ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2015 ಏಪ್ರಿಲ್ 27ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು. ಪ್ರತಿಯೊಂದು ಪ್ರಶ್ನೆಯೊಂದಿಗೆ ಅದನ್ನು ಚರ್ಚಿಸಲಾಗುವ ವಾರವನ್ನು ಕೊಡಲಾಗಿದೆ. ಹೀಗೆ ಆಯಾ ವಾರದಂದು ಶಾಲೆಗಾಗಿ ತಯಾರಿ ಮಾಡುವಾಗ ಸಂಶೋಧನೆ ಮಾಡಲು ಸಾಧ್ಯವಾಗುವುದು.
ಪ್ರೀತಿಪೂರ್ವಕ ದಯೆ ಎಂದರೇನು ಮತ್ತು ಇದನ್ನು ನಮ್ಮ ಜೊತೆ ವಿಶ್ವಾಸಿಗಳಿಗೆ ಹೇಗೆ ತೋರಿಸಬಹುದು? (ರೂತ. 1:16, 17) [ಮಾರ್ಚ್ 2, ಕಾವಲಿನಬುರುಜು 10 8/15 ಪು. 21 ಪ್ಯಾ. 3, ಪು. 24 ಪ್ಯಾ. 16]
“ಗುಣವಂತೆ” ಎಂಬ ಖ್ಯಾತಿಯು ರೂತಳಿಗೆ ಬಂದದ್ದು ಹೇಗೆ? (ರೂತ. 3:11) [ಮಾರ್ಚ್ 2, ಕಾವಲಿನಬುರುಜು 05 3/1 ಪು. 28 ಪ್ಯಾ. 7]
ನಮಗೆ ಸಮಸ್ಯೆಗಳು ಎದುರಾದಾಗ ಹನ್ನಳ ಮಾದರಿಯನ್ನು ನಾವು ಹೇಗೆ ಅನುಕರಿಸಬಹುದು? (1 ಸಮು. 1:16-18) [ಮಾರ್ಚ್ 9, ಕಾವಲಿನಬುರುಜು 09 12/15 ಪು. 17 ಪ್ಯಾ. 9]
ಬಾಲಕ ಸಮುವೇಲನು ‘ಯೆಹೋವನ ಸನ್ನಿಧಿಯಲ್ಲಿ ಬೆಳೆಯುತ್ತಿದ್ದಾಗ’ ಏಲಿಯ ಗಂಡು ಮಕ್ಕಳ ನೀತಿಗೆಟ್ಟ ನಡತೆ ಅವನ ಮೇಲೆ ಪ್ರಭಾವ ಬೀರದಂತೆ ಮಾಡಿದ್ದು ಯಾವುದು? (1 ಸಮು. 2:21) [ಮಾರ್ಚ್ 9, ಕಾವಲಿನಬುರುಜು 11 ಏಪ್ರಿಲ್-ಜೂನ್ ಪು. 16 ಪ್ಯಾ. 2, 3]
ಕೆಲವು ಮಂದಿ “ಕಾಕಪೋಕರು” ಸೌಲನ ರಾಜತ್ವವನ್ನು ತಿರಸ್ಕರಿಸಿದಾಗ ಅವನು ಮೂರ್ಖತನದಿಂದ ಕ್ರಿಯೆಗೈಯದೇ ಇದ್ದ ಘಟನೆಯಿಂದ ನಾವೇನನ್ನು ಕಲಿಯಬಹುದು? (1 ಸಮು. 10:22, 27) [ಮಾರ್ಚ್ 23, ಕಾವಲಿನಬುರುಜು 05 3/15 ಪು. 23 ಪ್ಯಾ. 1]
ಯೆಹೋವನಿಗೆ ವಿಧೇಯರಾಗುವ ಬದಲಿಗೆ ಯಜ್ಞಹೋಮಗಳನ್ನು ಕೊಟ್ಟರೆ ಸಾಕು ಎಂಬ ಸೌಲನಿಗಿದ್ದ ತಪ್ಪಾದ ಯೋಚನೆ ನಮ್ಮಲ್ಲಿ ಇರಬಾರದೇಕೆ? (1 ಸಮು. 15:22, 23) [ಮಾರ್ಚ್ 30, ಕಾವಲಿನಬುರುಜು 07 7/1 ಪು. 19 ಪ್ಯಾ. 3, 4]
ಯೆಹೋವನಿಗೆ ನಮ್ಮ ಬಗ್ಗೆ ಎಷ್ಟು ಚೆನ್ನಾಗಿ ಗೊತ್ತಿದೆ? (1 ಸಮು. 16:7) [ಏಪ್ರಿ. 6, ಕಾವಲಿನಬುರುಜು 09 11/15 ಪು. 5 ಪ್ಯಾ. 13]
ಜ್ಞಾನೋಕ್ತಿ 1:4ಕ್ಕನುಸಾರ ಕಷ್ಟದ ಸಮಯದಲ್ಲಿ ನಮ್ಮಲ್ಲಿರುವ ಯಾವ ವಿಷಯಗಳನ್ನು ಉಪಯೋಗಿಸಬೇಕೆಂದು ಯೆಹೋವನು ಬಯಸುತ್ತಾನೆ? (1 ಸಮು. 21:12, 13) [ಏಪ್ರಿ. 13, ಕಾವಲಿನಬುರುಜು 05 3/15 ಪು. 24 ಪ್ಯಾ. 5]
ಅಬೀಗೈಲಳು ದಾವೀದ ಮತ್ತು ಅವನ ಸೈನಿಕರಿಗೆ ಆಹಾರವನ್ನು ಕೊಟ್ಟಿದ್ದು ಅವಳು ತನ್ನ ಗಂಡನ ಶಿರಸ್ಸುತನದ ವಿರುದ್ಧ ದಂಗೆಯೆದ್ದಳೆಂದು ಸೂಚಿಸುತ್ತದೋ? (1 ಸಮು. 25:10, 11, 18, 19) [ಏಪ್ರಿ. 20, ಕಾವಲಿನಬುರುಜು 10 ಜನವರಿ-ಮಾರ್ಚ್ ಪು. 16 ಪ್ಯಾ. 3]
ತಾನು ಮಾಡದ ತಪ್ಪಿಗೆ ಕ್ಷಮೆ ಕೇಳಿದ ಅಬೀಗೈಲಳ ಉದಾಹರಣೆಯಿಂದ ನಾವೇನನ್ನು ಕಲಿಯಬಹುದು? (1 ಸಮು. 25:24) [ಏಪ್ರಿ. 20, ಕಾವಲಿನಬುರುಜು 02 11/1 ಪು. 5 ಪ್ಯಾ. 1, 4]