ಡಿಸೆಂಬರ್ 28ರಿಂದ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 28ರಿಂದ ಆರಂಭವಾಗುವ ವಾರ
ಗೀತೆ 60
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಹೋಶುವ 12-15
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
❑ ಸೇವಾ ಕೂಟ:
ಗೀತೆ 35
5 ನಿ: ಪ್ರಕಟಣೆಗಳು.
10 ನಿ: ಹೇಗೆ ಪ್ರತಿಕ್ರಿಯಿಸಬೇಕು? ಸಭಿಕರೊಂದಿಗೆ ಚರ್ಚೆ. ನಿಮ್ಮ ಟೆರಿಟೊರಿಯಲ್ಲಿ ಸಾಮಾನ್ಯವಾಗಿ ಕೇಳಿಬರುವ ಆಕ್ಷೇಪಣೆಗಳನ್ನು ಚರ್ಚಿಸಿರಿ. ಇವುಗಳಲ್ಲಿ ಒಂದು ಆಕ್ಷೇಪಣೆಗೆ ಪ್ರತಿಕ್ರಿಯಿಸುವುದನ್ನು ತೋರಿಸುವ ಸಂಕ್ಷಿಪ್ತ ಪ್ರತ್ಯಕ್ಷಾಭಿನಯವಿರಲಿ.
10 ನಿ: ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು. ಪುನರ್ಭೇಟಿಗಳಲ್ಲಿ ಬೈಬಲ್ ಅಧ್ಯಯನಗಳನ್ನು ಸಾದರಪಡಿಸಿದ್ದರಿಂದ ಸ್ಥಳಿಕವಾಗಿ ಏನನ್ನು ಸಾಧಿಸಲಾಗಿದೆ? ಒಬ್ಬ ಪಯನೀಯರ್ ಇಲ್ಲವೆ ಪ್ರಚಾರಕನು ಸ್ಥಳಿಕ ಟೆರಿಟೊರಿಯಲ್ಲಿ ಪರಿಣಾಮಕಾರಿಯಾಗಿ ಕಂಡುಕೊಂಡ ನಿರೂಪಣೆಯನ್ನು ತಿಳಿಸುವಂತೆ ಅಥವಾ ಪ್ರತ್ಯಕ್ಷಾಭಿನಯಿಸುವಂತೆ ಏರ್ಪಡಿಸಿ. ಸಮಸ್ಯೆಗಳು ಏಳಬಹುದಾದ ಟೆರಿಟೊರಿಗಳಲ್ಲಿ ಮನೆಯವನಿಗೆ ನಿಜವಾಗಿ ಆಸಕ್ತಿಯಿದೆಯೆಂದು ಖಚಿತವಾದ ಬಳಿಕ, ಬಹುಶಃ ಒಂದೆರಡು ಪುನರ್ಭೇಟಿಗಳ ನಂತರವೇ ಬೈಬಲ್ ಅಧ್ಯಯನ ಸಾದರಪಡಿಸುವುದು ವಿವೇಕಯುತ.
10 ನಿ: ಜನವರಿ ತಿಂಗಳ ನೀಡುವಿಕೆ. ಇದರ ವೈಶಿಷ್ಟ್ಯಗಳನ್ನು ಚುಟುಕಾಗಿ ತಿಳಿಸಿರಿ. ನಿಜವಾಗಿ ಆಸಕ್ತಿ ತೋರಿಸಿದಲ್ಲಿ ಮಾತ್ರ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನೀಡಿ. ಈ ನೀಡುವಿಕೆಯನ್ನು ಬಳಸಿ, ಅನೌಪಚಾರಿಕ ಸನ್ನಿವೇಶದಲ್ಲಿ ವಿವೇಚನೆಯಿಂದ ಬೈಬಲ್ ಅಧ್ಯಯನ ಆರಂಭಿಸುವುದರ ಬಗ್ಗೆ ಒಬ್ಬ ಪ್ರಚಾರಕನೊಂದಿಗೆ ಚರ್ಚಿಸಿ. ಈ ತಿಂಗಳು ಎಲ್ಲರೂ ಒಂದು ಬೈಬಲ್ ಅಧ್ಯಯನ ಆರಂಭಿಸುವ ಗುರಿಯಿಡುವಂತೆ ಉತ್ತೇಜಿಸಿರಿ. ಬೈಬಲ್ ಬೋಧಿಸುತ್ತದೆ ಪುಸ್ತಕದ 16ನೇ ಅಧ್ಯಾಯದಲ್ಲಿ ಚರ್ಚಿಸಲಾಗಿರುವ ವಿಗ್ರಹಗಳ ಉಪಯೋಗ ಮುಂತಾದ ವಿವಾದಾತ್ಮಕ ವಿಷಯಗಳ ಬಗ್ಗೆ ಮಾತಾಡುವಾಗ ವಿವೇಚನೆ ತೋರಿಸುವಂತೆ ಉತ್ತೇಜಿಸಿರಿ.
ಗೀತೆ 193