ಮೇ 11ರ ವಾರಕ್ಕಾಗಿರುವ ಶೆಡ್ಯೂಲ್
ಮೇ 11ರ ವಾರ
ಗೀತೆ 89 ಮತ್ತು ಪ್ರಾರ್ಥನೆ
ಬೈಬಲ್ ಕಥೆಗಳು, ಕಥೆ 48 (30 ನಿ.)
ಬೈಬಲ್ ವಾಚನ: 2 ಸಮುವೇಲ 4-8 (8 ನಿ.)
ನಂ. 1: 2 ಸಮುವೇಲ 6:14-23 (3 ನಿಮಿಷದೊಳಗೆ)
ನಂ. 2: ಮರಣದ ನಂತರ ಏನಾಗುತ್ತದೆ?—ಕಿರುಪರಿಚಯ ಪುಟ 18 ಪ್ಯಾರ 1-3 (5 ನಿ.)
ನಂ. 3: ಬೇಲ್ಶಚ್ಚರ—ವಿಷಯ: ದೀನತೆ ತೋರಿಸಿದರೆ ದುರಂತ ತಪ್ಪುತ್ತದೆ—ದಾನಿ 5:1-30 (5 ನಿ.)
ಈ ತಿಂಗಳ ಮುಖ್ಯ ವಿಷಯ: ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆಯಲು ಎಲ್ಲ ರೀತಿಯ ಜನರಿಗೆ ಸಹಾಯ ಮಾಡಿ.—1 ತಿಮೊ. 2:3, 4.
10 ನಿ: ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆಯುವುದಕ್ಕೆ ಎಲ್ಲ ರೀತಿಯ ಜನರಿಗೆ ಸಹಾಯ ಮಾಡಿ. ಈ ತಿಂಗಳ ಮುಖ್ಯ ವಿಷಯದ ಮೇಲಾಧಾರಿತವಾದ ಭಾಷಣ. (ಕಾವಲಿನಬುರುಜು, ನವೆಂಬರ್ 15, 2013, ಪುಟ 11-12, ಪ್ಯಾರ 8ನ್ನು ನೋಡಿ.) 1 ತಿಮೊಥೆಯ 2:3, 4 ಮತ್ತು 1 ಕೊರಿಂಥ 9:19-23ನ್ನು ಓದಿ ವಿವರಿಸಿ. ಈ ತಿಂಗಳಿನ ಸೇವಾ ಕೂಟಗಳ ಕೆಲವೊಂದು ಭಾಗಗಳಲ್ಲಿ ಏನು ನೋಡಲಿದ್ದೇವೆ ಮತ್ತು ಅವು ಹೇಗೆ ಈ ತಿಂಗಳ ಮುಖ್ಯ ವಿಷಯಕ್ಕೆ ಸಂಬಂಧಪಟ್ಟಿದೆ ಅಂತ ಹೇಳಿ.
20 ನಿ: “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಬೇರೆ ಭಾಷೆಯವರಿಗೆ ಸಾಕ್ಷಿ ನೀಡಿ.” ಚರ್ಚೆ. ಮನೆ-ಮನೆ ಸೇವೆಯಲ್ಲಿ ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಪುಸ್ತಿಕೆಯನ್ನು ಬಳಸಿ ಪ್ರಚಾರಕನು ಸಾಕ್ಷಿ ನೀಡುವ ಒಂದು ಚಿಕ್ಕ ಪ್ರಾಯೋಗಿಕ ಪ್ರಾತ್ಯಕ್ಷಿಕೆಯಿರಲಿ.
ಗೀತೆ 105 ಮತ್ತು ಪ್ರಾರ್ಥನೆ