ನರಕವು ಬಿಸಿಯಾಗಿದೆಯೇ?
“ಸಾವಿರದ ಒಂಭೈನೂರ ಆರುವತ್ತರ ಒಂದು ಬಿಂದುವಿನಲ್ಲಿ, ನರಕವು ಮಾಯವಾಯಿತು.” ಹೀಗೆಂದು ಡೇವಿಡ್ ಲಾಡ್ಜ್, ಸೊಲ್ಸ್ ಆ್ಯಂಡ್ ಬೊಡಿಸ್ ಎಂಬ ಅವನ ಪುಸ್ತಕದಲ್ಲಿ ಹೇಳಿದನು ಮತ್ತು ಅವನ ಮಾತುಗಳು ಎರಡನೆಯ ಲೋಕಯುದ್ಧವನ್ನು ಹಿಂಬಾಲಿಸಿದ ದಶಕಗಳಲ್ಲಿ ಹೆಚ್ಚಿನ ಕ್ಯಾಥಲಿಕರ ಮತ್ತು ಪ್ರಾಟೆಸ್ಟಂಟರ ಆಲೋಚನೆಯನ್ನು ಪ್ರತಿಬಿಂಬಿಸಿತು. ಆಧುನಿಕ ಯೋಚನಾ ನಮೂನೆಗಳಿಗೆ ಹೊಂದಿಸಿಕೊಳ್ಳುವ ಅವರ ಪ್ರಯತ್ತದಲ್ಲಿ ಚಾಲ್ತಿಯಲ್ಲಿದ್ದ ಪ್ರಮುಖ ಚರ್ಚುಗಳು ಅವರ ಅಗ್ನಿಯ ನರಕದ ಕುರಿತಾದ ಅಧಿಕೃತ ಬೋಧನೆಗೆ ಹೆಚ್ಚು ಪ್ರಾಮುಖ್ಯತೆ ಕೊಡಲಿಲ್ಲ.
ಮರಣದ ನಂತರ ಶಿಕ್ಷೆಯ ಯೋಚನೆಯು ವಿಶೇಷವಾಗಿ ಜನರಿಗೆ ಅಸ್ವೀಕರಣೀಯವಾಗಿತ್ತು ಏಕಂದರೆ ಪಾಪದ ಕಲ್ಪನೆಯೇ ಅವರ ಮನಸ್ಸಿನಲ್ಲಿ ಮೊಬ್ಬಾಗಿತ್ತು. 1984ರಲ್ಲಿ ಸಂದರ್ಶನವನ್ನಿತ್ತಾಗ, ರೋಮಿನ ಕಾರ್ಡಿನಲ್ ರಾಟ್ಜಿಂಜರ್ ಹೇಳಿದ್ದು: “ನಮ್ಮ ನಾಗರಿಕತೆ . . . ಮತ್ತು ನರಕ ಹಾಗೂ ಪರ್ಗೆಟರಿಯೊಂದಿಗೆ ಜೊತೆಗೂಡಿರುವ ವಿಶ್ವಾಸದಲ್ಲಿ ಅದರ ಯಥಾವತ್ತು ಸಂಗತಿ ಏನಾಗಿದೆಯೋ ಆ . . . ಜನರ ಅಪರಾಧದ, ಪಾಪದ ಪ್ರಜ್ಞೆಯನ್ನು ತೆಗೆಯುವ ಪ್ರಯತ್ನದಲ್ಲಿ, ಶಮನ ಮಾಡುವದರ ಪರಿಸ್ಥಿತಿಗಳ ಮತ್ತು ಅನ್ಯತ್ರ ಕಾರಣಗಳ ಮೇಲೆ ಕೇಂದ್ರೀಕರಿಸುತ್ತದೆ.”
ಮರಣದ ನಂತರ ಪರ್ಗೆಟರಿಯಲ್ಲಿ ಅಥವಾ ನರಕದಲ್ಲಿ ಶಿಕ್ಷೆಯನ್ನುನುಭವಿಸುವ ಬೋಧನೆಯನ್ನು ಸ್ವೀಕರಿಸದೆ, ಪಾಪದ ನೈಜತೆಯಲ್ಲಿ ನಂಬಲು ಸಾಧ್ಯವಿದೆಯೇ? ಫ್ರೆಂಚ್ ಕಾರ್ಡಿನಲ್ ಡಿಕೊಟ್ರೆಯವರ ಮುನ್ನುಡಿಯಿರುವ ಎಬೆಜಿ ಡೇ ಲಾ ಫೊಯಿ ಕ್ಯಾಥಲಿಕ್ (ಕ್ಯಾಥಲಿಕ್ ನಂಬಿಕೆಯ ಸಾರಾಂಶ) ಎಂಬ ಇತ್ತೀಚಿಗಿನ ಒಂದು ಪುಸ್ತಕದಲ್ಲಿ ಈ ಪ್ರಶ್ನೆಯನ್ನು ನೇರವಾಗಿ ಹಾಕಿತು: “ನರಕವನ್ನು ನಂಬುವ ಜರೂರಿಯಿದೆಯೇ?” ಉತ್ತರ: “ನರಕದ ಭೀತಿಗೊಳಿಸುವ ಪ್ರಶ್ನೆಯನ್ನು ಜಾರಿಸಿಕೊಳ್ಳಲು ಸಾಧ್ಯವಿಲ್ಲ.” ವ್ಯಾಟಿಕನ್ ಕೌನ್ಸಿಲ್ II —ಮೊರ್ ಪೊಸ್ಟ್ಕೌನ್ಸಿಲಿಯರ್ ಡಾಕ್ಯುಮೆಂಟ್ಸ್ (1982) ಕೃತಿಯು “ದೇವ ಜನರ ಮತಸೂತ್ರ”ವನ್ನು ಉಲ್ಲೇಖಿಸಿ ಹೇಳುವದು: “ನಾವು ನಂಬುತ್ತೇವೆ . . . [ಏನಂದರೆ] ದೇವರ ಪ್ರೀತಿ ಮತ್ತು ಕನಿಕರಕ್ಕೆ ಪ್ರತಿಕ್ರಿಯೆ ತೋರಿಸಿದವರು, ನಿತ್ಯ ಜೀವಕ್ಕೆ ಹೋಗುವದರು. ಅದನ್ನು ತಿರಸ್ಕರಿಸುವವರು ಎಂದೂ ಆರದ ಬೆಂಕಿಗೆ ಒಪ್ಪಿಸಲ್ಪಡುವರು.”
ಆದುದರಿಂದ, ಪ್ರತಿಕೂಲವಾಗಿದೆ ಎಂದು ರುಜುಪಡಿಸಲು ಮಾಡಿದ ಎಲ್ಲ ದೇವತಾಶಾಸ್ತ್ರಜ್ಞತೆಯ ಪ್ರಯತ್ನಗಳ ನಂತರವೂ, ನರಕಾಗ್ನಿಯು ಇನ್ನೂ ಬಹುಮಟ್ಟಿಗೆ ಕ್ಯಾಥಲಿಕ್ ಸಿದ್ಧಾಂತಗಳ ಒಂದು ಭಾಗವಾಗಿದೆ. ಆದರೂ, ಎ ನ್ಯೂ ಕ್ಯಾಥಲಿಕ್ ಡಿಕ್ಷನೆರಿ ಆಫ್ ಕ್ರಿಶ್ಚನ್ ಥಿಯೊಲಜಿ (1983) ಈ ಅನಂತ ನರಕ ಶಿಕ್ಷೆಯ ಬೋಧನೆಯು ಇಂದಿನ ಕ್ರೈಸ್ತ ಧರ್ಮಗಳ ಚರ್ಚುಗಳ ಅನೇಕ ಸದಸ್ಯರುಗಳಿಗೆ “ಪೇಚಾಟ” ಮತ್ತು “ತೊಂದರೆ”ಯನ್ನು ಉಂಟುಮಾಡುತ್ತದೆ ಎಂದು ಮಾತಾಡಿದೆ. ಈ ಸಿದ್ಧಾಂತವನ್ನು ಒಬ್ಬ ಪ್ರೀತಿಯ ದೇವರ ಭಾವನೆಗಳೊಂದಿಗೆ ಜೋಡಿಸಲು ಅವರಿಗೆ ತೊಂದರೆಯಾಗುತ್ತದೆ. ಅವರು ಬೆರಗಾಗುವದು: ‘ಬಿಸಿಯಾಗಿರುವ ಒಂದು ನರಕವು ನಿಜವಾಗಿ ಒಂದು ಕ್ರಿಸ್ತೀಯ ಮತ್ತು ಬೈಬಲಿನ ಬೋಧನೆಯಾಗಿದೆಯೇ? ಹಾಗಿರದಿದ್ದಲ್ಲಿ ಅದು ಎಲ್ಲಿ ಉದ್ಭವಿಸಿತು?’ (w89 10/1)
[ಪುಟ 3 ರಲ್ಲಿರುವ ಚಿತ್ರ]
Bourges Cathedral, France