ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • hf ಭಾಗ 5 ಪು. 15-17
  • ಸಂಬಂಧಿಕರೊಂದಿಗೆ ಸಮಾಧಾನದಿಂದಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಂಬಂಧಿಕರೊಂದಿಗೆ ಸಮಾಧಾನದಿಂದಿರಿ
  • ಸುಖೀ ಸಂಸಾರ ಸಾಧ್ಯ!
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • 1 ಸಂಬಂಧಿಕರ ಬಗ್ಗೆ ಸದಭಿಪ್ರಾಯವಿರಲಿ
  • 2 ಅಗತ್ಯವಿದ್ದಾಗ ದೃಢವಾಗಿ ಹೇಳಿ
  • ಬಾಳುವ-ಬಾಂಧವ್ಯದ-ಬೆನ್ನೆಲುಬು-ನಿಷ್ಠೆ
    ಸುಖೀ ಸಂಸಾರ ಸಾಧ್ಯ!
  • ಸುಖೀ ಸಂಸಾರಕ್ಕಾಗಿ ಸೃಷ್ಟಿಕರ್ತನೆಡೆಗೆ ನೋಡಿ
    ಸುಖೀ ಸಂಸಾರ ಸಾಧ್ಯ!
  • ನಿಮ್ಮ ಸಂಗಾತಿಗೆ ಗೌರವ ತೋರಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ!
    ಸುಖೀ ಸಂಸಾರ ಸಾಧ್ಯ!
ಇನ್ನಷ್ಟು
ಸುಖೀ ಸಂಸಾರ ಸಾಧ್ಯ!
hf ಭಾಗ 5 ಪು. 15-17
ಸೊಸೆ ಅಡುಗೆ ಮಾಡುತ್ತಿರುವ ವಿಧಾನ ನೋಡಿ ಅಸಮಾಧಾನಪಡುತ್ತಿರುವ ಅತ್ತೆ

ಭಾಗ 5

ಸಂಬಂಧಿಕರೊಂದಿಗೆ ಸಮಾಧಾನದಿಂದಿರಿ

“ದಯೆಯನ್ನೂ ದೀನಮನಸ್ಸನ್ನೂ ಸೌಮ್ಯಭಾವವನ್ನೂ ದೀರ್ಘ ಸಹನೆಯನ್ನೂ ಧರಿಸಿಕೊಳ್ಳಿರಿ.”— ಕೊಲೊಸ್ಸೆ 3:12.

ಮದುವೆ ಒಂದು ಹೊಸ ಕುಟುಂಬಕ್ಕೆ ದಾರಿ ಮಾಡಿಕೊಡುತ್ತದೆ. ನೀವು ಯಾವಾಗಲೂ ನಿಮ್ಮ ಹೆತ್ತವರನ್ನು ಪ್ರೀತಿಸುತ್ತೀರಿ, ಗೌರವಿಸುತ್ತೀರಿ ಎನ್ನುವುದು ನಿಜವಾದರೂ ಮದುವೆಯಾದ ಮೇಲೆ ನಿಮ್ಮ ಸಂಗಾತಿಗಿಂತ ಮುಖ್ಯ ವ್ಯಕ್ತಿ ಇಡೀ ಭೂಮಿಯಲ್ಲೇ ಯಾರೂ ಇರುವುದಿಲ್ಲ. ಹೆತ್ತವರಿಗಿದು ನುಂಗಲಾರದ ತುತ್ತಾಗಿರಬಹುದು. ಆದರೆ, ಹೊಸ ಕುಟುಂಬದ ಬಂಧವನ್ನು ಭದ್ರಪಡಿಸಲು ನೀವು ಶ್ರಮಿಸುತ್ತಾ ಅದೇ ಸಮಯದಲ್ಲಿ, ನಿಮ್ಮ ಸಂಬಂಧಿಕರೊಂದಿಗೂ ಸಮಾಧಾನದಿಂದಿರಲು ಬೈಬಲ್‌ ತತ್ವಗಳು ನಿಮಗೆ ಸಹಾಯ ಮಾಡುತ್ತವೆ.

1 ಸಂಬಂಧಿಕರ ಬಗ್ಗೆ ಸದಭಿಪ್ರಾಯವಿರಲಿ

ತಮ್ಮ ಹೆತ್ತವರೊಂದಿಗೆ ಸಮಯ ಕಳೆಯುತ್ತಿರುವ ದಂಪತಿ

ಬೈಬಲಿನ ಹಿತವಚನ: “ನಿನ್ನ ತಂದೆತಾಯಿಗಳನ್ನು ಸನ್ಮಾನಿಸು.” (ಎಫೆಸ 6:2) ನಿಮಗೆಷ್ಟೇ ವಯಸ್ಸಾದರೂ ನಿಮ್ಮ ತಂದೆತಾಯಿಯನ್ನು ಯಾವಾಗಲೂ ಸನ್ಮಾನಿಸಬೇಕು ಮತ್ತು ಗೌರವಿಸಬೇಕು. ನಿಮ್ಮ ಹಾಗೆಯೇ ನಿಮ್ಮ ಸಂಗಾತಿಯೂ ಒಬ್ಬ ಮಗ ಅಥವಾ ಮಗಳಾಗಿ ತನ್ನ ಹೆತ್ತವರ ಕಾಳಜಿವಹಿಸಬೇಕು ಎನ್ನುವುದನ್ನು ನೆನಪಿನಲ್ಲಿಡಿ. “ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ,” ಆದ್ದರಿಂದ ನಿಮ್ಮ ಸಂಗಾತಿ ನಿಮಗಿಂತ ಅವರ ಮನೆಯವರನ್ನೇ ಹೆಚ್ಚು ಪ್ರೀತಿಸುತ್ತಾರೆ ಅಂತ ಎಂದಿಗೂ ನೆನೆಸಬೇಡಿ.—1 ಕೊರಿಂಥ 13:4; ಗಲಾತ್ಯ 5:26.

ಹೀಗೆ ಮಾಡಿ:

  • “ನಿಮ್‌ ಮನೆಯವ್ರು ಯಾವಾಗಲೂ ನನ್ನನ್ನ ಕೀಳಾಗಿ ನೋಡ್ತಾರೆ” ಅಥವಾ “ನಿಮ್‌ ಅಮ್ಮಂಗೆ ನಾನು ಏನ್‌ ಮಾಡಿದ್ರೂ ಇಷ್ಟಾನೇ ಆಗಲ್ಲ” ಎಂಬಂಥ ಮಾತುಗಳನ್ನು ಹೇಳಬೇಡಿ

  • ವಿಷಯಗಳನ್ನು ನಿಮ್ಮ ಸಂಗಾತಿಯ ಸ್ಥಾನದಲ್ಲಿ ನಿಂತು ನೋಡಿ

2 ಅಗತ್ಯವಿದ್ದಾಗ ದೃಢವಾಗಿ ಹೇಳಿ

ಬೈಬಲಿನ ಹಿತವಚನ: “ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು.” (ಆದಿಕಾಂಡ 2:24) ಮದುವೆ ಆದ ಮೇಲೂ ನಿಮ್ಮ ಜವಾಬ್ದಾರಿ ಅವರ ಮೇಲಿದೆ ಎಂದು ನಿಮ್ಮ ಹೆತ್ತವರು ನೆನೆಸಬಹುದು. ಹಾಗಾಗಿ ಅವರು ಅಗತ್ಯಕ್ಕಿಂತ ಹೆಚ್ಚಾಗಿ ನಿಮ್ಮ ಸಂಸಾರದ ಆಗುಹೋಗುಗಳಲ್ಲಿ ಒಳಗೂಡಬಹುದು.

ಇಂತಹ ಸಂದರ್ಭಗಳಲ್ಲಿ, ಅವರು ಎಷ್ಟರ ಮಟ್ಟಿಗೆ ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ಒಳಗೂಡಬಹುದೆಂದು ತೀರ್ಮಾನಿಸುವ ಜವಾಬ್ದಾರಿ ನಿಮ್ಮದು ಮತ್ತು ನಿಮ್ಮ ಸಂಗಾತಿಯದ್ದು. ಇದನ್ನು ಅವರಿಗೆ ನೋವಾಗದಂತೆ ಪ್ರೀತಿಯಿಂದ ನೇರವಾಗಿ ಹೇಳಿ. ಆದರೆ ಕಟುವಾಗಿ ಮಾತಾಡಬೇಡಿ. (ಜ್ಞಾನೋಕ್ತಿ 15:1) ದೀನಮನಸ್ಸು, ಸೌಮ್ಯಭಾವ ಮತ್ತು ದೀರ್ಘಸಹನೆಯಂಥ ಗುಣಗಳು ನಿಮ್ಮ ಸಂಬಂಧಿಕರೊಂದಿಗೆ ಒಳ್ಳೆಯ ಬಂಧವನ್ನು ಬೆಳೆಸಿಕೊಳ್ಳಲು ಮತ್ತು ‘ಪ್ರೀತಿಯಲ್ಲಿ ಒಬ್ಬರನ್ನೊಬ್ಬರು ಸಹಿಸಿಕೊಳ್ಳುತ್ತಾ’ ಮುಂದುವರಿಯಲು ಸಹಾಯ ಮಾಡುತ್ತವೆ.—ಎಫೆಸ 4:2.

ಗಂಡ-ಹೆಂಡತಿ ಜೊತೆಯಾಗಿ ಕೂತು ಚರ್ಚಿಸುತ್ತಿರುವುದು; ತಮ್ಮ ಹೆತ್ತವರಿಗೆ ಉಡುಗೊರೆಯನ್ನು ಕೊಡುತ್ತಿರುವ ಗಂಡ-ಹೆಂಡತಿ

ಹೀಗೆ ಮಾಡಿ:

  • ಸಂಬಂಧಿಕರು ನಿಮ್ಮ ಸ್ವಂತ ವಿಷಯದಲ್ಲಿ ತಲೆಹಾಕುತ್ತಿದ್ದರೆ, ಮನೆಯಲ್ಲಿ ಪರಿಸ್ಥಿತಿ ಶಾಂತವಾಗಿರುವಾಗ ನಿಮ್ಮ ಸಂಗಾತಿಯೊಂದಿಗೆ ಅದರ ಬಗ್ಗೆ ಮಾತಾಡಿ

  • ಈ ವಿಷಯಗಳನ್ನು ಹೇಗೆ ನಿಭಾಯಿಸುವುದೆಂದು ಇಬ್ಬರೂ ಮಾತಾಡಿ ತೀರ್ಮಾನಕ್ಕೆ ಬನ್ನಿ

ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ

ನಿಮ್ಮ ಹೆತ್ತವರ ಭಾವನೆಗಳನ್ನು ಮತ್ತು ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವುದು ತುಂಬ ಪ್ರಾಮುಖ್ಯ. ಅವರು ನಿಮ್ಮ ಸಂಸಾರದಲ್ಲಿ ಹುಳಿ ಹಿಂಡಬೇಕೆಂದು ಬಯಸುವುದಿಲ್ಲ. ಬದಲಿಗೆ ನಿಮ್ಮ ಬಗ್ಗೆ ಅವರು ಯಥಾರ್ಥ ಕಾಳಜಿ ತೋರಿಸಲು ಬಯಸುತ್ತಾರೆ. ನಿಮ್ಮದೇ ಒಂದು ಪ್ರತ್ಯೇಕ ಕುಟುಂಬ ಅಂತ ನೆನೆಸಲಿಕ್ಕೆ ಅವರಿಗೆ ಕಷ್ಟ ಆಗಬಹುದು. ‘ನಮಗೆ ಯಾರೂ ಇಲ್ಲ’ ಎಂದು ಸಹ ಅವರಿಗನಿಸಬಹುದು. ಇಂತಹ ಪರಿಸ್ಥಿತಿಯನ್ನು ಜಯಿಸಲು ಬೈಬಲ್‌ ತತ್ವಗಳನ್ನು ಅನುಸರಿಸಿ ಮತ್ತು ಅವರೊಂದಿಗೆ ಮನಬಿಚ್ಚಿ ಮಾತಾಡಿ. ಹೀಗೆ ಮಾಡುವ ಮೂಲಕ ನೀವು ನಿಮ್ಮ ಹೆತ್ತರನ್ನು ಗೌರವಿಸಬಹುದು, ನಿಮ್ಮ ವಿವಾಹ ಜೀವನವೂ ಸುಖಕರವಾಗಿರುವುದು.

ನಿಮ್ಮನ್ನೇ ಕೇಳಿಕೊಳ್ಳಿ:

  • ನಮ್ಮ ಜೀವನದಲ್ಲಿ ನನ್ನ ಸಂಗಾತಿಯ ಹೆತ್ತವರು ಆಸಕ್ತಿವಹಿಸುವುದು ಸಹಜವೇಕೆ?

  • ನಾನು ನನ್ನ ಸಂಗಾತಿಗೆ ಪ್ರಾಮುಖ್ಯತೆ ಕೊಡುತ್ತಾ ಅದೇ ಸಮಯದಲ್ಲಿ ನನ್ನ ಹೆತ್ತವರನ್ನು ಹೇಗೆ ಗೌರವಿಸಬಹುದು?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ