ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2004ರ ಡಿಸೆಂಬರ್ 27ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಮೌಖಿಕವಾಗಿ ಪರಿಗಣಿಸಲಾಗುವುದು. 2004ರ ನವೆಂಬರ್ 1ರಿಂದ ಡಿಸೆಂಬರ್ 27ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲಾಧಾರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು. [ಸೂಚನೆ: ಪ್ರಶ್ನೆಗಳ ಬಳಿಕ ರೆಫರೆನ್ಸ್ಗಳು ಇಲ್ಲದಿರುವಲ್ಲಿ, ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವ ಆವಶ್ಯಕತೆಯಿರುವುದು.—ಶೂಶ್ರೂಷಾ ಶಾಲೆ, ಪುಟ 36-7ನ್ನು ನೋಡಿರಿ.]
ಭಾಷಣ ಗುಣಗಳು
1. ಒಂದು ವಿಷಯವಸ್ತುವಿನಲ್ಲಿ ಸಭಿಕರ ಆಸಕ್ತಿಯನ್ನು ಕೆರಳಿಸುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದು ಯಾವುದು? [be-KA ಪು. 218 ಪ್ಯಾರ. 3]
2. ಪರಿಣಾಮಕಾರಿಯಾದ ಒಂದು ಸಮಾಪ್ತಿಯ ಐದು ವೈಶಿಷ್ಟ್ಯಗಳನ್ನು ಪಟ್ಟಿಮಾಡಿರಿ. [be-KA ಪು. 220 ಪ್ಯಾರ. 4-ಪು. 221 ಪ್ಯಾರ. 4]
3. ನಮ್ಮ ಹೇಳಿಕೆಗಳು ನಿಷ್ಕೃಷ್ಟವಾಗಿವೆ ಎಂಬುದನ್ನು ನಾವು ಹೇಗೆ ಖಚಿತಪಡಿಸಿಕೊಳ್ಳಬಲ್ಲೆವು? [be-KA ಪು. 224 ಚೌಕ]
4. ನಾವು ಕೂಟಗಳಲ್ಲಿ ಕೊಡುವ ಭಾಷಣಗಳು, “ಸತ್ಯಕ್ಕೆ ಸ್ತಂಭವೂ ಆಧಾರವೂ” ಆದ ಸಭೆಯ ಪಾತ್ರಕ್ಕೆ ಅತ್ಯಧಿಕ ಗೌರವವನ್ನು ತೋರಿಸುತ್ತವೆ ಎಂಬುದನ್ನು ನಾವು ಹೇಗೆ ಖಚಿತಪಡಿಸಬಲ್ಲೆವು? (1 ತಿಮೊ. 3:15) [be-KA ಪು. 224 ಪ್ಯಾರ. 1-4]
5. ಪ್ರಚಲಿತ ಸಂಭವಗಳು, ಉಲ್ಲೇಖಗಳು ಮತ್ತು ಅನುಭವಗಳ ಸಂಬಂಧದಲ್ಲಿ ನಾವು ಜ್ಞಾನೋಕ್ತಿ 14:15ನ್ನು ಹೇಗೆ ಅನ್ವಯಿಸಬಲ್ಲೆವು? [be-KA ಪು. 225 ಪ್ಯಾರ. 1]
ನೇಮಕ ನಂ. 1
6. ಜಲಪ್ರಳಯದಿಂದ ಹಿಂದಕ್ಕೆ ಆದಾಮನ ಸೃಷ್ಟಿಯ ವರೆಗಿನ ಕಾಲವನ್ನು ಹೇಗೆ ಲೆಕ್ಕಿಸಬಹುದು? [si ಪು. 286 ಪ್ಯಾರ. 12]
7. ಯೇಸುವಿನ ಶುಶ್ರೂಷೆಯು ಆರಂಭವಾದ ತಾರೀಖನ್ನು ಹೇಗೆ ಗೊತ್ತುಮಾಡಸಾಧ್ಯವಿದೆ, ಮತ್ತು ಅದು ಕೇವಲ ಮೂರೂವರೆ ವರ್ಷಗಳ ಅವಧಿಯದ್ದಾಗಿತ್ತು ಎಂದು ನಂಬಲು ಯಾವ ಆಧಾರವಿದೆ? [si ಪು. 291 ಪ್ಯಾರ. 16]
8. (ಎ) “ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು” ಯಾವಾಗ ಹೊರಟಿತು? (ಬಿ) ಆ ಸಮಯದಿಂದ ಹಿಡಿದು ಯೇಸು ಮೆಸ್ಸೀಯನಾಗಿ ತೋರಿಬರುವ ತನಕ ಎಷ್ಟು ವರ್ಷಗಳು ಗತಿಸಲಿದ್ದವು? (ದಾನಿ. 9:24-27) [si ಪು. 291 ಪ್ಯಾರ. 18-19]
9. ‘ನಮ್ಮ ಸಹೋದರನ ಸಂಗಡ ಒಂದಾಗು’ವುದರಲ್ಲಿ ಫಲಿಸುವ ಮನಃಪೂರ್ವಕವಾದ ಕ್ಷಮಾಯಾಚನೆಯಲ್ಲಿ ಏನು ಒಳಗೂಡಿದೆ? (ಮತ್ತಾ. 5:23, 24) [w-KA02 11/1 ಪು. 6 ಪ್ಯಾರ. 1, 5]
10. ದೇವನೇಮಿತ ಕೆಲಸಗಳನ್ನು ಪೂರೈಸುವುದರ ಬಗ್ಗೆ 2 ಅರಸುಗಳು 13:18, 19 ನಮಗೆ ಏನನ್ನು ಬೋಧಿಸುತ್ತದೆ? [w-KA02 12/1 ಪು. 31 ಪ್ಯಾರ. 1-2]
ಸಾಪ್ತಾಹಿಕ ಬೈಬಲ್ ವಾಚನ
11. ಸ್ವತಃ ತಾವೇ ತಿನ್ನದಿರುವ ರಕ್ತ ಬಸಿಯದ ಸತ್ತ ಪ್ರಾಣಿಯನ್ನು ಇಸ್ರಾಯೇಲ್ಯರು ಏಕೆ ಪರದೇಶೀಯರಿಗೆ ಕೊಡಸಾಧ್ಯವಿತ್ತು ಅಥವಾ ಅನ್ಯರಿಗೆ ಮಾರಸಾಧ್ಯವಿತ್ತು? (ಧರ್ಮೋ. 14:21)
12. ಧರ್ಮೋಪದೇಶಕಾಂಡ 20:5-7ರಲ್ಲಿ ನಮಗೆ ಯಾವ ಪಾಠವು ಕೊಡಲ್ಪಟ್ಟಿದೆ?
13. “ಬೀಸುವಕಲ್ಲನ್ನು ಪೂರ್ತಿಯಾಗಲಿ ಅರ್ಧವಾಗಲಿ” ಒತ್ತೆತೆಗೆದುಕೊಳ್ಳುವುದು, “ಜೀವನಾಧಾರವನ್ನೇ” ಒತ್ತೆಯಾಗಿ ತೆಗೆದುಕೊಳ್ಳುವುದಕ್ಕೆ ಸಮಾನವಾಗಿತ್ತು ಏಕೆ? (ಧರ್ಮೋ. 24:6)
14. ಮೋಶೆಯು ಇಸ್ರಾಯೇಲ್ಯರನ್ನು ಆಶೀರ್ವದಿಸಿದಾಗ ಅವನು ಸಿಮೆಯೋನನನ್ನು ಏಕೆ ನಿರ್ದಿಷ್ಟವಾಗಿ ಉಲ್ಲೇಖಿಸಲಿಲ್ಲ? (ಧರ್ಮೋ. 33:1-29)
15. ಆಕಾನನ ಪಾಪಕರ ಮಾರ್ಗಕ್ಕೆ ಆಧುನಿಕ ದಿನದ ಹೋಲಿಕೆ ಯಾವುದಾಗಿದೆ? (ಯೆಹೋ. 7:1-26) [w-KA87 1/1 ಪು. 18 ಪ್ಯಾರ. 20]