ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಬೇರೆ ಭಾಷೆಯವರಿಗೆ ಸಾಕ್ಷಿ ನೀಡಿ
ಏಕೆ ಪ್ರಾಮುಖ್ಯ: ಎಲ್ಲಾ ‘ಜನಾಂಗದವರು’ ತನ್ನ ಬಗ್ಗೆ ತಿಳಿದುಕೊಳ್ಳಬೇಕು ಅಂತ ಯೆಹೋವನು ಬಯಸುತ್ತಾನೆ. (ಅ. ಕಾ. 10:34, 35) ಹಾಗಾಗಿ, “ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ” ಸುವಾರ್ತೆ ಸಾರಲಾಗುವುದು ಎಂದು ಯೇಸು ಹೇಳಿದನು. (ಮತ್ತಾ. 24:14) ಈ ಸುವಾರ್ತೆಯನ್ನು ‘ಜನಾಂಗಗಳ ವಿವಿಧಭಾಷೆಗಳವರು’ ಕೇಳುತ್ತಾರೆ ಅಂತ ಜೆಕರ್ಯನ ಪ್ರವಾದನೆ ತಿಳಿಸುತ್ತದೆ. (ಜೆಕ. 8:23) ಮಹಾ ಸಂಕಟವನ್ನು ಪಾರಾಗುವವರಲ್ಲಿ “ಎಲ್ಲ ಜನಾಂಗಗಳಿಂದಲೂ ಕುಲಗಳಿಂದಲೂ ಪ್ರಜೆಗಳಿಂದಲೂ ಭಾಷೆಗಳಿಂದಲೂ” ಬಂದವರು ಇರುತ್ತಾರೆಂದು ಅಪೊಸ್ತಲ ಯೋಹಾನನ ದರ್ಶನ ತಿಳಿಸುತ್ತದೆ. (ಪ್ರಕ. 7:9, 13, 14) ಇವೆಲ್ಲವನ್ನು ಮನಸ್ಸಿನಲ್ಲಿಟ್ಟುಕೊಂಡು, ನಮ್ಮ ಸೇವಾಕ್ಷೇತ್ರದಲ್ಲಿ ಬೇರೆ ಭಾಷೆಯವರು ಸಿಕ್ಕಿದಾಗ ಅವರಿಗೆ ಸುವಾರ್ತೆ ಸಾರಲು ಆದಷ್ಟು ಪ್ರಯತ್ನ ಮಾಡಬೇಕು.
ಈ ತಿಂಗಳು ಇದನ್ನು ಮಾಡಲು ಪ್ರಯತ್ನಿಸಿ:
ಮುಂದಿನ ಬಾರಿ ನಿಮ್ಮ ಕುಟುಂಬ ಆರಾಧನೆಯಲ್ಲಿ, ಬೇರೆ ಭಾಷೆಯವರಿಗೆ ಹೇಗೆ ಸಾಕ್ಷಿ ನೀಡುವುದು ಅಂತ ಅಭಿನಯಿಸಿ.