ರೂಪಕ್ಕೆ ಎಷ್ಟು ಮಹತ್ವ?
“ನನ್ನ ರೂಪದ ಕುರಿತು ನಾನು ಮನಕಲಕಿಸಿಕೊಂಡಿದ್ದೆ,” ಎಂದು ಬರೆದಳು ಅಮೆರಿಕದ ಪೆನ್ಸಿಲ್‌ವೇನಿಯ ಶಹರದ ಬೀವರ್ ಫಾಲ್ಸ್‌ನ ಒಬ್ಬಾಕೆ ತರುಣಿ. “ನಾನು ಕುರೂಪಿ ಮತ್ತು ಆಕರ್ಷಕಳಲ್ಲವೆಂತ ನನ್ನ ಅನಿಸಿಕೆಯಾಗಿತ್ತು.” ಅವಳು ವಿವರಿಸಿದ್ದು: “ಕೆಲವು ದಿನಗಳ ತನಕ ನಾನು ಏನನ್ನೂ ತಿನ್ನುತ್ತಲೇ ಇರಲಿಲ್ಲ, ಮತ್ತು ಹಲವಾರು ಪೌಂಡ್ ತೂಕವನ್ನು ಕಳಕೊಳ್ಳುತ್ತಿದ್ದೆ, ಆದರೆ ತಿನ್ನದೇ ಇದದ್ದರಿಂದ ಎಷ್ಟು ಹಸಿವೆಯಾಗುತ್ತಿತ್ತೆಂದರೆ ಮರುದಿನ ಕಂಠಪೂರ್ತಿ ತಿನ್ನುತ್ತಿದ್ದೆ ಮತ್ತು ಪುನಃ ತೂಕವನ್ನು ಗಳಿಸುತ್ತಿದ್ದೆ.”
ತದನಂತರ, ಒಂದು ಕ್ರೈಸ್ತ ಅಧಿವೇಶನದಲ್ಲಿ, ಅವಳಂದದ್ದು: “ನಾನು ಒಂದು ಕನ್ನಡಿಯಲ್ಲಿ ನೋಡುತ್ತಾ ನನ್ನ ಸ್ನೇಹಿತೆಯೊಬ್ಬಳಿಗೆ ಹೇಳಿದ್ದು, ‘ನಾನೆಷ್ಟು ವಿರೂಪ ಕಾಣುತ್ತೇನೆ!’
“ಈ ಅತಿ ಪ್ರಿಯ ಸ್ನೇಹಿತೆ ನನ್ನನ್ನು ಕೇಳಿದ್ದೇನಂದರೆ—ಕ್ವೆಸ್ಟ್ಯನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದಾಟ್ ವರ್ಕ್ ಪುಸ್ತಕದಲ್ಲಿ ‘ಎ ಲುಕ್ ಎಟ್ ಹೌ ಯು ಲುಕ್’ ವಿಭಾಗವನ್ನು ಓದಿದ್ದಿಯೋ ಎಂಬದಾಗಿ. ನಾನು ಇಲ್ಲವೆಂದೆ. ಆಕೆ ನನಗಂದದ್ದು, ‘ಇಂದು ರಾತ್ರಿ ಮನೆಗೆ ಹೋಗಿ ನೀನದನ್ನು ಓದಲೇ ಬೇಕು.’ ನಾನು ಹಾಗೆಯೇ ಮಾಡಿದೆ.
“ನನ್ನ ಜೀವನ ಕಥೆಯನ್ನೇ ಓದುತ್ತಿದ್ದೇನೋ ಎಂದು ನನಗೆ ಭಾಸವಾಯಿತು. ನನ್ನನ್ನು ಯೋಚಿಸುವಂತೆ ಮಾಡಿದ ಒಂದು ಪ್ರಶ್ನೆ ನನಗಲ್ಲಿ ಸಿಕ್ಕಿತು, ‘ಜನಾದರಣೆ, ಸಾಫಲ್ಯ, ಅಥವಾ ಸಂತೋಷ ಉಳ್ಳವರಾಗಬೇಕಾದರೆ ಒಂದು ನಿರ್ದಿಷ್ಟ ತರದ ರೂಪವು ನಿನಗೆ ಬೇಕೆಂಬ ವಿಚಾರವನ್ನು ಪ್ರವರ್ಧಿಸುವವರು ಯಾರು?’
ಆ ಪ್ರಶ್ನೆಗೆ ಉತ್ತರವು, ಈ ತರುಣಿ ಅಂದದ್ದು, ನನ್ನ ಜೀವಿತದಲ್ಲಿ ಗಮನಾರ್ಹ ಬದಲಾವಣೆಯನ್ನು ತಂದಿತು. ಆಕೆ ಕೊನೆಗೊಳಿಸಿದ್ದು: ‘ಯಂಗ್ ಪೀಪಲ್ ಆಸ್ಕ್ ಪುಸ್ತಕದ ಸಹಾಯಕಾರಿ ಸಲಹೆಗಳ ಮೂಲಕ, ನನ್ನ ಪ್ರಥಮತೆಗಳನ್ನು ಸರಿಪಡಿಸಿಕೊಳ್ಳುವ ಅಗತ್ಯವನ್ನು ನಾನು ಕಂಡೆನು.’
ಯುವ ಜನರಿಗೆ ಇಂದು ಅನೇಕ ಒತ್ತಡಗಳಿವೆ. ಅವನ್ನು ಸಾಫಲ್ಯದಿಂದ ನಿಭಾಯಿಸಲು ಅವರಿಗೆ ಸಹಾಯಬೇಕು. ಕ್ವೆಸ್ಟ್ಯನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದಾಟ್ ವರ್ಕ್ ಆ ಸಹಾಯವನ್ನು ಒದಗಿಸುತ್ತದೆ. ಈ ಕೂಪನನ್ನು ತುಂಬಿಸಿ ಟಪ್ಪಾಲಿನಲ್ಲಿ ಕಳುಹಿಸುವ ಮೂಲಕ ಆಕರ್ಷಕ ಚಿತ್ರಗಳಿಂದ ಕೂಡಿದ ಈ ಪುಸ್ತಕದ ಒಂದು ಪ್ರತಿಯನ್ನು ನೀವು ಪಡೆಯಬಲ್ಲಿರಿ.
ನಾನು ಕ್ವೆಸ್ಟ್ಯನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದಾಟ್ ವರ್ಕ್ ಎಂಬ 320 ಪುಟಗಳ ಪುಸ್ತಕವನ್ನು ಪಡೆಯಲು ಬಯಸುತ್ತೇನೆ.