ಜುಲೈ 15ರ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 15ರ ವಾರ
ಗೀತೆ 50 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 23 ಪ್ಯಾ. 9-23, ಪುಟ 239ರ ಚೌಕ (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅ. ಕಾರ್ಯಗಳು 18-21 (10 ನಿ.)
ನಂ. 1: ಅ. ಕಾರ್ಯಗಳು 20:17-38 (4 ನಿಮಿಷದೊಳಗೆ)
ನಂ. 2: ಧೈರ್ಯದಿಂದ ಸುವಾರ್ತೆ ಸಾರಿದ ಅಪೊಸ್ತಲರು—ಬೈಬಲ್—ಅದರಲ್ಲಿ ಏನಿದೆ? ಪು. 25 (5 ನಿ.)
ನಂ. 3: ಪವಿತ್ರಾತ್ಮದ ಮೇಲೆ ಮನಸ್ಸಿಟ್ಟಿದ್ದೇವೆಂದು ಹೇಗೆ ತೋರಿಸಿಕೊಡಬಲ್ಲೆವು?—ರೋಮ. 8:6 (5 ನಿ.)
❑ ಸೇವಾ ಕೂಟ:
10 ನಿ: ಸುವಾರ್ತೆಯನ್ನು ಸಾರುವ ವಿಧಾನಗಳು—ಆಸಕ್ತರನ್ನು ಯೆಹೋವನ ಸಂಘಟನೆಯತ್ತ ನಡೆಸುವುದು. ಭಾಷಣ. ಸಂಘಟಿತರು ಪುಸ್ತಕದ ಪುಟ 99 ಪ್ಯಾರ 2ರಿಂದ ಪುಟ 100 ಪ್ಯಾರ 1ರ ತನಕ. ತಮ್ಮ ವಿದ್ಯಾರ್ಥಿಗಳಿಗೆ ಸಂಘಟನೆಯ ಬಗ್ಗೆ ತಿಳಿಸಲು ಯೆಹೋವ ದೇವರ ಇಷ್ಟ ಕಿರುಹೊತ್ತಗೆಯನ್ನು ಹೇಗೆ ಬಳಸಿದ್ದಾರೆಂದು ಹೇಳುವಂತೆ ಸಭಿಕರನ್ನು ಆಮಂತ್ರಿಸಿ.
10 ನಿ: ಯೆಹೋವನು ಸ್ಥಳ ಹಿಡಿಯಲಾಗದಷ್ಟು ಸುವರಗಳನ್ನು ಸುರಿಸುವನೋ ಎಂದು ಪರೀಕ್ಷಿಸಿ, ಆಶೀರ್ವಾದ ಪಡೆಯಿರಿ (ಮಲಾ. 3:10) ಇಬ್ಬರು ಅಥವಾ ಮೂವರು ರೆಗ್ಯುಲರ್ ಪಯನೀಯರರನ್ನು ಸಂದರ್ಶನ ಮಾಡಿ: ಪಯನೀಯರ್ ಸೇವೆಯಲ್ಲಿ ಯಾವುದು ತುಂಬ ಇಷ್ಟ? ಹೇಗೆ ಯೆಹೋವನ ಜತೆಗಿನ ಸಂಬಂಧವನ್ನು ಪಯನೀಯರ್ ಸೇವೆ ಉತ್ತಮಗೊಳಿಸಿದೆ? ಮರೆಯಲಾಗದ ಅನುಭವವೊಂದನ್ನು ತಿಳಿಸುವಂತೆ ಹೇಳಿ. ಸೆಪ್ಟೆಂಬರ್ ತಿಂಗಳಿಂದ ರೆಗ್ಯುಲರ್ ಪಯನೀಯರ್ ಆಗುವ ಗುರಿಯಿಡುವಂತೆ ಪ್ರಚಾರಕರನ್ನು ಉತ್ತೇಜಿಸಿ.
10 ನಿ: “ಪ್ರವಾದಿಗಳನ್ನು ಮಾದರಿ ಮಾಡಿಕೊಳ್ಳಿ—ಯೋವೇಲ.” ಪ್ರಶ್ನೋತ್ತರ.
ಗೀತೆ 54 ಮತ್ತು ಪ್ರಾರ್ಥನೆ