ಅಕ್ಟೋಬರ್ 27ರ ವಾರಕ್ಕಾಗಿರುವ ಶೆಡ್ಯೂಲ್
ಅಕ್ಟೋಬರ್ 27ರ ವಾರ
ಗೀತೆ 91 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 13, 14 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಧರ್ಮೋಪದೇಶಕಾಂಡ 11-13 (10 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ (20 ನಿ.)
❑ ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: “ವಾಕ್ಯವನ್ನು ಸಾರು . . . ತುರ್ತಿನಿಂದ ಅದರಲ್ಲಿ ತಲ್ಲೀನನಾಗಿರು.”—2 ತಿಮೊ. 4:2.
15 ನಿ: “ಸಾರುವ ವಿಷಯದಲ್ಲಿ ತುರ್ತು ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಹೇಗೆ?” ಚರ್ಚೆ. ಪ್ರಚಾರಕನು ಮನೆಯವನಿಗೆ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಅಥವಾ ಒಂದು ಕರಪತ್ರವನ್ನು ಕೊಡುವ ಒಂದು ಪ್ರಾತ್ಯಕ್ಷಿಕೆ ಇರಲಿ.
15 ನಿ: ತುರ್ತಿನಿಂದ ಸಾರಲು ಚೆನ್ನಾಗಿ ತಯಾರಿಸಿ. ಚರ್ಚೆ. 2014, ಆಗಸ್ಟ್ 15ರ ಕಾವಲಿನಬುರುಜು ಪುಟ 14-15, ಪ್ಯಾರ 14-20ರ ಮೇಲೆ ಆಧರಿತ. ತಮ್ಮ ಕ್ಷೇತ್ರದಲ್ಲಿ ಜನರನ್ನು ಹೆಚ್ಚು ಚಿಂತೆಗೀಡು ಮಾಡಿರುವ ಸಮಸ್ಯೆ ಮತ್ತು ಪ್ರಶ್ನೆಗಳು ಯಾವುವೆಂದು ಸಭಿಕರನ್ನು ಕೇಳಿ. ಇದನ್ನು ಮನಸ್ಸಿನಲ್ಲಿಟ್ಟು ನಾವು ಸೇವೆಯಲ್ಲಿ ಹೇಗೆ ಸಂಭಾಷಣೆ ಆರಂಭಿಸಬಹುದು? ನಮ್ಮ ಕ್ಷೇತ್ರಕ್ಕೆ ಅನ್ವಯಿಸುವಂಥ ನಿರೂಪಣೆಗಳನ್ನು ತಯಾರಿಸಲು ಈ ಕಾವಲಿನಬುರುಜುವಿನಲ್ಲಿರುವ ಮಾಹಿತಿಯನ್ನು ಹೇಗೆ ಬಳಸಬಹುದೆಂದು ಇಬ್ಬರು ಪಯನೀಯರರು ಅಥವಾ ಒಂದು ದಂಪತಿ ಒಂದು ಪ್ರಾತ್ಯಕ್ಷಿಕೆಯಲ್ಲಿ ತೋರಿಸಲಿ. ಅವರು ಯಾವ ಸಾಹಿತ್ಯ ನೀಡುವರೆಂದು ನಿರ್ಧರಿಸಲಿ.
ಗೀತೆ 95 ಮತ್ತು ಪ್ರಾರ್ಥನೆ