ಸಾರ್ವಜನಿಕ ಸಾಕ್ಷಿಕಾರ್ಯ ಮಾಡುವುದು ಹೇಗೆ?
ತಳ್ಳುಬಂಡಿಯಲ್ಲಿ ಮತ್ತು ಮೇಜಿನ ಮೇಲೆ ಸಾಹಿತ್ಯಗಳನ್ನಿಟ್ಟು ಮಾಡುವ ಸಾಕ್ಷಿಕಾರ್ಯದಿಂದ ಉತ್ತಮ ಪ್ರತಿಫಲ ಸಿಗುತ್ತಿದೆ. ಯೋಗ್ಯ ವ್ಯಕ್ತಿಗಳನ್ನು ಸತ್ಯದ ಕಡೆಗೆ ಸೆಳೆಯಲು ಇದೊಂದು ಅತ್ಯುತ್ತಮ ವಿಧಾನವಾಗಿದೆ. (ಯೋಹಾ. 6:44) ಹಾಗಾಗಿ ಸಭೆಯ ಸೇವಾಕ್ಷೇತ್ರದಲ್ಲಿ ಎಲ್ಲೆಲ್ಲಿ ಹೆಚ್ಚು ಜನರು ಓಡಾಡುತ್ತಾರೋ ಅಂಥ ಸ್ಥಳಗಳಲ್ಲಿ ಹಿರಿಯರು ಈ ಸಾಕ್ಷಿಕಾರ್ಯವನ್ನು ಏರ್ಪಡಿಸುತ್ತಿದ್ದಾರೆ. ತಳ್ಳುಬಂಡಿಯನ್ನು ಇಡಲಿಕ್ಕಾಗಿ ಸ್ಥಳೀಯ ಅಧಿಕಾರಿಗಳ ಅನುಮತಿ ಪಡೆಯಬೇಕೆಂದೇನಿಲ್ಲ. ಯಾಕೆಂದರೆ ತಳ್ಳುಬಂಡಿಯನ್ನು ಒಂದೇ ಕಡೆ ನಿಲ್ಲಿಸುವ ಅಗತ್ಯವಿರುವುದಿಲ್ಲ, ಯಾವಾಗ ಬೇಕಾದರೂ ಅದನ್ನು ಇನ್ನೊಂದು ಕಡೆಗೆ ಸಾಗಿಸಬಹುದು. ಈ ಸಾಕ್ಷಿಕಾರ್ಯದಲ್ಲಿ ಭಾಗವಹಿಸುವ ಪ್ರಚಾರಕರು ಎಂಥವರಾಗಿರಬೇಕು? ಅವರು ವಿವೇಚನೆಯುಳ್ಳವರಾಗಿರಬೇಕು, ಈ ಕೆಲಸಕ್ಕೆ ಯಾವುದೇ ಕುಂದು ತರುವಂತೆ ನಡೆದುಕೊಳ್ಳಬಾರದು, ಚೆನ್ನಾಗಿ ಮಾತಾಡಲು ಗೊತ್ತಿರಬೇಕು. ಸಾರ್ವಜನಿಕ ಸಾಕ್ಷಿಕಾರ್ಯ ಮಾಡುವಾಗ ಏನು ಮಾಡಬೇಕು, ಏನು ಮಾಡಬಾರದೆಂದು ಕೆಲವು ಸಲಹೆಗಳನ್ನು ಕೆಳಗೆ ಕೊಡಲಾಗಿದೆ. ಅವುಗಳನ್ನು ಅನ್ವಯಿಸಿ, ಹೆಚ್ಚಿನ ಪ್ರತಿಫಲ ಪಡೆಯಿರಿ.