ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2009, ಡಿಸೆಂಬರ್ 28ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಪರಿಗಣಿಸಲಾಗುವುದು.
1. ಧರ್ಮೋಪದೇಶಕಾಂಡ 14:1ರಲ್ಲಿರುವ ಮೂಲತತ್ತ್ವವನ್ನು ಇಂದು ಕ್ರೈಸ್ತರು ಹೇಗೆ ಅನ್ವಯಿಸಬಲ್ಲರು? [w05 1/1 ಪು. 28; w04 9/15 ಪು. 27 ಪ್ಯಾರ. 5]
2. ಧರ್ಮೋಪದೇಶಕಾಂಡ 20:5-7ರಲ್ಲಿರುವ ಮಾತುಗಳ ಮೂಲತತ್ತ್ವವನ್ನು ಇಂದು ಕ್ರೈಸ್ತ ಸಭೆಯಲ್ಲಿ ಹೇಗೆ ಅನ್ವಯಿಸಬಹುದು? [w04 9/15 ಪು. 27 ಪ್ಯಾರ. 6]
3. ಯುದ್ಧಗಳ ವಿಷಯದಲ್ಲಿ ಇಸ್ರಾಯೇಲ್ ಜನಾಂಗವು ಬೇರೆ ರಾಷ್ಟ್ರಗಳಿಗಿಂತ ಹೇಗೆ ಭಿನ್ನವಾಗಿತ್ತು? (ಧರ್ಮೋ. 20:10-15, 19, 20; 21:10-13) [cl ಪು. 134-135, ಪ್ಯಾರ. 17]
4. ಯೆಹೋವನನ್ನು ಹರ್ಷಾನಂದದಿಂದ ಸೇವಿಸಲು ನಮಗೆ ಯಾವುದು ಸಹಾಯಮಾಡುತ್ತದೆ? (ಧರ್ಮೋ. 28:47) [w95 1/15 ಪು. 16 ಪ್ಯಾರ. 4-5]
5. ಇಸ್ರಾಯೇಲ್ ಜನಾಂಗದ ಮೇಲೆ ಯೆಹೋವನಿಗಿದ್ದ ಪ್ರೀತಿಯ ಕುರಿತು ಧರ್ಮೋಪದೇಶಕಾಂಡ 32:9, 11, 12ರಲ್ಲಿರುವ ಹೋಲಿಕೆಯಿಂದ ಹೆತ್ತವರು ಏನು ಕಲಿಯಬಲ್ಲರು? [w01 10/1 ಪು. 9 ಪ್ಯಾರ. 7-9]
6. ಗೂಢಚಾರರಿಗಾಗಿ ಹುಡುಕುತ್ತಿದ್ದ ಸೈನಿಕರ ದಾರಿತಪ್ಪಿಸಲು ರಾಹಾಬಳು ನುಡಿದ ಮಾತುಗಳನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕು? (ಯೆಹೋ. 2:4, 5) [w93 12/15 ಪು. 25 ಪ್ಯಾರ. 1]
7. ಯೆಹೋಶುವ 3:15, 16ರಲ್ಲಿ ದಾಖಲಾಗಿರುವ ಇಸ್ರಾಯೇಲ್ಯರ ಮಾದರಿಯು ನಮಗೆ ಯಾವ ಪಾಠ ಕಲಿಸುತ್ತದೆ? [w04 12/1 ಪು. 9 ಪ್ಯಾರ. 5]
8. ಆಕಾನನ ಕಳ್ಳತನದ ಪ್ರಕರಣವನ್ನು ಯೆಹೋಶುವನು ನಿರ್ವಹಿಸಿದ ವಿಧದಿಂದ ನಾವೇನು ಕಲಿಯುತ್ತೇವೆ? (ಯೆಹೋ. 7:20-25) [w04 12/1 ಪು. 11 ಪ್ಯಾರ. 4]
9. ದೇವರ ವಾಕ್ಯವು ಖಂಡಿತ ನೆರವೇರುತ್ತದೆಂಬುದನ್ನು ಯೆಹೋಶುವ 9:22, 23 ಹೇಗೆ ಎತ್ತಿತೋರಿಸುತ್ತದೆ? [w04 12/1 ಪು. 11 ಪ್ಯಾರ. 3]
10. ಕಾಲೇಬನ ಮಾದರಿಯಿಂದ ನಮಗೆ ಯಾವ ಉತ್ತೇಜನ ಸಿಗಬಲ್ಲದು? (ಯೆಹೋ. 14:8, 10-12) [w04 12/1 ಪು. 12 ಪ್ಯಾರ. 2]