ಏಪ್ರಿಲ್ 27ರ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 27ರ ವಾರ
ಗೀತೆ 95 ಮತ್ತು ಪ್ರಾರ್ಥನೆ
ಬೈಬಲ್ ಕಥೆಗಳು, ಕಥೆ 45, 46 (30 ನಿ.)
ಬೈಬಲ್ ವಾಚನ: 1 ಸಮುವೇಲ 26-31 (8 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ (20 ನಿ.)
ಈ ತಿಂಗಳ ಮುಖ್ಯ ವಿಷಯ: ‘ನಿಮ್ಮ ಸಮಯವನ್ನು ಸದುಪಯೋಗಿಸಿಕೊಳ್ಳುವ’ ಮೂಲಕ ವಿವೇಕಿಗಳಂತೆ ನಡೆದುಕೊಳ್ಳಿರಿ.—ಎಫೆ. 5:15, 16.
17 ನಿ: ಕಾವಲಿನಬುರುಜು ಅಧ್ಯಯನಕ್ಕಾಗಿ ಹೇಗೆ ತಯಾರಿ ಮಾಡಬೇಕು? ಸಭಿಕರೊಂದಿಗೆ ಚರ್ಚೆ. ಕಾವಲಿನಬುರುಜು ಅಧ್ಯಯನ ನಿರ್ವಾಹಕನು ನಿರ್ವಹಿಸತಕ್ಕದ್ದು. ಯೆಹೋವನ ಇಷ್ಟ ಕಿರುಹೊತ್ತಗೆಯ ಪಾಠ 9, ಪುಟ 12, ಪ್ಯಾರ 3 ಮತ್ತು ಶುಶ್ರೂಷಾ ಶಾಲೆ ಪುಸ್ತಕದ ಪುಟ 28, ಪ್ಯಾರ 3ರಿಂದ ಪುಟ 31 ಪ್ಯಾರ 2ರ ತನಕ, ಪುಟ 70 ಪ್ಯಾರ 1-3 ಮತ್ತು ಪುಟ 70ರಲ್ಲಿರುವ ಚೌಕದ ಮೇಲೆ ಆಧರಿತ. ಈ ಕೆಳಗಿನ ಪ್ರಶ್ನೆಗಳನ್ನು ಕೇಳಿ: (1) ಕಾವಲಿನಬುರುಜುವಿನ ಪ್ರತಿಯೊಂದು ಅಧ್ಯಯನ ಲೇಖನದಿಂದ ಆದಷ್ಟು ಹೆಚ್ಚು ಪ್ರಯೋಜನಗಳನ್ನು ಪಡೆದುಕೊಳ್ಳುವುದು ಪ್ರಾಮುಖ್ಯವೇಕೆ? (2) ನಮಗೆ ಹೊಸ ಸಂಚಿಕೆ ಸಿಕ್ಕಿದಾಗ ನಾವೇನು ಮಾಡಬೇಕು? (3) ಕಾವಲಿನಬುರುಜು ಅಧ್ಯಯನಕ್ಕಾಗಿ ಉತ್ತಮ ರೀತಿಯಲ್ಲಿ ತಯಾರಿಸುವುದು ಹೇಗೆ? (4) ಲೇಖನದಲ್ಲಿ ಕೊಟ್ಟಿರುವ ವಚನಗಳ ಮತ್ತು ಮುಖ್ಯ ಶೀರ್ಷಿಕೆಯ ಪ್ರಾಮುಖ್ಯತೆ ಏನು? (5) ಕಲಿತದ್ದನ್ನು ಪುನರವಲೋಕಿಸುವುದು ಹೇಗೆ? (6) ನಾವು ವೈಯಕ್ತಿಕವಾಗಿ ಲೇಖನವನ್ನು ಅಧ್ಯಯನ ಮಾಡುವಾಗ ಕೊನೆಯಲ್ಲಿ ಯಾವ ಮುಖ್ಯ ಅಂಶಗಳ ಬಗ್ಗೆ ಧ್ಯಾನಿಸಬೇಕು? (7) ಹೇಳಿಕೆಗಳನ್ನು ಹೇಗೆ ತಯಾರಿಸಬೇಕು? (8) ಒಂದೇ ಪ್ರಶ್ನೆಗೆ ಬೇರೆ ಬೇರೆ ಉತ್ತರಗಳನ್ನು ಕೊಡುವುದು ಹೇಗೆ? ಕಾವಲಿನಬುರುಜು ಅಧ್ಯಯನ ಲೇಖನವನ್ನು ವೈಯಕ್ತಿಕವಾಗಿ ತಯಾರಿಸುವಾಗ ಪೂರ್ಣ ಪ್ರಯೋಜನ ಪಡೆಯಲು ಏನೆಲ್ಲ ಮಾಡಿದ್ದಾರೆಂದು ಸಭಿಕರಲ್ಲಿ ಕೆಲವರನ್ನು ಕೇಳಿ.—ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ ಪುಟ 61, 62ನ್ನು ಸಹ ನೋಡಿ.
13 ನಿ: “ನಿಮ್ಮ ಶುಶ್ರೂಷೆಯಲ್ಲಿ ದೇವರ ವಾಕ್ಯ ಪ್ರಭಾವ ಬೀರುವಂತೆ ಬಿಡಿ.” ಚರ್ಚೆ. ಕೊನೆಯಲ್ಲಿ, ಎರಡು ಭಾಗಗಳ ಒಂದು ಪ್ರಾತ್ಯಕ್ಷಿಕೆ ಇರಲಿ. ಮೊದಲ ಭಾಗದಲ್ಲಿ, ಪ್ರಚಾರಕನು 2 ತಿಮೊಥೆಯ 3:16, 17 ವಚನವನ್ನು ಬೈಬಲಿನಿಂದ ತೋರಿಸದೆ, ಅದರಲ್ಲಿರುವ ಕೆಲವು ಅಂಶಗಳನ್ನು ಬಾಯಿಪಾಠವಾಗಿ ತಿಳಿಸಿ, ಮನೆಯವನಿಗೆ ಸಿಹಿಸುದ್ದಿ ಕಿರುಹೊತ್ತಗೆಯನ್ನು ಕೊಡುತ್ತಾನೆ. ಎರಡನೆಯ ಭಾಗದಲ್ಲಿ, ಮನೆಯವನಿಗೆ ಆಸಕ್ತಿಯಿದೆಯಾ ಎಂದು ವಿವೇಚನೆಯಿಂದ ತಿಳಿದುಕೊಂಡು ಆ ವಚನವನ್ನು ನೇರವಾಗಿ ಬೈಬಲಿನಿಂದ ಓದುತ್ತಾನೆ. ಎರಡನೆಯ ಭಾಗ ಏಕೆ ಹೆಚ್ಚು ಪರಿಣಾಮಕಾರಿಯಾಗಿತ್ತು ಎಂದು ಸಭಿಕರನ್ನು ಕೇಳಿ.
ಗೀತೆ 124 ಮತ್ತು ಪ್ರಾರ್ಥನೆ