ಜನವರಿಗಾಗಿ ಸೇವಾ ಕೂಟಗಳು
ಜನವರಿ 6ರಿಂದ ಆರಂಭವಾಗುವ ವಾರ
ಸಂಗೀತ 6 (4)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ದೇಶದ ಮತ್ತು ಸ್ಥಳಿಕ ಸಭೆಯ ಸೆಪ್ಟೆಂಬರ್ ತಿಂಗಳ ಕ್ಷೇತ್ರ ಸೇವಾ ವರದಿಯ ಕುರಿತಾಗಿ ಹೇಳಿಕೆಯನ್ನು ನೀಡಿರಿ.
20 ನಿ: ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್/ರಿಲೀಸ್ ಕಾರ್ಡ್ ಅನ್ನು ನವೀಕರಿಸಲು ಸಮಯ. ಕಾರ್ಡನ್ನು ಸಂಪೂರ್ಣವಾಗಿ ತುಂಬಿಸುವ ಮತ್ತು ಎಲ್ಲಾ ಸಮಯಗಳಲ್ಲೂ ಅದನ್ನು ಒಯ್ಯುವ ಪ್ರಾಮುಖ್ಯದ ಕುರಿತು ಅರ್ಹ ಹಿರಿಯನು ಚರ್ಚಿಸುತ್ತಾನೆ. ಒಂದು ತುರ್ತುಪರಿಸ್ಥಿತಿಯಲ್ಲಿ ನೀವು ಸ್ವತಃ ಮಾತಾಡಲು ಅಶಕ್ತರಾಗಿರುವಲ್ಲಿ, ಈ ಡಾಕ್ಯುಮೆಂಟ್ ನಿಮ್ಮ ಪರವಾಗಿ ಮಾತಾಡುತ್ತದೆ. (ಜ್ಞಾನೋಕ್ತಿ 22:3ನ್ನು ಹೋಲಿಸಿರಿ.) ರಕ್ತದ ನಿರಾಕರಣೆಯ ಕುರಿತಾದ ಪ್ರಚಲಿತ ಹೇಳಿಕೆಯನ್ನು ಕೊಡಲು ಪ್ರತಿ ವರ್ಷ ಒಂದು ಹೊಸ ಕಾರ್ಡ್ ತುಂಬಿಸಲ್ಪಡಬೇಕು. ಯಾಕಂದರೆ, ಒಂದು ವರ್ಷಕ್ಕಿಂತ ಹೆಚ್ಚು ಹಳೆಯದಾದ ಡಾಕ್ಯುಮೆಂಟ್‌ಗಳು, ಒಬ್ಬ ವ್ಯಕ್ತಿಯ ಸದ್ಯದ ಗಾಢನಂಬಿಕೆಯನ್ನು ತೋರಿಸದಿರಬಹುದೆಂದು ಕೆಲವು ವೈದ್ಯರು ಮತ್ತು ಇತರರು ವಾದಿಸಿದ್ದಾರೆ. ಕೂಟದ ನಂತರ, ಎಲ್ಲಾ ದೀಕ್ಷಾಸ್ನಾನಿತ ಪ್ರಚಾರಕರು ಲಿಟರೇಚರ್ ಕೌಂಟರ್‌ನಿಂದ, ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್/ರಿಲೀಸ್ ಕಾರ್ಡನ್ನು ಪಡೆದುಕೊಳ್ಳಬೇಕು, ಮತ್ತು ಅಸ್ನಾನಿತ ಚಿಕ್ಕ ಮಕ್ಕಳಿರುವವರು, ಪ್ರತಿಯೊಂದು ಮಗುವಿಗಾಗಿ ಒಂದು ಐಡೆಂಟಿಟಿ ಕಾರ್ಡನ್ನು ಪಡೆದುಕೊಳ್ಳಬೇಕು. ಈ ಕಾರ್ಡುಗಳನ್ನು ಆ ರಾತ್ರಿಯೇ ಕೂಟದಲ್ಲಿ ತುಂಬಿಸಬಾರದೆಂದು ವಿವರಿಸಿರಿ. ಅವುಗಳನ್ನು ಮನೆಯಲ್ಲಿ ಜಾಗರೂಕತೆಯಿಂದ ತುಂಬಿಸಬೇಕು, ಆದರೆ ಸಹಿಮಾಡಬಾರದು. ಎಲ್ಲಾ ಕಾರ್ಡುಗಳ ಸಹಿಹಾಕುವಿಕೆ, ಸಾಕ್ಷಿಹಾಕುವಿಕೆ, ಮತ್ತು ತಾರೀಖು ಹಾಕುವಿಕೆ, ಸಭಾ ಪುಸ್ತಕ ಚಾಲಕನ ಉಸ್ತುವಾರಿಯ ಕೆಳಗೆ, ಮುಂದಿನ ಸಭಾ ಪುಸ್ತಕ ಅಭ್ಯಾಸದ ನಂತರ ಮಾಡಲ್ಪಡುವುದು. ತನ್ನ ಗುಂಪಿಗೆ ನೇಮಿಸಲ್ಪಟ್ಟಿರುವವರೆಲ್ಲರೂ ಒಂದು ಕಾರ್ಡನ್ನು ಪಡೆದಿದ್ದು, ಅಗತ್ಯವಿರುವ ನೆರವನ್ನು ಪಡೆದಿದ್ದಾರೆಂಬುದನ್ನು ಅವನು ಪರಿಶೀಲಿಸಿ ನೋಡುವನು. ಸಾಕ್ಷಿಗಳೋಪಾದಿ ಸಹಿಹಾಕುವವರು, ಕಾರ್ಡನ್ನು ಹೊಂದಿರುವವನು ಡಾಕ್ಯುಮೆಂಟಿಗೆ ಸಹಿಹಾಕುವುದನ್ನು ಪ್ರತ್ಯಕ್ಷವಾಗಿ ನೋಡಬೇಕು. ಆ ಸಮಯದಲ್ಲಿ ಉಪಸ್ಥಿತರಿಲ್ಲದಿರುವ ಯಾರೊಬ್ಬರಿಗೂ, ಮುಂದಿನ ಸೇವಾ ಕೂಟದಲ್ಲಿ ಅಭ್ಯಾಸ ಚಾಲಕರು/ಹಿರಿಯರಿಂದ ನೆರವು ನೀಡಲಾಗುವುದು. ಎಲ್ಲಾ ದೀಕ್ಷಾಸ್ನಾನಿತ ಪ್ರಚಾರಕರು ತಮ್ಮ ಕಾರ್ಡುಗಳನ್ನು ಸರಿಯಾಗಿ ತುಂಬಿಸಿ, ಸಹಿಹಾಕುವ ವರೆಗೆ ನೆರವು ನೀಡಲ್ಪಡುವುದು. (ಅಕ್ಟೋಬರ್ 15, 1991ರ ಪತ್ರವನ್ನು ಪುನರ್ವಿಮರ್ಶಿಸಿರಿ.) ಅಸ್ನಾನಿತ ಪ್ರಚಾರಕರು ಬಯಸುವಲ್ಲಿ, ಈ ಕಾರ್ಡ್‌ನ ವಿಷಯವನ್ನು ತಮ್ಮ ಸ್ವಂತ ಪರಿಸ್ಥಿತಿಗಳು ಮತ್ತು ನಿಶ್ಚಿತಾಭಿಪ್ರಾಯಗಳಿಗೆ ಹೊಂದಿಸಿಕೊಂಡು, ತಮಗಾಗಿ ಮತ್ತು ತಮ್ಮ ಮಕ್ಕಳಿಗಾಗಿ ತಮ್ಮ ಸ್ವಂತ ಡೈರೆಕ್ಟಿವ್ ಅನ್ನು ಬರೆದುಕೊಳ್ಳಬಹುದು. ಈ ಅತಿ ಪ್ರಾಮುಖ್ಯ ವಿವರಗಳನ್ನು ಪಾಲಿಸುವುದರಲ್ಲಿ ಸೂಕ್ಷ್ಮ ಪರಿಜ್ಞಾನವನ್ನು ಅಭ್ಯಾಸಿಸುವುದು ಯೆಹೋವನಿಂದ ಒಳಿತನ್ನು ಉಂಟುಮಾಡುವುದು.—ಜ್ಞಾನೋ. 16:20.
15 ನಿ: “ಇತರರಿಗೆ ಕಲಿಸಲು ಅರ್ಹರು ಮತ್ತು ಸಜ್ಜಿತರು.” (1-6ನೆಯ ಪ್ಯಾರಗ್ರಾಫ್‌ಗಳು) ಯೆಹೋವನ ಸಹಾಯದಿಂದ ಇತರರಿಗೆ ಪರಿಣಾಮಕಾರಿಯಾಗಿ ಕಲಿಸಬಲ್ಲೆವೆಂದು ನಾವು ಭರವಸೆಯಿಂದಿರುವ ಅಗತ್ಯವನ್ನು ಒತ್ತಿಹೇಳುತ್ತಾ, 1-2ನೆಯ ಪ್ಯಾರಗ್ರಾಫ್‌ಗಳ ಕುರಿತು ಸಂಕ್ಷಿಪ್ತ ಹೇಳಿಕೆಗಳನ್ನು ನೀಡಿರಿ. ಪ್ರಚಾರಕ-ಮನೆಯವನು—ಹೀಗೆ ಎರಡು ಜೋಡಿಗಳು, 3-6ನೆಯ ಪ್ಯಾರಗ್ರಾಫ್‌ಗಳಲ್ಲಿರುವ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸುವಂತೆ ಮಾಡಿರಿ. ಪ್ರತಿಯೊಂದು ಜೋಡಿಯು, ಆರಂಭದ ಭೇಟಿ ಮತ್ತು ಪುನರ್ಭೇಟಿಯನ್ನು ಹೇಗೆ ಮಾಡಬೇಕೆಂಬುದನ್ನು ತೋರಿಸಲಿ.
ಸಂಗೀತ 14 (6) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 13ರಿಂದ ಆರಂಭವಾಗುವ ವಾರ
ಸಂಗೀತ 16 (101)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ. ಪ್ರಚಲಿತ ಪತ್ರಿಕೆಗಳಲ್ಲಿರುವ ಕೆಲವು ಸಂಭಾಷಣಾತ್ಮಕ ಅಂಶಗಳನ್ನು ಎತ್ತಿಹೇಳಿರಿ. ಅನೌಪಚಾರಿಕವಾಗಿ ಸಾಕ್ಷಿನೀಡಲು ಜನರನ್ನು ಸಮೀಪಿಸುವಾಗ, ನಮ್ಮನ್ನು ಹೇಗೆ ಪರಿಚಯಪಡಿಸಿಕೊಳ್ಳಬೇಕೆಂಬ ವಿಧದ ಕುರಿತಾಗಿ ಸಲಹೆಗಳನ್ನು ನೀಡಿರಿ. ಅಂಗಡಿಗಳಲ್ಲಿ, ಬೀದಿಯಲ್ಲಿ, ಉದ್ಯಾನವನದಲ್ಲಿ, ಸಾರ್ವಜನಿಕ ಸಾರಿಗೆ ಇನ್ನು ಮುಂತಾದ ಸ್ಥಳಗಳಲ್ಲಿ ಇತರರೊಂದಿಗೆ ಮಾತಾಡುವಾಗ, ಅವರು ಉಪಯೋಗಿಸಿರುವ ಆರಂಭದ ಮಾತುಗಳನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ.
10 ನಿ: “ಇತರರಿಗೆ ಕಲಿಸಲು ಅರ್ಹರು ಮತ್ತು ಸಜ್ಜಿತರು.” (7-9ನೆಯ ಪ್ಯಾರಗ್ರಾಫ್‌ಗಳು) 1995 ವರ್ಷಪುಸ್ತಕ (ಇಂಗ್ಲಿಷ್)ದ 45ನೆಯ ಪುಟದಲ್ಲಿ ಕಂಡುಬರುವ, ಪುನರ್ಭೇಟಿಗಳನ್ನು ಮಾಡುವುದರ ಕುರಿತಾದ ಅನುಭವವನ್ನು ತಿಳಿಸಿ, ಸಿಗುವಂತಹ ಯಾವುದೇ ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗುವ ಪ್ರಾಮುಖ್ಯವನ್ನು ಒತ್ತಿಹೇಳಿರಿ. 7-8ನೆಯ ಪ್ಯಾರಗ್ರಾಫ್‌ಗಳಲ್ಲಿರುವ ನಿರೂಪಣೆಗಳನ್ನು ಅನುಭವಿ ಪ್ರಚಾರಕನು ಪ್ರತ್ಯಕ್ಷಾಭಿನಯಿಸುವಂತೆ ಮಾಡಿರಿ. ಆರಂಭದಲ್ಲಿ ಇತರ ಪ್ರಕಾಶನಗಳು ನೀಡಲ್ಪಟ್ಟರೂ, ಕಟ್ಟಕಡೆಗೆ ಎಲ್ಲಾ ಅಭ್ಯಾಸಗಳನ್ನು ಜ್ಞಾನ ಪುಸ್ತಕದಿಂದ ನಡೆಸುವುದರ ಮೇಲೆ ನಾವು ನಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸಬೇಕು. ಬರುವ ವಾರದಲ್ಲಿ ಎಲ್ಲರೂ ಪುನರ್ಭೇಟಿಗಳನ್ನು ಮಾಡಲಿಕ್ಕಾಗಿ ಸ್ವಲ್ಪ ಸಮಯವನ್ನು ನಿಗದಿಪಡಿಸುವಂತೆ ಉತ್ತೇಜಿಸಿರಿ.
25 ನಿ: “ನಮ್ಮ ದೇವರ ಆಲಯವನ್ನು ನಾವು ಅಲಕ್ಷಿಸಬಾರದು.” ಪುರವಣಿಯ ಪ್ರಶ್ನೋತ್ತರ ಆವರಿಸುವಿಕೆ. ಸ್ಥಳಿಕವಾಗಿ ಅನ್ವಯಿಸಿರಿ. ನಿಮ್ಮ ಸಭೆಯು ತನ್ನ ಸ್ವಂತ ಸಭಾಗೃಹವನ್ನು ಪಡೆದುಕೊಳ್ಳಲಿಕ್ಕಾಗಿ ಮತ್ತು ಅದಕ್ಕೆ ಈಗಾಗಲೇ ತನ್ನ ಸ್ವಂತ ಸಭಾಗೃಹವಿರುವಲ್ಲಿ, ಅದನ್ನು ದುರಸ್ತಿನಲ್ಲಿಟ್ಟುಕೊಳ್ಳಲಿಕ್ಕಾಗಿ ಉತ್ಸಾಹವನ್ನು ಬೆಳೆಸಿರಿ. ಒಂದು ಕಟ್ಟುವಿಕೆಯ ಕಾರ್ಯಯೋಜನೆಯು ನಡೆಯುತ್ತಾ ಇರುವಲ್ಲಿ ಅಥವಾ ಇತ್ತೀಚೆಗೆ ನಿಮ್ಮ ಸಭೆಯಿಂದ ಪೂರ್ಣಗೊಳಿಸಲ್ಪಟ್ಟಿರುವಲ್ಲಿ, ಸಹೋದರರನ್ನು ಅವರ ಭೌತಿಕ ಬೆಂಬಲ ಮತ್ತು ಇತರ ನೆರವಿಗಾಗಿ ಪ್ರಶಂಸಿಸಿರಿ. ನಿಮ್ಮ ಕೂಟದ ಸ್ಥಳದಲ್ಲಿರುವ ‘ಬಿಲ್ಡಿಂಗ್ ಫಂಡ್’ ಎಂದು ಗುರುತು ಹಾಕಲ್ಪಟ್ಟಿರುವ ಪೆಟ್ಟಿಗೆಯ ಕಡೆಗೆ ಗಮನವನ್ನು ಸೆಳೆಯಿರಿ. ದೇಶದಲ್ಲೆಲ್ಲಾ ಇರುವ ಸಭೆಗಳು ತಮ್ಮ ಸ್ವಂತ ರಾಜ್ಯ ಸಭಾಗೃಹವನ್ನು ಕಟ್ಟಲಿಕ್ಕಾಗಿ ಅವರಿಗೆ ನೆರವು ನೀಡಲು ಉಪಯೋಗಿಸಲಾಗುವಂತೆ, ಆ ಪೆಟ್ಟಿಗೆಯಲ್ಲಿ ಸಿಗುವ ಹಣವನ್ನು ಪ್ರತಿ ತಿಂಗಳು ಸೊಸೈಟಿಯ ರಾಷ್ಟ್ರೀಯ ರಾಜ್ಯ ಸಭಾಗೃಹ ನಿಧಿಗೆ ರವಾನಿಸಲಾಗುತ್ತದೆಂಬುದನ್ನು ತಿಳಿಸಿರಿ. (ಆಗಸ್ಟ್ 21, 1995ರ ಸೊಸೈಟಿಯ ಪತ್ರವನ್ನು ನೋಡಿರಿ.) 17ನೆಯ ಪ್ಯಾರಗ್ರಾಫನ್ನು ಓದಿರಿ.
ಸಂಗೀತ 15 (119) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 20ರಿಂದ ಆರಂಭವಾಗುವ ವಾರ
ಸಂಗೀತ 21 (1)
10 ನಿ: ಸ್ಥಳಿಕ ತಿಳಿಸುವಿಕೆಗಳು.
18 ನಿ: “ಎಲ್ಲಾ ರೀತಿಯ ಜನರು ರಕ್ಷಿಸಲ್ಪಡುವರು.” ಪ್ರಶ್ನೋತ್ತರಗಳು. ವಿಭಿನ್ನ ಸಾಮಾಜಿಕ ಸ್ಥಾನಮಾನಗಳಿಂದ ಬರುವ ಜನರಿಂದ, ಅವರು ಒಂದು ಹಿತಕರವಾದ ಪ್ರತಿಕ್ರಿಯೆಯನ್ನು ಹೇಗೆ ಪಡೆದರೆಂಬುದನ್ನು ತೋರಿಸುವಂತಹ ಕೆಲವು ಅನುಭವಗಳನ್ನು ಸಂಕ್ಷಿಪ್ತವಾಗಿ ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ.
17 ನಿ: ಸ್ಥಳಿಕ ಅಗತ್ಯಗಳು. ಅಥವಾ “ನಿಮ್ಮ ಚಿಂತಾಭಾರವನ್ನು ಯಾವಾಗಲೂ ಯೆಹೋವನ ಮೇಲೆ ಹಾಕಿರಿ.” ಎಪ್ರಿಲ್ 1, 1996ರ ಕಾವಲಿನಬುರುಜು ಪತ್ರಿಕೆಯ, 27-9ನೆಯ ಪುಟಗಳ ಮೇಲೆ ಆಧರಿತವಾದ ಒಂದು ಉತ್ತೇಜನದಾಯಕ ಭಾಷಣ.
ಸಂಗೀತ 23 (93) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 27ರಿಂದ ಆರಂಭವಾಗುವ ವಾರ
ಸಂಗೀತ 20 (55)
5 ನಿ: ಸ್ಥಳಿಕ ತಿಳಿಸುವಿಕೆಗಳು.
10 ನಿ: ಸೆಕ್ರಿಟರಿಯಿಂದ ಪ್ರಶ್ನಾ ರೇಖಾಚೌಕದ ಪುನರ್ವಿಮರ್ಶೆ.
15 ನಿ: “ನಾವು ‘ವಾಕ್ಯವನ್ನು ಸಾರು’ತ್ತೇವೆ.” ಪ್ರಶ್ನೋತ್ತರಗಳು. ದೇವರ ವಾಕ್ಯದ ಮೌಲ್ಯವನ್ನು ನಾವು ಗಾಢವಾಗಿ ಗಣ್ಯಮಾಡುವ ಮತ್ತು ನಮ್ಮ ಶುಶ್ರೂಷೆಯಲ್ಲಿ ಪ್ರತಿಯೊಂದು ಸಂದರ್ಭದಲ್ಲಿ ಅದನ್ನು ಉಪಯೋಗಿಸುವ ಕಾರಣವನ್ನು ತೋರಿಸುವ ಕೆಲವು ಹೇಳಿಕೆಗಳನ್ನು ಸೇರಿಸಿರಿ.—ಮಾರ್ಚ್ 22, 1984ರ ಅವೇಕ್!, 9-11ನೆಯ ಪುಟಗಳನ್ನು ನೋಡಿರಿ.
15 ನಿ: ಫೆಬ್ರವರಿಗಾಗಿರುವ ಸಾಹಿತ್ಯ ನೀಡಿಕೆಯನ್ನು ಪುನರ್ವಿಮರ್ಶಿಸಿರಿ. ಪುಸ್ತಕದ ಆಸಕ್ತಿಕರ ವೈಶಿಷ್ಟ್ಯಗಳನ್ನು ತೋರಿಸಿರಿ: (1) ಮನಸ್ಸಿಗೆ ಹಿಡಿಸುವಂತಹ ಅಧ್ಯಾಯ ಶಿರೋನಾಮಗಳು, (2) ವರ್ಣರಂಜಿತ ಚಿತ್ರಗಳು, (3) ಕಲಿಸುವಿಕೆಯ ರೇಖಾಚೌಕಗಳು ಮತ್ತು ತಖ್ತೆಗಳು, ಮತ್ತು (4) ಕೆರಳಿಸುವಂತಹ ಮುದ್ರಿತ ಪ್ರಶ್ನೆಗಳು. ಕೂಟದ ಹಿಂದಿನ ಭಾಗಕ್ಕೆ ಹೊಂದಿಕೆಯಲ್ಲಿ, ನಿರೂಪಣೆಯಲ್ಲಿ ಚೆನ್ನಾಗಿ ಆರಿಸಲ್ಪಟ್ಟಂತಹ ವಚನದ ಉಪಯೋಗವನ್ನು ಉತ್ತೇಜಿಸಿರಿ. ಒಂದೆರಡು ನಿರೂಪಣೆಗಳು ಪ್ರತ್ಯಕ್ಷಾಭಿನಯಿಸಲ್ಪಡುವಂತೆ ಮಾಡಿರಿ. ಈ ವಾರದಲ್ಲಿ ಉಪಯೋಗಿಸಲಿಕ್ಕಾಗಿ ಪುಸ್ತಕಗಳನ್ನು ಕೊಂಡೊಯ್ಯುವಂತೆ ಎಲ್ಲರಿಗೆ ಜ್ಞಾಪಕಹುಟ್ಟಿಸಿರಿ.
ಸಂಗೀತ 26 (9) ಮತ್ತು ಸಮಾಪ್ತಿಯ ಪ್ರಾರ್ಥನೆ.