ಸರ್ಕಿಟ್ ಸಮ್ಮೇಳನದ ಪುನರ್ವಿಮರ್ಶೆ
ಈ ವಿಷಯಭಾಗವನ್ನು, 2005ರ ಸೇವಾ ವರ್ಷದ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮದ ಮೇಲ್ನೋಟವನ್ನು ಪಡೆದುಕೊಳ್ಳಲು ಮತ್ತು ಅನಂತರ ಅದನ್ನು ಪುನರ್ವಿಮರ್ಶಿಸಲು ಉಪಯೋಗಿಸಲಾಗುವುದು. ಈ ಪುರವಣಿಯ 4ನೇ ಪುಟದಲ್ಲಿ ಕಂಡುಬರುವ “ಸಮ್ಮೇಳನ ಕಾರ್ಯಕ್ರಮಗಳನ್ನು ಪುನರ್ವಿಮರ್ಶಿಸಲು ಹೊಸ ಏರ್ಪಾಡು” ಎಂಬ ಲೇಖನವು ಈ ಪುನರ್ವಿಮರ್ಶೆಯನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ವಿವರಿಸುತ್ತದೆ. ಪುನರ್ವಿಮರ್ಶೆಯ ಸಮಯದಲ್ಲಿ ಎಲ್ಲಾ ಪ್ರಶ್ನೆಗಳನ್ನು ಆವರಿಸಲು ಸಾಧ್ಯವಾಗುವಂತೆ ಸಮಯವನ್ನು ಸರಿಯಾಗಿ ವಿಭಾಗಿಸಿರಿ. ಪ್ರಸ್ತುತಪಡಿಸಲ್ಪಟ್ಟ ಮಾಹಿತಿಯನ್ನು ಹೇಗೆ ಅನ್ವಯಿಸಬಹುದು ಎಂಬುದರ ಮೇಲೆ ಪುನರ್ವಿಮರ್ಶೆಯನ್ನು ಕೇಂದ್ರೀಕರಿಸಬೇಕು.
ಮೊದಲನೆಯ ದಿನದ ಬೆಳಗ್ಗಿನ [ಇಲ್ಲವೆ ಮಧ್ಯಾಹ್ನದ] ಸೆಷನ್
1. ದೈವಿಕ ವಿವೇಕವನ್ನು ಪಡೆದುಕೊಳ್ಳಲು ನಮಗೆ ಯಾವುದು ಸಹಾಯಮಾಡುವುದು?
2. ಸುವಾರ್ತೆಯೊಂದಿಗೆ ಹೆಚ್ಚಿನ ಜನರನ್ನು ತಲಪಲು ಸಾಧ್ಯವಾಗುವಂತೆ ಸರ್ಕಿಟ್ನಲ್ಲಿರುವವರು ಯಾವ ಪ್ರಯತ್ನಗಳನ್ನು ಮಾಡಿದ್ದಾರೆ?
ಮೊದಲನೆಯ ದಿನದ ಮಧ್ಯಾಹ್ನದ [ಇಲ್ಲವೆ ಸಾಯಂಕಾಲದ] ಸೆಷನ್
3. ಆಂತರಿಕವಾಗಿ ಅಪವಿತ್ರರಾಗದೇ ಉಳಿಯುವುದು ಕ್ರೈಸ್ತರಿಗೆ ಏಕೆ ಪ್ರಾಮುಖ್ಯವಾಗಿದೆ? ಮತ್ತು ಇದನ್ನು ಸಾಧಿಸುವುದು ಹೇಗೆ?
4. ನಾವು ನಮ್ಮ ಸಹೋದರರೊಂದಿಗೆ ಸಮಾಧಾನದಿಂದಿರುವವರು ಎಂಬುದನ್ನು ಹೇಗೆ ತೋರಿಸಬಲ್ಲೆವು?
5. ನ್ಯಾಯಸಮ್ಮತತೆ ಅಂದರೇನು, ಮತ್ತು ನಾವು ನಮ್ಮ ಸಮಯವನ್ನು ಉಪಯೋಗಿಸುವ ರೀತಿಯಲ್ಲಿ ಇದನ್ನು ಹೇಗೆ ಪ್ರದರ್ಶಿಸಬಲ್ಲೆವು?
6. ಸೌಲ ಮತ್ತು ನೋಹನ ಉದಾಹರಣೆಗಳಿಂದ ನಾವೇನನ್ನು ಕಲಿಯುತ್ತೇವೆ? ನಾವು “ವಿಧೇಯತೆ ತೋರಿಸಲು ಸಿದ್ಧ”ರಾಗಿದ್ದೇವೆ ಎಂಬುದನ್ನು ಯಾವ ವಿಧಗಳಲ್ಲಿ ತೋರಿಸಬಲ್ಲೆವು? (ಯಾಕೋ. 3:17, NW)
7. ಇಬ್ಬಗೆಯ ಜೀವನವನ್ನು ನಡೆಸುವುದರ ವಿರುದ್ಧ ಕ್ರೈಸ್ತರು ಹೇಗೆ ಎಚ್ಚರದಿಂದಿರಬಲ್ಲರು?
8. ದೇವರ ವಿವೇಕವನ್ನು ಮಾತಾಡುವ ವಿಷಯದಲ್ಲಿ ನಾವು ಪೌಲನ ಮಾದರಿಯನ್ನು ಹೇಗೆ ಅನುಕರಿಸಬಲ್ಲೆವು?
ಎರಡನೆಯ ದಿನದ ಬೆಳಗ್ಗಿನ ಸೆಷನ್
9. ನಾವು ಬೆನ್ನಟ್ಟುವ ಚಟುವಟಿಕೆಗಳನ್ನು ಆರಿಸಿಕೊಳ್ಳುವುದರಲ್ಲಿ ನಾವೇಕೆ ಜಾಗರೂಕರಾಗಿರಬೇಕು, ಮತ್ತು ಹೀಗೆ ಮಾಡಲು ನಮಗೆ ಯಾವುದು ಸಹಾಯಮಾಡುವುದು?
10. ಸರ್ಕಿಟ್ನಲ್ಲಿರುವವರು ಕೂಟಗಳಿಗೆ ಕ್ರಮವಾಗಿ ಹಾಜರಾಗಲಿಕ್ಕಾಗಿ ಯಾವ ಪ್ರಯತ್ನವನ್ನು ಮಾಡುತ್ತಿದ್ದಾರೆ, ಮತ್ತು ಹೀಗೆ ಮಾಡುವುದರಿಂದ ಅವರು ಹೇಗೆ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ?
11. ಕುಟುಂಬದ ಶಿರಸ್ಸುಗಳು ತಮ್ಮ ಮನೆವಾರ್ತೆಗಳನ್ನು ಹೇಗೆ ಕಟ್ಟಬಲ್ಲರು?
12. ಸರ್ಕಿಟ್ನ ಯಾವ ಅಗತ್ಯಗಳು ನಮ್ಮ ಗಮನಕ್ಕೆ ತರಲ್ಪಟ್ಟವು?
ಎರಡನೆಯ ದಿನದ ಮಧ್ಯಾಹ್ನದ ಸೆಷನ್
13. ಬಹಿರಂಗ ಭಾಷಣದಲ್ಲಿ ತಿಳಿಸಲ್ಪಟ್ಟಂತೆ, ಮೇಲಣಿಂದ ಬರುವ ವಿವೇಕದಿಂದ ಯಾವ ನೀತಿಯ ಕೆಲಸಗಳು ಉಂಟಾಗಿವೆ?
14. ನಾವು ಸ್ವತಃ ನಮ್ಮಲ್ಲಿ ಅಥವಾ ದೈವಿಕ ವಿವೇಕದಿಂದ ಮಾರ್ಗದರ್ಶಿಸಲ್ಪಡದವರಲ್ಲಿ ಭರವಸೆಯನ್ನಿಡುವುದು ಏಕೆ ಮೂರ್ಖತನವಾಗಿದೆ? ನಾವು ಜಾಗರೂಕರಾಗಿರಬೇಕಾದ ಕ್ಷೇತ್ರಗಳು ಯಾವುವು?
15. ದೈವಿಕ ವಿವೇಕವು ನಮ್ಮನ್ನು ಯಾವ ಅಪಾಯಗಳಿಂದ ಸಂರಕ್ಷಿಸಬಲ್ಲದು?
16. ಸರ್ಕಿಟ್ ಸಮ್ಮೇಳನ ಕಾರ್ಯಕ್ರಮದಲ್ಲಿ ಒದಗಿಸಲ್ಪಟ್ಟ ಬುದ್ಧಿವಾದವನ್ನು ಅನ್ವಯಿಸುವುದು ನಮಗೆ ಏಕೆ ಪ್ರಾಮುಖ್ಯವಾಗಿದೆ?