ಏಪ್ರಿಲ್ 20ರ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 20ರ ವಾರ
ಗೀತೆ 86 ಮತ್ತು ಪ್ರಾರ್ಥನೆ
ಬೈಬಲ್ ಕಥೆಗಳು, ಕಥೆ 44 (30 ನಿ.)
ಬೈಬಲ್ ವಾಚನ: 1 ಸಮುವೇಲ 23-25 (8 ನಿ.)
ನಂ. 1: 1 ಸಮುವೇಲ 23:13-23 (3 ನಿಮಿಷದೊಳಗೆ)
ನಂ. 2: ಭವಿಷ್ಯತ್ತಿನ ಕುರಿತು ಬೈಬಲ್ ಏನು ಹೇಳುತ್ತದೆ?—ಕಿರುಪರಿಚಯ ಪುಟ 16 ಪ್ಯಾರ 1-3 (5 ನಿ.)
ನಂ. 3: ಬಾರೂಕ—ವಿಷಯ: ಸ್ವಾರ್ಥ ಇಲ್ಲದೆ ಯೆಹೋವನ ಸೇವೆ ಮಾಡಿ—ಯೆರೆ 32:9-16; 36:1-32; 43:4-7; 45:1-5 (5 ನಿ.)
ಈ ತಿಂಗಳ ಮುಖ್ಯ ವಿಷಯ: ‘ನಿಮ್ಮ ಸಮಯವನ್ನು ಸದುಪಯೋಗಿಸಿಕೊಳ್ಳುವ’ ಮೂಲಕ ವಿವೇಕಿಗಳಂತೆ ನಡೆದುಕೊಳ್ಳಿರಿ.—ಎಫೆ. 5:15, 16.
15 ನಿ: “ಸಾರ್ವಜನಿಕ ಸಾಕ್ಷಿಕಾರ್ಯ ಮಾಡುವುದು ಹೇಗೆ?” ಚರ್ಚೆ. ಈ ಪ್ರಾತ್ಯಕ್ಷಿಕೆ ಮಾಡಿ: ಮೇಜು ಅಥವಾ ತಳ್ಳುಬಂಡಿಯ ಹತ್ತಿರ ಇಬ್ಬರು ಪ್ರಚಾರಕರು ನಿಂತಿರುತ್ತಾರೆ. ಒಬ್ಬ ಪ್ರಚಾರಕ ದಾರಿಯಲ್ಲಿ ಹೋಗುತ್ತಿರುವ ವ್ಯಕ್ತಿಯನ್ನು ನೋಡಿ ಮುಗುಳ್ನಗೆ ಬೀರುತ್ತಾನೆ. ಇನ್ನೇನೂ ಮಾಡುವುದಿಲ್ಲ. ಇನ್ನೊಬ್ಬ ಪ್ರಚಾರಕನು ಬೇರೊಬ್ಬ ವ್ಯಕ್ತಿ ಸ್ವಲ್ಪ ದೂರದಲ್ಲಿರುವಾಗಲೇ ಮುಗುಳ್ನಗೆ ಬೀರುತ್ತಾನೆ. ಮಾತ್ರವಲ್ಲ ಹತ್ತಿರ ಬಂದಾಗ ಪ್ರಶ್ನೆ ಕೇಳುತ್ತಾನೆ ಮತ್ತು ಆಸಕ್ತಿಕರ ಸಂಭಾಷಣೆಯನ್ನು ಪ್ರಾರಂಭಿಸುತ್ತಾನೆ. ಸಾರ್ವಜನಿಕ ಸಾಕ್ಷಿಕಾರ್ಯ ಅಲ್ಲದೆ ಬೇರೆ ವಿಧದ ಸಾಕ್ಷಿಕಾರ್ಯದಲ್ಲೂ ಎರಡನೆಯ ಪ್ರಚಾರಕನು ಮಾಡಿದ ವಿಧಾನವನ್ನು ಹೇಗೆ ಉಪಯೋಗಿಸಬಹುದು?
15 ನಿ: ಸ್ಮರಣೆಗೆ ಹಾಜರಾದ ಆಸಕ್ತರನ್ನು ಭೇಟಿಮಾಡಲು ಹಿಂದಿರುಗಿರಿ. ಭಾಷಣ. ಸ್ಮರಣೆಯ ಹಾಜರಿ ಹೇಳಿ ಮತ್ತು ದೊರೆತ ಅನುಭವಗಳನ್ನು ತಿಳಿಸಿ. ಸ್ಮರಣೆಗೆ ಹಾಜರಾದ ಆಸಕ್ತರನ್ನು ಪುನಃ ಭೇಟಿಮಾಡಿ ಅವರೊಂದಿಗೆ ಬೈಬಲ್ ಅಧ್ಯಯನವನ್ನು ಆರಂಭಿಸುವ ಗುರಿಯಿಡುವಂತೆ ಎಲ್ಲರನ್ನೂ ಉತ್ತೇಜಿಸಿರಿ. ಸಭಾ ಕೂಟಗಳಿಗೆ ಕ್ರಮವಾಗಿ ಬಾರದೆ ಕೇವಲ ಸ್ಮರಣೆಗೆ ಹಾಜರಾದವರನ್ನು ಪುನಃ ಭೇಟಿಯಾದಾಗ ಬೈಬಲ್ ಬೋಧಿಸುತ್ತದೆ ಪುಸ್ತಕದಿಂದ ಬೈಬಲ್ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಈ ಅಂಶವನ್ನು ಮನಸ್ಸಿನಲ್ಲಿಟ್ಟು ಒಂದು ಪ್ರಾತ್ಯಕ್ಷಿಕೆಯನ್ನು ಒಳಗೂಡಿಸಿ.
ಗೀತೆ 75 ಮತ್ತು ಪ್ರಾರ್ಥನೆ