ವಿಶೇಷ ಸಮ್ಮೇಳನ ದಿನದ ಪುನರ್ವಿಮರ್ಶೆ
ಈ ವಿಷಯಭಾಗವನ್ನು, 2005ರ ಸೇವಾ ವರ್ಷದ ವಿಶೇಷ ಸಮ್ಮೇಳನ ದಿನ ಕಾರ್ಯಕ್ರಮದ ಮೇಲ್ನೋಟವನ್ನು ಪಡೆದುಕೊಳ್ಳಲು ಮತ್ತು ಅನಂತರ ಅದನ್ನು ಪುನರ್ವಿಮರ್ಶಿಸಲು ಉಪಯೋಗಿಸಲಾಗುವುದು. ಈ ಪುರವಣಿಯ 4ನೇ ಪುಟದಲ್ಲಿ ಕಂಡುಬರುವ “ಸಮ್ಮೇಳನ ಕಾರ್ಯಕ್ರಮಗಳನ್ನು ಪುನರ್ವಿಮರ್ಶಿಸಲು ಹೊಸ ಏರ್ಪಾಡು” ಎಂಬ ಲೇಖನವು ಈ ಪುನರ್ವಿಮರ್ಶೆಯನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ವಿವರಿಸುತ್ತದೆ. ಪುನರ್ವಿಮರ್ಶೆಯ ಸಮಯದಲ್ಲಿ ಎಲ್ಲಾ ಪ್ರಶ್ನೆಗಳನ್ನು ಆವರಿಸಲು ಸಾಧ್ಯವಾಗುವಂತೆ ಸಮಯವನ್ನು ಸರಿಯಾಗಿ ವಿಭಾಗಿಸಿರಿ. ಪ್ರಸ್ತುತಪಡಿಸಲ್ಪಟ್ಟ ಮಾಹಿತಿಯನ್ನು ಹೇಗೆ ಅನ್ವಯಿಸಬಹುದು ಎಂಬುದರ ಮೇಲೆ ಪುನರ್ವಿಮರ್ಶೆಯನ್ನು ಕೇಂದ್ರೀಕರಿಸಬೇಕು.
ಬೆಳಗ್ಗಿನ ಸೆಷನ್
1. ಯೆಹೋವನು ಏನನ್ನು ಹೇಳುತ್ತಿದ್ದಾನೋ ಅದಕ್ಕೆ ಕಿವಿಗೊಡುವುದು ಹಿಂದೆಂದಿಗಿಂತಲೂ ಹೆಚ್ಚು ಆವಶ್ಯಕವಾಗಿದೆ ಏಕೆ? ಕಿವಿಗೊಡುವುದು ಎಂಬುದರ ಅರ್ಥವೇನು? (“ಯೆಹೋವನ ಮಾತನ್ನು ಏಕೆ ಆಲಿಸಬೇಕು?”)
2. ಕುಟುಂಬಗಳು ಹೇಗೆ ಆಧ್ಯಾತ್ಮಿಕ ಚಟುವಟಿಕೆಯ ಒಳ್ಳೆಯ ಕಾರ್ಯತಖ್ತೆಯನ್ನು ಇಟ್ಟುಕೊಳ್ಳಬಲ್ಲವು? (“ಅಪಕರ್ಷಿತರಾಗದೇ ದೇವರ ವಾಕ್ಯಕ್ಕೆ ಕಿವಿಗೊಡುವ ಕುಟುಂಬಗಳು”)
3. ಸರ್ಕಿಟ್ನಲ್ಲಿರುವವರು ಅನೌಪಚಾರಿಕವಾಗಿ ಸಾಕ್ಷಿಕೊಡಲು ಸಿಗುವ ಸಂದರ್ಭಗಳನ್ನು ಹೇಗೆ ಸದುಪಯೋಗಿಸಿಕೊಂಡಿದ್ದಾರೆ? (“ಎಲ್ಲವನ್ನೂ ದೇವರ ಘನತೆಗಾಗಿ ಮಾಡುತ್ತಾ ಇರಿ”)
4. ಇಬ್ರಿಯ 3 ಮತ್ತು 4ನೇ ಅಧ್ಯಾಯಗಳಲ್ಲಿ ಕಂಡುಬರುವ ಎಚ್ಚರಿಕೆಯ ಮಾದರಿಯಿಂದ ನಾವು ಯಾವ ಪಾಠಗಳನ್ನು ಕಲಿಯಬಲ್ಲೆವು? ಇಂದು ಯೆಹೋವನು ನಮ್ಮೊಂದಿಗೆ ಹೇಗೆ ಮಾತಾಡುತ್ತಿದ್ದಾನೆ? (“ದೇವರು ಮಾತಾಡುವಾಗ ಕಿವಿಗೊಡುವುದು ನಮ್ಮನ್ನು ರಕ್ಷಿಸುತ್ತದೆ”)
5. ದೀಕ್ಷಾಸ್ನಾನದ ಭಾಷಣದಿಂದ ನೀವು ಹೇಗೆ ಪ್ರಯೋಜನ ಹೊಂದಿದಿರಿ? (“ಸಮರ್ಪಣೆ ಮತ್ತು ದೀಕ್ಷಾಸ್ನಾನ”)
ಮಧ್ಯಾಹ್ನದ ಸೆಷನ್
6. ಯುವಕನಾಗಿದ್ದ ಯೇಸುವಿನ ಕುರಿತು ನಾವು ಏನನ್ನು ಗ್ರಹಿಸಬಲ್ಲೆವು, ಮತ್ತು ಸರ್ಕಿಟ್ನಲ್ಲಿರುವ ಯುವಜನರು ಅವನ ಮಾದರಿಯನ್ನು ಹೇಗೆ ಅನುಕರಿಸುತ್ತಿದ್ದಾರೆ? (“ದೇವರ ವಾಕ್ಯಕ್ಕೆ ಲಕ್ಷ್ಯವಿಟ್ಟು ಕಿವಿಗೊಡುವುದು ನಮ್ಮ ಯುವಜನರನ್ನು ಬಲಪಡಿಸುವ ವಿಧ”)
7. ಹೆತ್ತವರು ಹಸುಗೂಸುಗಳನ್ನು ಮತ್ತು ಚಿಕ್ಕ ಮಕ್ಕಳನ್ನು ಯೆಹೋವನ ಮಾರ್ಗಗಳಲ್ಲಿ ತರಬೇತುಗೊಳಿಸಲು ಆರಂಭಿಸುವ ಕೆಲವು ವಿಧಗಳಾವುವು? (“ದೇವರಿಗೆ ಕಿವಿಗೊಟ್ಟು ಕಲಿಯುವ ಚಿಕ್ಕ ಮಕ್ಕಳು”)
8. ನಾವು ಯೆಹೋವನಿಗೆ, ಆತನ ಕುಮಾರನಿಗೆ, ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿಗೆ’ ಗಮನ ಕೊಡಬೇಕಾದ ಕೆಲವು ನಿರ್ದಿಷ್ಟ ಕ್ಷೇತ್ರಗಳಾವುವು? (ಮತ್ತಾ. 24:45) ನಾವು ಹೀಗೆ ಮಾಡುವುದು ಏಕೆ ಪ್ರಾಮುಖ್ಯವಾಗಿದೆ? (“ದೈವಿಕ ಉಪದೇಶಕ್ಕೆ ಎಡೆಬಿಡದೆ ಗಮನ ಕೊಡಿರಿ”)