹೋದರ ಸಹೋದರಿಯರ ಜೊತೆ ಏನಾದ್ರೂ ಸಮಸ್ಯೆ ಆದಾಗ ಅದನ್ನ ಸರಿ ಮಾಡೋಕೂ ತಕ್ಷಣ ಹೆಜ್ಜೆ ತಗೋಬೇಕು. ಒಂದುವೇಳೆ ಹೀಗೆ ಮಾಡ್ಲಿಲ್ಲ ಅಂದ್ರೆ ಆ ನೋವು ಹಾಗೇ ಮುಂದುವರಿಯುತ್ತೆ, ಆಮೇಲೆ ಅವ್ರ ಮೇಲೆ ದ್ವೇಷ ಬೆಳೆದು ಕೊನೆಗೆ ಆ ಸ್ನೇಹಿತನನ್ನೇ ಕಳ್ಕೊಂಡು ಬಿಡಬಹುದು. ಅದಕ್ಕೆ ಯೇಸು “ಅವನ ಜೊತೆ ಮಾತಾಡಿ ರಾಜಿ ಮಾಡ್ಕೊ” ಅಂತ ಹೇಳಿದನು. (ಮತ್ತಾ. 5:25) ಹಾಗಾಗಿ ನಿಮ್ಮ ಸ್ನೇಹಿತನ ಹತ್ರ ಹೋಗಿ ದಯೆಯಿಂದ, ಮುಚ್ಚುಮರೆ ಇಲ್ಲದೆ ನಿಮಗೆ ಏನು ಅನಿಸ್ತಿದೆ ಅಂತ ಹೇಳಿ. ಹೀಗೆ ಮಾಡೋದು ಹೇಳಿದಷ್ಟು ಸುಲಭ ಅಲ್ಲ. ಯಾಕೆ ಅಂತ ಎರಡು ಕಾರಣ ನೋಡೋಣ.

ಮೊದಲನೇ ಕಾರಣ, ‘ಗಾಯನ ಕೆರೆದಷ್ಟು ದೊಡ್ಡದಾಗೋ ತರ ಸಮಸ್ಯೆ ಬಗ್ಗೆ ಮಾತಾಡಿದಷ್ಟು ಅದು ದೊಡ್ಡದಾಗುತ್ತೆ’ ಅಂತ ನೀವು ಸಮಸ್ಯೆ ಬಗ್ಗೆ ಮಾತಾಡದೇ ಇರಬಹುದು.b ಒಂದನೇ ಶತಮಾನದಲ್ಲಿದ್ದ ಯುವೊದ್ಯ ಮತ್ತು ಸಂತುಕೆಗೂ ಇದೇ ತರ ಆಯ್ತು. ಅವ್ರ ಮಧ್ಯೆ ಸಮಸ್ಯೆ ಆದಾಗ ಅದನ್ನು ಸರಿಮಾಡ್ಕೊಳ್ಳದೇ ಹಾಗೇ ಬಿಟ್ಟುಬಿಟ್ರು. ಅದೆಷ್ಟು ದೊಡ್ಡದಾಯ್ತು ಅಂದ್ರೆ ದೂರದ ರೋಮ್‌ನಲ್ಲಿದ್ದ ಅಪೊಸ್ತಲ ಪೌಲನ ಕಿವಿಗೂ ಬಿತ್ತು. ಅದಕ್ಕೆ ಅವನು ಶಾಂತಿ-ಐಕ್ಯತೆ ಕಾಪಾಡ್ಕೊಳ್ಳೋಕೆ ಕೈಲಾಗಿದ್ದೆಲ್ಲಾ ಮಾಡಿ ಅಂತ ಅವ್ರಿಗೆ ಬುದ್ಧಿ ಹೇಳಿದ. (ಫಿಲಿ. 4:2) ಅವರು ದೀನತೆ ತೋರಿಸಿ, ಮನಸ್ಸು ಬಿಚ್ಚಿ ಮಾತಾಡಿ, ಒಬ್ರನ್ನೊಬ್ರು ಕ್ಷಮಿಸಿದ್ರೆ ಮತ್ತೆ ಒಂದಾಗಿ ಖುಷಿಯಾಗಿ ಇರೋಕೆ ಆಗ್ತಿತ್ತು.

ಎರಡನೇ ಕಾರಣ, ‘ತಪ್ಪು ಅವರದ್ದು, ಅವ್ರೇ ಬಂದು ಒಪ್ಕೊಳ್ಳಲಿ’ ಅಂತ ನೀವು ಅಂದ್ಕೊಬಹುದು. ಆದ್ರೆ ನೆನಪಿಡಿ, ಒಬ್ಬ ಡಾಕ್ಟರ್‌ ಮುರಿದು ಹೋಗಿರೋ ಮೂಳೆನ ಸರಿ ಮಾಡೋಕೆ ಗಮನ ಕೊಡ್ತಾನೆ ಹೊರತು ಆ ಮೂಳೆ ಹೇಗೆ ಮುರೀತು ಅನ್ನೋದಕ್ಕಲ್ಲ. ಅದೇ ತರ ನಿಮ್ಮ ಸ್ನೇಹಿತನ ಹತ್ರ ಮಾತಾಡುವಾಗ ತಪ್ಪು ಯಾರದ್ದು ಅಂತ ಹುಡುಕೋಕೆ ಹೋಗಬೇಡಿ. ಅದ್ರ ಬದ್ಲು, ಅವನ ಸ್ನೇಹನ ನೀವು ಎಷ್ಟು ಅಮೂಲ್ಯವಾಗಿ ನೋಡ್ತೀರಾ, ಅದನ್ನ ಸರಿ ಮಾಡ್ಕೊಳ್ಳೋಕೆ ಎಷ್ಟೆಲ್ಲ ಪ್ರಯತ್ನ ಹಾಕ್ತೀರಾ ಅನ್ನೋದಕ್ಕೆ ಗಮನ ಕೊಡಿ.

ನಿಮಗೂ ಯಾರ ಜೊತೆನಾದ್ರೂ ಸಮಸ್ಯೆ ಇದ್ಯಾ? ಹಾಗಾದ್ರೆ ಇವತ್ತೇ ಅದನ್ನ ಸರಿ ಮಾಡ್ಕೊಳ್ಳೋಕೆ ಪ್ರಯತ್ನ ಮಾಡಿ. ಯಾಕಂದ್ರೆ “ಸೂರ್ಯ ಮುಳುಗೋ ತನಕ ಕೋಪ ಇಟ್ಕೊಳ್ಳಬೇಡಿ” ಅಂತ ಬೈಬಲ್‌ ಹೇಳುತ್ತೆ. (ಎಫೆ. 4:26) ಹೀಗೆ ನೀವು ತಕ್ಷಣ ಹೆಜ್ಜೆ ತಗೊಂಡ್ರೆ “ಒಬ್ರು ಇನ್ನೊಬ್ರ ಜೊತೆ ಶಾಂತಿಯಿಂದ ಇದ್ದು ಒಗ್ಗಟ್ಟನ್ನ ಕಾಪಾಡ್ಕೊಳ್ಳೋಕೆ” ಸಹಾಯ ಮಾಡಿದ ಹಾಗೆ ಆಗುತ್ತೆ.—ಎಫೆ. 4:1-3.

a ಚಿಕ್ಕಪುಟ್ಟ ಸಮಸ್ಯೆಗಳನ್ನ ನೀವೇ ಮಾತಾಡ್ಕೊಂಡು ಸರಿ ಮಾಡ್ಕೊಬೇಕು, ಉದಾರವಾಗಿ ಕ್ಷಮಿಸಬೇಕು. (ಮತ್ತಾ. 5:23, 24) ಒಂದುವೇಳೆ ಸಮಸ್ಯೆ ದೊಡ್ಡದಾಗಿದ್ರೆ ಹಿರಿಯರ ಸಹಾಯ ಪಡ್ಕೊಬೇಕಾಗಿ ಬರಬಹುದು. (ಮತ್ತಾ. 18:17) ಆದ್ರೆ ಅದಕ್ಕೂ ಮೊದ್ಲು ಮತ್ತಾಯ 18:15, 16ರಲ್ಲಿರೋ ಹೆಜ್ಜೆಗಳನ್ನ ತಗೊಂಡಿರಬೇಕು.

b ಒಂದುವೇಳೆ ಒಬ್ಬ ಸಹೋದರ ಅಥವಾ ಸಹೋದರಿ ನಿಮಗೆ ಬೇಜಾರು ಮಾಡಿದ್ರೂ ನಿಮ್ಮಿಬ್ರ ಸ್ನೇಹಕ್ಕೆ ಏನೂ ತೊಂದ್ರೆ ಆಗಿಲ್ಲಾಂದ್ರೆ ಆ ತಪ್ಪನ್ನ ಮರೆತುಬಿಡೋದೇ ಒಳ್ಳೇದು.—ಜ್ಞಾನೋ. 26:20

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ