ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w91 7/1 ಪು. 6-7
  • ನರಕದ ಕುರಿತು ಸತ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನರಕದ ಕುರಿತು ಸತ್ಯ
  • ಕಾವಲಿನಬುರುಜು—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮರಣಾನಂತರ ಶಿಕ್ಷೆಯಿಲ್ಲ
  • ಪುನರುತ್ಥಾನದಿಂದ ನರಕವು ಬರಿದುಗೊಳಿಸಲ್ಪಡುವದು
  • ನರಕದ ಬೆಂಕಿ ಎಲ್ಲಿ ಹೋಯಿತು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ವ್ಯಾಪಕವಾಗಿ ಹರಡಿರುವ ನಂಬಿಕೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ನರಕವು ನಿಜವಾಗಿಯೂ ಏನಾಗಿದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ನರಕವು ಬಿಸಿಯಾಗಿದೆಯೇ?
    ಕಾವಲಿನಬುರುಜು—1991
ಇನ್ನಷ್ಟು
ಕಾವಲಿನಬುರುಜು—1991
w91 7/1 ಪು. 6-7

ನರಕದ ಕುರಿತು ಸತ್ಯ

ನಿಸ್ಸಂದೇಹವಾಗಿ ಮರಣಾನಂತರದ ಶಿಕ್ಷೆಯ ಹಿಂದಿರುವ ಮೂಲಭೂತ ಬೋಧನೆಯೇನಂದರೆ, ಮಾಂಸಿಕ ದೇಹವು ಸತ್ತಾಗ, ವಾಸ್ತವ ಮನುಷ್ಯನು ನಿಜವಾಗಿ ಸಾಯುವದಿಲ್ಲ, ಆದರೆ ಯಾವುದೋ ಒಂದು—ಆತ್ಮವೆಂದು ಹೆಚ್ಚಾಗಿ ಕರೆಯಲ್ಪಡುವ—ವಸ್ತು, ದೇಹದ ಮರಣವನ್ನು ಪಾರಾಗುತ್ತದೆ. ನಾವು ಹಿಂದಿನ ಲೇಖನದಲ್ಲಿ ನೋಡಿದಂತೆ, ಈ ನಂಬಿಕೆಯು ಮೆಸೊಪೊಟಮಿಯದ ಆರಂಭದ ಸುಮೇರಿಯನರ ಮತ್ತು ಬಬಿಲೋನ್ಯರ ಕಾಲದಷ್ಟು ಹಿಂದಕ್ಕೆ ಹೋಗುತ್ತದೆ. ಅನಂತರ, ಇದು ಗ್ರೀಕರಿಂದ ದತ್ತುಪಡೆಯಲ್ಪಟ್ಟಿತು, ಅವರ ತತ್ವಜ್ಞಾನಿಗಳಾದ ಪ್ಲೇಟೊನಂಥವರು ಈ ವಿಚಾರ ಸರಣಿಯನ್ನು ಮೆರಗುಗೊಳಿಸಿದರು. “ದೇಹ ಮತ್ತು ಆತ್ಮ”ದಲ್ಲಿನ ಅವರ ಪರಿಶೋಧಿತವಾದ ದೈತ್ವ ನಂಬಿಕೆಯು ಧರ್ಮಭ್ರಷ್ಟಗೊಂಡ ಯೆಹೂದ್ಯರ ನಂಬಿಕೆಯ ಭಾಗವಾಯಿತು.

ಕ್ರೈಸ್ತರೆಂದು ಹೇಳಿಕೊಳ್ಳುವವರು ಇಂಥಾ ಜೀವಿತಾನಂತರದ ನಂಬಿಕೆಯನ್ನು ಯಾವಾಗ ಸ್ವೀಕರಿಸಿದರು? ಖಂಡಿತವಾಗಿಯೂ ಯೇಸುವಿನ ಮತ್ತು ಅವನ ಅಪೊಸ್ತಲರ ಕಾಲದಲ್ಲಿ ಅಲ್ಲ. ಫ್ರೆಂಚ್‌ ಎನ್‌ಸೈಕ್ಲೊ.ಪೀಡಿಯಾ ಯುನಿವರ್ಸಲಿಸ್‌ ಹೇಳುವದು: “[ಸಂಶಯ ಪ್ರಮಾಣದ-ಅಪೊಕ್ರಿಪಲ್‌] ಅಪೊಕಲಿಪ್ಸ್‌ ಆಫ್‌ ಪೀಟರ್‌ (ಸಾ.ಶ. 2ನೆಯ ಶತಮಾನದ್ದು) ನರಕದಲ್ಲಿ ಪಾಪಿಗಳ ಶಿಕ್ಷೆ ಮತ್ತು ಯಾತನೆಗಳನ್ನು ವರ್ಣಿಸುವ ಪ್ರಥಮ ಕ್ರಿಸ್ತೀಯ ಕೃತಿಯಾಗಿತ್ತು.”

ವಾಸ್ತವದಲ್ಲಿ, ಆದಿ ಚರ್ಚು ಪಿತೃರುಗಳ ನಡುವೆ, ನರಕದ ಕುರಿತಾಗಿ ಅನೇಕ ಭಿನ್ನಾಭಿಪ್ರಾಯಗಳು ಇದ್ದವು ಎಂದು ಕಂಡು ಬರುತ್ತದೆ. ಜಸ್ಟಿನ್‌ ಮಾರ್ಟಿರ್‌, ಅಲೆಕ್ಸಾಂಡ್ರಿಯದ ಕೆಮ್ಲೆಂಟ್‌, ತೆರ್ತುಲ್ಲಿಯಾನ್‌ ಮತ್ತು ಸಿಪ್ರಿಯನ್‌ ಒಂದು ಅಗ್ನಿಯ ನರಕದ ಪರವಾಗಿ ಇದ್ದರು. ನರಕದಲ್ಲಿರುವ ಪಾಪಿಗಳು ಕ್ರಮೇಣ ರಕ್ಷಿಸಲ್ಪಡುವರು ಎಂದು ಓರಿಗೆನನು ವಾದಿಸುತ್ತಾ, ನರಕಕ್ಕೆ ಒಂದು ಪರಿಹಾರಕ ತಿರುವನ್ನು ಕೊಡಲು ಪ್ರಯತ್ನಿಸಿದನು. ನಜಿಯಂಜಸ್‌ನ ಗ್ರೆಗೊರಿ ಮತ್ತು ನಿಯಾಸ್ಸದ ಗ್ರೆಗೊರಿ ಅವನನ್ನು ಹೆಚ್ಚು ಯಾ ಕಡಿಮೆ ಮಟ್ಟದಲ್ಲಿ ಅನುಕರಿಸಿದರು. ಆದರೆ ಆಗಸ್ಟೀನನು ನರಕದ ಕುರಿತಾದ ಇಂಥ ಮೆತ್ತನೆಯ ದೃಷ್ಟಿಕೋನಗಳಿಗೆ ಒಂದು ಅಂತ್ಯವನ್ನು ಹಾಕಿದನು. ಅರ್ಲಿ ಕ್ರಿಶ್ಚ್ಯನ್‌ ಡಾಕ್ಟ್ರಿನ್ಸ್‌ ಎಂಬ ಅವನ ಪುಸ್ತಕದಲ್ಲಿ, ಆಕ್ಸ್‌ಫರ್ಡ್‌ ಪ್ರೊಫೆಸರ್‌ ಜೆ.ಎನ್‌.ಡಿ.ಕೆಲ್ಲಿ ಬರೆಯುವದು: “ಪಾಪಿಗಳಿಗೆ ಈ ಜೀವಿತಾನಂತರ ಇನ್ನೊಂದು ಅವಕಾಶ ಇರುವದಿಲ್ಲ ಮತ್ತು ಅವರನ್ನು ದಹಿಸುವ ಬೆಂಕಿಯು ಎಂದೂ ಆರುವದಿಲ್ಲ ಎಂಬ ಕಠೋರ ಬೋಧನೆಯು ಐದನೆಯ ಶತಮಾನದೊಳಗೆ, ಎಲ್ಲಾ ಕಡೆಗಳಲ್ಲಿಯೂ ಸರ್ವ ಪ್ರಧಾನವಾಗಿತ್ತು.”

ಪರ್ಗೆಟರಿಯ [ಶುದ್ಧಿಲೋಕ] ಕುರಿತಾಗಿ ಒರ್ಫಿಯುಸ್‌—ಎ ಜನರಲ್‌ ಹಿಸ್ಟರಿ ಆಫ್‌ ರಿಲಿಜನ್ಸ್‌ ಪುಸ್ತಕದಲ್ಲಿ ತಿಳಿಸುವದು: “ಭವಿಷ್ಯತ್ತಿನ ಪರಮ ಸುಖ ಮತ್ತು ನರಕ ಶಿಕ್ಷೆಯ ನಡುವೆ ನೀತಿಪರೀಕ್ಷೆಯ ಒಂದು ಮಧ್ಯಸ್ಥಿತಿ, ಬೆಂಕಿಯಿಂದ ಆತ್ಮಗಳ ಶುದ್ಧೀಕರಣವಿದೆ ಎಂದು ಸಂತ ಆಗಸ್ಟೀನನು ಹೇಳಿಕೊಂಡಿದ್ದನು. ಇದು ಒರ್ಫಿಕ್‌ [ವಿಧರ್ಮಿ ಗ್ರೀಕ್‌] ಮತ್ತು ವರ್ಜಿಲಿಯನ್‌ [ವಿಧರ್ಮಿ ರೋಮನ್‌] ಇವರ ಶುದ್ಧಿಲೋಕದ ಬೋಧನೆಯಾಗಿದೆ: ಅದರ ಕುರಿತಾಗಿ ಸುವಾರ್ತೆಗಳ ಪುಸ್ತಕಗಳಲ್ಲಿ ಯಾವ ಒಂದೇ ಶಬ್ದವೂ ಇಲ್ಲ. . . . ಪರ್ಗೆಟರಿಯ ಬೋಧನೆಯು . . . ಆರನೆಯ ಶತಮಾನದಲ್ಲಿ ಸೂತ್ರೀಕರಿಸಲ್ಪಟ್ಟಿತ್ತು ಮತ್ತು ಕೌನ್ಸಿಲ್‌ ಆಫ್‌ ಫೊರ್ಲೆನ್ಸ್‌ (1439)ನಿಂದ ಚರ್ಚಿನ ಒಂದು ಸಿದ್ಧಾಂತವಾಗಿ ಘೋಷಿಸಲ್ಪಟ್ಟಿತ್ತು.” ನ್ಯೂ ಕ್ಯಾಥಲಿಕ್‌ ಎನ್‌ಸೈಕ್ಲೊಪೀಡಿಯಾ ಒಪ್ಪಿಕೊಳ್ಳುವದು: “ಪರ್ಗೆಟರಿಯ ಕ್ಯಾಥಲಿಕರ ಬೋಧನೆಯು ಸಂಪ್ರದಾಯದ ಮೇಲೆ ಆಧರಿತವಾಗಿದೆ, ಪವಿತ್ರ ಶಾಸ್ತ್ರದ ಮೇಲೆ ಅಲ್ಲ.” ಲಿಂಬೋವಿನ ಕುರಿತಾಗಿ ರೋಮಿನ ಕಾರ್ಡಿನಲ್‌ ರಾಟ್ಜಿಂಗರ್‌ ಒಪ್ಪುವದೇನಂದರೆ ಅದು “ಕೇವಲ ದೇವತಾ ಶಾಸ್ತ್ರದ ಒಂದು ಕಲ್ಪನೆಯಾಗಿದೆ.”

ಮರಣಾನಂತರ ಶಿಕ್ಷೆಯಿಲ್ಲ

ಬೈಬಲಿನ ಕುರಿತಾದರೂ ಏನು? ಮರಣಾನಂತರ ಆತ್ಮವು ದೇಹದಿಂದ ಪಾರಾಗುತ್ತದೆ, ಮತ್ತು ಆದುದರಿಂದ ಬೆಂಕಿಯ ನರಕ ಇಲ್ಲವೇ ಪರ್ಗೆಟರಿಯೊಂದರಲ್ಲಿ ಶಿಕ್ಷಿಸಲ್ಪಡಸಾಧ್ಯವಿದೆ ಎಂದು ಹೇಳುತ್ತದೋ? ನ್ಯೂ ಕ್ಯಾಥಲಿಕ್‌ ಎನ್‌ ಸೈಕ್ಲೊಪೀಡಿಯಾ ಹೇಳುವದು: ಮರಣಾನಂತರ ಆತ್ಮದ ಪಾರಾಗುವಿಕೆಯ ಕಲ್ಪನೆಯನ್ನು ಬೈಬಲಿನಲ್ಲಿ ಸುಲಭವಾಗಿ ವಿವೇಚಿಸಲು ಆಗುವದಿಲ್ಲ. . . . ಹಳೇ ಒಡಂಬಡಿಕೆಯಲ್ಲಿ ಆತ್ಮವೆಂದರೆ ಮನುಷ್ಯನ ಒಂದು ಭಾಗವೆಂದರ್ಥವಲ್ಲ, ಬದಲು ಪೂರ್ಣ ಮನುಷ್ಯನೇ—ಜೀವಿಸುವ ವ್ಯಕ್ತಿಯಾಗಿರುವ ಮನುಷ್ಯನಾಗಿರುತ್ತಾನೆ. ತದ್ರೀತಿಯಲ್ಲಿ ಹೊಸ ಒಡಂಬಡಿಕೆಯಲ್ಲಿ ಅದು ಮಾನವ ಜೀವವನ್ನು ಸೂಚಿಸುತ್ತದೆ: ಒಬ್ಬ ವ್ಯಕ್ತಿಯ ಜೀವಿತ.”

ಆದುದರಿಂದ ಮರಣಾನಂತರ ಶಿಕ್ಷೆಗಾಗಿರುವ ಮೂಲಭೂತ ಕಲ್ಪನೆಯು ತಳವಿಲ್ಲದೆ ಹೋಗುತ್ತದೆ. ಬೈಬಲು ಹೇಳುವದು: “ಪಾಪ ಮಾಡುವ ಆತ್ಮವು ಸಾಯುವದು.” (ಯೆಹೆಜ್ಕೇಲ 18:4; ರಿವೈಸ್ಡ್‌ ಸ್ಟಾಂಡರ್ಡ್‌ ವರ್ಶನ್‌, ಕ್ಯಾಥಲಿಕ್‌ ಆವೃತ್ತಿ) ಅದು ಇದನ್ನೂ ಘೋಷಿಸಿದೆ: “ಪಾಪದ ಸಂಬಳ ಮರಣ.” (ರೋಮಾಪುರ 6:23, RSV) ಆದಕಾರಣ, ಪಶ್ಚಾತ್ತಾಪ ಪಡದ ದುಷ್ಟ ಜನರು “ಗೆಹೆನ್ನಾ,” “ನಿತ್ಯ ಬೆಂಕಿ,” ಇಲ್ಲವೇ “ಬೆಂಕಿಯ ಕೆರೆ”ಯಲ್ಲಿ ನಾಶಗೊಳಿಸಲ್ಪಡುತ್ತಾರೆಂದು ಬೈಬಲು ಮಾತಾಡುವಾಗ, ಅದು ಕೇವಲ ಸಾಂಕೇತಿಕ ಭಾಷೆಯನ್ನು ಉಪಯೋಗಿಸಿ, ಅವರು ಶಾಶ್ವತ ಮರಣ, “ಎರಡನೆಯ ಮರಣಕ್ಕೆ” ಹೋಗುವರು ಎಂದು ಮಾತಾಡುವದಾಗಿದೆ. (ಮತ್ತಾಯ 23:33; 25:41, 46; ಪ್ರಕಟನೆ 20:14; 21:8;a 2 ಥೆಸಲೊನೀಕ 1:7-9ನ್ನು ಹೋಲಿಸಿರಿ.)

ಪುನರುತ್ಥಾನದಿಂದ ನರಕವು ಬರಿದುಗೊಳಿಸಲ್ಪಡುವದು

ಹಾಗಾದರೆ, ನರಕವು ಬಿಸಿಯಾಗಿದೆಯೇ? ಬೈಬಲಿಗನುಸಾರ ಇಲ್ಲ. ಖಂಡಿತವಾಗಿಯೂ, ಕೆಲವು ಬೈಬಲುಗಳಲ್ಲಿ ತರ್ಜುಮೆಯಾದ ಹಿಬ್ರೂ ಮತ್ತು ಗ್ರೀಕ್‌ ಶಬ್ದಗಳ “ನರಕ”ವೆಂದರೆ ಕೇವಲ ಮೃತ ಮಾನವರ ಸಾಮಾನ್ಯ ಸಮಾಧಿ ಎಂದು ಸೂಚಿಸುತ್ತದೆ. ಅದು ಯಾತನೆಯ ಒಂದು ಬಿಸಿ ಸ್ಥಳವಾಗಿರುವದಿಲ್ಲ, ಬದಲಾಗಿ ಅದು ವಿಶ್ರಾಂತಿಯ ಒಂದು ಸ್ಥಳವಾಗಿದ್ದು, ಅಲ್ಲಿಂದ ಪುನರುತ್ಥಾನದಲ್ಲಿ ಮೃತರು ಹೊರಬರಲಿರುವರು. (ಪ್ರಸಂಗಿ 9:10; ಅ.ಕೃತ್ಯಗಳು 24:15) ಸಿಝ್ವರ್ಲೇಂಡಿನ ಥಿಯೊಲೊಜಿಕಲ್‌ ಫ್ಯಾಕಲ್ಟಿ ಆಫ್‌ ದಿ ಯುನಿವರ್ಸಿಟಿ ಆಫ್‌ ಬ್ಯಾಸಿಲ್‌ ಮತ್ತು ಪ್ಯಾರಿಸಿನ ಸೊರ್ಬೊನ್‌ನ ಪ್ರೊಫೆಸರ್‌ ಆಸ್ಕರ್‌ ಕಲ್‌ಮ್ಯಾನ್‌ ಹೇಳುವದು, “ಮೃತರ ಪುನರುತ್ಥಾನದ ಕ್ರಿಸ್ತೀಯ ನಿರೀಕ್ಷೆಯ ಮತ್ತು ಆತ್ಮದ ಅಮರತ್ವದ ಗ್ರೀಕ್‌ ನಂಬಿಕೆಗಳ ನಡುವೆ, ತೀವ್ರತಮ ಭಿನ್ನತೆ ಇದೆ.” ಯೋಗ್ಯವಾಗಿಯೇ, ಅವನು ಹೇಳುವದೇನಂದರೆ, “ನಂತರದ ಕ್ರೈಸ್ತತ್ವವು ಈ ಎರಡು ನಂಬಿಕೆಗಳ ನಡುವೆ ಕೊಂಡಿಯನ್ನು ಜೋಡಿಸಿತ್ತು ಎಂಬದು ವಾಸ್ತವಾಂಶವಲ್ಲ. . . . ಇನ್ನೊಂದರ ಪರವಾಗಿ [ಮಾನವ ಆತ್ಮದಲ್ಲಿ ವಿಧರ್ಮಿ ನಂಬಿಕೆಯ] ಒಂದನ್ನು ಪರಿತ್ಯಾಗ ಮಾಡುವದೇ [ಪುನರುತ್ಥಾನದ ಕುರಿತಾದ ಬೈಬಲ್‌ ಬೋಧನೆ] ಆಗಿರುತ್ತದೆ.”—ಒತ್ತಕ್ಷರ ನಮ್ಮದು.

ಆತ್ಮದ ಅಮರತ್ವದ ಕಲ್ಪನೆಯ ಪರವಾಗಿ, ಪುನರುತ್ಥಾನದ ತಮ್ಮ ನಂಬಿಕೆಯನ್ನು ಯೆಹೋವನ ಸಾಕ್ಷಿಗಳು ತ್ಯಜಿಸುವದಿಲ್ಲ. ಅವರ ಆನಂದದ ನಿರೀಕ್ಷೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಮತ್ತು ನರಕವು ಬಿಸಿಯಾಗಿರುವದಿಲ್ಲ ಎಂಬ ಸತ್ಯತೆಯ ಕುರಿತು ಬೈಬಲಿನಿಂದ ನಿಮಗೆ ರುಜು ಪಡಿಸಲು ಅವರು ಸಂತೋಷಿಸುವರು. (w89 10/1)

[ಅಧ್ಯಯನ ಪ್ರಶ್ನೆಗಳು]

a  ಅಗ್ನಿಯ ನರಕವೊಂದರ ಬೋಧನೆಗೆ ಒತ್ತುಕೊಡುವ ಪ್ರಯತ್ನದಲ್ಲಿ ಕೆಲವರು ಬಳಸುವ ಈ ಮತ್ತು ಇತರ ಬೈಬಲ್‌ ವಚನಗಳ ಅಧಿಕ ಸಮಾಚಾರಕ್ಕಾಗಿ, ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಇರುವದು ಈ ಜೀವಿತ ಮಾತ್ರವೋ ಎಂಬ ಪುಸ್ತಕವನ್ನು ನೋಡಿರಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ