ಮುಂದಿರುವ ಶುದ್ಧ ಭೂಮಿಯಲ್ಲಿ ಉಲ್ಲಾಸಿಸಿರಿ!
ಸುವ್ಯವಸ್ಥೆ ಮತ್ತು ಶುದ್ಧತೆಯ ದೇವರಾದ ಯೆಹೋವನು ಈ ಭೂಮಿಯನ್ನು ಒಂದು ಭೌಗೋಲಿಕ ಪ್ರಮೋದವನವನ್ನಾಗಿ ಮಾಡುವ ತನ್ನ ಮೂಲ ಉದ್ದೇಶವನ್ನು ನೆರವೇರಿಸಲಿರುವನೆಂಬದಕ್ಕಾಗಿ ನಾವೆಷ್ಟು ಸಂತೋಷಪಡಬಲ್ಲೆವು! (ಯೆಶಾಯ 11:6-9) ಆತನು ವಾಗ್ದಾನಿಸುವುದು: “ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂತಿರುಗುವದಿಲ್ಲ.” “ದೇವರು ಸುಳ್ಳಾಡ ಸಾಧ್ಯವಿಲ್ಲ” ದವನಾಗಿರಲಾಗಿ, ಈ ಮಾತುಗಳು ತಿರುಳಿಲ್ಲದವುಗಳಲ್ಲ.—ಯೆಶಾಯ 55:11; ಇಬ್ರಿಯ 6:18.
ಜೀವ ಪರಿಸ್ಥಿತಿ ಶಾಸ್ತ್ರವು ಪೂರ್ಣ ಕುಸಿದುಹೋಗುವುದನ್ನು ನಿಲ್ಲಿಸಲಾಗದಷ್ಟು ಹೆಚ್ಚು ಮಾಲಿನ್ಯವನ್ನು ಮಾನವರು ಗೈಯುವ ಮುಂಚೆ, ಯೆಹೋವನು ಪ್ರೀತಿಯಿಂದ ಮಧ್ಯಸಿಕ್ಥೆ ಮಾಡಲಿರುವುದರಿಂದಾಗಿ ನಾವು ಉಪಶಮನ ಹೊಂದಬಲ್ಲೆವು!—ಪ್ರಕಟನೆ 11:18.
ಯೆಹೋವನು ಪಶ್ಚಾತ್ತಾಪಪಡದ, ಸ್ವೈರಾಚಾರಿ ಮಾಲಿನ್ಯಗಾರರನ್ನು ಮತ್ತು ಸುವ್ಯವಸ್ಥೆ ಮತ್ತು ಶುದ್ಧತೆಯ ಆತನ ಸೂತ್ರಗಳನ್ನು ಅವಿಧೇಯತೆಯಿಂದ ಅಸಡ್ಡೆಮಾಡುವ ವ್ಯಕ್ತಿಗಳನ್ನು ತೆಗೆದುಹಾಕುವನು. ಪುನ: ಸ್ಥಾಪಿತ ಪ್ರಮೋದವನವನ್ನು ಅಪಾಯಕ್ಕೊಡ್ಡಲು ಯಾರಿಗೂ ಅನುಮತಿ ಕೊಡಲ್ಪಡದು.—ಜ್ಞಾನೋಕ್ತಿ 2:20-22.
ದೇವರ ರಾಜ್ಯಾಡಳಿತದ ಸಮಯದಲ್ಲಿ, ಕ್ರಿಸ್ತ ಯೇಸುವಿನ ಮಾರ್ಗದರ್ಶನದ ಕೆಳಗೆ, ದೈಹಿಕ ಮಾಲಿನ್ಯದ ಉಳಿದಿರುವ ಯಾವುದೇ ಮೂಲಗಳನ್ನು ನಿರ್ಮೂಲಗೊಳಿಸುವುದು ಹೇಗೆಂದು ಮಾನವರಿಗೆ ಕಲಿಸಲ್ಪಡುವುದು. ಆಗ ಮಾತ್ರವೇ—ಈಗ ಅಲ್ಲ—ಒಂದು ಅಭೂತಪೂರ್ವ ಭೌಗೋಲಿಕ ಶುದ್ಧೀಕರಣಕ್ಕೆ ನೆರವಾಗುವ ವೈಯಕ್ತಿಕ ಮತ್ತು ಸಾಮುದಾಯಿಕ ಕಾರ್ಯಕ್ರಮದಲ್ಲಿ ದೇವರ ಎಲ್ಲಾ ಸೇವಕರು ಕ್ರಿಯಾಶೀಲತೆಯಿಂದ ಒಳಗೂಡುವುದು ಆಜ್ಞಾರ್ಥಕವಾಗಿರುವುದು.—ಹೋಲಿಸಿರಿ ಯೆಹೆಜ್ಕೇಲ 39:8-16.
ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ಪಾರಾಗುವವರು, ಇಂದಿನ ಆತ್ಮಿಕ ಶುದ್ಧೀಕರಣ ಚಟುವಟಿಕೆಯಲ್ಲಿ ಅವರು ಭಾಗವಹಿಸುವ ಅದೇ ಸಮರ್ಪಣೆ ಮತ್ತು ಉತ್ಸಾಹದೊಂದಿಗೆ, ಈ ಶಾರೀರಿಕ ಶುದ್ಧೀಕರಣದ ಕಾರ್ಯಕ್ರಮಕ್ಕೆ ಬೆಂಬಲವನ್ನು ಕೊಡುವರು.—ಕೀರ್ತನೆ 110:3.
ಎಲ್ಲಾ ಸಮಯಗಳಲ್ಲಿ ನಡೆದ ಶುದ್ಧೀಕರಣಗಳಲ್ಲಿ ಅತಿ ಮಹತ್ತಾದ ಚಟುವಟಿಕೆಯಿಂದ ಮುಮ್ಮೊನೆಯಾಗಿ, ದೇವರ ರಾಜ್ಯದಿಂದ ಪೂರೈಸಲ್ಪಡುವ ಈ ಶುದ್ಧಮಾಡಲ್ಪಟ್ಟ ಭೂಮಿಯು ಬಂದೇ ತೀರುವುದು. ಮಾಲಿನ್ಯತೆಯ ಎಲ್ಲಾ ಕುರುಹುಗಳು ತೆಗೆದುಹಾಕಲ್ಪಡುವುವು. ಎಲ್ಲಿಯೂ ಯಾವ ಗೀಚು ಬರಹವಿಲ್ಲ. ಕಡಲ ತೀರವನ್ನು ಅಥವಾ ಪ್ರಮೋದವನೀಯ ಸ್ಥಳಗಳನ್ನು ತುಂಬಿರುವ ಬಿಸುಟ ಬಾಟಲಿಗಳು, ಡಬ್ಬಿಗಳು, ಪ್ಲಾಸ್ಟಿಕ್ ಚೀಲಗಳು, ಚ್ಯೂಯಿಂಗ್-ಗಮ್ ಮತ್ತು ಸಿಹಿತಿಂಡಿಯ ಹೊದಿಕೆಗಳು, ವೃತ್ತಪತ್ರಗಳು ಮತ್ತು ಪತ್ರಿಕೆಗಳು ಇನ್ನಿರವು.
ಮುಂದಿರುವ ಆ ಶುದ್ಧ ಭೂಮಿಯಲ್ಲಿ ಉಲ್ಲಾಸಿಸಿರಿ!
[ಪುಟ 7 ರಲ್ಲಿರುವ ಚಿತ್ರ]
ಬರಲಿರುವ ಭೌಗೋಲಿಕ ಶುದ್ಧೀಕರಣದಲ್ಲಿ ನೀವು ಭಾಗವಹಿಸಲಿರುವಿರೋ?