ಮೇ 25ರ ವಾರಕ್ಕಾಗಿರುವ ಶೆಡ್ಯೂಲ್
ಮೇ 25ರ ವಾರ
ಗೀತೆ 97 ಮತ್ತು ಪ್ರಾರ್ಥನೆ
ಬೈಬಲ್ ಕಥೆಗಳು, ಕಥೆ 50 (30 ನಿ.)
ಬೈಬಲ್ ವಾಚನ: 2 ಸಮುವೇಲ 13-15 (8 ನಿ.)
ನಂ. 1: 2 ಸಮುವೇಲ 13:34–14:7 (3 ನಿಮಿಷದೊಳಗೆ)
ನಂ. 2: ಕೆಲಸದ ಬಗ್ಗೆ ಬೈಬಲ್ ಏನು ಹೇಳುತ್ತದೆ?—ಕಿರುಪರಿಚಯ ಪುಟ 20 ಪ್ಯಾರ 1-3 (5 ನಿ.)
ನಂ. 3: ಬೆಚಲೇಲ—ವಿಷಯ: ಯೆಹೋವನ ಪವಿತ್ರಾತ್ಮ ಒಳ್ಳೇ ಕೆಲಸಗಳನ್ನು ಮಾಡಲು ಸಹಾಯ ನೀಡುತ್ತದೆ—ವಿಮೋ 31:2-6; 35:4-36:7; 2ಪೂರ್ವ 1:1-6 (5 ನಿ.)
ಈ ತಿಂಗಳ ಮುಖ್ಯ ವಿಷಯ: ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆಯಲು ಎಲ್ಲ ರೀತಿಯ ಜನರಿಗೆ ಸಹಾಯ ಮಾಡಿ.—1 ತಿಮೊ. 2:3, 4.
10 ನಿ: ಕ್ಷೇತ್ರ ಸೇವಾ ಗುಂಪಿನ ಮೇಲ್ವಿಚಾರಕನೊಬ್ಬನನ್ನು ಸಂದರ್ಶಿಸಿ. ನಿಮ್ಮ ನೇಮಕದಲ್ಲಿ ಯಾವೆಲ್ಲಾ ಜವಾಬ್ದಾರಿಗಳನ್ನು ನೀವು ನಿರ್ವಹಿಸಬೇಕು? ಗುಂಪಿನಲ್ಲಿರುವ ಸದಸ್ಯರನ್ನು ಪರಿಪಾಲಿಸಲು ಮತ್ತು ಶುಶ್ರೂಷೆಯಲ್ಲಿ ಅವರಿಗೆ ನೆರವಾಗಲು ಯಾವೆಲ್ಲ ಪ್ರಯತ್ನಗಳನ್ನು ಮಾಡುತ್ತೀರಿ? ತಮ್ಮ ವಿಳಾಸ ಮತ್ತು ಫೋನ್ ನಂಬರ್ ಬದಲಾದರೆ ಪ್ರಚಾರಕರು ಅದನ್ನು ನಿಮಗೆ ತಿಳಿಸುವುದು ಪ್ರಾಮುಖ್ಯವೇಕೆ? ಹಿರಿಯರು ಕ್ಷೇತ್ರ ಸೇವಾ ಕೂಟವನ್ನು ಸಭೆಯಾಗಿ ಒಂದೇ ಸ್ಥಳದಲ್ಲಿ ಮಾಡದೇ ಚಿಕ್ಕ ಚಿಕ್ಕ ಗುಂಪಾಗಿ ಏಕೆ ಮಾಡುತ್ತಾರೆ?
20 ನಿ: “ಯೆಹೋವನ ಬಗ್ಗೆ ಕಲಿಯಲು ಅಂಧರಿಗೆ ಸಹಾಯ ಮಾಡಿ.” ಪ್ರಶ್ನೋತ್ತರ. ಒಂದು ಪ್ರಾತ್ಯಕ್ಷಿಕೆಯಿರಲಿ.
ಗೀತೆ 96 ಮತ್ತು ಪ್ರಾರ್ಥನೆ