ಯೆಹೋವನ ಐಹಿಕ ಸಂಸ್ಥೆಯನ್ನು ನೀವು ಗಣ್ಯಮಾಡುತ್ತೀರೋ?
ನುಣುಪಾಗಿ ಕೆತ್ತಿದ ಶೋಭಾಯಮಾನವಾದ ಒಂದು ವಜ್ರವನ್ನು ನೋಡಿರಿ, ಮತ್ತು ನೀವು ಕಾಣುವುದೇನನ್ನು? ನಿಜವಾಗಿಯೂ ಸೌಂದರ್ಯಯುಕ್ತವಾದ ಒಂದು ಮಣಿಯನ್ನು. ಈಗ ಆ ವಜ್ರವನ್ನು ಒಂದು ಸೂಕ್ಷ್ಮದರ್ಶಕ ಯಂತ್ರದಿಂದ ಪರೀಕ್ಷೆ ಮಾಡಿನೋಡಿರಿ, ಮತ್ತು ನೀವು ಏನನ್ನು ಕಾಣುತ್ತೀರಿ? ಗೀರುಗಳು, ಬಿರುಕುಗಳು, ಸೇರಿಕೆಗಳು ಹಾಗೂ ಇತರ ದೋಷಗಳು ಅಲ್ಲಿರುವ ಸಂಭವವಿದೆ.
ಸೂಕ್ಷ್ಮದರ್ಶಕದ ಕೆಳಗೆ ಅದರ ತೋರಿಕೆಯ ಕಾರಣ ಮಾತ್ರದಿಂದ ನೀವಾ ವಜ್ರವನ್ನು ನಾಶಮಾಡುವಿರೋ ಇಲ್ಲವೇ ಬಿಸಾಡಿಬಿಡುವಿರೋ? ಖಂಡಿತವಾಗಿಯೂ ಇಲ್ಲ! ಆ ಸೂಕ್ಷ್ಮದರ್ಶಕದಿಂದ ತುಸು ಆಚೆ ನಡೆಯಿರಿ, ಆಗ ನೀವಿನ್ನೂ ಅದರ ಸೌಂದರ್ಯವನ್ನು, ಇತರ ರತ್ನಗಳ ನಡುವೆ ಎದ್ದು ತೋರುವ ಅದರ ಅಸಾಧಾರಣ ಹೊಳಪನ್ನು ಗಣ್ಯಮಾಡುವಿರಿ.
ಒಂದು ವಜ್ರದಂತೆ ಯೆಹೋವನ ಐಹಿಕ ಸಂಸ್ಥೆಯು ಅನೇಕ ರೀತಿಯಲ್ಲಿ ಎದ್ದು ತೋರುತ್ತದೆ. ಭೂಮಿಯಲ್ಲಿರುವ ಬೇರೆ ಯಾವ ಸಂಘಟನೆಯೂ ನಿರ್ಮಾಣಿಕನೊಂದಿಗೆ ಒಂದು ಅತಿ ಆಪ್ತವಾದ ಸಂಬಂಧವನ್ನು ಆನಂದಿಸುವುದಿಲ್ಲ. ಸ್ವರ್ಗೀಯ ನಿರೀಕ್ಷೆಯನ್ನು ನೆಚ್ಚಿಕೊಂಡಿದ್ದ ಒಂದನೇ ಶತಕದ ಅಭಿಷಿಕ್ತ ಕ್ರೈಸ್ತರಿಗೆ ಬರೆದ ಒಂದು ಪತ್ರದಲ್ಲಿ ಅಪೊಸ್ತಲ ಪೇತ್ರನು ಈ ವಿಶೇಷ ಸಂಬಂಧಕ್ಕೆ ಸೂಚಿಸಿದ್ದಾನೆ. ಅವನಂದದ್ದು: “ನೀವಾದರೋ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಪವಿತ್ರ ಜನವೂ ದೇವರ ಸಕ್ವೀಯ ಪ್ರಜೆಯೂ ಆಗಿದ್ದೀರಿ.” (1 ಪೇತ್ರ 2:9) ಈ “ಪವಿತ್ರ ಜನಾಂಗ”ದೊಂದಿಗೆ ಇಂದು ಭೂಮಿಯಲ್ಲಿ ನಿತ್ಯ ಜೀವದ ನಿರೀಕ್ಷೆಯುಳ್ಳ “ಬೇರೆ ಕುರಿಗಳ” ಒಂದು ಮಹಾ ಸಮೂಹವು ದೇವರನ್ನು ಆರಾಧಿಸುವುದರಲ್ಲಿ ಜತೆಗೂಡಿಯದೆ. (ಯೋಹಾನ 10:16) ಈ ಎರಡೂ ಗುಂಪುಗಳು ಒಟ್ಟುಗೂಡಿ ರೂಪಿಸಲ್ಪಟ್ಟಿರುವ ಈ ಸಂಘಟನೆಯು ಒಂದು ಸುಂದರವಾದ ಮತ್ತು ಅಸಾಧಾರಣ ಪ್ರಭೆಯುಳ್ಳ ರತ್ನದಂತೆ ಎದ್ದು ತೋರುತ್ತದೆ.
ಇತರರನ್ನು ಠೀಕಾತ್ಮಕ ದೃಷ್ಟಿಯಿಂದ ನೋಡುವುದನ್ನು ವರ್ಜಿಸಿರಿ
ಆದರೆ ಈ ವಿಶ್ವವ್ಯಾಪಕ ಸಂಸ್ಥೆಯು ಅಪೂರ್ಣ ಮಾನವರಿಂದ ಕೂಡಿದೆ ಎಂಬದನ್ನು ನಾವು ಮನಗಾಣಲೇಬೇಕು. ಹೀಗೆ, ನಾವದನ್ನು ಒಂದು ಸಾಂಕೇತಿಕ ಸೂಕ್ಷ್ಮದರ್ಶಕದಿಂದ ನೋಡಿದಲ್ಲಿ ಏನು ಸಂಭವಿಸುವುದು? ಹೌದು, ಅದರ ಭಾಗವಾಗಿರುವ ವ್ಯಕ್ತಿಗಳಲ್ಲಿ ಪಾಪಪೂರ್ಣ ಪ್ರವೃತ್ತಿಗಳೂ ವ್ಯಕ್ತಿತ್ವ ದೋಷಗಳೂ ಇರುವುದನ್ನು ನಾವು ಕಾಣುವೆವು.—ರೋಮಾಪುರ 3:23.
ಅಪೊಸ್ತಲ ಪೌಲನು ತನ್ನಲ್ಲಿ ಅಂಥ ದೋಷಗಳು ಇದ್ದವೆಂದು ಒಪ್ಪಿಕೊಂಡಿದ್ದನು. ಅವನಂದದ್ದು: “ಒಳ್ಳೇದನ್ನು ಮಾಡಬೇಕೆಂದಿರುವ ನನಗೆ ಕೆಟ್ಟದ್ದೇ ಸಿದ್ಧವಾಗಿದೆ ಎಂಬ ನಿಯಮ ಕಾಣಬರುತ್ತದೆ.” (ರೋಮಾಪುರ 7:21) ಪ್ರತಿಯೊಬ್ಬ ಕ್ರೈಸ್ತನು ಇಂಥದ್ದೇ ಹೋರಾಟವನ್ನು ಅನುಭವಿಸುತ್ತಾನೆ. ನಾವೆಲ್ಲರೂ ತಪ್ಪು ಮಾಡುವವರಾಗಿದ್ದೇವೆ. ಅದಲ್ಲದೆ, ಬೇರೊಬ್ಬನ ತಪ್ಪುಗಳ ಕಾರಣದಿಂದ ಇಂದೋ ಮುಂದೋ ಅನೇಕರು ಬಾಧೆಪಡಬೇಕಾಗುತ್ತದೆ. ಜೊತೆ ಕ್ರೈಸ್ತರ ದೋಷಗಳು ಮತ್ತು ಅಪೂರ್ಣತೆಗಳು ಬೆಳಕಿಗೆ ಬರುವಾಗ ನಾವು ನಿರಾಶೆ ಹೊಂದಬೇಕೋ ಅಥವಾ ಮೋಹಮುಕ್ತರಾಗಬೇಕೋ? ಯೆಹೋವನ ಸಂಸ್ಥೆಗಾಗಿರುವ ನಮ್ಮ ಗಣ್ಯತೆಯನ್ನು ಅದು ಕುಂದಿಸಬೇಕೋ? ಖಂಡಿತವಾಗಿಯೂ ಇಲ್ಲ! ಬದಲಿಗೆ ನಾವು ಸೂಕ್ಷ್ಮದರ್ಶಕದಿಂದಲೋ ಎಂಬಂತೆ ದೂರಸರಿಯಬೇಕು, ಮತ್ತು ವ್ಯಕ್ತಿಗಳ ಅಪೂರ್ಣತೆಗಳ ಮೇಲೆ ಕೇಂದ್ರೀಕರಿಸುವುದನ್ನು ಬಿಟ್ಟುಬಿಡಬೇಕು.
ಪವಿತ್ರಾತ್ಮವು ಯಾರಲ್ಲಿ ಕಾರ್ಯನಡಿಸುತ್ತದೋ ಅವರನ್ನು ಗುರುತಿಸುವ ಹಲವಾರು ಗುಣಗಳನ್ನು ದೇವರ ವಾಕ್ಯವು ನಮೂದಿಸಿಯದೆ. “ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಒಳ್ಳೆಯತನ, ನಂಬಿಕೆ, ಸೌಮ್ಯತೆ ಮತ್ತು ದಮೆಯು” ಅವುಗಳಲ್ಲಿ ಕೆಲವಾಗಿವೆ. (ಗಲಾತ್ಯ 5:22, 23) ಪ್ರತಿ ಹೋಲಿಕೆಯಲ್ಲಿ, ಈ ಲೋಕದ ಧಾರ್ಮಿಕ, ರಾಜಕೀಯ ಮತ್ತು ಔದ್ಯೋಗಿಕ ವ್ಯವಸ್ಥಾಪನೆಗಳು ಬೈಬಲ್ ಯಾವುದನ್ನು ಶರೀರಭಾವದ ಕರ್ಮಗಳೆಂದು ಹೇಳುತ್ತದೋ ಅವನ್ನು ಹೆಚ್ಚಾಗಿ ಪ್ರದರ್ಶಿಸುತ್ತವೆ: “ಹಗೆತನ, ಜಗಳ, ಹೊಟ್ಟೇಕಿಚ್ಚು, ಸಿಟ್ಟು, ಕಕ್ಷಭೇದ, ಭಿನ್ನಮತ, ಮತ್ಸರ, ಕುಡಿಕತನ, ದುಂದೌತನ ಇಂಥವುಗಳೇ.” (ಗಲಾತ್ಯ 5:20, 21) ಹೀಗೆ, ಸಾಮಾನ್ಯ ಶಿಲೆಗಳ ನಡುವೆ ಹೊಳೆಯುವ ವಜ್ರದೋಪಾದಿ, ಯೆಹೋವನ ಜನರು ಆತ್ಮಿಕವಾಗಿ ಭ್ರಷ್ಟಗೊಂಡ ಒಂದು ಲೋಕದಲ್ಲಿ ಎದ್ದು ತೋರುವವರಾಗಿದ್ದಾರೆ.—ಮತ್ತಾಯ 5:14-16.
“ಒಂದೇ ಮನಸ್ಸಿನಲ್ಲಿ ಹೊಂದಿಕೆಯಿಂದಿರುವದು”
ವಜ್ರದ ಒಂದು ಮಹತ್ತಾದ ವೈಶಿಷ್ಠ್ಯವು ಅದರ ಒತ್ತಾಗಿ-ಹೆಣೆದ, ಬಲವುಳ್ಳ ಬಂಧದ ಪರಮಾಣು ರಚನೆಯೇ. ಇದೇ ರೀತಿ ಯೆಹೋವನ ಐಹಿಕ ಸಂಸ್ಥೆಯು ಬೋಧನೆ ಮತ್ತು ಸಹೋದರತ್ವದಲ್ಲಿ ಒಂದು ಅಸದೃಶ ಐಕ್ಯತೆಯನ್ನು ಪ್ರದರ್ಶಿಸುತ್ತದೆ. ಆ ಸಂಸ್ಥಾಪನೆಯ ಭಾಗವಾಗಿರುವವರು ಬೈಬಲಿನ 1 ಕೊರಿಂಥ 1:10ರಲ್ಲಿ ಕಂಡುಬರುವ ಉಪದೇಶವನ್ನು ಅನ್ವಯಿಸುತ್ತಾರೆ, ಅದನ್ನುವುದು: “ಸಹೋದರರೇ, ನಿಮ್ಮೆಲ್ಲರ ಮಾತು ಒಂದೇ ಆಗಿರಬೇಕು; ನಿಮ್ಮಲ್ಲಿ ಭೇದಗಳಿರಬಾರದು, ನೀವು ಒಂದೇ ಮನಸ್ಸೂ ಒಂದೇ ಅಭಿಪ್ರಾಯವೂ ಉಳ್ಳವರಾಗಿದ್ದು ಹೊಂದಿಕೆಯಿಂದಿರಬೇಕು.”
ಯೆಹೋವನ ಸಾಕ್ಷಿಗಳು ಜಾತೀಯ ಭೇದಭಾವ ಮತ್ತು ರಾಷ್ಟ್ರೀಯ ದುರಭಿಮಾನಕ್ಕೆ ಸಹಾ ಒಳಪಟ್ಟಿಲ್ಲ. “ಮೇಲಣಿಂದ ಬರುವ ಜ್ಞಾನ”ವನ್ನು ಪಡೆದವರಾದ ಅವರು, ‘ಪಕ್ಷಭೇದವನ್ನು’ ಮಾಡುವುದಿಲ್ಲ. (ಯಾಕೋಬ 3:17) ಈ ಸಂಬಂಧದಲ್ಲಿ, ಅಪೂರ್ಣ ಮಾನವರಿಂದ ಕೂಡಿರುವ ಈ ಒಂದು ಸಂಸ್ಥೆಯಲ್ಲಿ ಯೆಹೋವನು ಏನನ್ನು ಪೂರೈಸಿದ್ದಾನೋ ಅದಕ್ಕಾಗಿ ನಾವಾತನಿಗೇ ಘನವನ್ನು ಸಲ್ಲಿಸುತ್ತೇವೆ.
ಪ್ರತಿಹೋಲಿಕೆಯಲ್ಲಿ, ದಿ ಕ್ರಿಶ್ಚನ್ ಸೆಂಟ್ಯುರಿ ಪತ್ರಿಕೆಯು, 1990ನೇ ವರ್ಷದ ಕುರಿತು ಮಾತಾಡುತ್ತಾ, “ಲೋಕವು ಧಾರ್ಮಿಕ ಪಂಗಡಗಳಿಂದ ಮತ್ತು ಧಾರ್ಮಿಕ ನಂಬಿಕೆಗಳಿಗೆ ಒತ್ತಾಗಿ ಕಟ್ಟಲ್ಪಟ್ಟ ರಾಷ್ಟ್ರೀಯ ಮತ್ತು ಕುಲಸಂಬಂಧವಾದ ಭಾವುಕತೆಗಳಿಂದ ಎಂದಿಗಿಂತಲೂ ಹೆಚ್ಚು ವಿಭಜಿತವಾದಂತೆ ತೋರುತ್ತದೆ. ಭಾರತದಿಂದ ಯೂರೋಪಿನ ತನಕ ಮತ್ತು ಮಧ್ಯಪೂರ್ವದಿಂದ ಫೆಸಿಫಿಕ್ನ ತನಕ, ಧರ್ಮವು ರಾಷ್ಟ್ರೀಯ ಮತ್ತು ಕುಲ ಸಂಬಂಧವಾದ ಸ್ವಾಮಿನಿಷ್ಠೆಗಳಿಂದ ಬೆರೆಯಲ್ಪಟ್ಟು—ರಾಜಕೀಯವಾಗಿ ಆಗಿಂದಾಗ್ಯೆ ಚಂಚಲ ಫಲಿತಾಂಶಗಳನ್ನು ತಂದಿದೆ” ಎಂದು ಹೇಳಿದೆ. ದೇವರನ್ನು ಸೇವಿಸ ಬಯಸುವವರು ಯೆಹೋವನ ಆತ್ಮ ಮತ್ತು ಆಶೀರ್ವಾದವನ್ನು ಆನಂದಿಸುವ ಈ ಒಂದು ಸಂಸ್ಥೆಯ ಕಡೆಗೆ ಮಾತ್ರವೇ ತಿರುಗ ಸಾಧ್ಯವಿದೆ ಎಂಬದು ಸುಸ್ಪಷ್ಟ.
‘ನಿನ್ನ ಹಣೆಯನ್ನು ವಜ್ರದಂತೆ ಮಾಡಿದ್ದೇನೆ’
ಮನುಷ್ಯನಿಗೆ ಜ್ಞಾತವಾದ ಸಹಜವಾಗಿ ಸಂಭವಿಸುವ ಘನ ಪದಾರ್ಥಗಳಲ್ಲಿ ವಜ್ರವು ಅತ್ಯಂತ ಕಠಿಣವಾದ ವಸ್ತು. ಕಠಿಣವಾದ ವಸ್ತುಗಳನ್ನು ಕೆರೆಯಲು ಅಥವಾ ಕೊರೆಯಲು ವಜ್ರಗಳ ಉಪಯೋಗ ಮಾಡುವುದನ್ನು ಬೈಬಲು ಸೂಚಿಸಿಯದೆ. (ಯೆರೆಮೀಯ 17:1) ಯೆಹೆಜ್ಕೇಲನಿಗೆ ಯೆಹೋವನಂದ ಮಾತುಗಳನ್ನು ಕೂಡಾ ಗಮನಿಸಿರಿ. “ಇಗೋ, ಅವರ ಕಠಿಣ ಮುಖಕ್ಕೆ ವಿರುದ್ಧವಾಗಿ ನಿನ್ನ ಮುಖವನ್ನು ಕಠಿಣಪಡಿಸಿದ್ದೇನೆ; ಅವರ ಹಣೆಗೆ ಪ್ರತಿಯಾಗಿ ನಿನ್ನ ಹಣೆಯನ್ನು ಗಟ್ಟಿಮಾಡಿದ್ದೇನೆ. ನಿನ್ನ ಹಣೆಯನ್ನು ಕಗ್ಗಲ್ಲಿಗಿಂತ ಕಠಿಣವಾದ ವಜ್ರದಷ್ಟು ಕಠಿಣಪಡಿಸಿದ್ದೇನೆ.” (ಯೆಹೆಜ್ಕೇಲ 3:8, 9) ಹಟಮಾರಿಗಳಾದ ಆ ಜನರಿಗೆ ಪ್ರವಾದಿಸುವುದಕ್ಕೆ ಶಕ್ತನಾಗುವಂತೆ ಯೆಹೋವನು ಯೆಹೆಜ್ಕೇಲನಿಗೆ ಒಂದು ವಜ್ರ-ಕಠಿಣ ಮನೋನಿರ್ಧಾರವನ್ನು ಕೊಟ್ಟನು.—ಯೆಹೆಜ್ಕೇಲ 2:6.
ಅದೇ ರೀತಿ ಇಂದು, ಯೆಹೋವನು ತನ್ನ ಜನರಿಗೆ ಮಹಾ ವಿರೋಧವನ್ನು ಎದುರಿಸಲಿಕ್ಕಾಗಿ ವಜ್ರದಂಥಾ ಕಠಿಣತೆಯನ್ನು ದಯಪಾಲಿಸಿದ್ದಾನೆ. ಯೆಹೋವನ ಸಾಕ್ಷಿಗಳು ಕಾನೂನುಬದ್ಧ ನಿಷೇಧಗಳನ್ನು, ದೊಂಬಿಗಳನ್ನು, ಕೊಲೆಪಾತಕಗಳನ್ನು, ಪೆಟ್ಟುಗಳನ್ನು, ಅನ್ಯಾಯ ಬಂಧಿವಾಸವನ್ನು, ಚಿತ್ರಹಿಂಸೆಯನ್ನು, ದೇಹಾಂತ ಶಿಕ್ಷೆಗಳನ್ನು ಸಹಾ ತಾಳಿಕೊಂಡಿರುತ್ತಾರೆ. ಆದರೂ, ಅವರು ತಮ್ಮ ನಂಬಿಕೆಯನ್ನು ಮುರಿಯಲಾರದ್ದಾಗಿ ತೋರಿಸಿದ್ದಾರೆ.
“ನನ್ನ ಸೇವಕರು ಉಲ್ಲಾಸಪಡುವರು”
ಮನುಷ್ಯರು “ಭಕ್ತಿಯ ವೇಷವಿದ್ದು” “ಅದರ ಬಲಕ್ಕೆ ಸುಳ್ಳಾಗಿ” ರುಜುವಾಗುವ ಒಂದು ಸಮಯದ ಕುರಿತಾಗಿ ಬೈಬಲು ಮುಂತಿಳಿಸಿಯದೆ. (2 ತಿಮೊಥಿ 3:1, 5) ಒಂದು ವಾರ್ತಾಪತ್ರವು ವರದಿಸುವುದೇನಂದರೆ “ಪ್ರಾಟೆಸ್ಟಂಟರು, ರೋಮನ್ ಕ್ಯಾಥ್ಲಿಕರು ಮತ್ತು ಯೆಹೂದ್ಯರು ಎಲ್ಲರೂ” ತಮ್ಮ ಚರ್ಚುಗಳಲ್ಲಿ ಮತ್ತು ಸಭಾಮಂದಿರಗಳಲ್ಲಿನ “ಅವನತಿಯ ಕುರಿತು ಚಿಂತಿಸುತ್ತಾರೆ.” ಯೆಹೋವನ ಸಾಕ್ಷಿಗಳಾದರೋ, ಇನ್ನೊಂದು ಕಡೆ, ಬೈಬಲಿನ ಗಂಭೀರ ವಿದ್ಯಾರ್ಥಿಗಳು. ಅವರಲ್ಲಿ ಎಳೆಯರೂ ವೃದ್ಧರೂ, ಸ್ತ್ರೀಯರು ಮತ್ತು ಪುರುಷರು ಎಲ್ಲರೂ ಅಧಿಕ ಸಂಖ್ಯೆಯಲ್ಲಿ ಸಾಪ್ತಾಹಿಕವಾಗಿ ಹಲವಾರು ಕೂಟಗಳಿಗೆ ಹಾಜರಾಗುತ್ತಾರೆ. ವಾರ್ತಾಪತ್ರಿಕೆಯೊಂದಕ್ಕೆ ಬರೆಯಲ್ಪಟ್ಟ ಒಂದು ಪತ್ರ ಅವರ ಕುರಿತಾಗಿ ಹೇಳಿದ್ದೇನಂದರೆ “ಅವರ ಧರ್ಮವು ಅವರಿಗಿರುವ ಅತ್ಯಮೂಲ್ಯ ವಸ್ತು, ಮತ್ತು ಅದನ್ನು ಇತರರೊಂದಿಗೆ ಹಂಚುವುದೇ ಅವರ ಏಕಮಾತ್ರ ಚಿಂತನೆಯು.”
ಅಂಥ ಒಂದು ಮನೋಭಾವವು ಯೆಹೋವನ ಸಂಸ್ಥೆಯನ್ನು ಒಂದು ಅಮೂಲ್ಯವಾದ ವಜ್ರದಂತೆ ಎದ್ದು ಕಾಣುವಂತೆ ಮಾಡುತ್ತದೆ. ಮತ್ತು ಅದಕ್ಕಾಗಿ ಕೀರ್ತಿಯು, ಯಾರು ತನ್ನ ಪವಿತ್ರಾತ್ಮದ ಮೂಲಕವಾಗಿ ಅಪೂರ್ಣ ವ್ಯಕ್ತಿಗಳನ್ನು ಬಲಪಡಿಸಿ ಮಾರ್ಗದರ್ಶಿಸುತ್ತಾನೋ ಆತನಿಗೇ ಸಲ್ಲುತ್ತದೆ.
ಪ್ರವಾದಿಯಾದ ಯೆಶಾಯನು ಮುಂತಿಳಿಸಿದ್ದು: “ಕರ್ತನಾದ ಯೆಹೋವನು ಹೀಗನ್ನುತ್ತಾನೆ—ಇಗೋ, ನನ್ನ ಸೇವಕರು ಊಟಮಾಡುವರು. . . ಇಗೋ, ನನ್ನ ಸೇವಕರು ಕುಡಿಯುವರು. . . ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು. . . ಇಗೋ, ನನ್ನ ಸೇವಕರು ಹೃದಯಾನಂದದಿಂದ ಹರ್ಷದ್ವನಿಗೈಯುವರು.”—ಯೆಶಾಯ 65:13, 14.
ಈ ಪ್ರವಾದನೆಯ ನೆರವೇರಿಕೆಯನ್ನು ನಾವಿಂದು ಕಾಣುತ್ತಿದ್ದೇವೆ. ದೇವರು ತನ್ನ ಜನರನ್ನು ಒಂದು ಅಸಾಧಾರಣ ರೀತಿಯಲ್ಲಿ ಪರಾಮರಿಕೆ ಮಾಡುತ್ತಿದ್ದಾನೆ.! ಆದಕಾರಣ, ನೀವು ಅವರೊಂದಿಗೆ ಸಹವಸಿಸುತ್ತೀರಾದರೆ, ನಿಮ್ಮ ಸಂತೋಷವನ್ನು ಯಾವುದೇ ನಕಾರಾತ್ಮಕ ಯೋಚನೆಯು ಅಪಹರಿಸುವಂತೆ ಬಿಡಬೇಡಿರಿ. ಇಡೀ ಚಿತ್ರವನ್ನು ಗಮನಕ್ಕೆ ತಂದುಕೊಳ್ಳಿರಿ ಮತ್ತು ನೆನಪಿಡಿರಿ: ದೇವರ ವಿಶೇಷ ಪರಾಮರಿಕೆ ಮತ್ತು ಸುರಕ್ಷೆಯನ್ನು ಲೋಕದಲ್ಲಿರುವ ಬೇರೆ ಯಾವ ಸಂಸ್ಥೆಯೂ ಅನುಭವಿಸುವುದಿಲ್ಲ. ಅದರ ಒಂದು ಭಾಗವಾಗಿರುವ ನಿಮ್ಮ ಸೌಭಾಗ್ಯವನ್ನು ನೆಚ್ಚುವುದನ್ನು ಎಂದೂ ನಿಲ್ಲಿಸಬೇಡಿರಿ. (w91 11/1)