ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2014, ಅಕ್ಟೋಬರ್ 27ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು.
1. ಅರಣ್ಯಕಾಂಡ 21:5ರಲ್ಲಿ ದಾಖಲಾಗಿರುವಂತೆ ಇಸ್ರಾಯೇಲ್ಯರು ದೇವರ ಮತ್ತು ಮೋಶೆಯ ವಿರುದ್ಧ ಏಕೆ ದೂರಿದರು? ಈ ವೃತ್ತಾಂತದಿಂದ ನಾವು ಯಾವ ಎಚ್ಚರಿಕೆಯ ಪಾಠವನ್ನು ಕಲಿಯಬಹುದು? [ಸೆಪ್ಟೆಂ. 1, ಕಾವಲಿನಬುರುಜು 99 8/15 ಪು. 26-27]
2. ಯೆಹೋವನು ಬಿಳಾಮನ ವಿರುದ್ಧ ಕೋಪಗೊಂಡದ್ದೇಕೆ? (ಅರ. 22:20-22) [ಸೆಪ್ಟೆಂ. 8, ಕಾವಲಿನಬುರುಜು 04 8/1 ಪು. 27 ಪ್ಯಾ. 2]
3. ಅರಣ್ಯಕಾಂಡ 25:11ರಲ್ಲಿ ಫೀನೆಹಾಸನ ಯಾವ ಗುಣದ ಬಗ್ಗೆ ನಾವು ಕಲಿಯುತ್ತೇವೆ ಮತ್ತು ನಾವು ಹೇಗೆ ಅವನನ್ನು ಅನುಕರಿಸಬಹುದು? [ಸೆಪ್ಟೆಂ. 8, ಕಾವಲಿನಬುರುಜು 04 8/1 ಪು. 27 ಪ್ಯಾ. 4]
4. ನಮ್ರತೆಯನ್ನು ತೋರಿಸುವ ವಿಷಯದಲ್ಲಿ ಮೋಶೆಯು ನಮಗಿಂದು ಯಾವ ವಿಧಗಳಲ್ಲಿ ಉತ್ತಮ ಮಾದರಿಯಾಗಿದ್ದಾನೆ? (ಅರ. 27:5, 15-18) [ಸೆಪ್ಟೆಂ. 15, ಕಾವಲಿನಬುರುಜು 13 ಏಪ್ರಿಲ್-ಜೂನ್ ಪು. 5]
5. ಅಪರಿಪೂರ್ಣ ಮಾನವರು ವಿರೋಧಗಳ ಮಧ್ಯೆಯೂ ದೇವರ ಮಾರ್ಗದಲ್ಲಿ ನಡೆಯಬಹುದೆಂದು ಯೆಹೋಶುವ ಮತ್ತು ಕಾಲೇಬರ ಉದಾಹರಣೆ ಹೇಗೆ ತೋರಿಸುತ್ತದೆ? (ಅರ. 32:12) [ಸೆಪ್ಟೆಂ. 22, ಕಾವಲಿನಬುರುಜು 93 11/15 ಪು. 14 ಪ್ಯಾ. 13]
6. ಮದುವೆಯ ಕುರಿತು ಸರಿಯಾದ ನೋಟವನ್ನು ಹೊಂದಿರಲು ಚಲ್ಪಹಾದನ ಪುತ್ರಿಯರು ತೋರಿಸಿದ ವಿಧೇಯತೆಯು ಅವಿವಾಹಿತ ಕ್ರೈಸ್ತರಿಗೆ ಹೇಗೆ ಸಹಾಯಮಾಡುತ್ತದೆ? (ಅರ. 36:10-12) [ಸೆಪ್ಟೆಂ. 29, ಕಾವಲಿನಬುರುಜು 08 2/15 ಪು. 4-5 ಪ್ಯಾ. 10]
7. ದೂರುವ ಸ್ವಭಾವವಿದ್ದದರಿಂದ, ನಕಾರಾತ್ಮಕವಾಗಿ ಮಾತಾಡಿದ್ದರಿಂದ ಇಸ್ರಾಯೇಲ್ಯರು ಯಾವ ಫಲಿತಾಂಶವನ್ನು ಎದುರಿಸಬೇಕಾಯಿತು ಮತ್ತು ಈ ವೃತ್ತಾಂತದಿಂದ ನಾವು ಯಾವ ಪಾಠ ಕಲಿಯಬಹುದು? (ಧರ್ಮೋ. 1:26-28, 34, 35) [ಅಕ್ಟೋ. 6, ಕಾವಲಿನಬುರುಜು 13 8/15 ಪು. 11 ಪ್ಯಾ. 7]
8. ಯೆಹೋವನ ಆಶೀರ್ವಾದವನ್ನು ಪಡೆದುಕೊಳ್ಳಲು ಮತ್ತು ತಾವು ಇನ್ನೇನು ಸ್ವಾಧೀನಮಾಡಿಕೊಳ್ಳಲಿಕ್ಕಿದ್ದ ದೇಶದಲ್ಲಿ ಏಳಿಗೆಹೊಂದಲು ಇಸ್ರಾಯೇಲ್ಯರು ಯಾವ ಎರಡು ಜವಾಬ್ದಾರಿಗಳನ್ನು ಪೂರೈಸಬೇಕಾಗಿತ್ತು? (ಧರ್ಮೋ. 4:9) [ಅಕ್ಟೋ. 13, ಕಾವಲಿನಬುರುಜು 06 6/1 ಪು. 29 ಪ್ಯಾ. 15]
9. ಇಸ್ರಾಯೇಲ್ಯರು ಅರಣ್ಯದಲ್ಲಿ ಸಂಚರಿಸುತ್ತಿದ್ದ ಸಮಯದಲ್ಲಿ ಯಾವ ವಿಧದಲ್ಲಿ ಅವರ ಉಡುಪು ಜೀರ್ಣವಾಗಲಿಲ್ಲ ಮತ್ತು ಕಾಲುಗಳು ಬಾತುಹೋಗಲಿಲ್ಲ? (ಧರ್ಮೋ. 8:3, 4) [ಅಕ್ಟೋ. 20, ಕಾವಲಿನಬುರುಜು 04 9/15 ಪು. 26 ಪ್ಯಾ. 1]
10. ಯೆಹೋವನಿಗೆ “ಅಂಟಿಕೊಂಡಿರಬೇಕು” (NW) ಎಂದು ಇಸ್ರಾಯೇಲ್ಯರಿಗೆ ಕೊಟ್ಟ ಎಚ್ಚರಿಕೆಯನ್ನು ನಾವು ಹೇಗೆ ಅನ್ವಯಿಸಿಕೊಳ್ಳಬಹುದು? (ಧರ್ಮೋ. 13:4, 6-9) [ಅಕ್ಟೋ. 27, ಕಾವಲಿನಬುರುಜು 02 10/15 ಪು. 16 ಪ್ಯಾ. 14]