ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w91 4/1 ಪು. 11
  • ಸಹೋದರ ಪ್ರೀತಿ ಕ್ರಿಯಾಶೀಲವು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಹೋದರ ಪ್ರೀತಿ ಕ್ರಿಯಾಶೀಲವು
  • ಕಾವಲಿನಬುರುಜು—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಂಬಿಕೆ ಮತ್ತು ಪ್ರೀತಿಗಾಗಿ ಪ್ರಶಂಸೆ
  • ‘ಪ್ರೀತಿಯ ಆಧಾರದಲ್ಲಿ ಬುದ್ಧಿಹೇಳುವುದು’
    ಕಾವಲಿನಬುರುಜು—1992
  • ಫಿಲೆಮೋನ ಮತ್ತು ಓನೇಸಿಮ—ಕ್ರೈಸ್ತ ಸಹೋದರತ್ವದಲ್ಲಿ ಐಕ್ಯರು
    ಕಾವಲಿನಬುರುಜು—1998
  • ರೋಮ್‌ನಲ್ಲಿ ಪೌಲನು
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಫಿಲೆಮೋನ ಮುಖ್ಯಾಂಶಗಳು
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಇನ್ನಷ್ಟು
ಕಾವಲಿನಬುರುಜು—1991
w91 4/1 ಪು. 11

ಸಹೋದರ ಪ್ರೀತಿ ಕ್ರಿಯಾಶೀಲವು

ಫಿಲೆಮೋನನಿಗೆ ಬರೆದ ಪತ್ರದ ಮುಖ್ಯಾಂಶಗಳು

ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಕೊಟ್ಟ ಒಂದು “ಹೊಸ ಆಜ್ಞೆಯು” ಯಾವುದೆಂದರೆ, ತಾನು ಅವರನ್ನು ಪ್ರೀತಿಸಿದ ಪ್ರಕಾರ ಅವರು ಒಬ್ಬರನ್ನೊಬ್ಬರು ಪ್ರೀತಿಸುವುದೇ. (ಯೋಹಾನ 13:34, 35) ಆ ಪ್ರೀತಿಯ ಕಾರಣ ಅವರು, ಒಬ್ಬರಿಗಾಗಿ ಒಬ್ಬರು ಸಾಯಲೂ ಸಿದ್ಧರು. ಹೌದು, ಸಹೋದರ ಪ್ರೀತಿಯು ಅಷ್ಟು ಬಲವಾದದ್ದೂ ಕ್ರಿಯಾಶೀಲವೂ ಆಗಿದೆ.

ಸಹೋದರ ಪ್ರೀತಿಯು, ಏಸ್ಯಾ ಮೈನರಿನ ಶಹರವಾದ ಕೊಲೊಸ್ಸೆ ಸಭೆಯ ಕ್ರೈಸ್ತನಾಗಿದ್ದ ಫಿಲೆಮೋನನನ್ನು ಪ್ರಚೋದಿಸುವುದೆಂದು ಅಪೊಸ್ತಲ ಪೌಲನಿಗೆ ಖಾತ್ರಿಯಿತ್ತು. ಆ ಪ್ರೀತಿಯು ಈವಾಗಲೇ ಫಿಲೆಮೋನನನ್ನು, ಕ್ರೈಸ್ತಕೂಟಗಳ ಸಲುವಾಗಿ ತನ್ನ ಮನೆಯನ್ನು ತೆರೆಯುವಂತೆ ಪ್ರೇರೇಪಿಸಿತ್ತು. ಫಿಲೆಮೋನನ ದಾಸನಾಗಿದ್ದ ಒನೇಸಿಮನು ಓಡಿಹೋಗಿದ್ದನು, ರೋಮಿನ ಸಮುದ್ರ ಪಯಣಕ್ಕಾಗಿ ಹಣವನ್ನು ಅವನು ಕದ್ದಿದ್ದಿರಲೂ ಬಹುದು. ತದನಂತರ, ಅಲ್ಲಿಯೇ ಅವನು ಪೌಲನಿಗೆ ಭೇಟಿಯಾಗಿ, ಕ್ರೈಸ್ತತ್ವವನ್ನು ಸ್ವೀಕರಿಸಿದ್ದನು.

ಪೌಲನು ರೋಮಿನಲ್ಲಿ ಸೆರೆವಾಸಿಯಾಗಿದ್ದ ಸುಮಾರು ಸಾ.ಶ. 60-61 ರಲ್ಲಿ, ಮುಖ್ಯವಾಗಿ ಫಿಲೆಮೋನನಿಗೆ ಉದ್ದೇಶಿಸಿ, ಒಂದು ಪತ್ರವನ್ನು ಬರೆದನು. ಅದು ಫಿಲೆಮೋನನಿಗೆ ಅಪ್ಪೀಲು ಮಾಡುತ್ತಾ, ಹಿಂತಿರುಗಿ ಬರಲಿರುವ ಒನೇಸಿಮನನ್ನು ಬಂಧು ಪ್ರೀತಿಯ ಭಾವದಲ್ಲಿ ಸ್ವೀಕರಿಸುವಂತೆ ವಿನಂತಿಸಿತ್ತು. ನೀವೀ ಪತ್ರಿಕೆಯನ್ನು ಓದಿರಿ, ಮಮತೆ ಮತ್ತು ಸಮಯೋಚಿತ ನಯದ ಒಂದು ಒಳ್ಳೇ ಮಾದರಿಯನ್ನು ನೀವಲ್ಲಿ ಕಾಣುವಿರಿ—ಯೆಹೋವನ ಜನರು ಅನುಕರಿಸತಕ್ಕ ಉತ್ತಮ ಮಾದರಿಯದು.

ನಂಬಿಕೆ ಮತ್ತು ಪ್ರೀತಿಗಾಗಿ ಪ್ರಶಂಸೆ

ಫಿಲೆಮೋನನನ್ನು ಮತ್ತು ಇತರರನ್ನು ಹೆಸರಿಸುತ್ತಾ ಪೌಲನು, ಮೊದಲು ಪ್ರಶಂಸೆಯನ್ನು ಮಾಡಿದನು. (ಫಿಲೆ. ವಚನಗಳು 1-7) ಫಿಲೆಮೋನನಿಗೆ ಕ್ರಿಸ್ತನಲ್ಲಿದ್ದ ಮತ್ತು ದೇವಜನರೆಲ್ಲರಲ್ಲಿದ್ದ ಪ್ರೀತಿ, ಮತ್ತು ಅವನ ನಂಬಿಕೆಯ ಕುರಿತು ಪೌಲನು ಕೇಳುತ್ತಾ ಇದ್ದನು. ಇದು ಪೌಲನನ್ನು, ಯೆಹೋವನಿಗೆ ಉಪಕಾರ ಹೇಳಲು ಪ್ರಚೋದಿಸಿತು ಮತ್ತು ಅವನಿಗೆ ಬಹಳ ಸಂತೋಷವನ್ನೂ ಆದರಣೆಯನ್ನೂ ಕೊಟ್ಟಿತ್ತು. ಪ್ರೀತಿ ಮತ್ತು ನಂಬಿಕೆಯಲ್ಲಿ ಆದರ್ಶಪ್ರಾಯರಾಗಿರುವ ಜತೆ ವಿಶ್ವಾಸಿಗಳನ್ನು ನಾವು ವೈಯಕ್ತಿಕವಾಗಿ ಪ್ರಶಂಸಿಸುತ್ತೇವೋ? ನಾವು ಹಾಗೆ ಮಾಡತಕ್ಕದ್ದು.

ಜತೆ ಕ್ರೈಸ್ತರೊಂದಿಗೆ ವ್ಯವಹರಿಸುವಲ್ಲಿ, ಪ್ರೀತಿಯ ಆಧಾರದಲ್ಲಿ ಕೊಡುವ ಬುದ್ಧಿವಾದವು ಯಾವಾಗಲೂ ಅಪೇಕ್ಷಣೀಯವು. (ವಚನಗಳು 8-14) ಜಾಣತನದಿಂದ ಗೋಚರಿಸಿದ ಬಳಿಕ ಅಪೊಸ್ತಲನು, “ಯುಕ್ತವಾದದ್ದನ್ನು” ಮಾಡುವಂತೆ ಆಜ್ಞಾಪಿಸಲು ತನಗೆ ಅಧಿಕಾರವಿದ್ದರೂ ಹಾಗೆಮಾಡದೆ, ಬುದ್ಧಿ ಹೇಳಲು ಬಯಸಿದೆನೆಂದು ಹೇಳುತ್ತಾನೆ. ಏನನ್ನು ಮಾಡುವಂತೆ? ದಾಸ ಒನೇಸಿಮನನ್ನು ದಯೆಯಿಂದ ಸ್ವೀಕರಿಸುವಂತೆಯೇ! ಒನೇಸಿಮನ ಉಪಯುಕ್ತ ಸೇವೆಯನ್ನು ಇಟ್ಟುಕೊಳ್ಳಲು ಪೌಲನು ಬಯಸಿದ್ದಿರಬಹುದು; ಆದರೆ ಫಿಲೆಮೋನನ ಒಪ್ಪಿಗೆಯಿಲ್ಲದೆ ಅದನ್ನು ಮಾಡುವಂತಿಲ್ಲ.

ಅಹಿತಕರವಾಗಿ ಕಾಣುವ ವಿಕಸನಗಳು ಕೆಲವು ಸಾರಿ, ಪ್ರಯೋಜನಕಾರಿಯಾಗಿ ರುಜುವಾಗುತ್ತವೆಂದು ಪೌಲನು ಬಳಿಕ ಸೂಚಿಸುತ್ತಾನೆ. (ವಚನಗಳು 15-21) ಕಾರ್ಯಥಃ ಒನೇಸಿಮನು ಓಡಿಹೋದಾಗ, ಒಳ್ಳೆಯದು ಪರಿಣಮಿಸಿತ್ತು. ಏಕೆ? ಏಕೆಂದರೆ ಫಿಲೆಮೋನನು ಅವನನ್ನು ಪ್ರಾಮಾಣಿಕನೂ ಸಿದ್ಧನೂ ಆದ ಕ್ರೈಸ್ತ ಸಹೋದರನಾಗಿ ಹಿಂದೆ ಪಡೆಯಲಿದ್ದನು, ವಿರುದ್ದೇಚ್ಛೆಯ, ಅಪ್ರಾಮಾಣಿಕ ದಾಸನಾಗಿ ಅಲ್ಲ. ಪೌಲನಾದ ತನ್ನನ್ನು ಸೇರಿಸಿಕೊಳ್ಳುವ ಪ್ರಕಾರ ಒನೇಸಿಮನನ್ನೂ ಸೇರಿಸಿಕೊಳ್ಳುವಂತೆ ಪೌಲನು ಫಿಲೆಮೋನನನ್ನು ಕೇಳಿಕೊಳ್ಳುತ್ತಾನೆ. ಫಿಲೆಮೋನನಿಗೆ ಒನೇಸಿಮನು ಯಾವುದೇ ರೀತಿಯಲ್ಲಿ ನಷ್ಟ ಮಾಡಿದ್ದರೆ ಅಪೊಸ್ತಲನು ಅದನ್ನು ಹಿಂದೆ ಸಲ್ಲಿಸಲಿದ್ದನು. ಫಿಲೆಮೋನನನ್ನು ಇನ್ನೂ ಹೆಚ್ಚು ಒಪ್ಪಿಸುವಂತೆ ಮಾಡಲು ಪೌಲನು, ಕ್ರೈಸ್ತನಾಗಿ ಪರಿಣಮಿಸಿದಕ್ಕಾಗಿ ಅಪೊಸ್ತಲನ ಸಾಲದಲ್ಲಿ ಫಿಲೆಮೋನನು ಇದ್ದಾನೆ ಎಂಬ ನೆನಪನ್ನೂ ಕೊಟ್ಟನು. ಹೀಗೆ, ಹೇಳಿದ್ದಕ್ಕಿಂತಲೂ ಹೆಚ್ಚನ್ನು ಫಿಲೆಮೋನನು ಮಾಡುವನೆಂದು ಪೌಲನಿಗೆ ಖಾತ್ರಿಯಿತ್ತು. ಎಂತಹ ಸಮಯೋಚಿತ ನಯ ಮತ್ತು ಪ್ರೀತಿಯ ಗೋಚರವು! ಜತೆ ಕ್ರೈಸ್ತರೊಂದಿಗೆ ನಿಶ್ಚಯವಾಗಿ ನಾವು ಹೀಗೆಯೇ ವ್ಯವಹರಿಸಬೇಕು.

ಪೌಲನು ತನ್ನ ಪತ್ರಿಕೆಯನ್ನು ಒಂದು ನಿರೀಕ್ಷೆ, ವಂದನೆಗಳು ಮತ್ತು ಶುಭಾಶಯಗಳಿಂದ ಕೊನೆಗೊಳಿಸಿದನು. (ವಚನಗಳು 22-25) ತನ್ನ ಪರವಾಗಿ ಬೇರೆಯವರು ಮಾಡುವ ಪ್ರಾರ್ಥನೆಗಳಿಂದಾಗಿ ತಾನು ಬೇಗನೇ ಸೆರೆಮನೆಯಿಂದ ಮುಕ್ತನಾಗುವನೆಂದು ಅವನು ನಿರೀಕ್ಷಿಸಿದ್ದನು. (ತಿಮೊಥಿಗೆ ಪೌಲನು ಬರೆದ ಎರಡನೇ ಪತ್ರವು ತೋರಿಸುವ ಮೇರೆಗೆ, ಆ ಪ್ರಾರ್ಥನೆಗಳು ಉತ್ತರಿಸಲ್ಪಟ್ಟವು.) ತನ್ನ ಪತ್ರಿಕೆಯನ್ನು ಸಮಾಪ್ತಿಗೊಳಿಸುತ್ತಾ ಪೌಲನು, ಫಿಲೆಮೋನನಿಗೆ ಮತ್ತು ಯೆಹೋವನ ಅವನ ಜತೆ ಆರಾಧಕರಿಗೆ ವಂದನೆಗಳನ್ನು ಕಳುಹಿಸಿದನು ಮತ್ತು ಕರ್ತನಾದ ಯೇಸು ಕ್ರಿಸ್ತನ ಕೃಪೆಯು ಅವರೊಂದಿಗಿರಲಿ ಎಂಬ ತನ್ನ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದಾನೆ. (w91 2/15)

[ಪುಟ 11 ರಲ್ಲಿರುವ ಚೌಕ/ಚಿತ್ರಗಳು]

ದಾಸನಿಗಿಂತ ಉತ್ತಮನಾದನು: ಫಿಲೆಮೋನನ ಓಡಿಹೋದ ದಾಸ ಒನೇಸಿಮನ ಹಿಂದಿರುಗುವಿಕೆಯ ಕುರಿತು, ಪೌಲನು ಅಂದದ್ದು: “ಅವನು ಸ್ವಲ್ಪ ಕಾಲ ನಿನ್ನಿಂದ ಅಗಲಿಸಲ್ಪಟ್ಟದ್ದು ನಿರಂತರವೂ ನಿನ್ನವನಾಗಬೇಕೆಂಬದಕ್ಕೋಸ್ಕರವೋ ಏನೋ. ಇನ್ನು ಮೇಲೆ ಅವನು ದಾಸನಾಗದೆ ದಾಸನಿಗಿಂತ ಉತ್ತಮನಾಗಿ ಪ್ರಿಯ ಸಹೋದರನಂತಾಗಬೇಕು. ಅವನು ನನಗೆ ಬಹಳ ಪ್ರಿಯನಾಗಿರುವಲ್ಲಿ, ನಿನಗೆ ಲೋಕ ಸಂಬಂಧದಲ್ಲಿಯೂ ಕರ್ತನ ಸಂಬಂಧದಲ್ಲಿಯೂ ಇನ್ನೂ ಎಷ್ಟೋ ಪ್ರಿಯನಾಗಿರುವನು.” (ಫಿಲೆಮೋನ 15, 16) ರೋಮನ್‌ ಸಾಮ್ರಾಜ್ಯದಲ್ಲಿ, ಚಕ್ರವರ್ತಿಯ ಸರಕಾರದಿಂದ ದಾಸ್ವತವು ಜ್ಯಾರಿಯಲ್ಲಿತ್ತು, ಮತ್ತು ಪೌಲನು ಅಂಥ “ಮೇಲಧಿಕಾರವನ್ನು” ಅಂಗೀಕರಿಸಿದ್ದನು. (ರೋಮಾಪುರ 13:1-7) ಅವನು ಒಬ್ಬ ದಾಸನ ದಂಗೆಯನ್ನು ಪ್ರತಿಪಾದಿಸಲಿಲ್ಲ ಆದರೆ, ಅಂಥ ಜನರಿಗೆ ಕ್ರೈಸ್ತರಾಗಿ ಆತ್ಮಿಕ ಬಿಡುಗಡೆಯನ್ನು ಹೊಂದುವಂತೆ ಸಹಾಯ ಮಾಡಿದ್ದನು. ದಾಸರು ಯಜಮಾನರಿಗೆ ಅಧೀನರಾಗಬೇಕೆಂಬ ತನ್ನ ಸ್ವಂತ ಸೂಚನೆಗೆ ಹೊಂದಿಕೆಯಲ್ಲಿ ಪೌಲನು, ಒನೇಸಿಮನನ್ನು ಹಿಂದೆ ಫಿಲೆಮೋನನ ಬಳಿಗೆ ಕಳುಹಿಸಿಕೊಟ್ಟನು. (ಕೊಲೊಸ್ಸೆ 3:22-24; ತೀತ 2:9, 10) ಒನೇಸಿಮನು ಈಗ ಲೌಕಿಕ ದಾಸನಿಗಿಂತ ಎಷ್ಟೋ ಹೆಚ್ಚಿನವನು. ಉತ್ತಮ ದಾಸನೋಪಾದಿ ಅವನು, ಫಿಲೆಮೋನನಿಗೆ ಸಂಬಂಧಿ ಅಧೀನತೆಯಲ್ಲಿರುವ ಪ್ರಿಯ ಜತೆ ವಿಶ್ವಾಸಿಯೂ, ದೈವಿಕ ತತ್ವಗಳಿಂದ ನಡಿಸಲ್ಪಡುವವನೂ ಸಹೋದರ ಪ್ರೀತಿಯನ್ನು ತೋರಿಸುವವನೂ ಆಗಿರಲಿದ್ದನು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ