ನಾವು ಕಡೆಯ ದಿವಸಗಳಲ್ಲಿ ಜೀವಿಸುತ್ತಿದ್ದೇವೋ?
“ನಿಭಾಯಿಸಲು ಕಷ್ಟಕರವಾಗಿರುವ ಕಠಿನ ಕಾಲಗಳು” ಎಂಬ ವಾಕ್ಸರಣಿಯು, ಗ್ರೀಕ್ನ ಕೈರೈ ಖಾಲೆಪಾಯಿನಿಂದ ಭಾಷಾಂತರಿಸಲ್ಪಡುತ್ತದೆ. (2 ತಿಮೊಥೆಯ 3:1, NW) ಖಾಲೆಪಾಯಿ ಎಂಬ ಶಬ್ದವು, “ಉಗ್ರ” ಎಂದು ಅಕ್ಷರಶಃ ಅರ್ಥೈಸುವ, ಬೆದರಿಕೆ ಹಾಗೂ ಅಪಾಯದ ವಿಚಾರವನ್ನು ಕೊಡುವ ಒಂದು ಶಬ್ದದ ಬಹುವಚನ ಸೂಚಕವಾಗಿದೆ. ಆ ಶಬ್ದವು “ಕೆಡುಕಿನ ಭೀಕರ ಆಕ್ರಮಣ”ವೊಂದಕ್ಕೆ ನಿರ್ದೇಶಿಸುತ್ತದೆಂದು ಬೈಬಲ್ ವ್ಯಾಖ್ಯಾನಕಾರನೊಬ್ಬನು ಹೇಳುತ್ತಾನೆ. ಆದುದರಿಂದ, ಹಿಂದಿನ ಶಕಗಳು ಸಂಕ್ಷೋಭೆಯನ್ನು ಅನುಭವಿಸಿರುವಾಗ್ಯೂ, “ಕಡೆಯ ದಿವಸಗಳು” ಅಸಾಮಾನ್ಯವಾಗಿ ಕ್ರೂರವಾಗಿರುವವು. 2 ತಿಮೊಥೆಯ 3:13 ಅದನ್ನು ಹೇಳುವಂತೆ, “ದುಷ್ಟರೂ ವಂಚಕರೂ . . . ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.”
ಇದು ನಮ್ಮ ದಿವಸವನ್ನು ವರ್ಣಿಸುತ್ತದೊ? ನಾವು ಕಡೆಯ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ಇವು ಸೂಚಿಸುತ್ತವೊ ಎಂದು ಅವಲೋಕಿಸಲಿಕ್ಕಾಗಿ 2 ತಿಮೊಥೆಯ 3:2-5ರಲ್ಲಿ ದಾಖಲಿಸಲ್ಪಟ್ಟಿರುವ ನಿರ್ದಿಷ್ಟ ಪುರಾವೆಗಳನ್ನು ನಾವು ಪರಿಶೀಲಿಸೋಣ.
“ಮನುಷ್ಯರು . . . ಧನಪ್ರೇಮಿಗಳು ಆಗಿರುವರು.”—2 ತಿಮೊಥೆಯ 3:2, NW.
ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಅದನ್ನು ಕರೆಯುವಂತೆ, ವಂಚನೆಯು “ಆರ್ಥಿಕ ಪಾತಕದ ವಿಷಯ ಲೋಲುಪ್ತಿಯಾಗಿ” ಪರಿಣಮಿಸಿದೆ. ಅಮೆರಿಕದಲ್ಲಿ, ಆರೋಗ್ಯಾರೈಕೆಯ ವಂಚನೆಯ ಸಂಖ್ಯೆಯೊಂದೇ ವಾರ್ಷಿಕವಾಗಿ 5,000 ಕೋಟಿಗಳು ಮತ್ತು 8,000 ಕೋಟಿಗಳ ನಡುವೆ ಸುಳಿದಾಡುತ್ತದೆ. ವಿಷಾದಕರವಾಗಿಯೇ, ಅಂತಹ ಅಪ್ರಾಮಾಣಿಕತೆಯು ಲಾಕ್ಷಣಿಕವಾಗಿದೆ. ಎಥಿಕ್ಸ್ ರಿಸೋರ್ಸ್ ಸೆಂಟರಿನ ಅಧ್ಯಕ್ಷರಾದ ಗ್ಯಾರಿ ಎಡ್ವರ್ಡ್ಸ್ ಗಮನಿಸುವಂತೆ, “ಕೆಲವೊಮ್ಮೆ ಅಪ್ರಾಮಾಣಿಕತೆಯನ್ನು ಆಚರಿಸುವ ಒಂದು ಸಂಸ್ಕೃತಿಯನ್ನು” ನಾವು ಹೊಂದಿದ್ದೇವೆ. ಅವರು ವಿವರಿಸುವುದು: “ನಾವು ಖಳನಾಯಕರನ್ನು, ರಾಜಕಾರಣಿಗಳಾಗಿರುವ ಜನರನ್ನು, ಸರಕಾರಕ್ಕೆ ವಂಚನೆ ಮಾಡಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ವ್ಯಾಪಾರದ ಜನರನ್ನು ನಾಯಕರನ್ನಾಗಿ ಮಾಡುತ್ತೇವೆ.”
“ಅಹಂಕಾರಿಗಳು.”—2 ತಿಮೊಥೆಯ 3:2, NW.
ಅಹಂಕಾರಿಯಾದ ವ್ಯಕ್ತಿಯು ಇತರರನ್ನು ತಿರಸ್ಕಾರದ ಭಾವನೆಯಿಂದ ನೋಡುತ್ತಾನೆ. ಇಂದು ಕುಲಸಂಬಂಧವಾದ ಮತ್ತು ರಾಷ್ಟ್ರೀಯ ದುರಭಿಪ್ರಾಯದಲ್ಲಿ ಇದು ಎಷ್ಟು ಸ್ಪಷ್ಟವಾಗಿಗಿದೆ! “ಎಲ್ಲ ಅಲ್ಪಸಂಖ್ಯಾತ ಪಕ್ಷಗಳು ಗುರಿಹಲಗೆಗಳಾಗಿವೆ” ಎಂದು ಕೆನಡದ ಟೊರಾಂಟೊವಿನ ದ ಗ್ಲೋಬ್ ಆ್ಯಂಡ್ ಮೆಯ್ಲ್ ಹೇಳುತ್ತದೆ. “ಜರ್ಮನಿಯಲ್ಲಿ ಕುಲಸಂಬಂಧವಾದ ಹಿಂಸಾಚಾರ ಅಧಿಕಗೊಳ್ಳುತ್ತಿದೆ, ಅಮೆರಿಕದಲ್ಲಿ ಕುಕಕ್ಲ್ಸ್ ಕ್ಲ್ಯಾನ್ ಕ್ರಿಯಾಶೀಲವಾಗಿದೆ ಮತ್ತು ಸ್ವಸ್ಥಿಕವು ಟೊರಾಂಟೊದ ಪಕ್ಕದಾರಿಗಳು ಮತ್ತು ಸಭಾಮಂದಿರಗಳನ್ನು ವಿರೂಪಿಸುತ್ತಿದೆ.” ಕೆನೆಡಿಯನ್ ಜ್ಯೂಯಿಷ್ ಕಾಂಗ್ರೆಸಿನ ಅಧ್ಯಕ್ಷರಾದ ಅರ್ವಿಂಗ್ ಆಬೆಲ ಹೇಳುವುದು: “ನಾವು ಕುಲಸಂಬಂಧವಾದ ಹಿಂಸಾಚಾರವನ್ನು ಎಲ್ಲಾ ಕಡೆಗಳಲ್ಲಿಯೂ ನೋಡುತ್ತಿದ್ದೇವೆ: ಸ್ವೀಡನ್, ಇಟಲಿ, ಹಾಲೆಂಡ್ ಮತ್ತು ಬೆಲ್ಜಿಯಮ್ ಹಾಗೂ ಜರ್ಮನಿಯಲ್ಲಿ.”
“ಹೆತ್ತವರಿಗೆ ಅವಿಧೇಯರು.”—2 ತಿಮೊಥೆಯ 3:2, NW.
“ಶಿಶು ಆಸ್ಫೋಟನ ಸಮಯದಲ್ಲಿ ಜನಿಸಿದವರು, ಬಯ್ಯುವ, ಆಭಿಮುಖ್ಯ, ಮರ್ಯಾದೆ ತೋರದ ಕೂಸುಗಳ ಒಂದು ಸಂತತಿಯನ್ನು ಬೆಳೆಸಿರುವವರೆಂದು ಅನೇಕರಿಂದ ಖ್ಯಾತಿಯನ್ನು ಪಡೆದಿದ್ದಾರೆ,” ಎಂದು ದ ಟೊರಾಂಟೊ ಸ್ಟಾರ್ ಗಮನಿಸುತ್ತದೆ. ಮನೆಯಲ್ಲಿ ಆರಂಭವಾಗುವ ದಂಗೆಕೋರತನವು ಅನೇಕವೇಳೆ ಶಾಲೆಯಲ್ಲಿ ಮಗುವಿನ ನಡವಳಿಕೆಯಲ್ಲಿ ಸ್ಪಷ್ಟವಾಗಿಗಿ ವ್ಯಕ್ತವಾಗುತ್ತದೆ. ನಾಲ್ಕು ವರ್ಷ ವಯಸ್ಸಿನಷ್ಟು ಚಿಕ್ಕ ಮಕ್ಕಳು ಹಿಂದಿರುಗಿ ಮಾತಾಡುತ್ತಾರೆಂದು ಶಿಕ್ಷಕಿಯೊಬ್ಬಳು ಗಮನಿಸುತ್ತಾಳೆ. “ಶಿಕ್ಷಕರು ಬೋಧಿಸುವುದಕ್ಕಿಂತಲೂ ನಡವಳಿಕೆಯೊಂದಿಗೆ ವ್ಯವಹರಿಸುವುದರಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆ,” ಎಂದು ಅವಳನ್ನುತ್ತಾಳೆ. ಎಲ್ಲ ಯುವಜನರು ದಂಗೆಕೋರರಾಗಿಲ್ಲ ನಿಶ್ಚಯ. ಆದರೂ “ಒಂದು ಪ್ರವೃತ್ತಿಯೋಪಾದಿ ಅವರು ಯಾವುದಕ್ಕಾದರೂ ಬಹಳ ಕಡಿಮೆ ಗೌರವವನ್ನು ಹೊಂದಿರುವಂತೆ ತೋರುತ್ತದೆ,” ಎಂದು ಪ್ರೌಢಶಾಲೆಯ ಹಳೆಯ ಶಿಕ್ಷಕನಾದ ಬ್ರೂಸ್ ಮೆಗ್ರೆಗರ್ ಗಮನಿಸುತ್ತಾನೆ.
“ಸ್ವಾಭಾವಿಕವಾದ ಮಮತೆಯಿಲ್ಲದವರು.”—2 ತಿಮೊಥೆಯ 3:3, NW.
ಬೇರೆಲ್ಲಾ ಸ್ಥಳಗಳಿಗಿಂತಲೂ ಸ್ವಾಭಾವಿಕವಾದ ಮಮತೆಯು ಎಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರಬೇಕೋ, ಅಲ್ಲಿ ಕುಟುಂಬದಲ್ಲಿ ಸ್ಪಷ್ಟವಾಗಿದ ಒಂದು ಅವನತಿಯನ್ನು ಕಡೆಯ ದಿವಸಗಳು ಕಾಣುತ್ತವೆ. “ಅಮೆರಿಕದ ಮಹಿಳೆಯರಿಗೆ, ಮನೆಯ ಹಿಂಸಾಚಾರವು ನೋವು ಮತ್ತು ಮರಣಕ್ಕೆ ಮುಖ್ಯ ಕಾರಣವಾಗಿದೆ. ಇವು ವಾಹನಾಪಘಾತಗಳು, ಬಲಾತ್ಕಾರ ಸಂಭೋಗಗಳು ಮತ್ತು ಹಿಂದಾಕ್ರಮಣಗಳು ಸೇರಿ ಆಗಿಸುವ ಹಾನಿಗಿಂತಲೂ ಹೆಚ್ಚು ಹಾನಿಯನ್ನು ಮಾಡುತ್ತವೆ,” ಎಂದು ದ ನ್ಯೂ ಯಾರ್ಕ್ ಟೈಮ್ಸ್ ವರದಿಸುತ್ತದೆ. ಅಧಿಕಾಂಶ ಶಿಶು ಕಾಮವು ವಿಶ್ವಾಸಯೋಗ್ಯರಾದ ಕುಟುಂಬ ಸದಸ್ಯರಿಂದ ನಡೆಸಲ್ಪಡುತ್ತದೆ. ಅಧಿಕವಾದ ವಿವಾಹ ವಿಚ್ಛೇದ ಪ್ರಮಾಣ, ವೃದ್ಧರ ಮೇಲೆ ದುರಾಚಾರ, ಮತ್ತು ಗರ್ಭಪಾತವು ಸಹ, ಅನೇಕರು “ಸಾಮಾನ್ಯವಾದ ಮಾನವ ಮಮತೆಗಳಲ್ಲಿ . . . ತೀರ ಕೊರತೆಯುಳ್ಳವರು” ಎಂಬುದಕ್ಕೆ ಪುರಾವೆಯನ್ನು ಕೊಡುತ್ತದೆ.—ಫಿಲಿಪ್ಸ್.
“ಉಗ್ರರು, ಸೌಜನ್ಯ ಪ್ರಿಯರಲ್ಲದವರು.”—2 ತಿಮೊಥೆಯ 3:3, NW.
“ಯಾರನ್ನಾದರೂ ಕೊಲಲ್ಲಿಕ್ಕಾಗಿ ಯುವ ಕೊಲೆಗಾರರಿಗೆ ಒಂದು ಹೇತುವಿನ ಅಗತ್ಯವಿಲ್ಲ” ಎಂದು ವಾರ್ತಾಪತ್ರಿಕೆಯ ಅಂಕಣಕಾರನಾದ ಬಾಬ್ ಹರ್ಬರ್ಟ್ ಬರೆಯುತ್ತಾನೆ. “ಹೆಚ್ಚಿನ ಸಂಖ್ಯೆಗಳಲ್ಲಿ ಮಕ್ಕಳು, ‘ನಿರ್ದಿಷ್ಟವಾದ ಕಾರಣವಿಲ್ಲದೆ’ ಇನ್ನೊಬ್ಬ ಮಾನವನನ್ನು ಕೊಲ್ಲುವ ಕಲ್ಪನೆಯನ್ನು ಅತ್ಯುತ್ಸಾಹದಿಂದ ಅವಲಂಬಿಸಿದ್ದಾರೆ.” ಕೆಲವು ಹೆತ್ತವರು ಸಹ ನೈತಿಕ ಸೂಕ್ಷ್ಮಗ್ರಾಹಿತ್ವವನ್ನು ಕಳೆದುಕೊಂಡಿರುವಂತೆ ಭಾಸವಾಗುತ್ತಿದೆ. ಸಾಧ್ಯವಿರುವಷ್ಟು ಹೆಚ್ಚು ಹುಡುಗಿಯರೊಂದಿಗೆ ಸಂಭೋಗ ಮಾಡಿದ್ದಕ್ಕಾಗಿ ಪಾಯಿಂಟ್ಗಳನ್ನು ಸ್ಪರ್ಧಾತ್ಮಕವಾಗಿ ಶೇಖರಿಸಿದ್ದಕ್ಕಾಗಿ ಹದಿವಯಸ್ಸಿನ ಹುಡುಗರ ಒಂದು ಗುಂಪು ಆಪಾದಿಸಲ್ಪಟ್ಟಾಗ, ಒಬ್ಬ ತಂದೆ ಹೇಳಿಕೆಯನ್ನಿತ್ತದ್ದು: “ನನ್ನ ಹುಡುಗನು ಮಾಡಿದ ಯಾವುದೇ ವಿಷಯವು ಹುರುಪುಳ್ಳ ಯಾವನೇ ಅಮೆರಿಕನ್ ಹುಡುಗನು ತನ್ನ ವಯಸ್ಸಿನಲ್ಲಿ ಮಾಡದಿರುವ ವಿಷಯವಲ್ಲ.”
“ದೇವರನ್ನು ಪ್ರೀತಿಸುವವರಾಗಿರುವ ಬದಲಾಗಿ ಸುಖಾನುಭವಗಳನ್ನು ಪ್ರೀತಿಸುವವರು.”—2 ತಿಮೊಥೆಯ 3:4, NW.
ಒಂದು ಅಂದಾಜಿಗನುಸಾರ, ಒಂದು ಧಾರ್ಮಿಕ ಗುಂಪಿನೊಂದಿಗೆ ಕಳೆಯುವ ಪ್ರತಿಯೊಂದು ತಾಸಿಗೆ ಬದಲಾಗಿ ಹದಿವಯಸ್ಕರು 15 ತಾಸುಗಳನ್ನು ಇಲೆಕ್ಟಾನ್ರಿಕ್ ಮಾಧ್ಯಮದೊಂದಿಗೆ ಕಳೆಯುತ್ತಾರೆ. “ಇಂದು, ಅಂಗಡಿಗಳ ಸಾಲುಗಳು ಮತ್ತು ಶಾಲೆಯ ಹೊರದಾರಿಗಳಲ್ಲಿ ವರ್ಧಿಸುತ್ತಿರುವ ಮಾಧ್ಯಮದಿಂದ ಪ್ರಭಾವಿತವಾದ ಸಂಸ್ಕೃತಿಯು ಹದಿವಯಸ್ಕ ಜೀವನವನ್ನು ಆಳುತ್ತಿದೆ. ಕುಟುಂಬದಿಂದ ಪ್ರಯೋಗಿಸಲ್ಪಟ್ಟ ಪ್ರಭಾವವು ದ್ವಿತೀಯವಾಗಿ ಬರುತ್ತದೆ. ಪಟ್ಟಿಯ ಕೊನೆಯಲ್ಲಿ ಚರ್ಚಿನ ಪ್ರಭಾವವು [ಇದೆ],” ಎಂದು ಅಲೂನ್ಟ ಮಿರರ್ ವರದಿಸುತ್ತದೆ. ಮಿರರ್ ಇನ್ನೂ ಗಮನಿಸುವುದು, “ಹೆತ್ತವರು ಗೈರುಹಾಜರಿರುವುದಾದರೆ, ಮತ್ತು ಚರ್ಚುಗಳು ಮೌನವಾಗಿರುವುದಾದರೆ, ಆಗ ಯುವ ಜನರ ಜೀವಿತಗಳಲ್ಲಿ ಮಾಧ್ಯಮಗಳು ಅತಿ ಹೆಚ್ಚು ಪ್ರಭಾವ ಬೀರುವಂಥವುಗಳಾಗಿರುತ್ತವೆ.”
“ದೇವಭಕ್ತಿಯ ರೂಪವಿದ್ದರೂ ಅದರ ಬಲಕ್ಕೆ ಸುಳ್ಳಾಗಿ ವರ್ತಿಸುವವರು.”—2 ತಿಮೊಥೆಯ 3:5, NW.
ಬೈಬಲಿನ ಸತ್ಯಕ್ಕೆ ಜೀವಿತಗಳನ್ನು ಬದಲಾಯಿಸುವ ಸಾಮರ್ಥ್ಯವಿದೆ. (ಎಫೆಸ 4:22-24) ಆದರೆ ಧರ್ಮದ ತೆರೆಯ ಮರೆಯಲ್ಲಿ ಅತ್ಯಂತ ಅದೈವಿಕ ಕೃತ್ಯಗಳಲ್ಲಿ ಕೆಲವು ಸಂಭವಿಸುತ್ತವೆ. ವೈದಿಕರಿಂದ ಮಕ್ಕಳ ಲೈಂಗಿಕ ದುರುಪಯೋಗವು ಒಂದು ದುರಂತಮಯ ಉದಾಹರಣೆಯಾಗಿದೆ. ದ ನ್ಯೂ ಯಾರ್ಕ್ ಟೈಮ್ಸ್ಗನುಸಾರ, “ತಾವು ಪಾದ್ರಿಗಳಿಂದ ಲೈಂಗಿಕವಾಗಿ ಪೀಡಿಸಲ್ಪಟ್ಟೆವೆಂದು ಹೇಳುವ ಕಕ್ಷಿಗಾರರ ಪರವಾಗಿ 27 ರಾಜ್ಯಗಳಲ್ಲಿ ತನಗೆ 200 ಕೇಸುಗಳು ಇತ್ಯರ್ಥವಾಗಲು ಉಳಿದಿವೆ ಎಂದು ಹೇಳುತ್ತಾನೆ,” ಅಮೆರಿಕದಲ್ಲಿರುವ ಒಬ್ಬ ವಕೀಲನು. ನಿಜವಾಗಿಯೂ, ಈ ಪಾದ್ರಿಗಳು ಪ್ರದರ್ಶಿಸುವ ದಿವ್ಯ ಭಕ್ತಿಯ ಯಾವುದೇ ರೂಪ ಅಥವಾ ನಟನೆಯು, ಅವರ ದುಷ್ಟ ಕಾರ್ಯಗಳಿಂದ ಕೇವಲ ಕಪಟತನವಾಗಿ ಬಯಲುಗೊಳಿಸಲ್ಪಡುತ್ತದೆ.
ಕಡೆಯ ದಿವಸಗಳ ಇನ್ನೂ ಹೆಚ್ಚಿನ ಪುರಾವೆಗಳು
2 ತಿಮೊಥೆಯ 3:2-4, (NW) ಮನುಷ್ಯರು ಹೀಗಿರುವರೆಂದು ಸಹ ಹೇಳುತ್ತದೆ. . .
◻ ಒಣಹೆಮ್ಮೆಯವರು.
◻ ದೂಷಕರು.
◻ ಕೃತಘ್ನರು.
◻ ನಿಷ್ಠೆಯಿಲ್ಲದವರು.
◻ ಯಾವ ಕರಾರಿಗೂ ಒಪ್ಪದವರು.
◻ ಚಾಡಿ ಹೇಳುವವರು.
◻ ಆತ್ಮನಿಯಂತ್ರಣವಿಲ್ಲದವರು.
◻ ದ್ರೋಹಿಗಳು.
◻ ಹಠಮಾರಿಗಳು.
◻ ಹೆಮ್ಮೆಯಿಂದ ಉಬ್ಬಿಕೊಂಡವರು.
“ನಿನ್ನ ಸಾನ್ನಿಧ್ಯದ ಸೂಚನೆ”
ಆತನ ಮರಣದ ಸ್ವಲ್ಪ ಸಮಯದ ಮುಂಚೆ, “ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆಯೇನು?” ಎಂದು ಯೇಸುವನ್ನು ಕೇಳಲಾಯಿತು. (ಮತ್ತಾಯ 24:3, NW) ಕಡೆಯ ದಿವಸಗಳನ್ನು ನಿರೂಪಿಸುವಂತಹ ಪರಿಸ್ಥಿತಿಗಳು ಮತ್ತು ಘಟನೆಗಳನ್ನು ಯೇಸು ನಿರ್ದಿಷ್ಟವಾಗಿ ಹೇಳಿದನು. ಅವುಗಳಲ್ಲಿ ಕೆಲವನ್ನು ನಾವು ಪರೀಕ್ಷಿಸೋಣ.
“ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು.”—ಮತ್ತಾಯ 24:7.
“ಸಾಮಾನ್ಯವಾಗಿ ಸಾಮಾಜಿಕ ಅಭಿವೃದ್ಧಿ ಹಾಗೂ ಬಡವರ ಜೀವಗಳಿಗಾಗಿ ಉನ್ನತ ಮಟ್ಟದ ಸರಕಾರೀ ಆಸಕ್ತಿಯ ಒಂದು ಶತಮಾನವಾಗಿರುವುದಾದರೂ, ಇಪ್ಪತ್ತನೆಯ ಶತಮಾನವು ಯಂತ್ರಫಿರಂಗಿ, ಟ್ಯಾಂಕ್, ಬಿ-52, ನ್ಯೂಕ್ಲಿಯರ್ ಬಾಂಬ್ ಮತ್ತು ಕೊನೆಯದಾಗಿ ಕ್ಷಿಪಣಿಯಿಂದ ಪ್ರಭಾವಿಸಲ್ಪಟ್ಟಿದೆ. ಅದು ಇತರ ಯಾವುದೇ ಯುಗಕ್ಕಿಂತ ಹೆಚ್ಚು ರಕ್ತಮಯ ಹಾಗೂ ನಾಶಕಾರಕ ಯುದ್ಧಗಳಿಂದ ಗುರುತಿಸಲ್ಪಟ್ಟಿದೆ.”—ಮೈಲ್ಸ್ಟೋನ್ಸ್ ಆಫ್ ಹಿಸ್ಟೊರಿ.
“ಒಂದಾದ ಮೇಲೆ ಇನ್ನೊಂದು ಸ್ಥಳದಲ್ಲಿ ಭೂಕಂಪಗಳು ಆಗುವವು.”—ಮತ್ತಾಯ 24:7 NW.
ಈ ಶತಮಾನದಲ್ಲಿ, ರಿಕರ್ಟ್ ಮಾಪಕದಲ್ಲಿ 7.5ರಿಂದ 8.3ರ ವರೆಗೆ ಅಳತೆ ಮಾಡಲ್ಪಟ್ಟ ಭೂಕಂಪಗಳು, ಚಿಲಿ, ಚೀನಾ, ಭಾರತ, ಇರಾನ್, ಇಟಲಿ, ಜಪಾನ್, ಪೆರು, ಮತ್ತು ಟರ್ಕಿಯಲ್ಲಿ ಅನುಭವಿಸಲ್ಪಟ್ಟಿವೆ.
“ಭಯಂಕರವಾದ ದೃಶ್ಯಗಳು ತೋರುವವು.”—ಲೂಕ 21:11, NW.
ಇತ್ತೀಚೆಗಿನ ವರ್ಷಗಳಲ್ಲಿ ಭಯಗೊಳಿಸುವ ವಿಕಸನಗಳ ಕಾರಣದಿಂದ, ಜನರ ಜೀವನಗಳಲ್ಲಿ ಪ್ರಾಯಶಃ ಅತ್ಯಂತ ದೊಡ್ಡ ಏಕ ಆವೇಗವು ಭಯವಾಗಿದೆ. ಯುದ್ಧ, ಪಾತಕ, ಮಾಲಿನ್ಯ, ರೋಗ, ಹಣದುಬ್ಬರ, ಮತ್ತು ಅವರ ಭದ್ರತೆಯನ್ನು ಹಾಗೂ ಅವರ ಜೀವಗಳಿಗೇ ಬೆದರಿಕೆ ಹಾಕುವ ಇನ್ನೂ ಇತರ ವಿಷಯಗಳಿಗೆ ಜನರು ಭಯಪಡುತ್ತಾರೆ.
“ಆಹಾರದ ಅಭಾವಗಳು.”—ಮತ್ತಾಯ 24:7, NW.
“ಸಹಾಯಕ ಗುಂಪುಗಳು ಕಾದಾಡುವಾಗ ಹಸಿವೆಯು ದೊಡ್ಡ ಪ್ರಮಾಣದ್ದಾಗಿ ಕಾಣಿಸಿಕೊಳ್ಳುತ್ತದೆ,” ಎಂದು ನ್ಯೂ ಸೈಎಂಟಿಸ್ಟ್ ಪತ್ರಿಕೆಯಲ್ಲಿ ಒಂದು ಶಿರೋನಾಮವು ಪ್ರಕಟಪಡಿಸುತ್ತದೆ. ಅಮೆರಿಕದ ಹಿಂದಿನ ಅಧ್ಯಕ್ಷರೊಬ್ಬರಿಗನುಸಾರ, ಕ್ಷಾಮವು ಎರಡು ದಶಕಗಳೊಳಗೆ ಈ ಗ್ರಹವನ್ನು ಧ್ವಂಸಮಾಡುವ ಬೆದರಿಕೆ ಹಾಕುತ್ತಿದೆ. “ಭಯಗೊಳಿಸುವ ಅಂತಹ ಮುನ್ಸೂಚನೆಗಳ ಹೊರತಾಗಿಯೂ, ವರ್ಧಿಷ್ಣು ದೇಶಗಳಲ್ಲಿ ವ್ಯಾವಸಾಯಿಕ ವಿಕಸನಕ್ಕಾಗಿ ಶ್ರೀಮಂತ ದೇಶಗಳು ಕೊಡುತ್ತಿರುವ ಸಹಾಯದ ಪ್ರಮಾಣವು ನಾಟಕೀಯವಾಗಿ ಸಂಕುಚಿಸುತ್ತಿದೆ,” ಎಂದು ಲೇಖನವು ಗಮನಿಸುತ್ತದೆ.
“ಒಂದಾದ ಮೇಲೆ ಇನ್ನೊಂದು ಸ್ಥಳದಲ್ಲಿ ಅಂಟುರೋಗಗಳು ಬರುವವು.”—ಲೂಕ 21:11, NW.
ಪರಿಣತರ ಒಂದು ತಂಡಕ್ಕನುಸಾರ, ವಾರ್ಷಿಕವಾಗಿ 50 ಕೋಟಿ ಡಾಲರ್ಗಳಿಗಿಂತಲೂ ಹೆಚ್ಚು ವೆಚ್ಚಬೇಳುವ, ಅಮೆರಿಕ ಸರಕಾರದ ಏಯ್ಡ್ಸ್ನ ವಿರುದ್ಧವಾದ ಹೋರಾಟವು ವಿಷಾದಕರವಾದ ಒಂದು ಅಪಜಯವೆಂದು ಕರೆಯಲ್ಪಟ್ಟಿದೆ. “ಏಯ್ಡ್ಸ್ನ ಕಾರಣದಿಂದ ನಾವು ಉತ್ಪಾದಕತೆಯ ಒಂದು ಇಡೀ ಸಂತತಿಯನ್ನೇ ಕಳೆದುಕೊಳ್ಳುತ್ತಿದ್ದೇವೆ,” ಎಂದು, ಸುಮಾರು 200ರಿಂದ 300 ರೋಗಿಗಳೊಂದಿಗೆ ಕೆಲಸ ಮಾಡುವ ಡಾ. ಡಾನ ಸ್ವೀಟ್ ಎಚ್ಚರಿಸುತ್ತಾರೆ. ಅಮೆರಿಕದಲ್ಲಿ, ಇಂದು 25ರಿಂದ 44ರ ವಯೋಮಿತಿಯುಳ್ಳ ಪುರುಷರಲ್ಲಿ ಏಯ್ಡ್ಸ್ ಮರಣದ ಪ್ರಮುಖ ಕಾರಣವಾಗಿದೆ.
“ನಿಯಮರಾಹಿತ್ಯದ ವರ್ಧಿಸುವಿಕೆ.”—ಮತ್ತಾಯ 24:12, NW.
ಕಳೆದ 30 ದಿವಸಗಳ ಸಮಯದಲ್ಲಿ, 15 ಪ್ರತಿಶತ ಮಂದಿ ನಿರ್ದಿಷ್ಟವಾದ ಒಂದು ಸಮಯದಲ್ಲಿ ಒಂದು ಬಂದೂಕನ್ನು ಕೊಂಡೊಯಿದ್ದರು, ಕಳೆದ ವರ್ಷದಲ್ಲಿ 11 ಪ್ರತಿಶತ ಮಂದಿ ಗುಂಡಿಕ್ಕಲ್ಪಟ್ಟಿದ್ದರು, ಮತ್ತು 9 ಪ್ರತಿಶತ ಮಂದಿ ಇನ್ನೊಬ್ಬ ವ್ಯಕ್ತಿಯ ಮೇಲೆ ಬಂದೂಕನ್ನು ಹಾರಿಸಿದ್ದರು ಎಂದು 2,500 ಯುವ ಜನರ ಕುರಿತಾದ ಅಮೆರಿಕದ ಸಮೀಕ್ಷೆಯೊಂದು ಪ್ರಕಟಪಡಿಸಿತು.
ಮುಂದೆ ಏನಿದೆ?
ನಾವು ನೋಡಿರುವಂತೆ, ಮಾನವಕುಲವು ಸರಿಯಾದ ಮಾರ್ಗದಿಂದ ವಿಪಥವಾಗಿದೆ, ಶಾಂತಿಭರಿತವಾದ ಒಂದು ಲೋಕದಿಂದ ದೂರವಾಗಿದೆ. ಬರಿಯ ಪರಿಮಾಣದ ಪರಿಭಾಷೆಯಲ್ಲಿ, ಈ ಮೇಲಿನ ಪರಿಸ್ಥಿತಿಗಳು ಅಭೂತಪೂರ್ವವಾಗಿವೆ. ವಾಸ್ತವವಾಗಿ, ಮಾನವ ಕುಟುಂಬವು ತನ್ನನ್ನು ಅಪರಿಚಿತ ಪ್ರದೇಶದಲ್ಲಿ ಕಂಡುಕೊಳ್ಳುತ್ತದೆ. ಅದು ಕಡೆಯ ದಿವಸಗಳೆಂದು ಕರೆಯಲ್ಪಡುವ ಒಂದು ಯುಗವನ್ನು ಹಾದುಹೋಗುತ್ತಿದೆ.
ಈ ಅವಧಿಯ ಅನಂತರ ಏನು ಬರುವುದು?
[ಪುಟ 5 ರಲ್ಲಿರುವ ಚಿತ್ರ ಕೃಪೆ]
Michael Lewis/Sipa Press