ಮಾಲಿನ್ಯತೆಯನ್ನು ನಿರ್ಮೂಲಗೊಳಿಸುವುದು ಹೃದಯ ಮತ್ತು ಮನಸ್ಸಿನೊಳಗಿಂದ
ಯೆಹೋವನು ಮಾನವರಿಗೆ ಹೊಲಸು ಮತ್ತು ಅವ್ಯವಸ್ಥೆಗಾಗಿ ಒಂದು ಹಂಬಲವನ್ನು ಕೊಡಲಿಲ್ಲ. ಅವರ ಭೂಮನೆಯು ಶುದ್ಧತೆ, ಸುವ್ಯವಸ್ಥೆ ಮತ್ತು ಸೌಂದರ್ಯದ ಒಂದು ಪ್ರಮೋದವನವಾಗಿರುವಂತೆ ರಚಿಸಲ್ಪಟ್ಟಿತ್ತು. ಅದು ಒಂದು ಅಂದಗೆಟ್ಟ ಕಸದ ಕೊಂಪೆಯಾಗಿ ಅವನತಿ ಹೊಂದುವಂತೆ ದೇವರು ಉದ್ದೇಶಿಸಿರಲಿಲ್ಲ.—ಆದಿಕಾಂಡ 2:8, 9.
ಆದರೂ ಮಾನವರು ದೈವಿಕ ಮಾರ್ಗದರ್ಶನವನ್ನು ತಿರಸ್ಕರಿಸಿದ ನಂತರ, ತಮ್ಮ ಸ್ವಂತ ತೆರದ ಲೋಕ ವ್ಯವಸ್ಥೆಯನ್ನು ಅವರು ಕಟ್ಟಲಾರಂಭಿಸಿದರು. ದೈವಿಕ ವಿವೇಕದ ಪ್ರಯೋಜನರಹಿತರಾಗಿ ಮತ್ತು ಅನುಭವದ ಕೊರತೆಯಿಂದಾಗಿ, ಅವರು ಪರೀಕ್ಷಾ ಪ್ರಯೋಗದ ಮೂಲಕವಾಗಿ ಕಲಿಯುವಂತೆ ಒತ್ತಾಯಿಸಲ್ಪಟ್ಟರು. ಮಾನವರು ತಮ್ಮನ್ನು ಸಾಫಲ್ಯಪೂರ್ವಕವಾಗಿ ಆಳಿಕೊಳ್ಳಲಾರರು ಎಂಬ ಬೈಬಲ್ ಸತ್ಯವನ್ನು ಐಹಿಕ ಇತಿಹಾಸವು ದೃಢೀಕರಿಸುತ್ತದೆ; ಯಾಕಂದರೆ ಸಾವಿರಾರು ವರ್ಷಗಳಿಂದ “ಮನುಷ್ಯನು ಮನುಷ್ಯನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟು” ಮಾಡಿದ್ದಾನೆ. (ಪ್ರಸಂಗಿ 8:9, NW; ಯೆರೆಮೀಯ 10:23) ಆಧುನಿಕ ಸಮಸ್ಯೆಯಾದ ಮಾಲಿನ್ಯತೆಯು, ತನ್ನೆಲ್ಲಾ ರೂಪುಗಳಲ್ಲಿ, ಮಾನವ ದುರಾಡಳಿತದ ಫಲಿತಾಂಶವಾಗಿ ಇದೆ.
ದೇವರ ದೃಷ್ಟಿಕೋನವನ್ನು ಸ್ವೀಕರಿಸುವುದು
ದೇವರನ್ನು ಮೆಚ್ಚಿಸುವ ಅಪೇಕ್ಷೆಯಿರುವ ಜನರು ನಿರ್ಮಾಣಿಕನ ಶುದ್ಧತೆಯ ಮಟ್ಟಗಳಿಗೆ ಹೊಂದಿಕೆಯಾಗಿ ಜೀವಿಸಲು ಬಹಳ ಪ್ರಯಾಸಪಡುತ್ತಾರೆ. ಹೀಗೆ 1991 ರ ಮಧ್ಯದಲ್ಲಿ, ಚೆಕೊಸ್ಲೊವಾಕಿಯದ ಪ್ರಾಗ್ನಲ್ಲಿ ಒಂದು ಅಂತಾರಾಷ್ಟ್ರೀಯ ಅಧಿವೇಶನವು ಜರುಗಲಿಕ್ಕಿದ್ದಾಗ, ಯೆಹೋವನ ಸಾಕ್ಷಿಗಳಿಗೆ ಒಂದು ಸಮಸ್ಯೆಯು ಎದುರಾಯಿತು.a ಸುಮಾರು 75,000 ಜನರು ಹಾಜರಾಗಲಿದ್ದರು, ಇಷ್ಟು ಮಂದಿಗೆ ಸಾಹ್ಟ್ರೊಫ್ ಸ್ಟೇಡಿಯಂ ಆರಾಮವಾಗಿ ಸ್ಥಳಒದಗಿಸ ಶಕವ್ತಾಗಿತ್ತು. ಆದರೆ ಸ್ಟೇಡಿಯಂ ಐದು ವರ್ಷಗಳಿಂದ ಉಪಯೋಗಿಸಲ್ಪಟ್ಟಿರಲ್ಲಿಲ. ಅದು ಹವಾಮಾನದ ಸ್ಥಿತಿಗಳಿಂದಾಗಿ ಹಾಳಾಗಿ ಅಂದಗೆಟ್ಟಿತ್ತು, ನಾದುರಸ್ತಿಗೆ ಒಳಗಾಗಿತ್ತು. ಅದನ್ನು ನವೀಕರಿಸುವುದಕ್ಕೆ ಮತ್ತು ಪುನಃ ಬಣ್ಣಬಳಿಯುವುದಕ್ಕೆ ಸುಮಾರು 1,500 ಯೆಹೋವನ ಸಾಕ್ಷಿಗಳು 65,000 ಕ್ಕಿಂತಲೂ ಹೆಚ್ಚು ತಾಸುಗಳನ್ನು ವ್ಯಯಿಸಿದರು. ಅಧಿವೇಶನದ ಸಮಯದೊಳಗೆ ಈ ಸ್ವಚ್ಛಗೊಳಿಸುವ ಚಟುವಟಿಕೆಯು ಸ್ಟೇಡಿಯಂನ್ನು, ಸತ್ಯ ದೇವರಾದ ಯೆಹೋವನ ಆರಾಧನೆಗೆ ಒಂದು ಅರ್ಹವಾದ ಸ್ಥಳವನ್ನಾಗಿ ಮಾಡಿತ್ತು.
ಸಾಮಾನ್ಯ ಲೋಕವು ಸ್ವಚ್ಛತೆ ಮತ್ತು ಸುವ್ಯವಸ್ಥೆಯ ಕಡೆಗೆ ಅಷ್ಟು ಕೊಂಚ ಗಣ್ಯತೆಯನ್ನು ತೋರಿಸುವಾಗ, ಯೆಹೋವನ ಸಾಕ್ಷಿಗಳನ್ನು ತೀರಾ ಭಿನ್ನರಾಗಿರುವಂತೆ ಪ್ರೇರೇಪಿಸುವುದು ಯಾವುದು? ನಕಾರಾತ್ಮಕ ಪ್ರವೃತ್ತಿಗಳಾದ ಸ್ವಾರ್ಥ, ಅಪರಿಗಣನೆ, ದುರಾಶೆ, ಮತ್ತು ಪ್ರೀತಿಯ ಕೊರತೆಯನ್ನು ಕ್ರೈಸ್ತರು ನಿರ್ಮೂಲಗೊಳಿಸಬೇಕೆಂಬ ಬೈಬಲಿನ ಹಿತೋಪದೇಶಕ್ಕಾಗಿ ಗಣ್ಯತೆಯೇ. “ಹಳೇ ವ್ಯಕ್ತಿತ್ವವನ್ನು ಅದರ ಕೃತ್ಯಗಳ ಕೂಡ ತೆಗೆದುಹಾಕಿರಿ” ಎನ್ನುತ್ತದೆ ಬೈಬಲ್. ಅದರ ಸ್ಥಳದಲ್ಲಿ “ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಿರಿ, ಅದು ಅದನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ನಿಷ್ಕೃಷ್ಟ ಜ್ಞಾನದ ಮೂಲಕ ಹೊಸದಾಗಿ ಮಾಡಲ್ಪಡುತ್ತದೆ.” ಸ್ವಚ್ಛತೆ, ಸುವ್ಯವಸ್ಥೆ ಮತ್ತು ಸೌಂದರ್ಯದಿಂದ ವೈಲಕ್ಷಣ್ಯವಾಗಿರುವ ಒಂದು ವ್ಯಕ್ತಿತ್ವದಲ್ಲಿ ಮಲಿನಗೊಳಿಸುವ ಪ್ರವೃತ್ತಿಗೆ ಯಾವ ಅವಕಾಶವೂ ಇರುವುದಿಲ್ಲ.—ಕೊಲೊಸ್ಸೆ 3:9, 10, NW; 2 ಕೊರಿಂಥ 7:1; ಫಿಲಿಪ್ಪಿ 4:8; ತೀತ 2:14.
ಕ್ರೈಸ್ತರು ಮಾಲಿನ್ಯತೆಯ ಪ್ರಜ್ಞೆಯುಳ್ಳವರಾಗಿದ್ದು, ಸ್ವೇಚ್ಛಾಚಾರದಿಂದ ಮಾಲಿನ್ಯ ಮಾಡದಂತೆ ಮತ್ತು ಸರಕಾರವು ವಿಧಿಸುವ ಮಾಲಿನ್ಯ ವಿರೋಧಿ ನಿಯಮಗಳನ್ನು ಅವಿಧೇಯತೆಯಿಂದ ದುರ್ಲಕ್ಷಿಸದಂತೆ ಹೊಸ ವ್ಯಕ್ತಿತ್ವವು ಆವಶ್ಯಪಡಿಸುತ್ತದೆ. ಕಸದ ಕುಪ್ಪೆಗಳಿಗೆ ನಡಿಸುವಂಥ ಎಸೆದು-ಬಿಡುವ, ಸ್ವಾರ್ಥಪರ, ಮತ್ತು ಆಲಸ್ಯದ ಮನೋಭಾವನೆಯನ್ನು ವರ್ಜಿಸುವುದಕ್ಕೆ ಅದು ಅವರಿಗೆ ಸಹಾಯ ಮಾಡುತ್ತದೆ. ಇತರರ ಸೊತ್ತುಗಳಿಗೆ ಗೌರವವನ್ನು ಪ್ರವರ್ಧಿಸುವ ಮೂಲಕ, ಗೀಚು ಬರಹವನ್ನು ನಿಮ್ಮ ವಿಚಾರ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿ, ಒಂದು ನಿರಪರಾಧ ವಿನೋದವಾಗಿ, ಅಥವಾ ಒಂದು ಬದಲಿ ಕಲಾರೂಪವಾಗಿ ಬಳಸುವುದನ್ನು ಅಕ್ರಮವೆಂದು ನಿರ್ಣಯಿಸುತ್ತದೆ. ಮನೆಗಳು, ಕಾರುಗಳು, ಬಟ್ಟೆಗೆಳು, ಮತ್ತು ದೇಹಗಳು ಶುಚಿಯಾಗಿಡಲ್ಪಡುವುದನ್ನು ಅದು ಆವಶ್ಯಪಡಿಸುತ್ತದೆ.—ಹೋಲಿಸಿರಿ ಯಾಕೋಬ 1:21.
ಈ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಲು ಮನಸ್ಸಿಲ್ಲದ ಜನರ ವಿಷಯದಲ್ಲಾದರೋ, ಬರಲಿರುವ ಆತನ ಪ್ರಮೋದವನದಲ್ಲಿ ಜೀವನದಿಂದ ಅವರನ್ನು ತಡೆಯುವುದಕ್ಕಾಗಿ ದೇವರಲ್ಲಿ ತಪ್ಪು ಹಿಡಿಯ ಸಾಧ್ಯವಿದೆಯೇ? ಇಲ್ಲವೇ ಇಲ್ಲ. ಮಲಿನಗೊಳಿಸುವ ಪ್ರವೃತ್ತಿಯನ್ನು ತನ್ನ ಹೃದಯ ಮತ್ತು ಮನಸ್ಸಿನೊಳಗೆ ಯಾರು ಇನ್ನೂ ಅಡಗಿಸಿಟ್ಟಿರುತ್ತಾನೋ ಅವನು ಭೂಗ್ರಹಕ್ಕೆ ಪುನಃ ಸ್ಥಾಪಿಸಲ್ಪಟ್ಟ ಪ್ರಮೋದವನೀಯ ಸೌಂದರ್ಯಕ್ಕೆ, ಅದನ್ನು ಕಾಪಾಡಲಪೇಕ್ಷಿಸುವವರ ತೀರಾ ವಿಷಾದಕ್ಕಾಗಿ, ಬೆದರಿಕೆ ಹಾಕುವವನಾಗುವನು. “ಲೋಕನಾಶಕರನ್ನು ನಾಶಮಾಡುವ” ದೇವರ ನಿರ್ಣಯವು ನೀತಿಯುಳ್ಳದ್ದೂ ಪ್ರೀತಿಯುಳ್ಳದ್ದೂ ಆಗಿದೆ.—ಪ್ರಕಟನೆ 11:18; 21:8.
ಕ್ರಿಯಾಶೀಲ ಭಾಗವಹಿಸುವಿಕೆಯೋ?
ಆದರೂ, ಕ್ರೈಸ್ತರು ಮಾಲಿನ್ಯ ವಿರೋಧವನ್ನು ಅಥವಾ ಸ್ವಚ್ಛಗೊಳಿಸುವ ಸೂಕ್ತ ಕ್ರಮಗಳನ್ನು ಪ್ರವರ್ಧಿಸಲು ಅವಶ್ಯಪಡಿಸಲ್ಪಡುತ್ತಾರೆಂದು ಇದರ ಅರ್ಥವೊ?
ಮಾಲಿನ್ಯವು ಸ್ಪಷ್ಟವಾಗಿಗಿ ಆರೋಗ್ಯಕ್ಕೆ ಮತ್ತು ಸಾರ್ವಜನಿಕ ಸುರಕ್ಷೆಗೆ ಹಾನಿಕರವಾಗಿದೆ. ಯೆಹೋವನಿಗೆ ಅಂಥ ವಿಷಯಗಳ ಕುರಿತು ಯುಕ್ತವಾದ ಗಮನವಿದೆ ಎಂಬದನ್ನು, ಇಸ್ರಾಯೇಲ್ಯರಿಗೆ ಆತನು ಕೊಟ್ಟ ನಿಯಮದಿಂದ ನಾವು ಕಾಣಬಲ್ಲೆವು. (ವಿಮೋಚನಕಾಂಡ 21:28-34; ಧರ್ಮೋಪದೇಶಕಾಂಡ 22:8; 23:12-14) ಆದರೆ ಅವರು ಸಾರ್ವಜನಿಕ ಸುರಕ್ಷೆಯ ವಿಷಯಗಳಲ್ಲಿ ಬೇರೆ ಜನರನ್ನು ಒಡಂಬಡಿಸುವಂತೆ ಆತನು ಯಾವ ಸಮಯದಲ್ಲಾದರೂ ಮಾರ್ಗದರ್ಶಿಸಿರಲಿಲ್ಲ; ಒಂದನೆಯ ಶತಕದ ಕ್ರೈಸ್ತರಿಗೆ ಸಹ ಹಾಗೆ ಮಾಡುವಂತೆ ಎಂದಾದರೂ ಹೇಳಲ್ಪಟ್ಟಿರಲಿಲ್ಲ.
ಇಂದು, ಪರಿಸರೀಯ ವಿಷಯಗಳು ಸುಲಭವಾಗಿಯೇ ರಾಜಕೀಯ ಪ್ರಶ್ನೆಗಳಾಗಿ ಪರಿಣಮಿಸಬಲ್ಲವು. ವಾಸ್ತವದಲ್ಲಿ, ಕೆಲವು ರಾಜಕೀಯ ಪಕ್ಷಗಳು ವಿಶಿಷ್ಟವಾಗಿ ಪರಿಸರೀಯ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶಕ್ಕಾಗಿಯೇ ರಚಿಸಲ್ಪಟ್ಟಿವೆ. ರಾಜಕೀಯ ವಿಷಯಗಳಲ್ಲಿ ಪಕ್ಷ ತಕ್ಕೊಳ್ಳುವಂತೆ ಪ್ರಭಾವಿಸಲ್ಪಡಲು ತನ್ನನ್ನು ಬಿಟ್ಟುಕೊಡುವ ಕ್ರೈಸ್ತನೊಬ್ಬನು ಇನ್ನು ಮುಂದೆ ರಾಜಕೀಯವಾಗಿ ತಟಸ್ಥನಲ್ಲ. ಯೇಸು ತನ್ನ ಶಿಷ್ಯರಿಗಾಗಿ ಈ ಸೂತ್ರವನ್ನಿಟ್ಟಿದ್ದಾನೆ: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ.” ಆ ಆವಶ್ಯಕತೆಯನ್ನು ದುರ್ಲಕ್ಷಿಸುವ ಕ್ರೈಸ್ತನು, “ಇಲ್ಲದೆ ಹೋಗುವ ಇಹಲೋಕಾಧಿಕಾರಿಗಳ” ಪಕ್ಷವನ್ನು ತಕ್ಕೊಳ್ಳುವ ಅಪಾಯದಲ್ಲಿ ತನ್ನನ್ನು ಹಾಕುತ್ತಾನೆ.—ಯೋಹಾನ 17:16; 1 ಕೊರಿಂಥ 2:6.
ತನ್ನ ದಿನದ ಎಲ್ಲಾ ಸಾಮಾಜಿಕ ಸಮಸ್ಯೆಗಳನ್ನು ನಿಭಾಯಿಸಲು ಯೇಸು ಪ್ರಯತ್ನಿಸಲಿಲ್ಲ; ಹಾಗೆ ಮಾಡುವಂತೆ ತನ್ನ ಶಿಷ್ಯರಿಗೆ ಹೇಳಲೂ ಇಲ್ಲ. ಅವರಿಗೆ ಅವನ ಆಜ್ಞೆಯು ಇದಾಗಿತ್ತು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ. . . . ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶಮಾಡಿರಿ.” ಪರಿಸರೀಯ ಕಾರ್ಯನೀತಿಗಳ ಕುರಿತು ಅವನು ಅವರಿಗೆ ಆಜ್ಞಾಪಿಸಲಿಲ್ಲ.—ಮತ್ತಾಯ 28:19, 20.
ಕ್ರೈಸ್ತನ ಜೀವಿತದಲ್ಲಿ ಯಾವುದಕ್ಕೆ ಪ್ರಥಮತೆ ಇರಬೇಕೆಂಬದನ್ನು ವಿವರಿಸುತ್ತಾ, ಕ್ರಿಸ್ತನು ಅಂದದ್ದು: “ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ.” (ಮತ್ತಾಯ 6:33) ಯೆಹೋವನು ಮೆಸ್ಸೀಯನೀಕ ರಾಜ್ಯದ ಮೂಲಕ, ತನ್ನ ನೀತಿಯ ಸೂತ್ರಗಳನ್ನು ಭೌಗೋಲಿಕ ಪ್ರಮಾಣದಲ್ಲಿ ಜಾರಿಗೆ ತರುವಾಗ, ಪರಿಸರೀಯ ಸಮಸ್ಯೆಗಳು ಶಾಶ್ವತವಾಗಿ ಮತ್ತು ಎಲ್ಲರ ಸಂತೃಪ್ತಿಗಾಗಿ ಪರಿಹರಿಸಲ್ಪಡುವುವು.
ಹೀಗೆ, ಯೆಹೋವನ ಸಾಕ್ಷಿಗಳು ಒಂದು ಸಮತೂಕದ ನಿಲುವನ್ನು ತಕ್ಕೊಳ್ಳುತ್ತಾರೆ. ರೋಮಾಪುರ 13:1-7 ರ ನೋಟದಲ್ಲಿ, ಪರಿಸರವನ್ನು ನಿಯಂತ್ರಿಸುವ ಸರಕಾರಿ ನಿಯಮಗಳನ್ನು ಅವರು ಮನಸ್ಸಾಕ್ಷಿಪೂರ್ವಕವಾಗಿ ವಿಧೇಯರಾಗುವುದು ಆವಶ್ಯಕವಾಗಿದೆ. ಅದಲ್ಲದೆ, ನೆರೆಯವರೆಡೆಗಿನ ದೈವಿಕ ಪ್ರೀತಿಯು ಅವರನ್ನು ಇತರರ—ಸಾರ್ವಜನಿಕ ಯಾ ಖಾಸಗಿ—ಸೊತ್ತುಗಳಿಗಾಗಿ, ಅವುಗಳನ್ನು ಅಂದಗೆಡಿಸದಿರುವ ಮೂಲಕ ಮತ್ತು ಬಿಸಾಡುವ ಕಚಡವನ್ನು ಸಿಕ್ಕಾಬಟ್ಟೆ ಹಾಕದಿರುವ ಮೂಲಕ ಗೌರವ ತೋರಿಸುವಂತೆ ಪ್ರಚೋದಿಸುತ್ತದೆ. ಆದರೆ ಅವರು ಲೌಕಿಕ ಸ್ವಚ್ಛಗೊಳಿಸುವ ಕಾರ್ಯವಿಧಾನಗಳಲ್ಲಿ ನಾಯಕತ್ವ ವಹಿಸುವಂತೆ ಮಾರ್ಗದರ್ಶಿಸಲ್ಪಟ್ಟಿಲ್ಲ ಸ್ಪಷ್ಟ. ಅತ್ಯಂತ ಬಾಳುವ ಹಿತವನ್ನು ನಡಿಸಲು ಇದೇ ಮಾರ್ಗವೆಂದು ಅರಿತವರಾಗಿ, ದೇವರ ರಾಜ್ಯದ ಸಂದೇಶವನ್ನು ಸಾರುವುದನ್ನು ಯುಕ್ತವಾಗಿಯೇ ಅವರು ಪ್ರಥಮವಾಗಿಡುತ್ತಾರೆ.
ಒಂದು ಆತ್ಮಿಕ ಸ್ವಚ್ಛಗೊಳಿಸುವಿಕೆ
ಅವರು ರಕ್ತಪಾತವನ್ನು ಮಾಡುವ ಮೂಲಕ, ಅನೈತಿಕ ಜೀವನ-ಶೈಲಿಯನ್ನು ಸ್ವೀಕರಿಸುವ ಮೂಲಕ, ಅಥವಾ ಪವಿತ್ರ ವಿಷಯಗಳಿಗೆ ಅಗೌರವವನ್ನು ತೋರಿಸುವ ಮೂಲಕ ಭೂಮಿಯನ್ನು ಮಲಿನಗೊಳಿಸಿದರೆ ಬರುವ ಫಲಿತಾಂಶಗಳ ಕುರಿತು ಪುರಾತನ ಇಸ್ರಾಯೇಲ್ಯರಿಗೆ ಪದೇ ಪದೇ ಎಚ್ಚರಿಕೆಯನ್ನು ಕೊಡಲಾಗಿತ್ತು. (ಅರಣ್ಯಕಾಂಡ 35:33; ಯೆರೆಮೀಯ 3:1, 2; ಮಲಾಕಿಯ 1:7, 8) ಅವರು ಖಂಡಿಸಲ್ಪಟ್ಟದ್ದು, ಅವರು ದೋಷಿಗಳಾಗಿದ್ದಿರಬಹುದಾದ ಯಾವುದೇ ಶಾರೀರಿಕ ಮಾಲಿನ್ಯಕ್ಕಾಗಿ ಅಲ್ಲ, ಈ ಆತ್ಮಿಕ ಮಲಿನತೆಗಾಗಿಯೇ ಎಂಬದು ಗಮನಾರ್ಹವು.b
ಆದುದರಿಂದ, ಕ್ರೈಸ್ತನು ಇಂದು ಮುಖ್ಯವಾಗಿ ವರ್ಜಿಸಲು ಪ್ರಯತ್ನಿಸುವುದು ಆತ್ಮಿಕ ಮಾಲಿನ್ಯತೆ ಅಥವಾ ಅಶುದ್ಧತೆಯನ್ನೇ. ಇದನ್ನು ಆತನು ಮಾಡುವುದು, ಹೃದಯ ಮತ್ತು ಮನಸ್ಸಿನಿಂದ ಮಲಿನಗೊಳಿಸುವ ಪ್ರವೃತ್ತಿಗಳನ್ನು ನಿರ್ಮೂಲಗೊಳಿಸುವ “ಹೊಸ ವ್ಯಕ್ತಿತ್ವವನ್ನು” ಧರಿಸಿಕೊಳ್ಳುವ ಮೂಲಕವೇ. ಈ ಆತ್ಮಿಕ ಶುದ್ಧೀಕರಣದಿಂದಾಗಿ 40 ಲಕ್ಷಕ್ಕಿಂತಲೂ ಹೆಚ್ಚು ಯೆಹೋವನ ಸಾಕ್ಷಿಗಳು ಪ್ರಯೋಜನ ಹೊಂದುತ್ತಾ, ತಮ್ಮ ದರ್ಜೆಗಳೊಳಗೆ ಧಾರ್ಮಿಕ ಮತ್ತು ನೈತಿಕ ಶುದ್ಧತೆಯನ್ನು ಹಾಗೂ ಗಮನಾರ್ಹವಾದ ದೈಹಿಕ ಶುದ್ಧತೆಯನ್ನು ಗಳಿಸುತ್ತಿದ್ದಾರೆ.—ಎಫೆಸ 4:22-24.
ಒಂದು ಆತ್ಮಿಕ ಶುದ್ಧಕಾರಕ ಚಟುವಟಿಕೆಗಾಗಿ ಇರುವ ಸಮಯವು ಇಂದೇ ಆಗಿದೆ. ತಕ್ಕ ಸಮಯದಲ್ಲಿ ಒಂದು ದೈಹಿಕ ಶುದ್ಧೀಕರಣ ಚಟುವಟಿಕೆಯು ಭೂವ್ಯಾಪಕವಾಗಿ ಹಿಂಬಾಲಿಸುವುದು, ಮತ್ತು ನಮ್ಮ ಬೀಡಿಗೆ ಅರ್ಹವಾದ ಮಾಲಿನ್ಯ-ರಹಿತ ಪರಿಸರವನ್ನು ಕೊಡುವ ಮೂಲಕ ಅದನ್ನು ಒಂದು ಭೌಗೋಲಿಕ ಕಸದ ತಿಪ್ಪೆಯಾಗುವುದರಿಂದ ರಕ್ಷಿಸುವುದು.—ಪ್ರಸಂಗಿ 3:1.
[ಅಧ್ಯಯನ ಪ್ರಶ್ನೆಗಳು]
a ಪ್ರಾಚ್ಯ ಯೂರೋಪಿನ ಈ ಅಧಿವೇಶನ ಮಾಲೆಗಳ ಕುರಿತ ಸವಿಸ್ತಾರ ವರದಿಗಾಗಿ, ದಶಂಬರ 22, 1991 ರ ಅವೇಕ್! ನೋಡಿರಿ.
b ಇಸ್ರಾಯೇಲ್ಯರಿಗೆ ಅದುರನ್ನು ಕರಗಿಸಿ ಲೋಹಮಾಡುವ ಕಾರ್ಯಗತಿಯ ಪರಿಚಯವಿತ್ತು. ಅವರ ತಾಮ್ರದ ಗನಿಗಳ ಕೆಲವು ಅವಶೇಷಗಳು ಕಂಡುಬಂದಿರುತ್ತವೆ ಮತ್ತು ಆಲಯಕ್ಕಾಗಿ ಸಲಕರಣೆಗಳನ್ನು ತಯಾರಿಸಲು ತಾಮ್ರವನ್ನು ಕರಗಿಸಲಾಗುತ್ತಿತ್ತು. (ಹೋಲಿಸಿರಿ 1 ಅರಸುಗಳು 7:14-46.) ಹೊಗೆ, ಕಿಟ್ಟ, ಮತ್ತು ಕಿಲುಬಿನ ರೂಪದಲ್ಲಿ ಸ್ವಲ್ಪ ಪ್ರಮಾಣದ ಮಾಲಿನ್ಯವನ್ನು ನಿರ್ಮಿಸದ ಹೊರತು ಈ ಕರಗಿಸುವ ಕಾರ್ಯಗತಿಯನ್ನು, ಪ್ರಾಯಶಃ ಬೇರೆ ದುಷ್ಪರಿಣಾಮಗಳಿಲ್ಲದೆ, ಮುಂದುವರಿಸುವುದು ಅಸಂಭವವಾಗಿ ತೋರುತ್ತದೆ. ಆದರೂ ಯೆಹೋವನು ಈ ಅನಿಬಿಡವಾದ ಮತ್ತು ಏಕಾಂತ ಪ್ರದೇಶಕ್ಕೆ ಕಟ್ಟುಪಡಿಸಲ್ಪಟ್ಟ ಅಶುದ್ಧತೆಯ ಚಿಕ್ಕ ಪ್ರಮಾಣವನ್ನು ಸೈರಿಸಲು ಸಿದ್ಧನಿದ್ದನೆಂಬದು ವ್ಯಕ್ತ.