ಜುಲೈ 22ರ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 22ರ ವಾರ
ಗೀತೆ 48 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 24 ಪ್ಯಾ. 1-10 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅ. ಕಾರ್ಯಗಳು 22-25 (10 ನಿ.)
ನಂ. 1: ಅ. ಕಾರ್ಯಗಳು 22:17-30 (4 ನಿಮಿಷದೊಳಗೆ)
ನಂ. 2: ಈ ಲೋಕದಲ್ಲಿದ್ದರೂ ನಾವು ಯಾವ ವಿಧಗಳಲ್ಲಿ ಈ ಲೋಕದ ಭಾಗವಾಗಿಲ್ಲ?—ಯೋಹಾ. 17:15, 16 (5 ನಿ.)
ನಂ. 3: ಎಲ್ಲಾ ಕಡೆಗೂ ಸುವಾರ್ತೆ—ಬೈಬಲ್—ಅದರಲ್ಲಿ ಏನಿದೆ? ಪು. 26 (5 ನಿ.)
❑ ಸೇವಾ ಕೂಟ:
10 ನಿ: ವಿದ್ಯಾರ್ಥಿಯ ಮನಮುಟ್ಟುವಂತೆ ಕಲಿಸಿ. (ಲೂಕ 24:32) ಚರ್ಚೆ. ಕೆಳಕಂಡ ಪ್ರಶ್ನೆಗಳ ಆಧರಿತ: (ಅ) ಬೈಬಲ್ ಅಧ್ಯಯನ ನಡೆಸುವಾಗ ಈ ಮೂರು ಅಂಶಗಳ ಕಡೆಗೆ ವಿದ್ಯಾರ್ಥಿಯ ಗಮನ ಸೆಳೆಯಬೇಕು ಯಾಕೆ? (1) ಯೆಹೋವ ದೇವರ ಪ್ರೀತಿ, ವಿವೇಕ (2) ಬೈಬಲ್ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮಹತ್ವ (3) ಯಾವುದೇ ನಿರ್ಣಯ ಮಾಡುವ ಮುನ್ನ ಯೆಹೋವ ದೇವರ ಮಾರ್ಗದರ್ಶನೆ ಕೇಳಬೇಕು (ಆ) ನೀವು ಕಲಿಸಿದ ವಿಷಯ ವಿದ್ಯಾರ್ಥಿಯ ಮನಮುಟ್ಟಿದ್ಯಾ ಅಂತ ತಿಳಿದುಕೊಳ್ಳಲು ಈ ಮುಂದಿನ ಪ್ರಶ್ನೆಗಳು ಹೇಗೆ ಸಹಾಯ ಮಾಡುತ್ತೆ? (1) ಇದು ನಿಮಗೆ ಸರಿ ಅಂತ ಅನಿಸುತ್ತಾ? (2) ಈ ವಿಷಯಕ್ಕೂ ದೇವರ ಪ್ರೀತಿಗೂ ತಾಳಮೇಳ ಇದೆ ಅಂತ ಅನಿಸುತ್ತಾ? (3) ಈ ಸಲಹೆಯನ್ನು ಪಾಲಿಸುವುದರಿಂದ ಏನಾದರೂ ಪ್ರಯೋಜನ ಸಿಗುತ್ತಾ?
20 ನಿ: “ಯುವ ಸಹೋದರರೇ, ಆಧ್ಯಾತ್ಮಿಕ ಗುರಿ ಮುಟ್ಟಲು ಪ್ರಯತ್ನಿಸುತ್ತಿದ್ದೀರಾ?” ಪ್ರಶ್ನೋತ್ತರ. ಹಿರಿಯರಾಗುವ ಅಥವಾ ಶುಶ್ರೂಷಾ ಸೇವಕರಾಗುವ ಗುರಿಯನ್ನಿಟ್ಟು ಯುವ ಪ್ರಾಯದಲ್ಲೇ ಆ ಗುರಿ ತಲಪಿರುವ ಒಬ್ಬ ಸಹೋದರರ ಒಂದು ಚಿಕ್ಕ ಸಂದರ್ಶನ ಇರಲಿ. ಶುಶ್ರೂಷಾ ಸೇವಕರಾಗುವ ಮುನ್ನ ಅವರು ಯಾವ್ಯಾವ ನೇಮಕಗಳನ್ನು ಮತ್ತು ತರಬೇತಿಯನ್ನು ಪಡೆದುಕೊಂಡರು? ಅವರು ಆಧ್ಯಾತ್ಮಿಕ ಪ್ರಗತಿ ಮಾಡಲು ಸಭೆಯಲ್ಲಿದ್ದವರು ಹೇಗೆ ಸಹಾಯ ಮಾಡಿದರು? ಈ ಆಧ್ಯಾತ್ಮಿಕ ಗುರಿ ತಲಪಿದ್ದರಿಂದ ಅವರಿಗೆ ಯಾವ ಆಶೀರ್ವಾದಗಳು ಸಿಕ್ಕಿವೆ?
ಗೀತೆ 85 ಮತ್ತು ಪ್ರಾರ್ಥನೆ