ದಕ್ಷಿಣ ಆಫ್ರಿಕದ ಹಳ್ಳಿಗಳಿಗೆ ಸುವಾರ್ತೆ ತಲಪುತ್ತದೆ
ಕೆರಳಿದ ದೊಂಬಿ, ದಂಗೆ ಪೊಲೀಸ್ ಪಡೆ, ಅಶ್ರುವಾಯು. ಇಂಥ ಗಲಭೆಗಳಿಂದ ದಕ್ಷಿಣ ಆಫ್ರಿಕದ ಶಹರಗಳು ಇತ್ತೀಚಿನ ವರ್ಷಗಳಲ್ಲಿ ಭಗ್ನಗೊಂಡಿರುತ್ತವೆ. ಎಲ್ಲಿ ಜನಸಂಖ್ಯೆಯ 40 ಪ್ರತಿಶತ ಜನರು ವಾಸಿಸುತ್ತಾರೋ ಆ ಸುಂದರವಾದ ಗ್ರಾಮೀಣ ಕ್ಷೇತ್ರಗಳು ಸಹಾ ರಾಜಕೀಯ ಹಿಂಸಾಚಾರದ ಹಾವಳಿಯನ್ನು ಪಾರಾಗಿಲ್ಲ. ಆದರೂ, ಇವೆಲ್ಲವುಗಳ ಮಧ್ಯೆ, ಯೆಹೋವನ ಸಾಕ್ಷಿಗಳು “ಸಮಾಧಾನದ ವಿಷಯವಾದ ಸುವಾರ್ತೆಯನ್ನು” ಅಲ್ಲಿ ಸಾರುತ್ತಾ ಇದ್ದಾರೆ.—ಎಫೆಸ 6:15.
ವರ್ಷಗಳಿಂದ ಸಾಕ್ಷಿಗಳು ವಿಶಿಷ್ಟವಾಗಿ ಗ್ರಾಮೀಣ ಜನತೆಯನ್ನು ಲಕ್ಷ್ಯದಲ್ಲಿಟ್ಟು, ವಾರ್ಷಿಕವಾಗಿ ಮೂರು ತಿಂಗಳ ಸಾರುವ ಚಟುವಟಿಕೆಯನ್ನು ಅಲ್ಲಿ ನಡಿಸುತ್ತಲಿದ್ದರು. ಉದಾಹರಣೆಗೆ, 1990ರಲ್ಲಿ 334 ಸಭೆಗಳಿಂದ 12,000ಕ್ಕಿಂತಲೂ ಹೆಚ್ಚು ರಾಜ್ಯ ಪ್ರಚಾರಕರು ಈ ಚಟುವಟಿಕೆಯಲ್ಲಿ ಭಾಗವಹಿಸಿದ್ದರು. ಸಹಜವಾಗಿಯೇ, ದಕ್ಷಿಣ ಆಫ್ರಿಕದ ಈ ಚದರಿರುವ ಗ್ರಾಮೀಣ ನಿವಾಸಿಗಳನ್ನು ತಲಪಲು ಅನೇಕ ಅಡ್ಡಿತಡೆಗಳನ್ನು ಪರಿಹರಿಸಲಿಕ್ಕಿತ್ತು.
ಬೇರೆ ವಿಷಯಗಳಲ್ಲದೇ, ಹಲವಾರು ವಿಧದ ಸಂಸ್ಕೃತಿಗಳು ಮತ್ತು ಭಾಷೆಗಳೊಂದಿಗೆ ಸಾಕ್ಷಿಗಳಿಗೆ ವ್ಯವಹರಿಸಲಿಕ್ಕಿದೆ. ಮತ್ತು ಎಂಥಾ ವೈವಿಧ್ಯತೆಯ ಮಿಶ್ರಣವದು! ದೃಷ್ಟಾಂತಕ್ಕಾಗಿ, ಇಂಗ್ಲಿಷ್- ಮತ್ತು ಆಫ್ರಿಕಾನ್ಸ್- ಭಾಷೆಯನ್ನಾಡುವ ರೈತರು, ಹಾಗೂ ಪೇಡಿಗಳು, ಸೊತೊಗಳು, ಟ್ಸೊಂಗಾಗಳು, ಟ್ಸವಾನರು, ವೆಂಡರು, ಕೋಝರು ಮತ್ತು ಝೂಲುಗಳು. ಮತ್ತು ಈ ಪ್ರತಿಯೊಂದು ಗುಂಪಿಗೆ ಅದರದ್ದೇ ಆದ ಪ್ರತ್ಯೇಕ ಸಂಸ್ಕೃತಿ ಮತ್ತು ಭಾಷೆಯು ಇದೆ. ದೂರದೂರದ ಪ್ರಯಾಣಗಳು ಮತ್ತು ಉಬ್ಬುತಗ್ಗುಗಳ ದಾರಿಗಳು ಅಲ್ಲಿವೆ. ಇವೆಲ್ಲವೂ ಆತ್ಮ-ತ್ಯಾಗದ ಭಾವವನ್ನು ಮತ್ತು ಬಹಳಷ್ಟು ಹಣ ಮತ್ತು ಸಮಯದ ವ್ಯಯವನ್ನು ಅವಶ್ಯಪಡಿಸಿದೆ. ಆದರೆ ಮಾಡಲ್ಪಟ್ಟ ಪ್ರಯತ್ನಗಳನ್ನು ಯೆಹೋವನು ವಿಪುಲವಾಗಿ ಆಶೀರ್ವದಿಸಿದ್ದಾನೆ. ಈ ಸಾರುವ ಕಾರ್ಯದ ಅಸದೃಶ್ಯ ವೈಶಿಷ್ಟ್ಯದ ಕಷ್ಟದೆಸೆ ಮತ್ತು ಸಾಫಲ್ಯಗಳ ಕುರಿತು ನಾವು ನಿಮಗೆ ತಿಳಿಸಲಿದ್ದೇವೆ.—ಮಲಾಕಿಯ 3:10, ಹೋಲಿಸಿ.
ಝೂಲುಲ್ಯಾಂಡಿನ “ಸಂಡೇ ಸ್ಕೂಲ್”
ಅರೆಉಷ್ಣವಲಯವಾದ ಝೂಲು ದೇಶದ ಮಧ್ಯದಲ್ಲಿ ಅಮ್ವೊಟ್ ನದಿಯ ಇಳುಕಾದ ತಗ್ಗುಪ್ರದೇಶವು ನೆಲೆಸಿದೆ. ಪ್ರಪಾತದಿಂದ ನೋಡಿದಲ್ಲಿ, ದೂರದಲ್ಲಿ ಝೂಲು ಗುಡಿಸಲ ಗುಂಪುಗಳು ವಿಸ್ತಾರವಾಗಿ ಹರಡಿರುವದನ್ನು ಒಬ್ಬನು ಕಾಣಬಹುದು. 1984ರ ಒಂದು ಭಾನುವಾರ, ಇಬ್ಬರು ರಾಜ್ಯ ಪ್ರಚಾರಕರು ತಿರುವುಮುರುವಾದ, ಧೂಳುತುಂಬಿದ ರಸ್ತೆಯನ್ನು ಹಿಡಿದು ಆ ತಗ್ಗಿನೊಳಗೆ ಪ್ರವೇಶಿಸಿದರು. ಅಲ್ಲಿ ಎಷ್ಟು ಬಿಸಿಹವೆ ಮತ್ತು ತೇವವಿತ್ತೆಂದರೆ ಅದಕ್ಕೆ ಕ್ವಾ-ಸಟಾನ್ (ಸೈತಾನನ ಸ್ಥಾನ) ಎಂಬ ಅಡಹ್ಡೆಸರಿತ್ತು; ಪಿಶಾಚನಿಂದ ಹೊತ್ತಿಸಲ್ಪಟ್ಟ ನರಕಾಗ್ನಿ ಎಂಬ ಸುಳ್ಳು ಬೋಧನೆಗೆ ಸೂಚನೆಯೆಂಬದು ಸ್ಫುಟ!
ಬೆವರಿನಿಂದ ಒದೆಯ್ದಾಗಿ ಹೋಗಿದ್ದ ಸಹೋದರರು, ಸಂಡೇ ಸ್ಕೂಲಿನ ಒಂದು ವರ್ಗವನ್ನು ನಡಿಸುತ್ತಿದ್ದ ಡಾರಿಸ್ ಎಂಬ ಮಹಿಳೆಯನ್ನು ಗೋಚರಿಸಿದರು. ರಾಜ್ಯ ಸಂದೇಶವನ್ನು ಕೇಳಿದ ಅನಂತರ ಕೂಡಲೇ ಡಾರಿಸ್ ತನ್ನ ಗುಂಪಿನ ಸುಮಾರು 40 ಎಳೆಯರಿಗೆ ಭಾಷಣಕೊಡುವಂತೆ ಸಾಕ್ಷಿಗಳನ್ನು ಆಮಂತ್ರಿಸಿದಳು. ಫಲಿತಾಂಶ? ಮುಂದಿನ ವಾರ ಸಹೋದರರು ಸ್ಥಳೀಕ ಶಾಲೆಯ ಉಪಯೋಗಕ್ಕಾಗಿ ಮೈ ಬುಕ್ ಆಫ್ ಬೈಬಲ್ ಸ್ಟೋರಿ ಪುಸ್ತಕದ 70 ಪ್ರತಿಗಳನ್ನು ತಂದಿದ್ದರು. ಕೆಲವೇ ವಾರದೊಳಗೆ ಸಂಡೇ ಸ್ಕೂಲ್ ಪರಿಸರವು ಬೈಬಲ್ ಅಧ್ಯಯನದ ಗುಂಪಾಗಿ ಮಾರ್ಪಾಟು ಹೊಂದಿತ್ತು. ಚರ್ಚ್ ಗೀತಗಳ ಬದಲಾಗಿ ರಾಜ್ಯ ಸಂಗೀತಗಳು ಆಫ್ರಿಕಾನ್ ತರಹದ, ರಮ್ಯವಾದ ನೈಸರ್ಗಿಕ ಸರ್ವಮೇಳದೊಂದಿಗೆ ಹಾಡಲ್ಪಟ್ಟವು. ಬೇಗನೇ ಗುಂಪು 60ಕ್ಕೆ ಬೆಳೆಯಿತು. ಒಬ್ಬ ಸಹೋದರನು ಉದ್ಗಾರವೆತ್ತಿದ್ದು: “ಈ ಸಂಡೇ ಸ್ಕೂಲನ್ನು ಸತ್ಯಾರಾಧನೆಯ ಸ್ಥಳವಾಗಿ ಮಾರ್ಪಡಿಸಿದರ್ದಲ್ಲಿ ಪಾಲಿಗರಾದದ್ದು ಎಂಥ ಹುರಿದುಂಬಿಸುವ ಅನುಭವ!”
ಧೂಳುತುಂಬಿದ ಬುಶ್ಫೆಲ್ಟ್
ರಾಜಕೀಯ ಅಶಾಂತಿಯಲ್ಲಿ ಚರ್ಚುಗಳ ಒಳಗೂಡಿದ್ದ ಕಾರಣ ಅನೇಕ ಬಿಳಿಯ ರೈತರು ಬೈಬಲ್ ಸಂದೇಶವನ್ನು ತರುವ ಯಾರನ್ನಾದರೂ ಬಲು ಜೋಕೆಯಿಂದ, ಸಂಶಯದಿಂದ ಸಹಾ ನೋಡುತ್ತಿದ್ದರು. ಟ್ರಾನ್ಸ್ವಾಲ್ನ ಒಂದು ಭಾಗದಲ್ಲಿ ಸುವಾರ್ತೆಯನ್ನು ಸಾರಲು ಸುಮಾರು 640 ಕಿಲೊಮೀಟರ್ ಪ್ರಯಾಣಿಸಿದ ಜೊಹಾನೆಸ್ಬರ್ಗಿನ ಒಂದು ಗುಂಪಿನ ಈ ವರದಿಯನ್ನು ಗಮನಿಸಿರಿ.
“ಉತ್ತರಕ್ಕೆ ಹರಡಿರುವ ಪೊದೆಗಾಡಿನ ಆಚೇಕಡೆ ಸುಮಾರು ನಾಲ್ಕು ತಾಸುಗಳಿಂದ ನಾವು ಪ್ರಯಾಣಿಸುತ್ತಿದ್ದೆವು. ಆಫ್ರಿಕನ್ ಸೂರ್ಯನ ಕೆಳಗೆ ಕಂಗೊಳಿಸುತ್ತಾ ನೇರಪಥದಲ್ಲಿ ನಾಟ್ಯವಾಡುತ್ತಿತ್ತು ಒಂದು ಮೃಗಜಲ. ದಿಢೀರನೇ ಟಾರ್ರಸ್ತೇಯ ಅಂತ್ಯ ಮತ್ತು ಕುಳಿಗುಂಡಿಗಳು ತುಂಬಿರುವ ಕೆಸರಕೊಚೆಯ್ಚ ಹಾದಿ ಆರಂಭಿಸುತ್ತದೆ. ಕಟ್ಟಕಡೆಗೆ, ಒಂದು ಹೊಯ್ಗೆತುಂಬಿದ ಒಳದಾರಿಯು ಒಂದು ಹೊಲಮನೆಯ ಕಡೆಗೆ ನಮ್ಮನ್ನು ನಡಿಸಿತು.
“‘ನಮಸ್ಕಾರ, ಮೆನಿಯರ್ [ಸರ್]’ ಎಂದೆವು ನಾವು ದೃಢಕಾಯ ರೈತನೊಬ್ಬನನ್ನು ವಂದಿಸುತ್ತಾ.
“‘ನಮಸ್ಕಾರ’ ಎಂದು ಬರುತ್ತದೆ ಒರಟು ಉತ್ತರ. ‘ನಿಮಗೇನಾದರೂ ಬೇಕೊ?’
“ನಮ್ಮ ಪರಿಚಯವನ್ನು ಹೇಳಿದ ನಂತರ, ನಮ್ಮ ಸಂದರ್ಶನೆಯ ಉದ್ದೇಶವನ್ನು ನಾವು ತಿಳಿಸುತ್ತೇವೆ. ಮಾತುಗಳು ಬಾಯಿಯಿಂದ ಹೊರಬರುವದೇ ತಡ ಅವನ ಕಿರಿಚಾಟ ಸುರು: “ನನ್ನ ಡ್ಯುಮೀನಿ [ಪಾದ್ರಿ] ನಿಮ್ಮ ಕುರಿತು ನನ್ನನ್ನು ಎಚ್ಚರಿಸಿದ್ದಾನೆ. ನೀವೆಲ್ಲರೂ ಕಮ್ಯೂನಿಸ್ಟರು ಮತ್ತು ಕ್ರಿಸ್ತ ವಿರೋಧಿಗಳು. ನನ್ನ ವಠಾರದಿಂದ ಈ ಕೂಡಲೇ ಹೊರಡಿರಿ, ಇಲ್ಲವಾದರೆ ನಾನು . . . ’!
“ಆ ರೈತನು ನಿಂತ ರೀತಿಯು ಅವನು ಯಾವುದೇ ಕ್ಷಣ ಹಿಂಸಾಚಾರಕ್ಕಿಳಿದಾನೆಂದು ಸೂಚಿಸಿತು. ಬೇರೇನನ್ನೂ ಮಾಡಲು ತೋಚದೆ, ನಾವು ‘ಕಾಲಿಗೆ ಹತ್ತಿದ ಧೂಳನ್ನು ಝಾಡಿಸಿ’ ಅಲ್ಲಿಂದ ಹೋಗಲು ನಿರ್ಣಯಿಸಿದೆವು. (ಮತ್ತಾಯ 10:14) ಅದನ್ನು ತೀರಾ ಅಕ್ಷರಶಃ ಮಾಡಲು ಸಹಾ ಸಾಕಷ್ಟು ಧೂಳು ಅಲ್ಲಿದೆ.
“ಮುಂದಿನ ಹೊಲಮನೆಯಲ್ಲಿಯೂ ಅದೇ ರೀತಿಯ ಪ್ರತಿವರ್ತನೆ ದೊರೆಯಿತು. ಅನಂತರ ನಮಗೆ ಮನವರಿಕೆ ಆಯಿತೇನಂದರೆ ಅಲ್ಲಿನ ಡಚ್ ರಿಫಾರ್ಮ್ಡ್ ಚರ್ಚಿನ ಪಾದ್ರಿಯು ಸ್ಥಳೀಕ ಟೆಲಿಫೋನ್ ಲೈನನ್ನು ಕಾರ್ಯಮಗ್ನವಿಟ್ಟು ನೆರೆಕರೆಯಲ್ಲಿ ಆಗಲೇ ಬರಲಿದ್ದ ಈ ‘ಅಪಾಯ’ದ ಕುರಿತು ತನ್ನ ‘ಹಿಂಡನ್ನು’ ಎಚ್ಚರಿಸುತ್ತಿದ್ದನು ಎಂಬದಾಗಿ. ಕೊನೆಗೆ, ನಮಗೊಬ್ಬ ರೈತನು ಸಿಕ್ಕಿದನು, ಅವನಿಗೆ ಸಥ್ವಃ ಆಸಕ್ತಿ ಇರಲಿಲ್ಲ, ಆದರೂ, ‘ಸರಿ, ನನ್ನ ಕೆಲಸದವರೊಂದಿಗೆ ನೀವು ಮಾತಾಡಬಹುದು.’ ಎನ್ನುತ್ತಾನೆ.
“ನಾವು ಕಾಯುತ್ತಿದ್ದದ್ದೂ ಅದಕ್ಕೆನೇ. ಕೆಲವು ಜಾಲೀಮರಗಳ ಪಕ್ಕದಲ್ಲಿ ಒತ್ತೊತ್ತಾಗಿ ಹಾಕಲ್ಪಟ್ಟ ಸುಮಾರು ಹತ್ತು ಬಡ ಗುಡಿಸಲುಗಳು. ಗುಡಿಸಲೆಡೆಗಳಿಂದ ಕುತೂಹಲಭರಿತ ಕಣ್ಣುಗಳು ಇಣಿಕಿನೋಡುತ್ತಿದ್ದಾಗ, ನಾವಾದರೂ ನಮ್ಮ ಕಾರಿನ ಕೀಲುಮುಚ್ಚಳದ ಮೇಲೆ ಸಾಹಿತ್ಯಗಳನ್ನು ಓರಣವಾಗಿ ಹೇರಿದೆವು. ಬೈಬಲಿನ ಒಂದು ರಾಶಿ, ಯು ಕ್ಯಾನ್ ಲಿವ್ವ್ ಫಾರೆವರ್ ಇನ್ ಪಾರೆಡೈಸ್ ಆನ್ ಅರ್ಥ್ ಪುಸ್ತಕದ ಒಂದು ರಾಶಿ, ಮತ್ತು ವೆ ಬುಕ್ ಆಫ್ ಬೈಬಲ್ ಸ್ಟೋರಿಸ್ನ ಇನ್ನೊಂದು ರಾಶಿ ಮತ್ತು ಹಲವಾರು ಬ್ರೊಷರ್ಗಳು ಹೇರಲ್ಪಟ್ಟಾಗ ಪ್ರದರ್ಶನ ಪೂರ್ತಿಗೊಂಡಿತು. ಸ್ಥಳೀಕ ಹುಡುಗನೊಬ್ಬನು ಓಡಿಹೋಗಿ ನಮ್ಮ ಆಗಮನದ ಕುರಿತು ಹಳ್ಳಿಗರಿಗೆ ತಿಳಿಸುತ್ತಾನೆ. ಅಷ್ಟರಲ್ಲೇ ಸುಮಾರು 30 ಮಂದಿಯ ಗುಂಪು ಬಂದು ನಮ್ಮ ಕಾರಿನ ಸುತ್ತಲೂ ಸಂದೇಶ ಕೇಳಲು ನಿಂತಿದ್ದರು.
“ಟ್ಸಾವನ ಭಾಷೆಯಲ್ಲಿ ಮೊದಲೇ ರೆಕಾರ್ಡ್ ಮಾಡಿದ್ದ ಭಾಷಣವನ್ನು ಅವರಿಗೆ ನುಡಿಸಲಾಯಿತು. ದೇವರ ರಾಜ್ಯದ ಸುವಾರ್ತೆಯನ್ನು ಮತ್ತು ಪರದೈಸದ ನಿರೀಕ್ಷೆಯನ್ನು ತಮ್ಮ ಸ್ವಂತ ಭಾಷೆಯಲ್ಲಿ ಕೇಳಲು ಅವರೆಷ್ಟು ಸಂತೋಷಿಸಿದರು! ಪ್ರಕಾಶನಗಳು ನೀಡಲ್ಪಟ್ಟಾಗ ಉತ್ಸಾಹದ ವಟಗುಟ್ಟುವಿಕೆ ಆರಂಭಿಸಿತು. ತುಸು ಹೊತ್ತಿನಲ್ಲೇ ನೀಡುವಿಕೆಗಳನ್ನು ಕೊಟ್ಟುಕೊಳ್ಳಲು ಸಮಯವಿರಲಿಲ್ಲ. ಒಬ್ಬ ಮುದುಕನು ಟೇಪ್ರೆಕಾರ್ಡಿಗೂ ಕ್ರಯ ಮಾಡಿದನು. ಸುವಾರ್ತೆಗಾಗಿ ಗಣ್ಯತೆಯು ಎಷ್ಟೋ ಚಿಕ್ಕಪುಟ್ಟ ವಿಧಗಳಲ್ಲಿ—ನಾಚಿದ ನಸುನಗು, ಒಂದು ಸ್ಪರ್ಶ, ಮೃದುವಾಗಿ ನುಡಿದ ‘ಉಪಕಾರ’ ಇತ್ಯಾದಿಗಳಲ್ಲಿ ವ್ಯಕ್ತವಾದಾಗ ನಾವು ಆಳವಾಗಿ ಹುರಿದುಂಬಿಸಲ್ಪಟ್ಟೆವು.
“ಒಮ್ಮೆಲೇ, ಮಕ್ಕಳು ತಾವಾಗಿಯೇ ಎದ್ದು ಅಸ್ತವ್ಯಸ್ತ ಸಾಲುಗಳನ್ನು ರಚಿಸಿ ವಾಡಿಕೆಯ ಬೀಳ್ಕೊಡುವ ಹಾಡನ್ನು ಹಾಡುತ್ತಾರೆ. ಥಟ್ಟನೆ, ಧೂಳುತುಂಬಿದ ಕೊಚ್ಚಲು ಹಾದಿಗಳು ಮತ್ತು ಕೆಲವೊಮ್ಮೆ ತೋರಿಸಲ್ಪಟ್ಟ ನಕಾರಾತ್ಮಕ ಪ್ರತಿಕ್ರಿಯೆಗಳು ಮುಖ್ಯವಲ್ಲದ್ದಾಗಿ ಮಾಸಿಹೋಗುತ್ತವೆ. ಪ್ರಯತ್ನದ ಪ್ರತಿಯೊಂದು ತುಣುಕಿಗೂ ಅದು ಅರ್ಹವೇ ಸರಿ!”
ಮುಖ್ಯಸ್ಥನ ಆಜ್ಞಾವಿಧಿ!
ಸೊವೆಟೊದಲ್ಲಿದ್ದ ಒಂದು ಸಭೆಗೆ, ಪೂರ್ವಕಡೆಯ ಶಹರವಾದ ಪೆಟ್ ರಿಟಿಫ್ ಹತ್ತಿರವಿದ್ದ ಒಂದು ಗೋತ್ರದ ಜನರಿಗೆ ಸಾರುವ ನೇಮಕವಿತ್ತು. ಸಂದರ್ಶಕರು ಬಂದಾಗ ಪದ್ಧತಿಯ ಪ್ರಕಾರ ಆ ಕ್ಷೇತ್ರದ ಎಂಡ್ಯೂನ (ಮುಖ್ಯಸ್ಥ)ನಿಗೆ ಮೊದಲಾಗಿ ತಾವು ಬಂದ ಕೆಲಸವನ್ನು ತಿಳಿಸಬೇಕಿತ್ತು. ಸಹೋದರರು ಅದಕ್ಕನುಸಾರವೇ ಏರ್ಪಡಿಸಿದರು. ಆ ಮುಖ್ಯಸ್ಥನು ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ, ತನ್ನ ಸ್ವಂತ ಮನೆಯಲ್ಲಿ ಉಳುಕೊಳ್ಳುವ ವ್ಯವಸ್ಥೆಯನ್ನೂ ಮಾಡಿದಾಗ ಅವರಿಗಾದ ಆಶ್ಚರ್ಯವೆಷ್ಟು! ಅದಲ್ಲದೆ, ಅವನು ತನ್ನ ಅಧಿಕೃತ ಮುದ್ರೆಯೊತ್ತಿದ್ದ ಪೀಠಿಕಾಪಟ್ಟಿಯನ್ನು ಪ್ರಚಾರಕರು ಮನೆಮನೆಗೆ ಒಯ್ಯುವಂತೆಯೂ ಕೊಟ್ಟನು. ಅದು ಹೇಳಿದ್ದು: “ಇವರು ದೇವರ ರಾಜ್ಯವನ್ನು ಸಾರುವವರು. ಇವರನ್ನು ನಿಮ್ಮ ಮನೆಯೊಳಗೆ ಆಮಂತ್ರಿಸಿರಿ ಮತ್ತು ಅವರಿಗೆ ಕಿವಿಗೊಡಿರಿ.”
ಪ್ರತಿಕ್ರಿಯೆಯು ಎಷ್ಟು ಅತಿಶಯವಾಗಿತ್ತೆಂದರೆ, ಆ ಮುಖ್ಯಸ್ಥನ ಮನೆಯ ವಠಾರದಲ್ಲೇ ಭಾನುವಾರ ಮಧ್ಯಾಹ್ನದ ಬಹಿರಂಗ ಭಾಷಣ ಕೊಡುವಂತೆ ಸಾಕ್ಷಿಗಳು ಏರ್ಪಡಿಸಿದರು. ಆ ತೆರಪಿನ “ಹೋಲ್”ನಲ್ಲಿ ತುಂಬಾ ಜನ ನೆರೆದಿದ್ದರು, ಮತ್ತು ಕೂಟವು ಸಂಗೀತ ಮತ್ತು ಪ್ರಾರ್ಥನೆಯಿಂದ ಆರಂಭಿಸಿತು ಮತ್ತು ಕೊನೆಗೊಂಡಿತು. ಒಳ್ಳೇ ಪ್ರತಿಕ್ರಿಯೆ ತೋರಿಸಿದವರೊಂದಿಗೆ ಇಂಥ ಅನುಭವಗಳು ಬೇರೆ ಗ್ರಾಮೀಣ ಕ್ಷೇತ್ರಗಳಲ್ಲೂ ಆನಂದಿಸಲ್ಪಟ್ಟವು.
ಅಂಥ ಒಬ್ಬ ವ್ಯಕ್ತಿಯು ನತಾನಿಯೇಲನು; ಇವನು ಅನಾವೃಷ್ಟಿ ಪೀಡಿತ ಬೊಫಟ್ಸಾವನದ ಮೂಲೆಯಲ್ಲಿರುವ ಪಿಟ್ಸೆಡೆಸ್ಸುಲಿಯನ್ ಎಂಬ ಚಿಕ್ಕ ಹಳ್ಳಿಯವನು. ಸ್ಥಳೀಕ ಜನರಿಗೆ ಧಾನ್ಯಗಳನ್ನು ಪರಿಣಾಮಕಾರಿಯಾಗಿ ಬೆಳೆಸುವ ವಿಧವನ್ನು ಕಲಿಸುವ ಒಂದು ಕಾರ್ಯಕ್ರಮದಲ್ಲಿ ಒಳಗೂಡಿದ್ದ ಸಮಾಜ ವಿಕಾಸಕನು ಅವನು. ಈ ಬಂಜರು ಭೂಮಿಯನ್ನು ಪರದೈಸವಾಗಿ ಮಾರ್ಪಡಿಸುವ ಸ್ವಪ್ನ ಕಂಡಿದ್ದನು. ವಿಶ್ವ-ವ್ಯಾಪ್ತ ಪರದೈಸವು ಬೇಗನೇ ಬರಲಿದೆ ಎಂದು ಕೇಳಿದಾಗ, ಅವನ ಕಣ್ಣುಗಳು ಹರ್ಷದಿಂದ ಮಿನುಗಿದವು. ಪ್ರಚಾರಕರು ತೋರಿಸಿದ ಪ್ರತಿಯೊಂದು ವಚನವನ್ನೂ ಅವನು ಆತುರದಿಂದ ಬರೆದಿಟ್ಟನು. ನತಾನಿಯೇಲನನ್ನು ಆ ಕೂಡಲೇ ಅತಿ ಹತ್ತಿರದ ಅಂದರೆ ಸುಮಾರು 30 ಕಿಲೊಮೀಟರ್ ದೂರದಲ್ಲಿದ್ದ ಒಂದು ಸಭೆಯೊಂದಿಗೆ ಸಂಪರ್ಕಿಸಲಾಯಿತು.
ಅನೇಕ ಸತ್ಯಾನೇಷ್ವಕರಿಗೆ ಸಂತೋಷದಿಂದ ನೆರವಾಗುವುದು
“ಆತ್ಮಿಕವಾಗಿ ಹಸಿದ ವ್ಯಕ್ತಿಯನ್ನು ಸತ್ಯವನ್ನು ಕಲಿಯುವುದರಿಂದ ಬಡತನವು ತಡೆಯಲಾರದೆಂದು ಯೆಹೋವನು ನಮಗೆ ತೋರಿಸಿದ್ದಾನೆ” ಎನ್ನುತ್ತಾಳೆ ಮೊನಿಕ; ಈಕೆ ಒಬ್ಬ ಪಯನೀಯರಳು ಯಾ ಪೂರ್ಣ ಸಮಯದ ರಾಜ್ಯ ಘೋಷಕಳು. ದೇಶದ ಮಧ್ಯ ಭಾಗದಲ್ಲಿ ನೆಲೆಸಿರುವ ಆರೆಂಜ್ ಫ್ರೀ ಸ್ಟೇಟ್ನ ಬಯಲು ಪ್ರದೇಶದಾಚೆ ಹೊಲದಿಂದ ಹೊಲಕ್ಕೆ ಸಾರುತ್ತಾ ಹೋದ ಪಯನೀಯರ ಗುಂಪಿನ ಭಾಗವಾಗಿದ್ದಳು. ಈ ಜನರಿಗೆ ಸುವಾರ್ತೆಯನ್ನು ಒಯ್ಯುವದರಲ್ಲಿ ತಮ್ಮನ್ನು ವ್ಯಯಿಸಿಕೊಳ್ಳುವ ಕುರಿತು ಈ ಪಯನೀಯರರಿಗೆ ಆದ ಅನಿಸಿಕೆಯೇನು? “ನಾವು ಅನುಭವಿಸಿದ ಆನಂದಗಳಿಗೆ ಯಾವನು ಬೆಲೆಕಟ್ಟಿಯಾನು?” ಅವರು ಪ್ರತಿಕ್ರಿಯಿಸಿದರು. ಆ ಪಯನೀಯರರು ತಮ್ಮ ಪ್ರಯತ್ನಗಳಿಗಾಗಿ ಆತ್ಮಿಕವಾಗಿ ಒಳ್ಳೆಯ ಪ್ರತಿಫಲವನ್ನು ಹೊಂದಿದರು ನಿಶ್ಚಯ.
ಓದು ಬರಹ ಬಾರದಿರುವಿಕೆಯೂ ಒಬ್ಬ ವ್ಯಕ್ತಿಯನ್ನು ಶಾಸ್ತ್ರೀಯ ಸತ್ಯವನ್ನು ಕಲಿಯುವದರಿಂದ ತಡೆಯಲಾರದು. ಸಚಿತ್ರ ಬ್ರೊಷರ್ ಎಂಜಾಯ್ ಲೈಫ್ ಆನ್ ಅರ್ಥ್ ಫಾರೆವರ್ ವಿಶೇಷವಾಗಿ ನಿರಕ್ಷರಿಗಳಾದ ಅಥವಾ ಸ್ವಲ್ಪವೇ ಓದುಬಲ್ಲ ವ್ಯಕ್ತಿಗಳಿಂದ ಚೆನ್ನಾಗಿ ಸ್ವೀಕರಿಸಲ್ಪಟ್ಟಿದೆ. ಯುವಕರು ವೃದ್ಧರೆನ್ನದೆ ಎಲ್ಲರೂ ಆ ಪರದೈಸದ ವರ್ಣರಂಜಿತ ಚಿತ್ರಗಳಿಂದ ಮುಗ್ಧರಾಗಿರುತ್ತಾರೆ. ಇಂಥ ಸಾಹಿತ್ಯವನ್ನು ಮುದ್ರಿಸುವುದರಲ್ಲಿ ನೆರವಾಗುವ ಒಬ್ಬ ಪೂರ್ಣ ಸಮಯದ ಕೆಲಸಗಾರನು ಅವಲೋಕಿಸಿದ್ದು: “ಪರದೈಸವನ್ನು ವಾಸ್ತವಿಕತೆಯಲ್ಲಿ ನೋಡುವಂತೆ ಈ ಬ್ರೊಷರ್ ಜನರಿಗೆ ಸಹಾಯ ಮಾಡುತ್ತದೆ ಮತ್ತು ಬೈಬಲಿನ ಕಡೆಗೆ ಅವರ ಸಹಜವಾದ ಭಕ್ತಿ ಮತ್ತು ಗೌರವವನ್ನು ಹೆಚ್ಚಿಸುತ್ತದೆ.”
ಇದೇ ಕಾರಣಕ್ಕಾಗಿ, ಮೈ ಬುಕ್ ಆಫ್ ಬೈಬಲ್ ಸ್ಟೋರಿಸ್ ಕೂಡ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ದೂರದ ಗೋತ್ರ ಕ್ಷೇತ್ರವಾದ ಲಿಬಾವದಲ್ಲಿನ ಒಬ್ಬ ವೃದ್ಧ ಅರೆ-ಕುರುಡ ವ್ಯಕ್ತಿ ಮತ್ತು ಅವನ ಪತ್ನಿಯೊಂದಿಗೆ ಈ ಪುಸ್ತಕದ ಸಿಪಿಡಿ ಭಾಷೆಯ ಪ್ರತಿ ಇದ್ದದ್ದನ್ನು ಕಂಡು ನಮ್ಮ ಇಬ್ಬರು ಆತ್ಮಿಕ ಸಹೋದರಿಯರು ಆಶ್ಚಯಚಕಿತರಾದರು. ಆ ದಂಪತಿಗಳು ಆ ಪುಸ್ತಕವನ್ನು ಸ್ಥಳೀಕ ಮಕ್ಕಳಿಗೆ ಕಲಿಸುವ ತಮ್ಮ ಪಠ್ಯಪುಸ್ತಕವಾಗಿ ಉಪಯೋಗಿಸುತ್ತಿದ್ದರು. ವಾಸ್ತವದಲ್ಲಿ ಆ ಪುಸ್ತಕ ಎಷ್ಟು ಹೆಚ್ಚಾಗಿ ಅಧ್ಯಯನಿಸಲ್ಪಟ್ಟಿತ್ತು ಮತ್ತು ಅಡಗ್ಡೆರೆ ಹಾಕಲ್ಪಟ್ಟಿತ್ತೆಂದರೆ ಹಾಳೆಗಳು ಉದುರಲಿಕ್ಕಿದ್ದವು. ಒಂದು ಹೊಸ ಪ್ರತಿಯನ್ನು ಪಡಕೊಳ್ಳಲು ಅವರೆಷ್ಟು ಸಂತೋಷಪಟ್ಟರು!
ಹೀಗೆ ನಿಜ ಕ್ರೈಸ್ತ ಸಾಹಿತ್ಯಗಳು ಸತ್ಯಕ್ಕಾಗಿ ಹಸಿದಿರುವವರಿಗೆ ನೆರವಾಗುವುದರಲ್ಲಿ ಒಂದು ಮಹಾ ಅಗತ್ಯವನ್ನು ಪೂರೈಸುತ್ತಿವೆ. ರಸಕರವಾಗಿಯೇ, ದಕ್ಷಿಣ ಆಫ್ರಿಕದ ಅನೇಕ ಸ್ಥಳೀಕ ಭಾಷೆಗಳಲ್ಲಿರುವ ಎಲ್ಲಾ ಮುದ್ರಿತ ಸಮಾಚಾರದಲ್ಲಿ ದೊಡ್ಡ ಭಾಗವು ವಾಚ್ ಟವರ್ ಸೊಸೈಟಿಯಿಂದ ಉತ್ಪಾದಿಸಲ್ಪಟ್ಟದ್ದು. 1990 ಒಂದರಲ್ಲಿಯೇ, ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ 1,13,529 ಪುಸ್ತಕಗಳು, ಬ್ರೊಷರುಗಳು ಮತ್ತು ಪತ್ರಿಕೆಗಳು ದಕ್ಷಿಣ ಆಫ್ರಿಕಾದ ಗ್ರಾಮೀಣ ಕ್ಷೇತ್ರಗಳಲ್ಲಿ ಹಂಚಲ್ಪಟ್ಟಿವೆ.
ದುಡಿಮೆಯ ಪ್ರತಿಫಲ
ಈ ಉತ್ತಮ ಅನುಭವಗಳು ಮತ್ತು ಸಾಹಿತ್ಯದ ನೀಡುವಿಕೆಗಳು ದಕ್ಷಿಣ ಆಫ್ರಿಕದ ಗ್ರಾಮೀಣ ಕ್ಷೇತ್ರಗಳಲ್ಲಿ ಬಾಳುವ ಫಲವನ್ನು ಉತ್ಪಾದಿಸಿದೆಯೇ? ಖಂಡಿತವಾಗಿಯೂ ಉತ್ಪಾದಿಸಿದೆ. 1989ರಿಂದ ದಕ್ಷಿಣ ಆಫ್ರಿಕದ ಗ್ರಾಮೀಣ ಕ್ಷೇತ್ರಗಳಲ್ಲಿ ಸುವಾರ್ತೆ ಸಾರಿದ ನೇರ ಫಲವಾಗಿ ನಾಲ್ಕು ಸಭೆಗಳು ಮತ್ತು ಒಂಭತ್ತು ಒಂಟಿ ಗುಂಪುಗಳು ಸ್ಥಾಪನೆಯಾಗಿವೆ. ತಾತ್ಕಾಲಿಕ ವಿಶೇಷ ಪಯನೀಯರರು ಮತ್ತು ಕ್ರಮದ ಪಯನೀಯರರು ಈ ಹೆಚ್ಚಿನ ಕೆಲಸಕ್ಕೆ ನುಗ್ಗುಮೊನೆಯಾಗಿದ್ದರು.
ಝೂಲುಲ್ಯಾಂಡಿನ ಆ ದೂರದ ತಗ್ಗಿನಲ್ಲಿದ್ದ ಡಾರಿಸ್ ಮತ್ತು ಅವಳ ಸಂಡೇ ಸ್ಕೂಲ್ ನಿಮಗೆ ನೆನಪಿದೆಯೇ? ಇಂದು ಆಕೆ ಒಬ್ಬ ಸಮರ್ಪಿತಳೂ ಸ್ನಾತಳೂ ಆದ ಯೆಹೋವನ ಸಾಕ್ಷಿ. ಅದಲ್ಲದೆ, ಒಂಭತ್ತು ರಾಜ್ಯ ಪ್ರಚಾರಕರ ಒಂದು ಬೆಳೆಯುತ್ತಿರುವ ಗುಂಪು ಅಲ್ಲಿ ಆತ್ಮಿಕ ಪ್ರಗತಿಯನ್ನು ಮಾಡುತ್ತಾ ಇದೆ. ಡಾರಿಸ್ನ ಮನೆಯಲ್ಲಿ ನಡೆಯುವ ಕೂಟಗಳಿಗೆ ಅನೇಕ ಹೊಸಬರು ಹಾಜರಾಗುತ್ತಿದ್ದಾರೆ, ಮತ್ತು ಅವಳು ನಡಿಸುತ್ತಿದ್ದ ಬೈಬಲ್ ಅಭ್ಯಾಸಗಳಲ್ಲಿ ಏಳು ಮಂದಿ 1990ರ ದಶಂಬರದಲ್ಲಿ ಡರ್ಬನ್ ಶಹರದಲ್ಲಿ ನಡೆದ ಜಿಲ್ಲಾ ಅಧಿವೇಶನದಲ್ಲಿ ದೀಕ್ಷಾಸ್ನಾನ ಪಡಕೊಂಡರು.
ಇಂಥ ಪ್ರತಿಫಲವು ದಕ್ಷಿಣ ಆಫ್ರಿಕದ ರಾಜ್ಯ ಪ್ರಚಾರಕರಿಗೆ ಹುರಿದುಂಬಿಸುವ ಪ್ರೇರೇಪಕವಾಗಿರುತ್ತದೆ. ಅಪೊಸ್ತಲ ಪೌಲನ ಮಾತುಗಳ್ನು ಅವರು ಹೃದಯಕ್ಕೆ ತಕ್ಕೊಳ್ಳುತ್ತಾರೆ: “ಆದದರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ.” (ಗಲಾತ್ಯ 6:10) ಹೌದು, ಯೆಹೋವನ ಸೇವಕರು ಎಲ್ಲಾ ಪ್ರಾಮಾಣಿಕ ಹೃದಯದ ಜನರನ್ನು, “ಭೂಮಿಯ ಕಟ್ಟಕಡೆಯಲ್ಲಿ” ವಾಸಿಸುವ ಈ ಗ್ರಾಮೀಣ ಜನರನ್ನೂ ತಲಪಲು ದೃಢ ನಿರ್ಧಾರವನ್ನು ಮಾಡಿದ್ದಾರೆ.—ಅಪೊಸ್ತಲರ ಕೃತ್ಯಗಳು 1:8. (w91 11/15)
[Maps/Pictures on page 24]
(For fully formatted text, see publication)
ಲಿಬೊವ
ಟ್ರಾನ್ಸ್ವಾಲ್
ಸೊವಿಟೊ
ಪೆಟ್ ರೆಟಿಫ್
ಬೊಪುತ್ಸಾವನ
ಆರೆಂಜ್ ಫ್ರೀ ಸ್ಟೇಟ್