ಒಂದು ಉತ್ತಮ ಲೋಕ—ಹತ್ತಿರವಿದೆ!
“ಮಾನವ ಜೀವಿಗಳ ಮನಸ್ಸುಗಳಲ್ಲಿ ಸುಳಿದಾಡುವಂತೆ ಭಾಸವಾಗುವ ಪ್ರಬಲವಾದ ಹಂಬಲಗಳಲ್ಲಿ ಪ್ರಮೋದವನಕ್ಕಾಗಿ ಹಂಬಲಿಸುವುದೂ ಸೇರಿದೆ. ಎಲ್ಲಾ ಹಂಬಲಗಳಲ್ಲಿ ಇದು ಬಹುಶಃ ಅತ್ಯಂತ ಪ್ರಬಲವಾದ ಮತ್ತು ನಿತ್ಯವಾದ ಒಂದು ಹಂಬಲವಾಗಿರಬಹುದು. ಧಾರ್ಮಿಕ ಜೀವನದ ಪ್ರತಿಯೊಂದು ಹಂತದಲ್ಲಿ ಪ್ರಮೋದವನಕ್ಕಾಗಿ ನಿಶ್ಚಿತವಾದ ಒಂದು ಹಂಬಲವು ವ್ಯಕ್ತವಾಗುತ್ತದೆ,” ಎಂದು ದಿ ಎನ್‌ಸೈಕ್ಲೊಪೀಡಿಯ ಆಫ್ ರಿಲಿಜನ್ ಹೇಳುತ್ತದೆ.
ಇನ್ನು ಮೇಲೆ ಅಸ್ತಿತ್ವದಲ್ಲಿರದ ಒಂದು ಮೂಲಾದರ್ಶಕ್ಕೆ ಪ್ರಲಾಪಿಸುತ್ತವೆಯೋ ಎಂಬಂತೆ, ಎಲ್ಲಾ ಸಂಸ್ಕೃತಿಗಳೂ ಒಂದು ಉತ್ತಮ ಲೋಕದಲ್ಲಿ ಜೀವಿಸುವ ಅಪೇಕ್ಷೆಯನ್ನು ಹಂಚಿಕೊಳ್ಳುವಂತೆ ತೋರುತ್ತದೆ. ಇದೊಂದು ಮೂಲಭೂತ ಪ್ರಮೋದವನದ ಸಂಭವನೀಯತೆಯನ್ನು ಸೂಚಿಸುತ್ತದೆ, ಆದರೆ ಎಲ್ಲಿ? ತಾಯಿಯ ಗರ್ಭಾಶಯದ ಕಳೆದು ಹೋದ ಭದ್ರತೆಯನ್ನು ಪುನಃ ಪಡೆಯುವ ಅಪೇಕ್ಷೆಯನ್ನು ಈ ಮಹತ್ವಾಕಾಂಕ್ಷೆಯು ಪ್ರಕಟಿಸುತ್ತದೆಂದು ಮನೋವಿಶ್ಲೇಷಣ ಶಾಸ್ತ್ರಜ್ಞನೊಬ್ಬನು ಹೇಳಬಹುದು. ಆದರೂ, ಧರ್ಮದ ಇತಿಹಾಸವನ್ನು ಅಧ್ಯಯನ ಮಾಡುವ ಪಂಡಿತರಿಗೆ ಈ ವಿವರಣೆಯು ವಿಶ್ವಾಸವನ್ನುಂಟುಮಾಡುವುದಿಲ್ಲ.
“ಪ್ರಮೋದವನಕ್ಕಾಗಿ ಹಂಬಲ”—ಏಕೆ?
ಕೆಲವರು ಸೂಚಿಸುವಂತೆ, ಅಂತಹ ಹಂಬಲದ ಅಸ್ತಿತ್ವವು, ತೊಂದರೆಗಳನ್ನು ಮತ್ತು ಮಾನವ ಅಸ್ತಿತ್ವದ ನಶ್ವರ ಪ್ರಕೃತಿಯ ಕುರಿತ ವಾಸ್ತವಾಂಶವನ್ನು ಹೆಚ್ಚು ಸಹನೆಯುಳ್ಳದ್ದಾಗಿ ಮಾಡುವಂತೆ ಕಾರ್ಯನಡಿಸಲಿಕ್ಕಾಗಿ ಮಾತ್ರವೊ? ಅಥವಾ ಬೇರೊಂದು ವಿವರಣೆಯಿದೆಯೊ?
ಒಂದು ಉತ್ತಮ ಲೋಕಕ್ಕಾಗಿ ಮಾನವ ಕುಲವು ಏಕೆ ಹಂಬಲಿಸುತ್ತದೆ? ಸರಳವಾಗಿರುವಷ್ಟೇ ಸ್ಪಷ್ಟವಾಗಿದಂತಹ ವಿವರಣೆಯನ್ನು ಬೈಬಲ್ ಕೊಡುತ್ತದೆ: ಒಂದು ಉತ್ತಮ ಲೋಕದಿಂದ ಮಾನವಕುಲವು ಬಂದಿದೆ! ಒಂದು ಮೂಲಭೂತ ಪ್ರಮೋದವನವು ನಿಜವಾಗಿಯೂ ಅಸ್ತಿತ್ವದಲ್ಲಿತ್ತು. ಮಧ್ಯ ಪೂರ್ವದ ನಿರ್ದಿಷ್ಟ ಪ್ರದೇಶದಲ್ಲಿ “ನೋಟಕ್ಕೆ ರಮ್ಯವಾಗಿಯೂ ಊಟಕ್ಕೆ ಅನುಕೂಲವಾಗಿಯೂ ಇರುವ ಎಲ್ಲಾ ತರದ ಮರ” ಗಳಿಂದ ಆಶೀರ್ವದಿಸಲ್ಪಟ್ಟ, “ಒಂದು ಉದ್ಯಾನವನ”ವೆಂದು ದೇವರ ವಾಕ್ಯವು ಅದನ್ನು ವಿವರಿಸುತ್ತದೆ. ದೇವರು ಪ್ರಥಮ ಮಾನವ ದಂಪತಿಗಳ ವಶಕ್ಕೆ ಅದನ್ನು ಒಪ್ಪಿಸಿದನು. (ಆದಿಕಾಂಡ 2:7-15) ಮಾನವರು ನಿಜವಾಗಿಯೂ ಸಂತೋಷಿಸಬಹುದಾದ ಒಂದು ಆದರ್ಶ ನೆಲೆಯು ಅದಾಗಿತ್ತು.
ಆ ಪ್ರಮೋದವನದ ಪರಿಸ್ಥಿತಿಗಳು ಏಕೆ ಶಾಶ್ವತವಾಗಿ ಉಳಿಯಲಿಲ್ಲ? ಪ್ರಥಮವಾಗಿ ಒಬ್ಬ ಆತ್ಮ ಜೀವಿಯ ಮತ್ತು ತದನಂತರ ಮಾನವ ದಂಪತಿಗಳ ದಂಗೆಯ ಕಾರಣದಿಂದಲೆ. (ಆದಿಕಾಂಡ 2:16, 17; 3:1-6, 17-19) ಹೀಗೆ, ಮಾನವನು ಕೇವಲ ಪ್ರಮೋದವನವನ್ನು ಮಾತ್ರವಲ್ಲ ಪರಿಪೂರ್ಣತೆ, ಆರೋಗ್ಯ, ಮತ್ತು ನಿತ್ಯವಾದ ಜೀವಿತವನ್ನು ಸಹ ಕಳೆದುಕೊಂಡನು. ಚಾಲಿಗ್ತೆ ಬರಲಾರಂಭಿಸಿದ ಪರಿಸ್ಥಿತಿಗಳು ನಿಶ್ಚಯವಾಗಿಯೂ ಮಾನವ ಜೀವಿತವನ್ನು ಉತ್ತಮಗೊಳಿಸಲಿಲ್ಲ. ಅದಕ್ಕೆ ಬದಲಾಗಿ, ನಾವಿಂದು ಕಾಣುತ್ತಿರುವ ಸರ್ವಕಾಲಗಳ ಕೀಳುಸ್ಥಿತಿಗೆ ಅದು ಪ್ರಗತಿಪರವಾಗಿ ಅವನತಿ ಹೊಂದಿದೆ.—ಪ್ರಸಂಗಿ 3:18-20; ರೋಮಾಪುರ 5:12; 2 ತಿಮೊಥೆಯ 3:1-5, 13.
ಪ್ರಮೋದವನಕ್ಕಾಗಿ ಹುಡುಕಾಟ—ವಿಚಾರವೊಂದರ ಇತಿಹಾಸ
ಬಹುಶಃ ಊಹಿಸಬಹುದಾಗುವಂತೆ, “ಪ್ರಮೋದವನಕ್ಕಾಗಿ ಹಂಬಲ”ಕ್ಕೆ ಅತ್ಯಂತ ದೀರ್ಘವಾದ ಒಂದು ಇತಿಹಾಸವಿದೆ. ಇಡೀ ವಿಶ್ವದಲ್ಲಿ ಏಕಾಭಿಪ್ರಾಯವು ಪ್ರಭುತ್ವದಲ್ಲಿದ್ದಂತಹ ಒಂದು ಸಮಯವನ್ನು ಸುಮೇರಿಯದವರು ಜ್ಞಾಪಿಸಿಕೊಂಡರು: “ಭಯ, ಭೀತಿಗಳಿರಲಿಲ್ಲ, ಮಾನವನಿಗೆ ಪ್ರತಿಸ್ಪರ್ಧಿಗಳಿರಲಿಲ್ಲ. . . . ಇಡೀ ವಿಶ್ವವು, ಜನರು ಶ್ರುತಿಗೂಡಿ ಏನಿಲ್ಲ್‌ನಿಗೆ ಒಂದೇ ಭಾಷೆಯಲ್ಲಿ ಸುತ್ತಿಗೈದರು,” ಎಂದು ಪುರಾತನ ಮೆಸಪೊಟೇಮಿಯದ ಕವಿತೆಯೊಂದು ನೆನಪಿಗೆ ತಂದಿತು. ಕೆಲವರು, ಪುರಾತನ ಐಗುಪ್ತ್ಯರಂತೆ, ತಮ್ಮ ಮರಣದ ಅನಂತರ ಒಂದು ಉತ್ತಮ ಲೋಕವನ್ನು ತಲಪುವ ಭರವಸೆಯಿಂದಿದ್ದರು. ಆರೂವಿನ ಬಯಲು ಎಂದು ಹೆಸರಿಸಲ್ಪಟ್ಟ ಸ್ಥಳಕ್ಕೆ ಅಮರ ಆತ್ಮವು ತಲಪಿತೆಂದು ಅವರು ನಂಬಿದರು. ಆದರೆ ಕಡಮೆ ಪಕ್ಷ ಮೂಲತಃ, ಈ ನಿರೀಕ್ಷೆಯು ಕೇವಲ ಕುಲೀನ ವರ್ಗದವರಿಗೆ ಮಾತ್ರ ತೆರೆಯಲ್ಪಟ್ಟಿತ್ತು; ಒಂದು ಪರಮಾನಂದಭರಿತ ಲೋಕವನ್ನು ತಲಪುವದರ ಕುರಿತು ಬಡವರು ಕನಸನ್ನೂ ಕಾಣುತ್ತಿರಲಿಲ್ಲ.
ಬೇರೊಂದು ಧಾರ್ಮಿಕ ಕ್ಷೇತ್ರದಲ್ಲಿ, ಹಿಂದುಗಳು ಶತಮಾನಗಳಿಂದ ಒಂದು ಉತ್ತಮ ಲೋಕ ಯುಗದ ಆಗಮನವನ್ನು ಎದುರುನೋಡುತ್ತಿದ್ದರು. ಹಿಂದು ಬೋಧನೆಗಳಿಗನುಸಾರ, ನಾಲ್ಕು ಯುಗಗಳು ನಿರಂತರವಾಗಿ ಒಂದು ಕಾಲಚಕ್ರದೋಪಾದಿ ತಾವಾಗಿಯೇ ಪುನರಾವೃತ್ತಿಸುತ್ತವೆ, ಮತ್ತು ಪ್ರಚಲಿತವಾಗಿ ಅತ್ಯಂತ ಕೆಟ್ಟ ಯುಗದಲ್ಲಿ ನಾವು ಜೀವಿಸುತ್ತಿದ್ದೇವೆ. ನಿರ್ಭಾಗ್ಯಕರವಾಗಿಯೆ, ಕೆಲವರಿಗನುಸಾರ, ಈ ಕಲಿಯುಗ (ಅಂಧಕಾರದ ಯುಗ)ವು, ಅದರ ಎಲ್ಲಾ ಕಷ್ಟಾನುಭವಗಳು ಮತ್ತು ದುಷ್ಟತನಗಳೊಂದಿಗೆ, 4,32,000 ವರ್ಷಗಳಷ್ಟು ದೀರ್ಘಕಾಲ ಬಾಳುವುದು. ಆದರೂ, ನಂಬಿಗಸ್ತ ಹಿಂದುಗಳು ಸುವರ್ಣ ಯುಗವಾದ, ಕೃತ ಯುಗವನ್ನು ಎದುರುನೋಡುತ್ತಾರೆ.
ಇನ್ನೊಂದು ಕಡೆ, ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಕಾಲ್ಪನಿಕವಾದ ಭಾಗ್ಯಶಾಲಿ ಸಣ್ಣ ದ್ವೀಪಗಳನ್ನು ತಲಪುವುದರ ಕುರಿತು ಗ್ರೀಕರು ಮತ್ತು ರೋಮನರು ಕನಸು ಕಂಡರು. ಮತ್ತು ಹೀಸಿಯಡ್, ವರ್ಜಿಲ್, ಮತ್ತು ಆವಿಡ್‌ನಂತಹ ಅನೇಕ ಬರಹಗಾರರು, ಒಂದು ದಿನ ಸ್ವಾಧೀನಪಡಿಸಿಕೊಳ್ಳಲ್ಪಡುವುದೆಂದು ಭರವಸಿಸುತ್ತಾ, ಅದ್ಭುತವಾದ ಆರಂಭದ ಒಂದು ಸುವರ್ಣ ಯುಗದ ಕುರಿತು ಮಾತಾಡಿದರು. ಸಾ.ಶಾ.ಪೂ. ಪ್ರಥಮ ಶತಮಾನದ ಅಂತ್ಯದಲ್ಲಿ, ಒಂದು ಹೊಸ ಮತ್ತು ಶಾಶ್ವತವಾದ ಐಟಾಸ್ ಆರಿಯ (ಸುವರ್ಣ ಯುಗ)ದ ಸನ್ನಿಹಿತವಾಗಿರುವ ಆಗಮನದ ಕುರಿತು ಲ್ಯಾಟಿನ್ ಕವಿ ವರ್ಜಿಲ್ ಭವಿಷ್ಯ ನುಡಿದನು. ಹಿಂಬಾಲಿಸಿದ ಶತಮಾನಗಳಲ್ಲಿ, “ಹದಿನಾರಕ್ಕಿಂತ ಕಡಮೆ ಸಂಖ್ಯೆಯಲ್ಲಿರದ ರೋಮನ್ ಚಕ್ರವರ್ತಿಗಳು ತಮ್ಮ ಆಧಿಪತ್ಯಗಳು ಸುವರ್ಣ ಯುಗವನ್ನು ಪುನಃ ಸ್ಥಾಪಿಸಿವೆಯೆಂದು ಸಮರ್ಥಿಸಿದರು,” ಎಂದು ದಿ ಎನ್‌ಸೈಕ್ಲೊಪೀಡಿಯ ಆಫ್ ರಿಲಿಜನ್ ಹೇಳುತ್ತದೆ. ಆದರೆ ಇಂದು ನಮಗೆಲ್ಲರಿಗೂ ಚೆನ್ನಾಗಿ ತಿಳಿದಿರುವಂತೆ, ಅದು ಕೇವಲ ರಾಜಕೀಯ ಪ್ರಚಾರ ಕಾರ್ಯವಾಗಿತ್ತು.
ಅನೇಕ ಕೆಲ್ಟರು, ಸಮುದ್ರದ ಆಚೆ, ಒಂದು ದ್ವೀಪದ ಮೇಲೆ (ಅಥವಾ ದ್ವೀಪಸ್ತೋಮದಲ್ಲಿ) ಯಾವುದನ್ನು ಒಂದು ಉಜ್ವಲ ದೇಶವೆಂದು ಭಾವಿಸಿದರೋ, ಎಲ್ಲಿ ಜನರು ಪರಿಪೂರ್ಣ ಸಂತೋಷದಿಂದ ಜೀವಿಸಿದರೆಂದು ನಂಬಿದರೋ, ಅದಕ್ಕಾಗಿ ಮಹತ್ವಾಕಾಂಕ್ಷೆ ಪಟ್ಟರು. ಒಂದು ಪುರಾಣ ಕಥೆಗನುಸಾರ, ಅರಸ ಆರ್ಥರನು, ವಿಪರೀತ ಗಾಯಗೊಂಡಿದ್ದರೂ, ಆ್ಯವಲಾನ್ ಎಂದು ಕರೆಯಲ್ಪಡುವ ಅದ್ಭುತವಾದ ದ್ವೀಪವನ್ನು ತಾನು ಕಂಡುಕೊಂಡ ಬಳಿಕ ಜೀವಿತವನ್ನು ಮುಂದುವರಿಸಿದನು.
ಪುರಾತನ ಕಾಲಗಳಲ್ಲಿ ಮತ್ತು ಮಧ್ಯ ಯುಗದಲ್ಲಿ, ಅನೇಕರು ಅಕ್ಷರಾರ್ಥವಾಗಿ ಮಹದಾನಂದದ ಏದೆನ್ ತೋಟವು ಇನ್ನೂ ಎಲ್ಲೋ “ಪರ್ವತದ ಅಗಮ್ಯ ತುದಿಯಲ್ಲಿ ಅಥವಾ ದುರ್ಗಮವಾದ ಮಹಾಸಾಗರದ ಆಚೆಕಡೆ,” ಅಸ್ತಿತ್ವದಲ್ಲಿದೆಯೆಂದು ತಿಳಿದಿದ್ದರು ಎಂದು ಇತಿಹಾಸಗಾರ ಜಾ ಡೆಲ್ಯೂಮೊ ವಿವರಿಸುತ್ತಾನೆ. ಇಟೆಲಿಯ ಕವಿ ಡಾಂಟೆ ಪರಲೋಕದ ಒಂದು ಪ್ರಮೋದವನದಲ್ಲಿ ವಿಶ್ವಾಸವನ್ನಿಟ್ಟಿದ್ದನಾದರೂ, ಯೆರೂಸಲೇಮ್ ಪಟ್ಟಣದ ಪ್ರತಿಕಕ್ಷೆಯಲ್ಲಿ, ತನ್ನ ಪರ್ಗೆಟರಿಯ ಪರ್ವತದ ತುದಿಯಲ್ಲಿ, ಭೂ ಪ್ರಮೋದವನವೊಂದು ಇನ್ನೂ ಅಸ್ತಿತ್ವದಲ್ಲಿದೆಯೆಂದು ಅವನು ಕಲ್ಪಿಸಿಕೊಂಡನು. ಏಷಿಯಾದಲ್ಲಿ, ಮೆಸಪೊಟೇಮಿಯದಲ್ಲಿ, ಅಥವಾ ಹಿಮಾಲಯದಲ್ಲಿ ಅದನ್ನು ಕಂಡುಕೊಳ್ಳಲಾಗುತ್ತದೆಂದು ಕೆಲವರು ನಂಬಿದರು. ಮತ್ತು ಏದೆನ್ ಸಂಬಂಧಿತ ಪ್ರಮೋದವನದ ಕುರಿತು, ಮಧ್ಯ ಯುಗದ ಪುರಾಣ ಕಥೆಗಳು ಬಹು ಸಂಖ್ಯಾಕವಾಗಿದ್ದವು. ಆ ಪ್ರಮೋದವನಕ್ಕೆ ಸಮೀಪದಲ್ಲಿ, ಧರ್ಮ ಶ್ರದ್ಧೆಯುಳ್ಳ ಪ್ರೆಸ್ಟರ್ ಜಾನ್‌ನಿಂದ ಆಳಲ್ಪಡುವ ಒಂದು ಅದ್ಭುತವಾದ ರಾಜ್ಯವು ಇದೆಯೆಂದು ಅನೇಕರು ನಂಬಿದರು. ಭೂ ಪ್ರಮೋದವನದ ಸಾಮೀಪ್ಯದ ಫಲವಾಗಿ, ಪ್ರೆಸ್ಟರ್ ಜಾನ್‌ನ ರಾಜ್ಯದಲ್ಲಿ ಜೀವಿತವು ದೀರ್ಘವೂ ಆನಂದಮಯವಾದದ್ದೂ, ಸಮೃದ್ಧಿ ಮತ್ತು ಐಶ್ವರ್ಯದ ಸಾರ್ವಕಾಲಿಕ ಉಗಮವೂ ಆಗಿತ್ತೆಂದು ಗ್ರಹಿಸಲ್ಪಟ್ಟಿತ್ತು. ಇತರರು, ಪುರಾತನ ಗ್ರೀಕ್ ಪುರಾಣ ಕಥೆಗಳ ಮೇಲೆ ಲಕ್ಷ್ಯವಿಟ್ಟವರಾಗಿ, ಪ್ರಮೋದವನದ ದ್ವೀಪಗಳು ಅಟ್ಲಾಂಟಿಕ್‌ನಲ್ಲಿ ಕಂಡುಕೊಳ್ಳಲಾಗುತ್ತವೆಂದು ಇನ್ನೂ ಭಾವಿಸಿದರು. ಏದೆನ್ ತೋಟದ ಅಂಗೀಕೃತ ನೆಲೆಯನ್ನು ಕೂಡ ಸೂಚಿಸುತ್ತಾ, ಅದರ ಅಸ್ತಿತ್ವದ ಕುರಿತು ಜನರು ನಿಶಿತ್ಚಾಭಿಪ್ರಾಯವುಳ್ಳವರಾಗಿದ್ದರೆಂದು, ಮಧ್ಯ ಯುಗದ ನಕ್ಷೆಗಳು ತೋರಿಸಿದವು.
ಹದಿನೈದು ಮತ್ತು ಹದಿನಾರನೇ ಶತಮಾನಗಳಲ್ಲಿ, ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿದ ನಾವಿಕರು ಕಾರ್ಯತಃ, ಏಕಕಾಲದಲ್ಲಿ ಹೊಸದಾದ ಮತ್ತು ಪುರಾತನವಾಗಿದ್ದ ಒಂದು ಲೋಕಕ್ಕಾಗಿ ಹುಡುಕಿದರು. ಮಹಾಸಾಗರದ ಮತ್ತೊಂದು ಪಕ್ಕದಲ್ಲಿ, ಕೇವಲ ಭಾರತ ಮತ್ತು ಅದರ ಆಚೆಯ ದೇಶಗಳ ದ್ವೀಪಗಳನ್ನು ಮಾತ್ರವಲ್ಲ, ಏದೆನ್ ತೋಟವನ್ನು ಸಹ ತಾವು ಕಂಡುಕೊಳ್ಳುವೆವು ಎಂದು ಅವರು ಭಾವಿಸಿದ್ದರು. ಉದಾಹರಣೆಗೆ, ಕ್ರಿಸ್ಟೋಫರ್ ಕೊಲಂಬಸ್, ದಕ್ಷಿಣ ಮತ್ತು ಮಧ್ಯ ಅಮೇರಿಕದ ಸಮಶೀತೋಷ್ಣ ವಲಯ ಮತ್ತು ಉಷ್ಣ ವಲಯದ ಪ್ರದೇಶಗಳ ಪರ್ವತಗಳ ನಡುವೆ, ಏದೆನ್ ತೋಟಕ್ಕಾಗಿ ಶೋಧನೆ ನಡೆಸಿದನು. ಬ್ರೆಜಿಲ್‌ಗೆ ತಲುಪಿದ ಪರಿಶೋಧಕರು, ಶಾಂತ ವಾತಾವರಣ ಹಾಗೂ ಆಹಾರದ ಸಮೃದ್ಧಿ ಮತ್ತು ಸಸ್ಯಜೀವನದ ಕಾರಣದಿಂದ, ಕಳೆದುಹೋದ ಪ್ರಮೋದವನವು ಅಲ್ಲಿರಬಹುದೆಂದು ನಿಶ್ಚಯಿಸಿದರು. ಆದರೂ, ಆದಷ್ಟು ಬೇಗನೆ, ಕಠೋರ ಸತ್ಯತೆಯನ್ನು ಗ್ರಹಿಸುವಂತೆ ಅವರು ಒತ್ತಾಯಿಸಲ್ಪಟ್ಟರು.
ಅಸಾಧ್ಯಾದರ್ಶ ಸ್ಥಿತಿಗಳು—ಆದರ್ಶ ಸ್ಥಳಗಳೊ?
ಆದರ್ಶ ಲೋಕವನ್ನು ಭೂಮಿಯ ಬಹುದೂರದ ಕೆಲವು ಭಾಗಗಳಲ್ಲಿ ಕಂಡುಹಿಡಿಯಲು ಪ್ರಯತ್ನಿಸುವ ಬದಲಾಗಿ, ಅದನ್ನು ಯೋಜಿಸಲು ಇತರರು ಪ್ರಯತ್ನಿಸಿದ್ದಾರೆ. ಹೀಗೆ, 1516 ರಲ್ಲಿ, ಇಂಗ್ಲಿಷಿನ ಮಾನುಷ್ಯ ದಾರ್ಶನಿಕ ಥಾಮಸ್ ಮೋರ್, ತಾನು ತಿಳಿದಿದ್ದ ಕೀಳ್ಮಟ್ಟದ ಲೋಕದಿಂದ ತೀರ ಬೇರೆಯಾದ ಒಂದು ಲೋಕ, ಒಂದು ಅದ್ಭುತವಾದ, ಶಾಂತಿಭರಿತ, ಮತ್ತು ಸೈರಣೆಯುಳ್ಳ ಸ್ಥಳವಾದ ಅಸಾಧ್ಯಾದರ್ಶ ದ್ವೀಪದ ಕುರಿತು ವಿವರಿಸಿದನು. ಸಾ.ಶ.ಪೂ. ಆರನೆಯ ಶತಮಾನದಲ್ಲಿ, ಪ್ಲೇಟೊ ತನ್ನ ಪ್ರಜಾಧಿಪತ್ಯದೊಂದಿಗೆ; 1602 ರಲ್ಲಿ, ಇಟೆಲಿಯ ಸಂನ್ಯಾಸಿ ಟೊಮಾಸೊ ಕಾಂಪನೆಲ ಮತ್ತು ಅವನ ವಿಶೇಷವಾಗಿ ಸಂಸ್ಥಾಪಿಸಲ್ಪಟ್ಟ ಸೂರ್ಯನ ಪಟ್ಟಣ; ಕೆಲವೇ ವರ್ಷಗಳ ಬಳಿಕ, ಇಂಗ್ಲಿಷ್ ತತ್ವಜ್ಞಾನಿ ಫ್ರಾನ್ಸಿಸ್ ಬೇಕನ್ ತನ್ನ ಹೊಸ ಅಟ್ಲಾಂಟಿಸ್‌ನ “ಸಂತೋಷಭರಿತ ಮತ್ತು ಸೊಂಪಾಗಿ ಬೆಳೆಯುತ್ತಿರುವ ಸ್ಥಿರಾಸ್ತಿ”ಯ ಕುರಿತು ವಿವರಿಸುತ್ತಾ ಹೀಗೆ, ಉತ್ತಮ ಲೋಕಗಳನ್ನು, ಸಂತೋಷಭರಿತ ಲೋಕಗಳನ್ನು ಯೋಜಿಸಲು ಇತರರು ಕೂಡ ಪ್ರಯತ್ನಿಸಿದ್ದರು. ಮುಂದಿನ ಶತಮಾನಗಳಲ್ಲಿ, ಎಲ್ಲಾ ರೀತಿಯ ವಿಚಾರವಂತರು (ವಿಶ್ವಾಸಿಗಳಾಗಿರಲಿ ಇಲ್ಲದಿರಲಿ) ಡಜನ್ನುಗಟ್ಟಲೆ ಅಸಾಧ್ಯಾದರ್ಶಗಳನ್ನು ವಿವರಿಸಿದ್ದಾರೆ. ಅವುಗಳಲ್ಲಿ ಕೇವಲ ಕೆಲವೇ ಗಂಭೀರವಾಗಿ ಪರಿಗಣಿಸಲ್ಪಟ್ಟಿವೆ.
ತಮ್ಮ ಅಸಾಧ್ಯಾದರ್ಶಗಳನ್ನು ಸ್ಥಾಪಿಸಲು ಪ್ರಯತ್ನಿಸಿದವರೂ ಇದ್ದಾರೆ. ಉದಾಹರಣೆಗೆ, 1824 ರಲ್ಲಿ, ರಾಬರ್ಟ್ ಓವನನೆಂಬ ಇಂಗ್ಲಿಷ್ ಧನಿಕನು, ತಾನು ಹೆಸರಿಸಿದ ನ್ಯೂ ಹಾರ್ಮನಿಯೆಂಬ ಹಳ್ಳಿಯಲ್ಲಿ ತನ್ನ ಅಸಾಧ್ಯಾದರ್ಶ ಕಲ್ಪನೆಗಳನ್ನು ಸಾಧಿಸುವ ಕಾರಣದಿಂದಾಗಿ ಇಂಡಿಯಾನ, ಅಮೆರಿಕಕ್ಕೆ ವಲಸೆ ಹೋಗಲು ನಿರ್ಧರಿಸಿದನು. ಸೂಕ್ತವಾದ ಪರಿಸ್ಥಿತಿಗಳ ಕೆಳಗೆ ಜನರು ಪ್ರಗತಿಹೊಂದುವರೆಂದು ಮನಗಂಡು, ಯಾವುದನ್ನು ತಾನು ಒಂದು ಹೊಸ ನೈತಿಕ ಲೋಕವೆಂದು ಚಿತ್ರಸಿಕೊಂಡಿದ್ದನೋ ಅದನ್ನು ಸ್ಥಾಪಿಸಲು ಪ್ರಯತ್ನಿಸಲಿಕ್ಕಾಗಿ ಬಹುಮಟ್ಟಿಗೆ ತನ್ನೆಲ್ಲಾ ಸಂಪನ್ಮೂಲಗಳನ್ನು ಅವನು ಉಪಯೋಗಿಸಿದನು. ಆದರೆ ಹೊಸ ಜೀವಿಸುವ ಪರಿಸ್ಥಿತಿಗಳು ಹೊಸ ಮಾನವರನ್ನು ಉತ್ಪತ್ತಿ ಮಾಡಲು ಸಾಕಾಗುವುದಿಲ್ಲವೆಂದು ಫಲಿತಾಂಶಗಳು ಪ್ರದರ್ಶಿಸಿದವು.
ಕಲ್ಪಿತ ಪ್ರಮೋದವನವನ್ನು ಭೂಮಿಯ ಮೇಲೆ ತರಲಿಕ್ಕಾಗಿ, ಮನುಷ್ಯನು ತನ್ನ ಜ್ಞಾನಾನುಸಾರ ಮತ್ತು ಯಾವುದು ಸತ್ಯವೆಂಬುದರ ತನ್ನ ಸ್ವಂತ ಪ್ರಜ್ಞಾನುಸಾರ ಲೋಕವನ್ನು ಯೋಜಿಸಬೇಕೆಂದು ಬಹುಮಟ್ಟಿಗೆ ಎಲ್ಲಾ ರಾಜಕೀಯ ವಿಚಾರ ಶಾಸ್ತ್ರಗಳು ಸಮರ್ಥಿಸುತ್ತವೆ. ಆದರೂ, ವಿರೋಧಾಭಾಸವಾಗಿ, ಅಂತಹ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಪ್ರಯತ್ನಿಸುವುದು, 1789 ರಲ್ಲಿ ಫ್ರೆಂಚ್ ಕ್ರಾಂತಿ ಮತ್ತು 1917 ರಲ್ಲಿ ಬಾಲಿವ್ಷಿಕ್ ಕ್ರಾಂತಿಗಳಂತಹ ಯುದ್ಧಗಳು ಮತ್ತು ಕ್ರಾಂತಿಗಳ ಉದ್ಭವಿಸುವಿಕೆಗೆ ಕಾರಣವಾಯಿತು. ಪ್ರಮೋದವನ ಪರಿಸ್ಥಿತಿಗಳನ್ನು ತರುವ ಬದಲಾಗಿ, ಈ ಪ್ರಯತ್ನಗಳು ಆಗಿಂದಾಗ್ಗೆ ಅಧಿಕವಾದ ನೋವು ಮತ್ತು ಕಷ್ಟಾನುಭವಕ್ಕೆ ಮುನ್ನಡಿಸಿದವು.
ಮಹತ್ವಾಕಾಂಕ್ಷೆಗಳು, ಯೋಜನೆಗಳು, ಅಸಾಧ್ಯಾದರ್ಶಗಳು, ಮತ್ತು ಅವುಗಳನ್ನು ಸಾಧಿಸುವ ಪ್ರಯತ್ನಗಳು—ಇದು ಒಂದರ ಬಳಿಕ ಇನ್ನೊಂದು ಆಶಾಭಂಗದ ಒಂದು ಕಥೆಯಾಗಿದೆ. ಪ್ರಸ್ತುತ ಸಮಯದಲ್ಲಿ, “ಅಸಾಧ್ಯಾದರ್ಶಗಳಿಲ್ಲದೆ ಜೀವಿಸಲು” ಕಲಿಯುವಂತೆ ನಮ್ಮನ್ನು ಆಮಂತ್ರಿಸುತ್ತಾ, ಒಂದು “ಒಡೆದ ಕನಸು” ಮತ್ತು “ಅಸಾಧ್ಯಾದರ್ಶಗಳ ಶಕದ ಅಂತ್ಯ”ದ ಕುರಿತು ಕೆಲವರು ಮಾತಾಡುತ್ತಾರೆ. ಒಂದು ಉತ್ತಮ ಲೋಕವನ್ನು ನೋಡುವ ಯಾವ ಭರವಸೆಯಾದರೂ ಇದೆಯೊ, ಅಥವಾ ಕೇವಲ ಒಂದು ಸ್ಪಪ್ನವಾಗಿ ಉಳಿಯುವುದೇ ಅದರ ಗುರಿಯೊ?
ಕ್ರೈಸ್ತರು ಮತ್ತು ಒಂದು ಉತ್ತಮ ಲೋಕ
ಒಂದು ಹೊಸ ಲೋಕವು ಖಂಡಿತವಾಗಿಯೂ ಒಂದು ಸ್ಪಪ್ನವಾಗಿಲ್ಲ—ಅದು ಒಂದು ಖಂಡಿತವಾದ ಭರವಸೆಯಾಗಿದೆ! ಈ ಪ್ರಸ್ತುತ ಲೋಕವು ಶಕ್ಯವಿರುವ ಎಲ್ಲಾ ಲೋಕಗಳಲ್ಲಿ ಅತ್ಯುತ್ತಮವಾದುದಲವ್ಲೆಂದು ಕ್ರೈಸ್ತಮತದ ಸ್ಥಾಪಕನಾದ, ಯೇಸು ಕ್ರಿಸ್ತನು, ತಿಳಿದಿದ್ದನು. ಶಾಂತ ಜನರೆಲ್ಲರು ಭೂಮಿಯನ್ನು ಬಾಧ್ಯತೆಯಾಗಿ ಹೊಂದುವರು ಮತ್ತು ಅಲ್ಲಿ ದೇವರ ಚಿತ್ತವು ನೆರವೇರುವುದೆಂದು ಆತನು ಕಲಿಸಿದನು. (ಮತ್ತಾಯ 5:5; 6:9, 10) ಪ್ರಸ್ತುತ ಲೋಕವು ದೇವರ ವಿರೋಧಿಯಾದ, ಪಿಶಾಚನಾದ ಸೈತಾನನಿಂದ ನಿಯಂತ್ರಿಸಲ್ಪಟ್ಟಿದೆಯೆಂದು, ಮತ್ತು ಇದು ಮಾನವ ಕುಲದ ಅನೇಕ ವಿಪತ್ತುಗಳಿಗೆ ಪ್ರಾಮುಖ್ಯವಾದ ಕಾರಣವಾಗಿದೆಯೆಂದು ಆತನು ಮತ್ತು ಆತನ ಶಿಷ್ಯರು ತಿಳಿದಿದ್ದರು. (ಯೋಹಾನ 12:31; 2 ಕೊರಿಂಥ 4:4; 1 ಯೋಹಾನ 5:19; ಪ್ರಕಟನೆ 12:12) ಭೂಮಿಯನ್ನು ಶಾಂತಿ ಮತ್ತು ನ್ಯಾಯವನ್ನು ಪ್ರೀತಿಸುವವರಿಂದ ಭರ್ತಿಮಾಡಲಿಕ್ಕಾಗಿ, ಯುದ್ಧಗಳು, ಸಂಕಟ, ಮತ್ತು ಅಸ್ವಸ್ಥತೆಯಿಂದ ಶಾಶ್ವತವಾಗಿ ಬಿಡುಗಡೆಗೊಳಿಸುವ ದೇವರ ನೇಮಿತ ದಿನವನ್ನು ನಂಬಿಗಸ್ತ ಯೆಹೂದ್ಯರು ಎದುರುನೋಡಿದರು. ತದ್ರೀತಿಯಲ್ಲಿ, ಈ ಪ್ರಸ್ತುತ ಲೋಕವು ಹೊಸ ವಿಷಯಗಳ ವ್ಯವಸ್ಥೆಯಿಂದ ಸ್ಥಾನ ಪಲ್ಲಟ ಮಾಡಲ್ಪಡುವ, “ನೂತನಾಕಾಶಮಂಡಲ ಮತ್ತು ನೂತನಭೂಮಂಡಲ” ಕ್ಕಾಗಿ ಪ್ರಥಮ ಶತಮಾನದ ಕ್ರೈಸ್ತರು ಭರವಸೆಯಿಂದ ಕಾದರು.—2 ಪೇತ್ರ 3:13; ಕೀರ್ತನೆ 37:11; 46:8, 9; ಯೆಶಾಯ 25:8; 33:24; 45:18; ಪ್ರಕಟನೆ 21:1.
ಯೇಸು ಕ್ರಿಸ್ತನು ಯಾತನಾ ಕಂಬದ ಮೇಲೆ ತೂಗಾಡುತ್ತಿದ್ದಾಗ, ತನ್ನಲ್ಲಿ ನಿಶ್ಚಿತ ಪ್ರಮಾಣದ ನಂಬಿಕೆಯನ್ನು ತೋರಿಸಿದ ದುಷ್ಕರ್ಮಿಯೊಬ್ಬನಿಗೆ ಒಂದು ಉತ್ತಮ ಲೋಕದ ವಾಗ್ದಾನವನ್ನು ಪುನರಾವೃತ್ತಿಸಿದನು. “[ಯೇಸು] ಅವನಿಗೆ ಹೇಳಿದ್ದು: ‘ನೀನು ನನ್ನ ಸಂಗಡ ಪರದೈಸದಲ್ಲಿರುವಿ ಎಂದು ಈ ಹೊತ್ತೇ ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ.’” (ಲೂಕ 23:40-43, NW) ಆ ಮಾತುಗಳು ಏನನ್ನು ಅರ್ಥೈಸುತ್ತವೆಂದು ಆ ದುಷ್ಕರ್ಮಿಯು ತಿಳಿದನು? ಕ್ಯಾತೊಲಿಕ್ ಮತ್ತು ಪ್ರಾಟೆಸ್ಟಂಟ್ ಬೈಬಲ್ ಭಾಷಾಂತರಗಳು ಸೂಚಿಸುವಂತೆ, ಅದೇ ದಿನ ಆ ದುಷ್ಕರ್ಮಿಯು ‘ಆತನೊಂದಿಗೆ’ ಪರದೈಸಕ್ಕೆ ಹೋಗುವನೆಂದು ಯೇಸು ಸೂಚಿಸುತ್ತಾನೊ? ಇಲ್ಲ, ಯೇಸು ಅದನ್ನು ಅರ್ಥೈಸಿರಲಿಲ್ಲ, ತನ್ನ ಪುನರುತ್ಥಾನದ ಬಳಿಕ, ತಾನು ‘ಇನ್ನೂ ತಂದೆಯ ಬಳಿಗೆ ಏರಿಹೋದವನಲ್ಲ’ ಎಂದು ಯೇಸು ಮಗಲ್ದದ ಮರಿಯಳಿಗೆ ಹೇಳಿದನು. (ಯೋಹಾನ 20:11-18) ಸಾ.ಶ. 33ರ ಪಂಚಾಶತ್ತಮಕ್ಕೆ ಮೊದಲೇ, ಮೂರುವರೆ ವರ್ಷಗಳ ಕಾಲ ಯೇಸುವಿನಿಂದ ಬೋಧಿಸಲ್ಪಟ್ಟಿದ್ದರೂ, ಆತನ ಅಪೊಸ್ತಲರು ಸಹ ಒಂದು ಪರಲೋಕದ ಪ್ರಮೋದವನವನ್ನು ನಿರೀಕ್ಷಿಸಿರಲಿಲ್ಲ. (ಅ. ಕೃತ್ಯಗಳು 1:6-11) ಆ ಸಮಯದಲ್ಲಿ ಜೀವಿಸುತ್ತಿದ್ದ ಅಧಿಕಾಂಶ ಯೆಹೂದ್ಯರು ಏನನ್ನು ತಿಳಿದುಕೊಂಡಿದ್ದರೊ ಅದನ್ನೇ ಆ ದುಷ್ಕರ್ಮಿಯು ಗ್ರಹಿಸಿದನು: ಪ್ರಮೋದವನವಾದ ಭೂಮಿಯೊಂದರ ಮೇಲೆ ಒಂದು ಉತ್ತಮ ಲೋಕವನ್ನು ಯೇಸು ವಾಗ್ದಾನಿಸುತ್ತಿದ್ದಾನೆಂದು. ಜರ್ಮನ್ ಪಂಡಿತನೊಬ್ಬನು ಒಪ್ಪಿಕೊಂಡದ್ದು: “ಮರಣೋತ್ತರ ಜೀವನದಲ್ಲಿ ಪ್ರತೀಕಾರದ ಬೋಧನೆಯು ಹಳೇ ಒಡಂಬಡಿಕೆಯಲ್ಲಿ ಗೋಚರಿಸುವುದಿಲ್ಲ.”
ನಮ್ಮ ಭೂಮಿಯ ಮೇಲೆ ಒಂದು ಪ್ರಮೋದವನವು ಅಸ್ತಿತ್ವದಲ್ಲಿರುವುದೆಂದು ಅಪೊಸ್ತಲ ಪೌಲನು ಇಬ್ರಿಯರಿಗೆ ಬರೆದ ತನ್ನ ಪತ್ರದಿಂದ ದೃಢೀಕರಿಸಲ್ಪಟ್ಟಿದೆ. ‘ಯೇಸು ಕ್ರಿಸ್ತನಿಂದ ಮೊದಲು ಹೇಳಲ್ಪಟ್ಟ ಅತ್ಯಂತ ವಿಶೇಷ ರಕ್ಷಣೆಯನ್ನು ನಾವು ಅಲಕ್ಷ್ಯ’ ಮಾಡದಂತೆ ತನ್ನ ಜೊತೆ ವಿಶ್ವಾಸಿಗಳಿಗೆ ಪ್ರೋತ್ಸಾಹಿಸುವಾಗ, ಯೆಹೋವ ದೇವರು ಯೇಸುವಿಗೆ “ಮುಂದೆ ಬರಲಿಕ್ಕಿರುವ ನಿವಾಸಿತ ಭೂಮಿ [ಗ್ರೀಕ್, ಆಯ್ಕುಮೆನೆ]”ಯ ಮೇಲೆ ಅಧಿಕಾರವನ್ನು ಕೊಟ್ಟಿದ್ದಾನೆಂದು ಪೌಲನು ಒತ್ತಿಹೇಳುತ್ತಾನೆ. (ಇಬ್ರಿಯ 2:3, 5, NW) ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿ, ಆಯ್ಕುಮೆನೆ ಎಂಬ ಪದವು, ಒಂದು ಸ್ವರ್ಗೀಯ ಲೋಕವನ್ನಲ್ಲ, ಮಾನವ ಜೀವಿಗಳಿಂದ ಜನನಿಬಿಡಗೊಳಿಸಲ್ಪಟ್ಟ ನಮ್ಮ ಭೂಮಿಯನ್ನು ಯಾವಾಗಲೂ ಸೂಚಿಸುತ್ತದೆ. (ಹೋಲಿಸಿ ಮತ್ತಾಯ 24:14; ಲೂಕ 2:1; 21:26; ಅ. ಕೃತ್ಯಗಳು 17:31.) ಆದುದರಿಂದ ಯೇಸು ಕ್ರಿಸ್ತನ ಮೂಲಕವಾಗಿ ಆಳಲ್ಪಡುವ ದೇವರ ರಾಜ್ಯವು ನಿವಾಸಿತ ಭೂಮಿಯಲ್ಲಿಲ್ಲಾ ಆಡಳಿತವನ್ನು ನಡೆಸುವುದು. ನಿಜವಾಗಿಯೂ ಜೀವಿಸಲು ಒಂದು ಆದರ್ಶ ಸ್ಥಳವು ಅದಾಗಲಿರುವುದು!
ರಾಜ್ಯವು ತಾನೇ ಸ್ವರ್ಗೀಯವಾಗಿದ್ದಾಗ್ಯೂ, ಅದು ಭೂಮಿಯ ಸಂಗತಿಗಳಿಗೆ ಅಡ್ಡ ಬರುತ್ತದೆ. ಯಾವ ಫಲಿತಾಂಶಗಳೊಂದಿಗೆ? ದೌರ್ಬಲ್ಯಗಳು, ದುಷ್ಕೃತ್ಯಗಳು, ಬಡತನ, ಮತ್ತು ಮರಣವು ಗತ ನೆನಪಾಗಲಿರುವವು. ಆಶಾಭಂಗ ಮತ್ತು ಅಸಂತೃಪ್ತಿ ಕೂಡ ಇಲ್ಲದೆ ಹೋಗುವುದು. (ಪ್ರಕಟನೆ 21:3-5) ‘ದೇವರು ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತಾನೆ’ ಎಂದು ಬೈಬಲ್ ಹೇಳುತ್ತದೆ. (ಕೀರ್ತನೆ 145:16) ನಿರುದ್ಯೋಗ ಮತ್ತು ಮಾಲಿನ್ಯತೆಯಂತಹ ಸಮಸ್ಯೆಗಳಿಗೆ ಒಂದು ಪ್ರಾಯೋಗಿಕವಾದ ಮತ್ತು ಶಾಶ್ವತವಾದ ಪರಿಹಾರವಿರುವುದು. (ಯೆಶಾಯ 65:21-23; ಪ್ರಕಟನೆ 11:18) ಆದರೆ ಇವೆಲ್ಲವುಗಳಿಗಿಂತಲೂ ಹೆಚ್ಚಾಗಿ, ದೇವರ ಆಶೀರ್ವಾದದ ಫಲವಾಗಿ ಬಹುಮಟ್ಟಿಗೆ ಕಣ್ಮರೆಯಾಗಿರುವಂತೆ ತೋರುತ್ತಿರುವ ಗುಣಗಳಾದ, ಸತ್ಯ, ನ್ಯಾಯ, ಮತ್ತು ಶಾಂತಿಯ ಒಂದು ವಿಜಯೋತ್ಸವವು ಅಲ್ಲಿರುವುದು!—ಕೀರ್ತನೆ 85:7-13; ಗಲಾತ್ಯ 5:22, 23.
ಇದೆಲ್ಲವೂ ಒಂದು ಸ್ಪಪ್ನ, ಒಂದು ಅಸಾಧ್ಯಾದರ್ಶವಾಗಿದೆಯೊ? ಇಲ್ಲ, ಈ ಲೋಕದ “ಕಡೇ ದಿವಸ” ಗಳಲ್ಲಿ ನಾವಿದ್ದೇವೆಂದು ಮತ್ತು ಆದುದರಿಂದ ಹೊಸ ಲೋಕವು ಹತ್ತಿರವಿದೆಯೆಂದು ನಾವು ಜೀವಿಸುತ್ತಿರುವ ಈ ಅತ್ಯಂತ ಗಂಡಾಂತರದ ಸಮಯಗಳು ನಿದರ್ಶಿಸುತ್ತವೆ. (2 ತಿಮೊಥೆಯ 3:1-5) ಅಲ್ಲಿ ಜೀವಿಸಲು ನೀವು ಬಯಸುವಿರೊ? ಅದು ಹೇಗೆ ಸಾಧ್ಯವಿದೆಯೆಂಬುದನ್ನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸುವ ಮೂಲಕ ಕಲಿಯಿರಿ. ನಾವೆಂದಾದಾರೂ ಕಲ್ಪಿಸಿಕೊಂಡಿರುವುದಕ್ಕಿಂತಲೂ ಹೆಚ್ಚು ಉತ್ತಮವಾದ, ಒಂದು ಉತ್ತಮ ಲೋಕವು ಸಮೀಪವಿದೆ. ಅದು ಒಂದು ಅಸಾಧ್ಯಾದರ್ಶವಲ್ಲ—ಅದು ಒಂದು ವಾಸ್ತವಿಕತೆಯಾಗಿದೆ!
[ಪುಟ 7 ರಲ್ಲಿರುವ ಚಿತ್ರ]
ಒಂದು ಉತ್ತಮ ಲೋಕ—ಶೀಘ್ರದಲ್ಲಿಯೇ ಒಂದು ವಾಸ್ತವಿಕತೆ