ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w26 ಜುಲೈ ಪು. 32
  • ಉತ್ತೇಜಿಸುವಂಥ ಉತ್ರಗಳನ್ನ ತಯಾರಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಉತ್ತೇಜಿಸುವಂಥ ಉತ್ರಗಳನ್ನ ತಯಾರಿಸಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
  • ಅನುರೂಪ ಮಾಹಿತಿ
  • ಸಭೆಯಲ್ಲಿ ಯೆಹೋವನನ್ನು ಸ್ತುತಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಕೂಟಗಳಲ್ಲಿ ಒಬ್ರನ್ನೊಬ್ರು ಪ್ರೋತ್ಸಾಹಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • “ಸಭಾಮಧ್ಯದಲ್ಲಿ” ಯೆಹೋವನನ್ನು ಸ್ತುತಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಕೂಟಗಳಲ್ಲಿ ಉತ್ತರಗಳನ್ನು ಹೇಳುವ ಮೂಲಕ ಒಬ್ಬರನ್ನೊಬ್ಬರನ್ನು ಪ್ರೋತ್ಸಾಹಿಸಿರಿ
    1998 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
w26 ಜುಲೈ ಪು. 32

ಇದನ್ನ ಮಾಡಿ ನೋಡಿ!

ಉತ್ತೇಜಿಸುವಂಥ ಉತ್ರಗಳನ್ನ ತಯಾರಿಸಿ

ಕೂಟಗಳಲ್ಲಿ ಉತ್ರಗಳನ್ನ ಹೇಳೋ ಮೂಲಕ ಸಹೋದರ ಸಹೋದರಿಯರನ್ನ ಉತ್ತೇಜಿಸಬಹುದು. ಈ ಅವಕಾಶ ನಮ್ಮೆಲ್ರಿಗೂ ಇದೆ. (ಇಬ್ರಿ. 10:24, 25) ಹಾಗಾದ್ರೆ ಉತ್ತೇಜಿಸುವಂಥ ಉತ್ರಗಳನ್ನ ನಾವು ಹೇಗೆ ತಯಾರಿಸಬಹುದು?

  • ಯೆಹೋವನಿಗೆ ಪ್ರಾರ್ಥನೆ ಮಾಡಿ. ಆತನಿಗೆ ಗೌರವ ತರುವಂಥ ಮತ್ತು ಬೇರೆಯವ್ರನ್ನ ಉತ್ತೇಜಿಸುವಂಥ ಉತ್ರ ಹೇಳೋಕೆ ಸಹಾಯ ಮಾಡು ಅಂತ ಬೇಡ್ಕೊಳ್ಳಿ.—ಕೀರ್ತ. 35:18.

  • ಉತ್ರಗಳನ್ನ ಓದಿ ಹೇಳೋದಕ್ಕಿಂತ ಸ್ವಂತ ಮಾತಲ್ಲಿ ಹೇಳಿ. ಸ್ವಂತ ಮಾತಲ್ಲಿ ಉತ್ರ ಕೊಟ್ರೆ ನಿಮಗೆ ದೇವರ ಮೇಲೆ ಎಷ್ಟು ನಂಬಿಕೆ ಇದೆ ಅಂತ ಬೇರೆಯವ್ರಿಗೆ ಗೊತ್ತಾಗುತ್ತೆ. ಇದ್ರಿಂದ ಅವ್ರಿಗೆ ಪ್ರೋತ್ಸಾಹ ಸಿಗುತ್ತೆ.

  • ಚುಟುಕಾಗಿ ಉತ್ರ ಕೊಡಿ. ಎಷ್ಟೋ ಸಲ ಚುಟುಕಾದ ಚಿಕ್ಕ-ಚಿಕ್ಕ ಉತ್ರಗಳು ಬೇರೆಯವ್ರನ್ನ ಉತ್ತೇಜಿಸುತ್ತೆ. ಅಷ್ಟೇ ಅಲ್ಲ, ಹೀಗೆ ಮಾಡಿದ್ರೆ ತುಂಬ ಜನ್ರಿಗೆ ಉತ್ರ ಹೇಳೋಕೆ ಅವಕಾಶನೂ ಸಿಗುತ್ತೆ.—ಜ್ಞಾನೋ. 10:19.

  • ಉತ್ತೇಜಿಸೋ ತರ ಉತ್ರ ಕೊಡಿ. ಸಭೆಯವ್ರಿಗೆ ಅಥವಾ ಯಾವುದೇ ಸಹೋದರ ಸಹೋದರಿಗೆ ಬುದ್ಧಿ ಹೇಳೋ ತರ, ಅವ್ರ ತಪ್ಪುಗಳನ್ನ ಎತ್ತಿ ತೋರಿಸೋ ತರ ನಿಮ್ಮ ಉತ್ರಗಳು ಇರದ ಹಾಗೆ ನೋಡ್ಕೊಳ್ಳಿ.

ಒಂದುವೇಳೆ ನಿಮಗೆ ಉತ್ರ ಹೇಳೋ ಅವಕಾಶ ಸಿಕ್ಕಿಲ್ಲಾಂದ್ರೂ ಬೇರೆಯವರು ಉತ್ರ ಹೇಳುವಾಗ ಅದನ್ನ ಚೆನ್ನಾಗಿ ಕೇಳಿಸ್ಕೊಳ್ಳಿ, ಆಮೇಲೆ ಅವ್ರನ್ನ ಪ್ರಶಂಸೆ ಮಾಡಿ. ಹೀಗೆ ನೀವು ಅವ್ರನ್ನ ಉತ್ತೇಜಿಸಬಹುದು.—ಜ್ಞಾನೋ. 10:21.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ