ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w91 4/1 ಪು. 12-13
  • ಕ್ರೈಸ್ತ ಆರಾಧನೆಯೇಕೆ ಶ್ರೇಷ್ಠವು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕ್ರೈಸ್ತ ಆರಾಧನೆಯೇಕೆ ಶ್ರೇಷ್ಠವು
  • ಕಾವಲಿನಬುರುಜು—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕ್ರಿಸ್ತನು ದೇವದೂತರಿಗೆ ಮತ್ತು ಮೋಶೆಗೆ ಶ್ರೇಷ್ಠನು
  • ಕ್ರೈಸ್ತರು ದೇವರ ವಿಶ್ರಾಂತಿಯನ್ನು ಪ್ರವೇಶಿಸುವುದು
  • ಶ್ರೇಷ್ಠ ಯಾಜಕತ್ವ ಮತ್ತು ಒಡಂಬಡಿಕೆ
  • ನಂಬಿಕೆ ಅತ್ಯಾವಶ್ಯಕ!
  • ಬೇರೆ ಕುರಿಗಳು ಮತ್ತು ಹೊಸ ಒಡಂಬಡಿಕೆ
    ಕಾವಲಿನಬುರುಜು—1998
  • ಯೆಹೋವನು ಮೆಚ್ಚುವ ಯಜ್ಞಗಳನ್ನು ಅರ್ಪಿಸಿರಿ
    ಕಾವಲಿನಬುರುಜು—1990
  • ಹೊಸ ಒಡಂಬಡಿಕೆಯ ಮುಖಾಂತರ ಹೆಚ್ಚು ಶ್ರೇಷ್ಠವಾದ ಆಶೀರ್ವಾದಗಳು
    ಕಾವಲಿನಬುರುಜು—1998
  • ಯಾಜಕರಾಜರ ಏರ್ಪಾಡು ಮಾನವಕುಲಕ್ಕೆ ದೇವರ ಅನುಗ್ರಹ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಕಾವಲಿನಬುರುಜು—1991
w91 4/1 ಪು. 12-13

ಕ್ರೈಸ್ತ ಆರಾಧನೆಯೇಕೆ ಶ್ರೇಷ್ಠವು

ಇಬ್ರಿಯರಿಗೆ ಬರೆದ ಪತ್ರದ ಮುಖ್ಯಾಂಶಗಳು

ಯೆಹೋವ ದೇವರು ಆರಾಧನೆಯ ಶ್ರೇಷ್ಠ ವೈಶಿಷ್ಟ್ಯವನ್ನು ಮುಂತಂದದ್ದು ತನ್ನ ಮಗನಾದ ಕ್ರಿಸ್ತ ಯೇಸುವನ್ನು ಈ ಭೂಮಿಗೆ ಕಳುಹಿಸಿಕೊಟ್ಟಾಗಲೇ. ಅದು ಹೇಗಂದರೆ, ಕ್ರೈಸ್ತತ್ವದ ಸ್ಥಾಪಕನಾದ ಯೇಸು ದೇವದೂತರಿಗಿಂತ ಮತ್ತು ಪ್ರವಾದಿ ಮೋಶೆಗಿಂತ ಶ್ರೇಷ್ಠನಾಗಿರುವ ಕಾರಣದಿಂದಲೇ. ಪ್ರಾಚೀನ ಇಸ್ರಾಯೇಲಿನ ಲೇವ್ಯರಿಗೆ ಹೋಲಿಸುವಲ್ಲಿ, ಯೇಸುವಿನ ಯಾಜಕತ್ವವು ಮಹಾ ಶ್ರೇಷ್ಠತೆಯುಳ್ಳದ್ದು. ಮತ್ತು ಮೋಶೆಯ ಧರ್ಮಶಾಸ್ತ್ರದ ಕೆಳಗೆ ಅರ್ಪಿಸಲ್ಪಡುತ್ತಿದ್ದ ಪಶುಗಳಿಗಿಂತ ಯೇಸುವಿನ ಬಲಿದಾನವು ಎಷ್ಟೋ ಶ್ರೇಷ್ಠವಾಗಿದೆ.

ಈ ವಿಷಯಗಳು ಇಬ್ರಿಯರಿಗೆ ಬರೆದ ಪತ್ರಿಕೆಯಲ್ಲಿ ಸ್ಪಷ್ಟಪಡಿಸಲ್ಪಟ್ಟಿವೆ. ಅದು ಅಪೊಸ್ತಲ ಪೌಲನಿಂದ ರೋಮಿನಲ್ಲಿ ಸುಮಾರು ಸಾ.ಶ. 61 ರಲ್ಲಿ ಬರೆಯಲ್ಪಟ್ಟಿತ್ತೆಂಬದು ಸ್ಪಷ್ಟ ಮತ್ತು ಯೂದಾಯದ ಇಬ್ರಿಯ ವಿಶ್ವಾಸಿಗಳಿಗೆ ಕಳುಹಿಸಲ್ಪಟ್ಟಿತು. ಆರಂಭದ ಸಮಯದಿಂದಲೂ ಗ್ರೀಕ್‌ ಮತ್ತು ಏಸ್ಯಾದ ಕ್ರೈಸ್ತರು, ಪೌಲನೇ ಅದರ ಲೇಖಕನೆಂದು ಒಪ್ಪಿದ್ದರು, ಮತ್ತು ಲೇಖಕನಿಗಿದ್ದ ಹಿಬ್ರೂ ಶಾಸ್ತ್ರದ ವಿಸ್ತಾರ್ಯ ಪರಿಚಯ ಹಾಗೂ ಅಪೊಸ್ತಲನಲ್ಲಿ ಆದರ್ಶ ಸ್ವರೂಪವಾಗಿದ್ದ ತಾರ್ಕಿಕ ಪ್ರತಿಭೆಯು ಇದಕ್ಕೆ ಬೆಂಬಲ ಕೊಡುತ್ತದೆ. ಅವನು ತನ್ನ ಹೆಸರನ್ನು ಬಿಟ್ಟುಬಿಟ್ಟದ್ದು, ಯೆಹೂದ್ಯರಿಗೆ ಅವನ ವಿರುದ್ಧವಿದ್ದ ದುರುಭಿಮಾನದಿಂದಾಗಿ ಅಥವಾ ಅವನು “ಅನ್ಯ ಜನರಿಗೆ ಅಪೊಸ್ತಲನಾಗಿ” ಜ್ಞಾತನಾಗಿದ್ದ ಕಾರಣದಿಂದಲೇ ಇರಬಹುದು. (ರೋಮಾಪುರ 11:13) ನಾವೀಗ, ಪೌಲನು ಇಬ್ರಿಯರಿಗೆ ಬರೆದ ಪತ್ರದಲ್ಲಿ ಪ್ರಕಟಿತವಾಗಿರುವ ಕ್ರೈಸ್ತತ್ವದ ಶ್ರೇಷ್ಠ ವೈಶಿಷ್ಟ್ಯಗಳನ್ನು ನಿಕಟವಾಗಿ ಗಮನಿಸೋಣ.

ಕ್ರಿಸ್ತನು ದೇವದೂತರಿಗೆ ಮತ್ತು ಮೋಶೆಗೆ ಶ್ರೇಷ್ಠನು

ದೇವರ ಕುಮಾರನ ಶ್ರೇಷ್ಠ ಸ್ಥಾನವು ಮೊದಲಾಗಿ ತೋರಿಸಲ್ಪಟ್ಟಿದೆ. (ಇಬ್ರಿ 1:1–3:6) ದೇವದೂತರೆಲ್ಲರು ಅವನಿಗೆ ಅಡ್ಡಬೀಳುತ್ತಾರೆ, ಮತ್ತು ಅವನ ರಾಜಾಡಳಿತವು ದೇವರ ಮೇಲೆ ಆತುಕೊಂಡಿದೆ. ಆದ್ದರಿಂದ, ದೇವರ ಮಗನಿಂದ ಹೇಳಲ್ಪಟ್ಟ ವಿಷಯಗಳಿಗೆ ನಾವು ಅಸಾಮಾನ್ಯವಾದ ಲಕ್ಷ್ಯಕೊಡಬೇಕು. ಅದಲ್ಲದೆ, ಮನುಷ್ಯ ಯೇಸುವು ದೇವದೂತರಿಗಿಂತ ಕಡಿಮೆಯಾಗಿದ್ದಾಗ್ಯೂ ಅವನನ್ನು, ಅವರಿಗಿಂತಲೂ ಉನ್ನತಿಗೇರಿಸಿ, ಬರಲಿರುವ ನಿವಾಸಿತ ಭೂಮಿಯ ಅಧಿಪತ್ಯವನ್ನು ಆತನಿಗೆ ಕೊಡಲಾಗಿದೆ ಎಂಬದನ್ನು ನಾವು ನೆನಪಿನಲ್ಲಡಬೇಕು.

ಯೇಸು ಕ್ರಿಸ್ತನು ಮೋಶೆಗಿಂತ ಸಹಾ ಶ್ರೇಷ್ಠನು. ಅದು ಹೇಗೆ? ಒಳ್ಳೆದು, ಇಸ್ರಾಯೇಲ್ಯ ದೇವರ ಮನೆಯಲ್ಲಿ ಮೋಶೆಯು ಕೇವಲ ಒಬ್ಬ ಸೇವಕನಾಗಿದ್ದನು. ಆದರೆ ಯೇಸುವನ್ನು ಯೆಹೋವನು, ಆ ಇಡೀ ಮನೆಯ ಮೇಲೆ ಅಥವಾ ದೇವ ಜನರ ಸಭೆಯ ಮೇಲೆ ಅಧಿಕಾರಿಯನ್ನಾಗಿ ಮಾಡಿದ್ದಾನೆ.

ಕ್ರೈಸ್ತರು ದೇವರ ವಿಶ್ರಾಂತಿಯನ್ನು ಪ್ರವೇಶಿಸುವುದು

ದೇವರ ವಿಶ್ರಾಂತಿಯೊಳಗೆ ಪ್ರವೇಶಿಸ ಶಕ್ಯವಿದೆ ಎಂದು ಅಪೊಸ್ತಲನು ಅನಂತರ ಎತ್ತಿಹೇಳುತ್ತಾನೆ. (3:7–4:13) ಐಗುಪ್ತ್ಯರ ಬಂಧೀವಾಸದಿಂದ ಮುಕ್ತರಾದ ಇಸ್ರಾಯೇಲ್ಯರು ಅದನ್ನು ಪ್ರವೇಶಿಸಲು ತಪ್ಪಿದರು ಯಾಕೆಂದರೆ ಅವರು ಅವಿಧೇಯತೆ ಮತ್ತು ಅಪನಂಬಿಕೆ ತೋರಿಸಿದರು. ಆದರೆ, ದೇವರಲ್ಲಿ ನಂಬಿಕೆಯನ್ನಿಟ್ಟು ಕ್ರಿಸ್ತನನ್ನು ವಿಧೇಯತೆಯಿಂದ ಅನುಸರಿಸಿದರೆ ನಾವು ಆ ವಿಶ್ರಾಂತಿಯನ್ನು ಪ್ರವೇಶ ಮಾಡಬಲ್ಲೆವು. ಆಗ, ವಾರದ ಸಬ್ಬತ್ತನ್ನು ಆಚರಿಸುವ ಬದಲು, ಎಲ್ಲಾ ಸ್ವಾರ್ಥ ಕ್ರಿಯೆಗಳಿಂದ ವಿಶ್ರಾಂತಿ ಪಡೆಯುವ ಪರಮ ಆಶೀರ್ವಾದದಲ್ಲಿ ದಿನದಿನವೂ ಆನಂದಿಸುವೆವು.

ದೇವರ ವಿಶ್ರಾಂತಿಯೊಳಗೆ ಪ್ರವೇಶಿಸುವುದು ಆತನ ವಾಕ್ಯದ ಒಂದು ವಾಗ್ದಾನವು. ಆ ವಾಕ್ಯ “ಇಬ್ಬಾಯಿ ಕತ್ತಿಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನು ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥಾದ್ದು.” ಅದು ಹಾಗೆ ಮಾಡುವುದು ಹೇಗಂದರೆ ಹೇತುಗಳನ್ನು ಮತ್ತು ಮನೋಭಾವನೆಗಳನ್ನು ಪರೀಕ್ಷಿಸುವಷ್ಟು ತೂರಿಹೋಗಿ, ಶರೀರದ ಇಚ್ಛೆಗಳು ಮತ್ತು ಮಾನಸಿಕ ಪ್ರವೃತ್ತಿಯ ನಡುವೆ ವಿಭಜನೆಯನ್ನುಂಟು ಮಾಡುತ್ತದೆ. (ರೋಮಾಪುರ 7:25 ಹೋಲಿಸಿ.) ವ್ಯಕ್ತಿಗಳಾದ ನಮ್ಮ “ಪ್ರಾಣ” ಅಥವಾ ಜೀವವು ಒಂದು ದೈವಿಕ “ಆತ್ಮ” ಅಥವಾ ಪ್ರವೃತ್ತಿಯಿಂದ ಕೂಡಿದ್ದಾಗಿದ್ದರೆ, ದೇವರ ವಿಶ್ರಾಂತಿಯನ್ನು ನಾವು ಪ್ರವೇಶಿಸ ಶಕ್ತರು.

ಶ್ರೇಷ್ಠ ಯಾಜಕತ್ವ ಮತ್ತು ಒಡಂಬಡಿಕೆ

ಅನಂತರ ಪೌಲನು, ಕ್ರಿಸ್ತನ ಯಾಜಕತ್ವ ಮತ್ತು ಹೊಸ ಒಡಂಬಡಿಕೆಯ ಶ್ರೇಷ್ಠತೆಯನ್ನು ತೋರಿಸುತ್ತಾನೆ. (4:14-10:31) ಪಾಪರಹಿತ ಯೇಸು ಕ್ರಿಸ್ತನು ಪಾಪಿಗಳಾದ ಮಾನವರ ಮೇಲೆ ಕರುಣೆಯಿಟ್ಟನು ಯಾಕಂದರೆ ನಮ್ಮಂತೆಯೇ ಆತನು, ಸಕಲ ವಿಧವಾಗಿ ಪರಿಶೋಧಿತನಾದನು. ಅದಲ್ಲದೆ ದೇವರು ಅವನನ್ನು, “ಮೆಲ್ಕಿಜೆದೇಕನ ತರಹದ ಯಾಜಕನಾಗಿ” ನೇಮಕ ಮಾಡಿದ್ದಾನೆ. ಲೇವ್ಯ ಯಾಜಕರ ಹಾಗೆ ಆತನು ಮರ್ತ್ಯನಲ್ಲ, ಅವಿನಾಶಿ ಜೀವವನ್ನು ಪಡೆದಿರುತ್ತಾನೆ ಮತ್ತು ಹೀಗೆ, ತನ್ನ ರಕ್ಷಣೆಯ ಕಾರ್ಯದಲ್ಲಿ ಯಾವ ವಾರಸುದಾರನ ಅಗತ್ಯ ಅವನಿಗಿಲ್ಲ. ಆತನಿಗೆ ಪಶು ಬಲಿಗಳನ್ನು ಅರ್ಪಿಸಬೇಕಾಗಿಲ್ಲ ಯಾಕಂದರೆ ಅವನು, ತನ್ನ ಮಹಾ ಶ್ರೇಷ್ಠತರದ ಪಾಪರಹಿತ ದೇಹವನ್ನು ಬಲಿಯಾಗಿ ಕೊಟ್ಟನು ಮತ್ತು ತನ್ನ ರಕ್ತದ ಬೆಲೆಯೊಂದಿಗೆ ಪರಲೋಕವನ್ನು ಪ್ರವೇಶಿಸಿದ್ದಾನೆ.

ಯೇಸುವಿನ ರಕ್ತದಿಂದ ದೃಢೀಕರಿಸಲ್ಪಟ್ಟ ಹೊಸ ಒಡಂಬಡಿಕೆಯು, ನಿಯಮದೊಡಂಬಡಿಕೆಗಿಂತ ಶ್ರೇಷ್ಠವಾದದ್ದು. ಹೊಸ ಒಡಂಬಡಿಕೆಯೊಳಗೆ ಇರುವವರ ಹೃದಯದೊಳಗೇ ದೇವರ ನಿಯಮಗಳು ಬರೆಯಲ್ಪಟ್ಟಿವೆ ಮತ್ತು ಅವರು ಪಾಪ ಕ್ಷಮೆಯಲ್ಲಿ ಆನಂದಿಸುವರು. (ಯೆರೆಮೀಯ 31:31-34) ಇದಕ್ಕಾಗಿ ಅವರಿಗಿರುವ ಕೃತಜ್ಞತೆಯು, ತಮ್ಮ ನಿರೀಕ್ಷೆಯ ಬಹಿರಂಗ ಅರಿಕೆಯನ್ನು ಮಾಡುವಂತೆ ಮತ್ತು ತಮ್ಮ ಜತೆ ವಿಶ್ವಾಸಿಗಳೊಂದಿಗೆ ಕೂಡಿಬರುವಂತೆ ಅವರನ್ನು ಪ್ರೇರೇಪಿಸುತ್ತದೆ. ಪಾಪಗಳಿಗಾಗಿ ಯಾವುದೇ ಬಲಿಯರ್ಪಣೆ ಇವರಂತಿರದ, ಬುದ್ಧಿಪೂರ್ವಕ ಪಾಪಿಗಳಿಗಾದರೋ ಇರುವುದಿಲ್ಲ.

ನಂಬಿಕೆ ಅತ್ಯಾವಶ್ಯಕ!

ಶ್ರೇಷ್ಠವಾದ ಹೊಸ ಒಡಂಬಡಿಕೆಯಿಂದ ಪ್ರಯೋಜನ ಪಡೆಯಲು ನಮಗೆ ನಂಬಿಕೆ ಬೇಕು. (10:32–12:29) ಯೆಹೋವನು ಏನನ್ನು ವಾಗ್ದಾನಿಸಿದ್ದಾನೋ ಅದನ್ನು ಪಡೆಯಬೇಕಾದರೆ ತಾಳ್ಮೆಯು ಸಹಾ ಬೇಕು. ತಾಳಿಕೊಳ್ಳಲು ಪ್ರೋತ್ಸಾಹನೆಗಾಗಿ ನಮಗೆ, ಕ್ರೈಸ್ತ ಪೂರ್ವ ಸಾಕ್ಷಿಗಳ ‘ಮಹಾ ಮೇಘ’ವು ಸುತ್ತಮುತ್ತಲೂ ಇದೆ. ಆದರೂ ವಿಶೇಷವಾಗಿ, ಕಷ್ಟಾನುಭವದ ಕೆಳಗೆ ಯೇಸು ತೋರಿಸಿದ ನಿಷ್ಕಲಂಕ ಮಾರ್ಗಕ್ರಮವನ್ನು ನಾವು ನಿಕಟವಾಗಿ ಪರಿಗಣಿಸಬೇಕು. ನಮ್ಮ ಮೇಲೆ ಬೀಳುವಂತೆ ದೇವರು ಅನುಮತಿಸುವ ಯಾವುವೇ ಕಷ್ಟಾನುಭವಗಳನ್ನು, ನೀತಿಯೆಂಬ ಸಮಾಧಾನಕರವಾದ ಫಲವನ್ನು ಕೊಡುವ ತಿದ್ದುಪಾಟಿನ ನೋಟದಲ್ಲಿ ನೋಡಬೇಕು. ಯೆಹೋವನ ವಾಗ್ದಾನಗಳ ನಂಬಲರ್ಹತೆಯು, “ಭಕ್ತಿಯಿಂದಲೂ ಭಯದಿಂದಲೂ” ಪವಿತ್ರ ಸೇವೆಯನ್ನು ಸಲ್ಲಿಸುವ ಅಪೇಕ್ಷೆಯನ್ನು ನಮ್ಮಲ್ಲಿ ಹೆಚ್ಚಿಸಬೇಕು.

ಹಿತೋಕ್ತಿಗಳಿಂದ ಪೌಲನು ಸಮಾಪ್ತಿಗೊಳಿಸುತ್ತಾನೆ. (13:1-25) ನಂಬಿಕೆಯು ನಮ್ಮನ್ನು, ಸಹೋದರ ಪ್ರೀತಿಯನ್ನು ತೋರಿಸುವಂತೆ, ಅತಿಥಿ ಸತ್ಕಾರ ಮಾಡುವಂತೆ, ಸಂಕಟದಲ್ಲಿರುವ ಜತೆ ವಿಶ್ವಾಸಿಗಳನ್ನು ನೆನಪು ಮಾಡುವಂತೆ, ವಿವಾಹವನ್ನು ಮಾನ್ಯವಾಗಿ ಎಣಿಸುವಂತೆ ಮತ್ತು “ನಮಗಿರುವವುಗಳಲ್ಲಿ ತೃಪ್ತರಾಗುವಂತೆ” ಪ್ರಚೋದಿಸಬೇಕು. ಸಭೆಯಲ್ಲಿ ನಾಯಕತ್ವ ವಹಿಸುವವರ ನಂಬಿಕೆಯನ್ನು ನಾವು ಅನುಸರಿಸಬೇಕು ಮತ್ತು ಅವರಿಗೆ ವಿಧೇಯರಾಗಬೇಕು. ಅದಲ್ಲದೆ ನಾವು, ಧರ್ಮಭ್ರಷ್ಟತೆಯನ್ನು ವಿಸರ್ಜಿಸಬೇಕು, ಯೇಸು ಸಹಿಸಿದ ನಿಂದೆಯನ್ನು ತಾಳಿಕೊಳ್ಳಬೇಕು, “ದೇವರಿಗೆ ಸ್ತೋತ್ರ ಯಜ್ಞವನ್ನು ಎಡೆಬಿಡದೆ ಸಮರ್ಪಿಸಬೇಕು” ಮತ್ತು ಸತ್ಕಾರ್ಯಗಳನ್ನು ಮಾಡುತ್ತಾ ಇರಬೇಕು. ಅಂಥ ನಡವಳಿಕೆಯು ಸಹಾ ನಿಜ ಕ್ರೈಸ್ತತ್ವದ ಶ್ರೇಷ್ಠ ವೈಶಿಷ್ಟ್ಯಗಳಲ್ಲಿ ಕೂಡಿರುತ್ತದೆ. (w91 1/1)

[ಪುಟ 12 ರಲ್ಲಿರುವ ಚೌಕ/ಚಿತ್ರಗಳು]

ವಿವಿಧ ಸ್ನಾನಗಳು: ಇಸ್ರಾಯೇಲ್ಯ ಗುಡಾರದ ಆರಾಧನಾ ವೈಶಿಷ್ಟ್ಯಗಳಲ್ಲಿ “ಅನ್ನಪಾನಾದಿಗಳೂ ವಿವಿಧ ಸ್ನಾನಗಳೂ” ಮಾತ್ರವೇ ಕೂಡಿದ್ದವು. (ಇಬ್ರಿಯ 9:9, 10) ಈ ಸ್ನಾನಗಳು ಮೋಶೆಯ ಧರ್ಮಶಾಸ್ತ್ರದಿಂದ ಅವಶ್ಯಪಡಿಸಲ್ಪಟ್ಟ ಸಂಸ್ಕಾರಿಕ ತೊಳೆಯುವಿಕೆಗಳಾಗಿದ್ದವು. ಅಶುದ್ಧ ಮಾಡಲ್ಪಟ್ಟ ಪಾತ್ರೆಗಳನ್ನು ತೊಳೆಯಬೇಕಾಗಿತ್ತು, ಮತ್ತು ಸಂಸ್ಕಾರಿಕ ಶುದ್ಧತೆಯಲ್ಲಿ ಒಬ್ಬನ ಬಟ್ಟೆ ಒಗೆಯುವಿಕೆ ಮತ್ತು ಸ್ನಾನವು ಸೇರಿತ್ತು. (ಯಾಜಕಕಾಂಡ 11:32; 14:8, 9; 15:5) ಯಾಜಕರು ಸ್ನಾನಮಾಡುತ್ತಿದ್ದರು ಮತ್ತು ಹೋಮ ಸಮರ್ಪಣೆಗಳನ್ನು ಮಾಡುವ ಸಾಮಾನುಗಳನ್ನು ನೀರಿನಲ್ಲಿ ಜಾಲಿಸಬೇಕಿತ್ತು. (ವಿಮೋಚನಕಾಂಡ 29:4; 30:17-21; ಯಾಜಕಕಾಂಡ 1:13; 2 ಪೂರ್ವಕಾಲ 4:6) ಆದರೆ “ವಿವಿಧ ಸ್ನಾನಗಳಲ್ಲಿ,” ಮೆಸ್ಸೀಯನ ಆಗಮನದ ಕಾಲದಲ್ಲಿ ಕೆಲವು ಯೆಹೂದ್ಯರಿಂದ ನಡಿಸಲ್ಪಡುತ್ತಿದ್ದ ಸಾಂಪ್ರದಾಯಿಕ ‘ಬಟ್ಟಲುಗಳ, ತಂಬಿಗೆಗಳ, ತಾಮ್ರ ತಪಲೆಗಳ’ ಸ್ನಾನವು ಸೇರಿರಲಿಲ್ಲ. ಅದಲ್ಲದೆ ಇಬ್ರಿಯ 9:10, ಸ್ನಾನಿಕ ಯೋಹಾನನಿಂದ ನಡಿಸಲ್ಪಟ್ಟ ನೀರಿನ ದೀಕ್ಷಾಸ್ನಾನಕ್ಕಾಗಲಿ ಅಥವಾ ಕ್ರೈಸ್ತರು ದೇವರಿಗೆ ಸಮರ್ಪಣೆಯ ಸೂಚಕವಾಗಿ ಮಾಡುವ ನೀರಿನ ದೀಕ್ಷಾಸ್ನಾನವನ್ನಾಗಲಿ ನಿರ್ದೇಶಿಸುವುದಿಲ್ಲ.—ಮತ್ತಾಯ 28:19, 20; ಮಾರ್ಕ 7:4; ಲೂಕ 3:3.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ