ಪ್ರಮೋದವನವೋ ಅಥವಾ ಕಸದ ತಿಪ್ಪೆಯೋ ಯಾವುದು ನಿಮಗಿಷ್ಟವು?
ಅವನು ಏನಾಗಿದ್ದನೋ ಅದಕ್ಕಿಂತ ಬೇರೆಯಾಗಿ ಅವನನ್ನು ಯಾರೂ ತಪ್ಪು ತಿಳಿಯುವಂತಿರಲಿಲ್ಲ: ವಿಶ್ರಾಂತಿಯನ್ನು ಪಡೆಯಲು ಮತ್ತು ಪ್ರಮೋದವನವನ್ನು ಹೋಲುವ ಒಂದು ಸುಂದರ ದ್ವೀಪದಲ್ಲಿ ಸೂರ್ಯನ ಬಿಸಿಲನ್ನು ಆನಂದಿಸಲು ಆತುರದಿಂದಿದ್ದ ಒಬ್ಬ ಯೂರೋಪಿಯನ್ ಪ್ರವಾಸಿಗನವನು. ಸಮುದ್ರ ತೀರವನ್ನು ಅಂಚುಕಟ್ಟಿರುವ ವಿಸ್ತಾರವಾದ ಮರಳದಿಬ್ಬಗಳನ್ನು ದಾಟುತ್ತಾ, ಬಿಸುಟ ಬಾಟಲಿಗಳು, ಡಬ್ಬಿಗಳು, ಪ್ಲಾಸ್ಟಿಕ್ ಚೀಲಗಳು, ಚ್ಯೂಯಿಂಗ್-ಗಮ್ ಮತ್ತು ಸಿಹಿ ತಿಂಡಿಯ ಹೊದಿಕೆಗಳು, ವೃತ್ತಪತ್ರಗಳು ಮತ್ತು ಪತ್ರಿಕೆಗಳ ತಿಪ್ಪೆಯ ಮಧ್ಯೆ ಅವನು ಜಾಗರೂಕತೆಯಿಂದ ತನ್ನ ದಾರಿಯನ್ನು ಆಯ್ದನು. ತಾನು ತಲಪಲು ಪಯಣಿಸಿದ್ದ ಪ್ರಮೋದವನವು ಇದೆಯೇ ಎಂದವನು ಅಚ್ಚರಿಪಟ್ಟನು, ಸ್ಫುಟವಾದ ಸಿಡುಕಿನಿಂದ.
ನಿಮಗೆ ಇಂತಹದ್ದೇ ಅನುಭವವು ಎಂದಾದರೂ ಆಗಿದೆಯೇ? ಯಾವುದೇ ಪ್ರಮೋದವನದಲ್ಲಿ ರಜಾಕಾಲ ಕಳೆಯುವ ಕುರಿತು ಜನರು ಕನಸುಕಾಣುವುದೂ, ಆದರೆ ಒಮ್ಮೆ ಅಲ್ಲಿ ಹೋದಾಗ, ಅದನ್ನೊಂದು ಸಾಕ್ಷಾತ್ತಾದ ಕಸದ ಕೊಂಪೆಯನ್ನಾಗಿ ಮಾಡುವುದರಲ್ಲಿ ಯಾವ ಅಳುಕೂ ಇಲ್ಲದಿರುವಂತೆ ತೋರುವುದೂ, ಯಾತಕ್ಕೆ?
ಕೇವಲ “ಪ್ರಮೋದವನ” ದಲ್ಲಲ್ಲ
ಸೌಂದರ್ಯ, ಚೊಕ್ಕತನ, ಮತ್ತು ನೈರ್ಮಲ್ಯಕ್ಕಾಗಿ ಈ ಸ್ಫುಟವಾದ ಅಸಡ್ಡೆಯು, ಯಾವುದಕ್ಕೆ ಅನೇಕ ಪ್ರವಾಸಿಗರು ಹಿಂಡು ಹಿಂಡಾಗಿ ಬರುತ್ತಾರೋ ಆ “ಪ್ರಮೋದವನ” ಗಳಿಗೆ ಅಸದೃಶವಲ್ಲ. ಬಹುಮಟ್ಟಿಗೆ ಎಲ್ಲೆಲ್ಲಿಯೂ ಆಧುನಿಕ ಸಮಾಜವು ಮಾಲಿನ್ಯತೆಯಿಂದ ತೀವ್ರವಾಗಿ ಬಾಧಿಸಲ್ಪಟ್ಟಿದೆ. ಹಲವಾರು ಉದ್ಯಮಗಳು ಭಾರಿ ಮೊತ್ತದ ಕಚಡ ಉತ್ಪನ್ನಗಳನ್ನು ನಿರ್ಮಿಸುವ ಮೂಲಕ ಮಹತ್ಪಮ್ರಾಣದಲ್ಲಿ ಮಲಿನಗೊಳಿಸುತ್ತವೆ. ಸರಿಯಾಗಿ ನಿರ್ವಹಿಸದ ವಿಷಕಾರಿ ಕಚಡಗಳು ಮತ್ತು ಅಕಸ್ಮಾತ್ ತೈಲ ಚೆಲ್ಲಿಕೆಗಳು ನಮ್ಮ ಭೂಮಿಯ ವಿಶಾಲ ಪ್ರದೇಶಗಳನ್ನು ಧ್ವಂಸಮಾಡುವ ಬೆದರಿಕೆಹಾಕುತ್ತಾ, ಅದನ್ನು ಜೀವಿತಕ್ಕೆ ಅಯೋಗ್ಯವನ್ನಾಗಿ ಮಾಡಿವೆ.
ಯುದ್ಧಗಳು ಸಹ ಮಲಿನಗೊಳಿಸುತ್ತವೆ. ಲೋಕವು ಅತ್ಯಂತ ಭೀತಿಯಿಂದ ನೋಡುತ್ತಿದ್ದಂತೆ, 1991ರ ಪರ್ಷಿಯನ್ ಖಾರಿ ಯುದ್ಧವು ಒಂದು ಹೊಸ ಆಯಕಟ್ಟನ್ನು ಸೇರಿಸಿತು. ಇರಾಕಿ ಸೇನೆಗಳು ಕುವೈಟಿನ ಸುಮಾರು 600 ತೈಲ ಬಾವಿಗಳಿಗೆ ಬುದ್ಧಿಪೂರ್ವಕವಾಗಿ ಕಿಚ್ಚಿಟ್ಟು, ಒಂದು ಯೂರೋಪಿಯನ್ ವೃತ್ತಪತ್ರವು ವರ್ಣಿಸಿದ ಮೇರೆಗೆ, ಅದನ್ನು “ನರಕದ ಒಂದು ಭವಿಷ್ಯದ್ದರ್ಶನವಾಗಿ” ರೂಪಾಂತರಿಸಿದರು. ಜರ್ಮನ್ ಪತ್ರಿಕೆಯಾದ ಜಿಯೊ ಆ ಘೋರ ದ್ವಂಸವನ್ನು, “ಮಾನವರಿಂದ ಎಂದೂ ನಡಿಸಲ್ಪಟ್ಟ ಅತ್ಯಂತ ಮಹಾ ಪರಿಸರೀಯ ವಿಪತ್ತು” ಎಂಬದಾಗಿ ಹೆಸರಿಸಿತ್ತು.
ಯುದ್ಧದ ಅಂತ್ಯದಲ್ಲಿ, ಒಂದು ಸ್ವಚ್ಛಕಾರಕ ನಿಯೋಗವು ಕೂಡಲೇ ಆರಂಭಿಸಿತು. ಜಲ್ವಿಸುತ್ತಿದ್ದ ತೈಲ ಬಾವಿಗಳನ್ನು ಕೇವಲ ನಂದಿಸುವುದೇ ಅನೇಕ ತಿಂಗಳುಗಳ ಪರಿಶ್ರಮದ ಕೆಲಸವನ್ನು ಆವಶ್ಯಮಾಡಿತು. ಜಾಗತಿಕ ಆರೋಗ್ಯ ಸಂಸ್ಥೆಯು ವರದಿಸಿದ್ದೇನಂದರೆ ಕುವೈಟ್ನಲ್ಲಿ ಅಧಿಕಗೊಂಡ ಮಾಲಿನ್ಯತೆಯು ಅಲ್ಲಿನ ಮರಣದ ಪ್ರಮಾಣವನ್ನು 10-ಪ್ರತಿಶತ ಬೆಳೆಯುವಂತೆ ಮಾಡಬಹುದು.
ಕಡಿಮೆ ಅಪಾಯಕರ ಆದರೆ ಅತಿ ಕೆರಳಿಸುವಂಥಾದ್ದು
ಭಾರಿ-ಪ್ರಮಾಣದ ಪರಿಸರೀಯ ಮಾಲಿನ್ಯತೆಯ ಪ್ರತಿಯೊಂದು ಮುಖ್ಯ ಮತ್ತು ದೂಷಣೀಯ ಉದಾಹರಣೆಗೆ, ಅಲ್ಪ-ಪ್ರಮಾಣದ ಸಾವಿರಾರು ಉದಾಹರಣೆಗಳು ಇವೆ. ತಿಪ್ಪೇಕೀಟಗಳು ಮತ್ತು ಗೀಚು ಬರಹ “ಕಲಾಕಾರರು” ಕಡಿಮೆ ಅಪಾಯಕರ ಮಾಲಿನ್ಯಗಾರರಾಗಿರಬಹುದು, ಆದರೆ ಪ್ರಮೋದವನವಾಗುವ ಅದರ ಸಂಭಾವ್ಯತೆಯನ್ನು ಈ ಭೂಗ್ರಹದಿಂದ ಅಪಹರಿಸಲು ಅವರು ಮತ್ತೂ ನೆರವಾಗುತ್ತಾರೆ.
ಕೆಲವು ಸ್ಥಳಗಳಲ್ಲಿ ಗೀಚು ಬರಹಗಳು ಎಷ್ಟು ಸರ್ವಸಾಮಾನ್ಯವಾಗಿವೆಯೆಂದರೆ ನಾಗರಿಕರು ಅವನ್ನು ಇನ್ನು ಮುಂದೆ ಕೊಂಚವೂ ಗಮನಿಸದವರಾಗಿದ್ದು, “ಗೀಚು ಬರಹಾಂಧರು” ಆಗಿದ್ದಾರೆ. ಅವು ಭೂಗತ ರೈಲ್ವೇ ಬಂಡಿಗಳಲ್ಲಿ, ಕಟ್ಟಡಗಳ ಗೋಡೆಗಳಲ್ಲಿ, ಮತ್ತು ದೂರವಾಣಿಗೂಡುಗಳಲ್ಲಿ ಇವೆ. ಗೀಚು ಬರಹಗಳು ಇನ್ನು ಮುಂದೆ ಸಾರ್ವಜನಿಕ ಶೌಚಾಲಯಗಳ ಗೋಡೆಗಳಿಗೆ ಬಂಧಿತವಾಗಿಲ್ಲ.
ಕೆಲವು ಪಟ್ಟಣಗಳಾದರೋ ಶಿಥಿಲವಾಗಿ ಹೋಗಿರುವ ಮತ್ತು ಹಾಳುಬಿದ್ದ ಕಟ್ಟಡಗಳಿಂದ ತುಂಬಿಹೋಗಿವೆ. ಜನನಿವಾಸದ ಕ್ಷೇತ್ರಗಳು ಅಶುಚಿಯಾದ ಮನೆಗಳಿಂದ ಮತ್ತು ಹಿತ್ತಲುಗಳಿಂದ ಹಾಳುಗೆಡವಲ್ಪಟ್ಟಿವೆ. ಒಡಕು ಮೋಟಾರು ಕಾರುಗಳು, ಬಿಸುಟ ಯಂತ್ರ ಭಾಗಗಳು, ಮುರುಕಲು ಗುಪ್ಪೆಗಳು, ಅನ್ಯಥಾ ಆಹ್ಲಾದಕರವಾಗಿರುವ ಆಕರ್ಷಕ ಹೊಲಮನೆಯ ಅಂಗಳಗಳನ್ನು, ಓರಣವಿಲ್ಲದ್ದಾಗಿ ಮಾಡಿವೆ.
ಕೆಲವು ವರ್ತುಲಗಳಲ್ಲಿ ಜನರು ಅಶುದ್ಧವೂ ಅಸ್ತವ್ಯಸ್ತವೂ ಆದ ಮೈಗಳುಳ್ಳ ವಿಷಯದಲ್ಲಿ ಪರಿವೆಯಿಲ್ಲದವರಾಗಿ ತೋರುತ್ತಾರೆ. ಉಡುಪು ಮತ್ತು ತಲೆಗೂದಲಿನ ವಿಷಯದಲ್ಲಿ ಒರಟೊರಟಾದ ತೋರಿಕೆಯನ್ನು ಪ್ರದರ್ಶಿಸುವುದು ಸ್ವೀಕರಣೀಯವಾಗಿರಬಹುದು ಮಾತ್ರವೇ ಅಲ್ಲ ಸೊಗಸುಗಾರಿಕೆಯೂ ಆಗಿರಬಹುದು. ಯಾರು ನೀಟುತನ ಮತ್ತು ಚೊಕ್ಕತನವನ್ನು ಗಣ್ಯಮಾಡುತ್ತಾರೋ ಅವರು ಆಶಾರಹಿತ ಹಳೆಯ ಶೈಲಿಯವರಾಗಿ ವೀಕ್ಷಿಸಲ್ಪಡುತ್ತಾರೆ.
ಎಂಥ ಪ್ರಚಂಡವಾದ ಕೆಲಸ!
ನಮ್ಮ ಐಹಿಕ ಬೀಡಿನ ಕಡಲ ತೀರಗಳನ್ನು, ವನಗಳನ್ನು, ಮತ್ತು ಪರ್ವತಗಳನ್ನು, ನುಣುಪಿನ ಹೊಳಪುಳ್ಳ ಪ್ರವಾಸಿಗ ಪತ್ರಿಕೆಗಳ ರಕ್ಷಾವರಣಗಳಲ್ಲಿರುವ ಪ್ರಮೋದವನೀಯ ಚಿತ್ರಗಳಾಗಿ ರೂಪಾಂತರಿಸಲಿಕ್ಕೆ ಎಂಥ ಪ್ರಚಂಡವಾದ ಸ್ವಚ್ಛಕಾರಕ ಚಟುವಟಿಕೆಯು ಅಗತ್ಯವಾಗಿರುವುದು—ಅದಲ್ಲದೆ ಶಹರಗಳಿಗೆ, ಊರುಗಳಿಗೆ, ಹೊಲಗಳಿಗೆ ಮತ್ತು ಸ್ವತಃ ಜನರಿಗೆ ಮಾಡಲ್ಪಡಬೇಕಾದದ್ದು ಬೇರೆ!
ಮೇಲೆ ತಿಳಿಸಿದ ಪ್ರವಾಸಿಗನು, ತದನಂತರ ಸ್ವಲ್ಪ ಹೊತ್ತಿನ ಮೇಲೆ ಸ್ವಚ್ಛಗೊಳಿಸುವ ಒಂದು ತಂಡವು ಆ ಮುರುಕಲುಗಳ ದೊಡ್ಡ ಭಾಗಗಳನ್ನು ಎತ್ತುವುದನ್ನು ಕಂಡು ಸಂತಸಗೊಂಡನು. ಆದರೂ ಅವರು, ಮುರಿದ ಗಾಜಿನ ಚೂರುಗಳನ್ನು, ಮುಚ್ಚಳಗಳನ್ನು, ಡಬ್ಬಿಗಳ ತೆರೆಪಟ್ಟಿಗಳನ್ನು ಮತ್ತು ಅನೇಕಾನೇಕ ಸಿಗರೇಟು ಕೊನೆಗಳನ್ನು ಹಿಂದೆಬಿಟ್ಟು ಹೋಗಿದ್ದರು. ಹೀಗೆ ಸ್ವಚ್ಛಗೊಳಿಸಿದ ಅನಂತರವೂ, ಆ ಭೂದೃಶ್ಯವು ಪ್ರಮೋದವನಕ್ಕಿಂತ ಕಸದ ತಿಪ್ಪೆಗೆ ಹೆಚ್ಚು ನಿಕಟ ಸಂಬಂಧದಲ್ಲಿದ್ದ ಹೇರಳವಾದ ಪುರಾವೆಯು ಇನ್ನೂ ಅಲ್ಲಿತ್ತು.
ಭೂಗ್ರಹವನ್ನು ಒಂದು ಭೌಗೋಲಿಕ ಕಸದ ತಿಪ್ಪೆಯಾಗುವುದರಿಂದ ರಕ್ಷಿಸಲು, ಒಂದು ಭೌಗೋಲಿಕ ಶುದ್ಧೀಕರಣವು ಇಂಥ ದೂಷ್ಯ ಲವಲೇಶಗಳನ್ನೆಲ್ಲಾ ನಿರ್ಮೂಲಗೊಳಿಸುವುದನ್ನು ಆವಶ್ಯಪಡಿಸುವುದು. ಅಂಥ ಒಂದು ಸ್ವಚ್ಛಗೊಳಿಸುವಿಕೆ ಸಂಭವಿಸುವುದೆಂಬ ಯಾವ ಪ್ರತೀಕ್ಷೆಗಳಾದರೂ ಇವೆಯೋ? ಹಾಗಿದ್ದರೆ, ಅದು ಹೇಗೆ? ಅದನ್ನು ನಿರ್ವಹಿಸುವವರು ಯಾರು? ಯಾವಾಗ?