ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • hf ಭಾಗ 4 ಪು. 12-14
  • ಹಣ ನಿರ್ವಹಣೆಗೆ ಹೆಜ್ಜೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹಣ ನಿರ್ವಹಣೆಗೆ ಹೆಜ್ಜೆಗಳು
  • ಸುಖೀ ಸಂಸಾರ ಸಾಧ್ಯ!
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • 1 ಯೋಚಿಸಿ . . . ಯೋಜಿಸಿ
  • 2 ಹಣದ ಬಗ್ಗೆ ಪ್ರಾಮಾಣಿಕ ನೋಟವಿರಲಿ
  • ಹಣ ನಿರ್ವಹಣೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಹಣಾನೇ ಸರ್ವಸ್ವನಾ?
    ಎಚ್ಚರ!—2015
  • ದುಡ್ಡೇ ಎಲ್ಲಾ ದುಷ್ಟತನಕ್ಕೆ ಕಾರಣನಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ವಿವೇಚನೆಯಿಂದ ಹಣ ಬಳಸಿ
    ಎಚ್ಚರ!—2009
ಇನ್ನಷ್ಟು
ಸುಖೀ ಸಂಸಾರ ಸಾಧ್ಯ!
hf ಭಾಗ 4 ಪು. 12-14
ಹಣವನ್ನು ಹೇಗೆ ಖರ್ಚು ಮಾಡುವುದೆಂದು ಯೋಜಿಸುತ್ತಿರುವ ದಂಪತಿ

ಭಾಗ 4

ಹಣ ನಿರ್ವಹಣೆಗೆ ಹೆಜ್ಜೆಗಳು

“ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರಿರುವಲ್ಲಿ ಈಡೇರುವವು.”—ಜ್ಞಾನೋಕ್ತಿ 15:22

ಕುಟುಂಬದ ಅವಶ್ಯಕತೆಗಳನ್ನು ಪೂರೈಸಲು ನಮ್ಮೆಲ್ಲರಿಗೂ ಹಣ ಬೇಕೇ ಬೇಕು. (ಜ್ಞಾನೋಕ್ತಿ 30:8) ಎಷ್ಟೇ ಆದರೂ “ಧನವು . . . ಆಶ್ರಯ.” (ಪ್ರಸಂಗಿ 7:12) ಸಾಮಾನ್ಯವಾಗಿ, ಗಂಡ ಹೆಂಡತಿಗೆ ಹಣದ ಬಗ್ಗೆ ಕೂತು ಮಾತಾಡಲು ಕಷ್ಟವಾಗಬಹುದು. ಹಾಗಂತ, ಅದರ ಬಗ್ಗೆ ಮಾತಾಡದೇ ಇದ್ದರೆ ವಿವಾಹ ಬಂಧದಲ್ಲಿ ಬಿರುಕು ಉಂಟಾಗಬಹುದು. (ಎಫೆಸ 4:32) ಆದ್ದರಿಂದ ಹಣದ ವಿಷಯದಲ್ಲಿ ಪರಸ್ಪರ ನಂಬಿಕೆಯಿಡಿ ಮತ್ತು ಅದನ್ನು ಹೇಗೆ ಖರ್ಚು ಮಾಡಬೇಕೆಂದು ಇಬ್ಬರೂ ಮಾತಾಡಿ ತೀರ್ಮಾನಿಸಿ.

1 ಯೋಚಿಸಿ . . . ಯೋಜಿಸಿ

ಬೈಬಲಿನ ಹಿತವಚನ: “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಲು ಬಯಸುವುದಾದರೆ, ಮೊದಲು ಕುಳಿತುಕೊಂಡು ಅದನ್ನು ಕಟ್ಟಿಮುಗಿಸಲು ಸಾಕಾಗುವಷ್ಟು ಹಣ ತನ್ನಲ್ಲಿದೆಯೋ ಎಂದು ಲೆಕ್ಕಮಾಡುವುದಿಲ್ಲವೆ?” (ಲೂಕ 14:28) ನೀವು ಹಣವನ್ನು ಖರ್ಚು ಮಾಡುವ ಮುಂಚೆ ಜೊತೆಯಾಗಿ ಯೋಜಿಸುವುದು ತುಂಬ ಪ್ರಾಮುಖ್ಯ. (ಆಮೋಸ 3:3) ನೀವು ಏನು ಖರೀದಿ ಮಾಡಬೇಕು ಮತ್ತು ಅದಕ್ಕಾಗಿ ನೀವು ಎಷ್ಟನ್ನು ಖರ್ಚು ಮಾಡಲು ಸಿದ್ಧರಿದ್ದೀರೆಂದು ಮೊದಲೇ ನಿರ್ಣಯಿಸಿ. (ಜ್ಞಾನೋಕ್ತಿ 31:16) ನಿಮ್ಮಲ್ಲಿ ಸಾಕಷ್ಟು ಹಣವಿದೆ ಅಂತ ಅದನ್ನು ನೀರಿನಂತೆ ಖರ್ಚು ಮಾಡಬೇಡಿ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ, ಸಾಲ ಮಾಡಬೇಡಿ.—ಜ್ಞಾನೋಕ್ತಿ 21:5; 22:7.

ಹೀಗೆ ಮಾಡಿ:

  • ತಿಂಗಳ ಕೊನೆಯಲ್ಲಿ ನಿಮ್ಮ ಬಳಿ ಹಣ ಇನ್ನೂ ಉಳಿದಿದ್ದರೆ, ಅದನ್ನು ಏನು ಮಾಡುವುದೆಂದು ಜೊತೆಯಾಗಿ ನಿರ್ಣಯಿಸಿ

  • ನಿಮಗೆ ಹಣದ ಕೊರತೆ ಕಂಡುಬಂದರೆ ನಿಮ್ಮ ಖರ್ಚನ್ನು ಕಡಿಮೆ ಮಾಡಲು ಯೋಜಿಸಿ. ಉದಾಹರಣೆಗೆ, ಹೋಟೆಲ್‌ಗೆ ಹೋಗುವ ಬದಲು ಮನೆಯಲ್ಲೇ ಅಡುಗೆ ಮಾಡಿ

ಯಾವುದಕ್ಕೆ ತುಂಬಾ ಖರ್ಚು ಮಾಡುತ್ತಿದ್ದೇವೆ ಎಂದು ಯೋಚಿಸುತ್ತಿರುವ ದಂಪತಿ

2 ಹಣದ ಬಗ್ಗೆ ಪ್ರಾಮಾಣಿಕ ನೋಟವಿರಲಿ

ಬೈಬಲಿನ ಹಿತವಚನ: ‘ಯೆಹೋವನ ದೃಷ್ಟಿಯಲ್ಲಿ ಮಾತ್ರವಲ್ಲ ಮನುಷ್ಯರ ದೃಷ್ಟಿಯಲ್ಲಿಯೂ ಪ್ರಾಮಾಣಿಕರಾಗಿರಿ.’ (2 ಕೊರಿಂಥ 8:21) ನಿಮ್ಮ ಆದಾಯ ಎಷ್ಟು, ಖರ್ಚು ಎಷ್ಟು ಎಂದು ಮುಚ್ಚುಮರೆಯಿಲ್ಲದೆ ನಿಮ್ಮ ಸಂಗಾತಿಗೆ ಹೇಳಿ.

ಹಣಕಾಸಿನ ವಿಚಾರದಲ್ಲಿ ಪ್ರಾಮುಖ್ಯ ನಿರ್ಣಯಗಳನ್ನು ಮಾಡುವಾಗೆಲ್ಲಾ ನಿಮ್ಮ ಸಂಗಾತಿಯೊಂದಿಗೆ ಮಾತಾಡಿ. (ಜ್ಞಾನೋಕ್ತಿ 13:10) ಹಣ ನಿರ್ವಹಣೆಯ ಬಗ್ಗೆ ನೀವು ಜೊತೆಯಾಗಿ ಮಾತಾಡುವುದು, ನಿಮ್ಮ ವಿವಾಹ ಜೀವನದಲ್ಲಿ ನೆಮ್ಮದಿ ಇರಲು ಸಹಾಯ ಮಾಡುತ್ತದೆ. ನಿಮ್ಮ ಸಂಪಾದನೆಯನ್ನು ನಿಮ್ಮೊಬ್ಬರದ್ದೇ ಹಣ ಅಂತಲ್ಲ, ನಿಮ್ಮ ಕುಟುಂಬದ ಹಣ ಅಂತ ಪರಿಗಣಿಸಿ.—1 ತಿಮೊಥೆಯ 5:8.

ಖರೀದಿಸಲು ಹೋದಾಗ ತಾವು ಮಾಡಿದ ಪಟ್ಟಿಯನ್ನು ನೋಡುತ್ತಿರುವ ದಂಪತಿ

ಹೀಗೆ ಮಾಡಿ:

  • ಒಬ್ಬರನ್ನೊಬ್ಬರು ಕೇಳದೆ ವೈಯಕ್ತಿಕವಾಗಿ ಎಷ್ಟು ಹಣ ಖರ್ಚುಮಾಡಬಹುದೆಂದು ಇಬ್ಬರೂ ಜೊತೆಯಾಗಿ ನಿರ್ಧರಿಸಿ

  • ಹಣದ ವಿಷಯದಲ್ಲಿ ಸಮಸ್ಯೆ ಏಳುವ ಮೊದಲೇ ಅದರ ಕುರಿತು ಮಾತಾಡಿ

ಹಣದ ಕಡೆಗಿನ ನಿಮ್ಮ ನೋಟ

ಹಣ ಪ್ರಾಮುಖ್ಯವಾದರೂ ಅದು ನಿಮ್ಮ ಮತ್ತು ನಿಮ್ಮ ಸಂಗಾತಿಯ ಮಧ್ಯೆ ತಡೆಗೋಡೆಯಾಗುವಂತೆ ಅಥವಾ ಬೇಡದ ಚಿಂತೆಗಳಿಗೆ ಕಾರಣವಾಗುವಂತೆ ಬಿಡಬೇಡಿ. (ಮತ್ತಾಯ 6:25-34) ಅಷ್ಟಕ್ಕೂ, ಜೀವನದಲ್ಲಿ ಸಂತೋಷವಾಗಿರಲು ತುಂಬಾ ಹಣ ಇರಲೇಬೇಕಂತೇನಿಲ್ಲ. ಬೈಬಲ್‌ ಹೇಳುವುದು: “ಪ್ರತಿಯೊಂದು ರೀತಿಯ ದುರಾಶೆಯಿಂದ ನಿಮ್ಮನ್ನು ಕಾಪಾಡಿಕೊಳ್ಳಿ.” (ಲೂಕ 12:15) ಹಣದಿಂದ ಕೊಂಡುಕೊಳ್ಳುವ ಯಾವ ವಸ್ತುವೂ ನಿಮ್ಮ ವಿವಾಹಬಂಧದಷ್ಟು ಅಮೂಲ್ಯವಾಗಿರುವುದಿಲ್ಲ. ಆದ್ದರಿಂದ ನಿಮಗಿರುವುದರಲ್ಲೇ ತೃಪ್ತರಾಗಿರಿ ಮತ್ತು ದೇವರೊಂದಿಗಿನ ನಿಮ್ಮ ಸಂಬಂಧವನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಹೀಗೆ ಮಾಡುವಲ್ಲಿ, ನಿಮ್ಮ ಕುಟುಂಬವೂ ಸಂತೋಷದಿಂದಿರುವುದು, ಯೆಹೋವನೂ ನಿಮ್ಮನ್ನು ಮೆಚ್ಚುವನು.—ಇಬ್ರಿಯ 13:5.

ನಿಮ್ಮನ್ನೇ ಕೇಳಿಕೊಳ್ಳಿ:

  • ಸಾಲದಿಂದ ದೂರವಿರಲು ನಮ್ಮ ಕುಟುಂಬ ಏನು ಮಾಡಬಹುದು?

  • ಹಣಕಾಸಿನ ಬಗ್ಗೆ ನಾನೂ ನನ್ನ ಸಂಗಾತಿ ಕೊನೇ ಬಾರಿ ಮಾತಾಡಿದ್ದು ಯಾವಾಗ?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ