ಅಕ್ಟೋಬರ್ 19ರ ವಾರಕ್ಕಾಗಿರುವ ಶೆಡ್ಯೂಲ್
ಅಕ್ಟೋಬರ್ 19ರ ವಾರ
ಗೀತೆ 43 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 77 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 8-11 (8 ನಿ.)
ನಂ. 1: 1 ಪೂರ್ವಕಾಲವೃತ್ತಾಂತ 11:15-25 (3 ನಿಮಿಷದೊಳಗೆ)
ನಂ. 2: ಎಲೀಯ—ವಿಷಯ: ಪ್ರಾರ್ಥನೆಗೆ ಇರುವ ಶಕ್ತಿಯ ಬಗ್ಗೆ ಸಂಶಯ ಬೇಡ—1ಅರ 18:18-46; ಯಾಕೋ 5:17 (5 ನಿ.)
ನಂ. 3: ದೇವರ ರಾಜ್ಯ ತರುವ ಪ್ರಯೋಜನಗಳು—ಬೈಬಲ್ ವಿಷಯಗಳು 33 ಎ (5 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: ನೀವು “ಬೇರೂರಿದವರಾಗಿದ್ದು” ‘ನಂಬಿಕೆಯಲ್ಲಿ ಸ್ಥಿರವಾಗಿರಿ.’—ಕೊಲೊ. 2:6, 7.
20 ನಿ: “ವಿದ್ಯಾರ್ಥಿಗಳ ಹೃದಯ ತಲುಪುವುದು ಹೇಗೆ?” ಪ್ರಶ್ನೋತ್ತರ. ಒಂದಕ್ಕೊಂದು ತದ್ವಿರುದ್ಧವಾದ ಎರಡು ಪ್ರಾತ್ಯಕ್ಷಿಕೆ ಇರಲಿ. ಮನೆಯವಳು ತನ್ನ ಮಗು ಸತ್ತು ಸ್ವರ್ಗದಲ್ಲಿದೆ ಎಂದು ತಿಳಿಸುವ ಸನ್ನಿವೇಶ. ಮೊದಲನೇ ಪ್ರಾತ್ಯಕ್ಷಿಕೆಯಲ್ಲಿ ಪ್ರಚಾರಕಳು ಪ್ರಸಂಗಿ 9:5 ನ್ನು ಓದಿ ಸತ್ತವರ ಸ್ಥಿತಿಯ ಬಗ್ಗೆ ತಿಳಿಸುತ್ತಾಳೆ. ಈ ವಚನದಿಂದ ಮನೆಯವಳಿಗೆ ಸಾಂತ್ವನ ಸಿಗುವುದಿಲ್ಲ. ಆದ್ದರಿಂದ ಅವಳು ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾಳೆ. ಎರಡನೇ ಪ್ರಾತ್ಯಕ್ಷಿಕೆಯಲ್ಲಿ ಪ್ರಚಾರಕಳು ಯೋಹಾನ 5:28, 29 ನ್ನು ಓದುವ ಮೂಲಕ ವಿವೇಚನೆಯಿಂದ ಮನೆಯವಳ ಗಮನವನ್ನು ಪುನರುತ್ಥಾನದ ಕಡೆಗೆ ತಿರುಗಿಸುತ್ತಾಳೆ. ಆಗ ಮನೆಯವಳು ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾಳೆ.
10 ನಿ: ನಿಮ್ಮ ಅಭಿವೃದ್ಧಿಯನ್ನು ಪ್ರಕಟಪಡಿಸಿ. (1 ತಿಮೊ. 4:11-16) ಚರ್ಚೆ. ಡಿಸೆಂಬರ್ 15, 2009 ರ ಕಾವಲಿನಬುರುಜು ಪುಟ 12 ರಿಂದ 15, ಪ್ಯಾರ 8 ರಿಂದ 17 ರ ಆಧರಿತ. ಯಾವ ಪಾಠ ಕಲಿಯಬಹುದೆಂದು ಸಭಿಕರನ್ನು ಕೇಳಿ.
ಗೀತೆ 90 ಮತ್ತು ಪ್ರಾರ್ಥನೆ