ಸಮ್ಮೇಳನ ಕಾರ್ಯಕ್ರಮಗಳನ್ನು ಪುನರ್ವಿಮರ್ಶಿಸಲು ಹೊಸ ಏರ್ಪಾಡು
ಸೈತಾನನ ಲೋಕವು ಅಧಃಪತನಕ್ಕೆ ಇಳಿಯುತ್ತಾ ಹೋಗುವಾಗ, “ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ವಿಸರ್ಜಿಸಿ . . . ಇಹಲೋಕದಲ್ಲಿ ಸ್ವಸ್ಥ ಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ” ಬದುಕಲು ಯೆಹೋವನು ನಮ್ಮನ್ನು ಬಲಪಡಿಸುತ್ತಿದ್ದಾನೆ. (ತೀತ 2:12) ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಆತನು ಮಾಡುವ ಏರ್ಪಾಡುಗಳಲ್ಲಿ ವಾರ್ಷಿಕ ಸರ್ಕಿಟ್ ಸಮ್ಮೇಳನ ಮತ್ತು ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮಗಳು ಸಹ ಒಂದಾಗಿದೆ. (ಮತ್ತಾ. 24:45) ಇಂಥ ಆಧ್ಯಾತ್ಮಿಕ ಒಟ್ಟುಗೂಡುವಿಕೆಗಳನ್ನು ನಾವು ತುಂಬ ಬಲವರ್ಧಕವಾದದ್ದಾಗಿ ಕಂಡುಕೊಳ್ಳುತ್ತೇವೆ!
ಒದಗಿಸಲ್ಪಡುವ ಉಪದೇಶವನ್ನು ಮನಸ್ಸಿನಲ್ಲಿ ಕಾಪಾಡಿ ಅದನ್ನು ಜೀವನದಲ್ಲಿ ಅಳವಡಿಸಲಿಕ್ಕಾಗಿ, 2005ರ ಸೇವಾ ವರ್ಷದಿಂದ ಈ ಸಮ್ಮೇಳನ ಕಾರ್ಯಕ್ರಮಗಳನ್ನು ಪುನರ್ವಿಮರ್ಶಿಸಲು ಒಂದು ಹೊಸ ಏರ್ಪಾಡನ್ನು ಉಪಯೋಗಿಸಲಾಗುವುದು. ಈ ಪುರವಣಿಯ 5-6ನೇ ಪುಟಗಳಲ್ಲಿ ಕಾರ್ಯಕ್ರಮದಲ್ಲಿ ಏನು ಪ್ರಸ್ತುತಪಡಿಸಲ್ಪಡುವುದು ಎಂಬುದರ ನಸುನೋಟವನ್ನು ಒದಗಿಸುವ ಲೇಖನಗಳು ಮತ್ತು ಪ್ರತಿಯೊಂದು ಸಮ್ಮೇಳನ ಕಾರ್ಯಕ್ರಮಕ್ಕಾಗಿರುವ ಪುನರ್ವಿಮರ್ಶೆಗಾಗಿರುವ ಪ್ರಶ್ನೆಗಳು ಅಡಕವಾಗಿವೆ. ಸಭೆಗಳು ಈ ಮಾಹಿತಿಯನ್ನು ಸಮ್ಮೇಳನಗಳಿಗೆ ಹಾಜರಾಗುವ ತುಸು ಮುಂಚೆ ಮತ್ತು ತುಸು ಅನಂತರ ಸೇವಾ ಕೂಟದಲ್ಲಿ ಪರಿಗಣಿಸುವವು. ಇದು ಹೇಗೆ ಏರ್ಪಾಡು ಮಾಡಲ್ಪಡುತ್ತದೆ?
ಸಭೆಯು ಸರ್ಕಿಟ್ ಸಮ್ಮೇಳನಕ್ಕೆ ಹಾಜರಾಗುವ ಒಂದು ಅಥವಾ ಎರಡು ವಾರಗಳಿಗೆ ಮುಂಚೆ, “ಹೊಸ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮ” ಎಂಬ ಲೇಖನದ ಮೇಲಾಧಾರಿಸಿರುವ ಹತ್ತು ನಿಮಿಷದ ಭಾಗವು ಸೇವಾ ಕೂಟದಲ್ಲಿ ಪ್ರಸ್ತುತಪಡಿಸಲ್ಪಡುವುದು. ಇದು ಕಾರ್ಯಕ್ರಮಕ್ಕಾಗಿರುವ ನಮ್ಮ ಕಾತುರವನ್ನು ಹೆಚ್ಚಿಸುವುದು. ಭಾಷಣಕಾರನು ಪುನರ್ವಿಮರ್ಶೆಗಾಗಿರುವ ಪ್ರಶ್ನೆಗಳತ್ತ ಕೂಡ ಗಮನವನ್ನು ತಿರುಗಿಸುವನು ಮತ್ತು ಸಮ್ಮೇಳನದ ಅನಂತರ ಕೆಲವು ವಾರಗಳಲ್ಲಿ ಪರಿಗಣಿಸಲ್ಪಡಲಿರುವ ಪುನರ್ವಿಮರ್ಶೆಯ ತಯಾರಿಯೋಪಾದಿ ಟಿಪ್ಪಣಿಗಳನ್ನು ತೆಗೆದುಕೊಳ್ಳುವಂತೆ ಎಲ್ಲರನ್ನು ಪ್ರೋತ್ಸಾಹಿಸುವನು.
ಸಮ್ಮೇಳನದ ಅನಂತರ ಕೆಲವು ವಾರಗಳಲ್ಲಿ, ಸಮ್ಮೇಳನ ಕಾರ್ಯಕ್ರಮದ ಮೊದಲನೆಯ ದಿನದ 15 ನಿಮಿಷದ ಪುನರ್ವಿಮರ್ಶೆಯು ಸೇವಾ ಕೂಟದಲ್ಲಿ ಸೇರಿಸಲ್ಪಡುವುದು. ಮುಂದಿನ ವಾರ, ಕಾರ್ಯಕ್ರಮದ ಎರಡನೆಯ ದಿನದ ಪುನರ್ವಿಮರ್ಶೆಗಾಗಿ 15 ನಿಮಿಷಗಳು ವ್ಯಯಿಸಲ್ಪಡುವವು. ಈ ಚರ್ಚೆಗಳನ್ನು ಈ ಪುರವಣಿಯಲ್ಲಿ ಒದಗಿಸಲ್ಪಟ್ಟಿರುವ ಪ್ರಶ್ನೆಗಳ ಮೇಲೆ ಆಧರಿಸತಕ್ಕದ್ದು. ಪುನರ್ವಿಮರ್ಶೆಯು ಮಾಹಿತಿಯ ಪ್ರಾಯೋಗಿಕ ಮೌಲ್ಯದ ಮೇಲೆ ಗಮನವನ್ನು ಕೇಂದ್ರೀಕರಿಸುವುದು. ಈ ಪುನರ್ವಿಮರ್ಶೆಯ ಸೆಷನ್ಗಳನ್ನು ಸೇರಿಸಿಕೊಳ್ಳಲಿಕ್ಕಾಗಿ ಹಿರಿಯರು ಸೇವಾ ಕೂಟದ ಇತರ ಭಾಗಗಳನ್ನು ಚುಟುಕಾಗಿಸಲು, ತೆಗೆದುಬಿಡಲು, ಅಥವಾ ಬೇರೊಂದು ಸಮಯದಲ್ಲಿ ಇಟ್ಟುಕೊಳ್ಳಲು ಏರ್ಪಾಡು ಮಾಡಬಹುದು.
ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮದ ವಿಷಯದಲ್ಲಿ ಇದೇ ಏರ್ಪಾಡನ್ನು ಅನುಸರಿಸಲಾಗುವುದು; ಇಡೀ ಕಾರ್ಯಕ್ರಮವನ್ನು ಪುನರ್ವಿಮರ್ಶಿಸಲು ಕೇವಲ 15 ನಿಮಿಷದ ಒಂದು ಭಾಗ ಮಾತ್ರ ಇರುವುದು. ನಾವೆಲ್ಲರೂ ಈ ಪುರವಣಿಯನ್ನು ಜೋಪಾನವಾಗಿ ಇಡಲು ಮತ್ತು ಯೆಹೋವನು ಒದಗಿಸುವ ಉತ್ತಮ ಉಪದೇಶದಿಂದ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಇದನ್ನು ಉಪಯೋಗಿಸಲು ಬಯಸುವೆವು.—ಯೆಶಾ. 48:17, 18.