ಒಂದು ಉತ್ತಮ ಲೋಕ—ಕೇವಲ ಒಂದು ಸ್ವಪ್ನವೋ?
ನೀವು ಇರಾನಿನ ಪ್ರವಾದಿ ಜೋರೋಆಸ್ಟರ್ನಿಂದ ಬೋಧಿಸಲ್ಪಟ್ಟಂತೆ ಮ್ಯಾಜ್ಡ ಮತದ ಒಬ್ಬ ಹಿಂಬಾಲಕರಾಗಿದ್ದಿದ್ದರೆ, ಭೂಮಿಯು ಅದರ ಹಿಂದಿನ ಮನೋಹರತೆಗೆ ಹಿಂದಿರುಗುವಂತಹ ಆ ದಿನಕ್ಕಾಗಿ ಕಾಯುತ್ತಿದ್ದಿರಿ. ಪುರಾತನ ಗ್ರೀಸಿನಲ್ಲಿ ನೀವು ವಾಸಿಸುತ್ತಿದ್ದಿದ್ದರೆ, ಸಾ.ಶ.ಪೂ ಎಂಟನೆಯ ಶತಮಾನದಲ್ಲಿ ಕವಿ ಹೀಸಿಯಡ್ನಿಂದ ವಿವರಿಸಲ್ಪಟ್ಟ, ಕಥಾರೂಪದ ಭಾಗ್ಯಶಾಲಿ ಸಣ್ಣ ದ್ವೀಪಗಳನ್ನು ತಲಪುವುದರ ಅಥವಾ ಸುವರ್ಣ ಯುಗದ ಹಿಂದಿರುಗುವಿಕೆಯನ್ನು ನೋಡುವುದರ ಕುರಿತು ಬಹುಶಃ ನೀವು ಕನಸುಕಾಣುತ್ತಿದ್ದಿರಬಹುದು. ದಕ್ಷಿಣ ಅಮೆರಿಕದ ಗುವರಾನಿ ಇಂಡಿಯನನೊಬ್ಬನು ಕೆಡುಕಿಲ್ಲದ ದೇಶಕ್ಕಾಗಿ ಇನ್ನೂ ಹುಡುಕುತ್ತಿರಬಹುದು. ನಮ್ಮ ಕಾಲದಲ್ಲಿ ಜೀವಿಸುತ್ತಾ, ಯಾವುದೊ ರಾಜಕೀಯ ಭಾವನಾ ಶಾಸ್ತ್ರದ ಕಾರಣದಿಂದ ಅಥವಾ ಆಧುನಿಕ ದಿನದ ಜೀವ ವೈಜ್ಞಾನಿಕ ಅರಿವಿನ ಫಲಿತಾಂಶವಾಗಿ ಈ ಲೋಕವು ಪ್ರಗತಿಹೊಂದುವುದೆಂದು ಪ್ರಾಯಶಃ ನೀವು ಭರವಸೆ ಇಡಬಹುದು.
ಸುವರ್ಣ ಯುಗ, ಭಾಗ್ಯಶಾಲಿ ಸಣ್ಣ ದ್ವೀಪಗಳು, ಕೆಡುಕಿಲ್ಲದ ದೇಶ—ಇವು ಒಂದೇ ಹಂಬಲವನ್ನು, ಒಂದು ಉತ್ತಮ ಲೋಕದ ನಿರೀಕ್ಷೆಯನ್ನು ವರ್ಣಿಸಲು ಬಳಸಿರುವ ಅನೇಕ ಹೆಸರುಗಳಲ್ಲಿ ಕೆಲವಾಗಿವೆ.
ಈ ಲೋಕ, ನಮ್ಮ ಲೋಕ, ಖಂಡಿತವಾಗಿಯೂ ಒಂದು ಆದರ್ಶವಾದ ಸ್ಥಳವಾಗಿಲ್ಲ. ಅಧಿಕವಾಗುತ್ತಿರುವ ಪಾಶವೀಯ ದುಷ್ಕೃತ್ಯ, ಅಭೂತಪೂರ್ವ ಬಲಾತ್ಕಾರದ ಭ್ರಾತೃ ಘಾತಕ ಯುದ್ಧಗಳು, ಸಮೂಲನಾಶ, ಇತರರ ಕಷ್ಟಾನುಭವಗಳ ಕಡೆಗೆ ಉದಾಸೀನತೆ, ಬಡತನ ಮತ್ತು ಹಸಿವೆ, ನಿರುದ್ಯೋಗ ಮತ್ತು ಐಕಮತ್ಯದ ಕೊರತೆ, ಜೀವ ವೈಜ್ಞಾನಿಕ ಸಮಸ್ಯೆಗಳು, ಲಕ್ಷಾಂತರ ಜನರನ್ನು ಪೀಡಿಸುತ್ತಿರುವ ಗುಣವಾಗದ ಅಸ್ವಸ್ಥತೆಗಳು—ಪ್ರಚಲಿತ ವಿಪತ್ತುಗಳ ಪಟ್ಟಿಯು ಕೊನೆಗೊಳ್ಳದಂತೆ ಭಾಸವಾಗುತ್ತದೆ. ಇತ್ತೀಚೆಗೆ ಕಾದಾಡಲ್ಪಟ್ಟಿರುವ ಯುದ್ಧಗಳ ಕುರಿತು ಆಲೋಚಿಸುವಾಗ, ಇಟೆಲಿಯ ಪತ್ರಿಕೋದ್ಯಮಿಯೊಬ್ಬನು ಹೇಳಿದ್ದು: “ಶತ್ರುತ್ವವು ನಮ್ಮ ಸಮಯದ ಅತ್ಯಂತ ಬಲವಾದ ಭಾವಾತಿರೇಕವಾಗಿಲ್ಲವೊ ಎಂಬುದು ಸ್ವಾಭಾವಿಕವಾಗಿ ಏಳುವ ಪ್ರಶ್ನೆಯಾಗಿದೆ.” ಪರಿಸ್ಥಿತಿಯನ್ನು ಪರಿಗಣಿಸುವಾಗ, ಬೇರೇನನ್ನಾದರೂ, ಉತ್ತಮವಾದ ಏನನ್ನಾದರೂ ಆಕಾಂಕ್ಷಿಸುವುದು ವಾಸ್ತವಿಕವಾದದ್ದೆಂದು ನೀವು ಭಾವಿಸುತ್ತೀರೊ? ಅಥವಾ ಅಂತಹ ಮಹತ್ವಾಕಾಂಕ್ಷೆಯು, ಎಂದಿಗೂ ಸತ್ಯವಾಗಿ ಪರಿಣಮಿಸದ ಒಂದು ಸ್ವಪ್ನದಂತಿರುವ, ಅಸಾಧ್ಯಾದರ್ಶ ಸ್ಥಿತಿಗಾಗಿ ಕೇವಲ ಒಂದು ಹಂಬಲಿಸುವಿಕೆಯಾಗಿದೆಯೊ? ಶಕ್ಯವಿರುವ ಎಲ್ಲ ಲೋಕಗಳಲ್ಲಿ ಅತ್ಯುತ್ತಮವಾದುದರಲ್ಲಿ ನಾವು ಜೀವಿಸುತ್ತೇವೊ?
ಇವುಗಳು ಹೊಸ ಚಿಂತೆಗಳಲ್ಲ. ಶತಮಾನಗಳಿಂದ ಮಾನವರು ಹೊಂದಿಕೆ, ನ್ಯಾಯ, ಸಮೃದ್ಧಿ, ಮತ್ತು ಪ್ರೀತಿಯು ಪ್ರಭುತ್ವದಲ್ಲಿರುವಂತಹ ಒಂದು ಲೋಕದ ಕುರಿತು ಕನವರಿಸುತ್ತಿದ್ದಾರೆ. ಕಾಲಗತಿಯಲ್ಲಿ, ಆದರ್ಶ ರಾಜ್ಯಗಳು, ಉತ್ತಮ ಲೋಕಗಳ ಕುರಿತಾದ ತಮ್ಮ ಕಲ್ಪನೆಗಳನ್ನು ಅನೇಕ ತತ್ವಜ್ಞಾನಿಗಳು ವಿವರವಾಗಿ ವ್ಯಕ್ತ ಪಡಿಸಿದ್ದಾರೆ. ಆದರೆ, ವಿಷಾದಕರವಾಗಿಯೆ, ಅವುಗಳು ಯಶಸ್ವಿಯಾಗಿ ಕಾರ್ಯನಡಿಸುವಂತೆ ಮಾಡುವುದರ ಕುರಿತು ವಿವರಿಸಲು ಅವರು ಎಂದಿಗೂ ಸಮರ್ಥರಾಗಿಲ್ಲ.
ಶತಮಾನಗಳಷ್ಟು ಹಳೆಯ-ಸ್ವಪ್ನಗಳ, ಅಸಾಧ್ಯಾದರ್ಶ ಸ್ಥಿತಿಗಳ, ಮತ್ತು ಒಂದು ಉತ್ತಮ ಸಮಾಜಕ್ಕಾಗಿ ಮಾನವ ಮಹತ್ವಾಕಾಂಕ್ಷೆಗಳ ಕುರಿತಾದ ಈ ಪಟ್ಟಿಯು ನಮಗೆ ಏನನ್ನಾದರೂ ಕಲಿಸಬಲ್ಲದೊ?
[ಪುಟ 3 ರಲ್ಲಿರುವ ಚಿತ್ರ]
ಶಕ್ಯವಿರುವ ಎಲ್ಲ ಲೋಕಗಳಲ್ಲಿ ಇದು ಅತ್ಯುತ್ತಮವಾದದ್ದೊ?