ಜೀಪ್ನಿ ಫಿಲಿಪ್ಪೀನ್ಸ್ನ ಜನ-ಚಾಲಕ
ಫಿಲಿಪ್ಪೀನ್ಸ್ನ ಎಚ್ಚರ! ಬಾತ್ಮೀದಾರನಿಂದ
ಫಿಲಿಪ್ಪೀನ್ಸ್ನ ಮನಿಲಾದ ಬೀದಿಗಳಲ್ಲಿ, ತನ್ನ ವರ್ಣರಂಜಿತ ಕಡು ಬಣ್ಣಗಳಿಂದ, ಹಾರಾಡುವ ಬಾವುಟಗಳಿಂದ ಹಾಗೂ ಇತರ ಹಲವಾರು ಕಣ್ಸೆಳೆಯುವ ಶೃಂಗಾರಗಳಿಂದ ಕೂಡಿದ ಜೀಪ್ನಿ, ಒಂದು ಚಿರಪರಿಚಿತ ದೃಶ್ಯವು. ಭೂಸುತ್ತಲೂ ಇರುವ ಜನಾಂಗಗಳು ಹೋರಾಡುತ್ತಿರುವ ಒಂದು ಸಮಸ್ಯೆಗೆ—ಸಾಮೂಹಿಕ ಜನಸಂಚಾರಕ್ಕೆ—ಅದು ಫಿಲಿಪ್ಪೀನ್ಸ್ನ ಪರಿಹಾರವು. ಆದರೂ, ಯಾರು ಫಿಲಿಪ್ಪೀನ್ಸ್ನ್ನು ಎಂದೂ ಸಂದರ್ಶಿಸಲಿಲ್ಲವೋ ಅವರಿಗೆ, “ಜೀಪ್ನಿ” ಎಂಬ ಶಬ್ದ ಕೂಡಾ ಅಪೂರ್ವ. ಅದು “ಜೀಪ್” ಮತ್ತು “ಜಿಟ್ನಿ” (ಚಿಕ್ಕ ಬಸ್) ಎಂಬ ಶಬ್ದಗಳ ಸಂಯೋಗವೆಂದು ಅಧಿಕಾರಿಗಳು ಸೂಚಿಸುತ್ತಾರೆ. ಈ ಚಿತ್ತಾಕರ್ಷಕ ವಾಹನದ ಪರಿಚಯವನ್ನು ನಿಮಗೆ ಮಾಡುವಂತೆ ಬಿಡಿರಿ.
ಅರ್ಬನ್ ಮಾಸ್ ಟ್ರಾನ್ಸ್ಪೊರೇಶ್ಟನ್ ಎಂಬ ತನ್ನ ಪುಸ್ತಕದಲ್ಲಿ ಜಾರ್ಜ್ ಎಮ್. ಸ್ಮರ್ಕ್, ಸಾಮುದಾಯಿಕ ಸಂಚಾರ ವ್ಯವಸ್ಥೆಯಲ್ಲಿರುವ ಒಂದು ಸಾಮಾನ್ಯ ಸಮಸ್ಯೆಯನ್ನು ಗುರುತಿಸುತ್ತಾನೆ: “ಸಾಮೂಹಿಕ ಸಂಚಾರವು ಮಣಗಲಾರದು ಎಂದು ಆಗಿಂದಾಗ್ಯೆ ದೂರಲಾಗುತ್ತದೆ. ಅಂದರೆ, ಒಂದು ಸಂಚಾರ ವ್ಯವಸ್ಥೆಯನ್ನು, ಜನತೆಯ ಬದಲಾಗುವ ಅಗತ್ಯತೆಗಳನ್ನು ಪೂರೈಸುವದಕ್ಕಾಗಿ ಒಮ್ಮೆಲೇ ಬದಲಾಯಿಸ ಸಾಧ್ಯವಿಲ್ಲ.” ಆದರೂ, ಜೀಪ್ನಿಯ ವಿಷಯದಲ್ಲಿ ಇದು ನಿಜವಲ್ಲ. ಜೀಪ್ನಿ ಮಣಗುವಂತಹದ್ದೂ, ಆರ್ಥಿಕವಾಗಿ ಲಾಭಕರವೂ ಮತ್ತು ಸುಲಭವಾದ ಕಾರ್ಯಗತಿಯೂ ಉಳ್ಳ ವಾಹನವಾಗಿ ರುಜುವಾಗಿದೆ. ಅದು ಹೇಗೆ ಎಂಬದನ್ನು ನಾವದರಲ್ಲಿ ಸವಾರಿ ಮಾಡಿ ಕಂಡುಹಿಡಿಯೋಣ.
ಜೀಪ್ನಿಯಲ್ಲಿ ಪಯಣ
ಉಷ್ಣವಲಯದ ಸೆಕೆಯಲ್ಲಿ ಮನಿಲಾದ ಮುಖ್ಯ ಬೀದಿಗಳಲ್ಲೊಂದರಲ್ಲಿ ನೀವು ನಿಂತಿರುವದಾದರೆ, ಜೀಪ್ನಿಗಳ ಸಮೂಹವು ಸದ್ದುಮಾಡುತ್ತಾ, ಎರಡೂ ದಿಕ್ಕುಗಳಲ್ಲಿ ನದಿಯಂತೆ ಪ್ರವಹಿಸುವದನ್ನು ಕಂಡು ತಬ್ಬಿಬ್ಬಾಗಬಹುದು. ಮಿಲಿಟರಿ ಶೈಲಿಯ ಜೀಪ್ಗಳಂತೆ ಕಾಣುವ, ಆದರೆ ಹೆಚ್ಚು ಪ್ರವಾಸಿಗಳಿಗೆ ಜಾಗ ಒದಗಿಸಲು ಹೆಚ್ಚು ಉದ್ದ ಮಾಡಲ್ಪಟ್ಟಿರುವ ಈ ಜೀಪ್ನಿಯು ಪ್ರತಿಯೊಂದು ವರ್ಣಗಳಿಂದ ರಂಜಿತವಾಗಿದ್ದು, ಅದರ ಎಲ್ಲಾ ಪಕ್ಕಗಳು ಬಣ್ಣ ಬಳಿದ ಚಿತ್ರಗಳಿಂದ, ಆಕೃತಿಗಳಿಂದ ಮತ್ತು ಗುರಿನುಡಿಗಳಿಂದ ತುಂಬಿರುತ್ತವೆ. ಹಿಂದೆ ಮತ್ತು ಪಕ್ಕದಲ್ಲಿ ಜೋತಾಡುವ ಕೆಸರುಕಾಪುಗಳ ಮೇಲೆ, “ನಿಪುಣ ನಾವಿಕ” ಅಥವಾ “ಜೀಪ್ನಿ ರಾಜ” ಮುಂತಾದ ಘೋಷಣೆಗಳು ಮೆರೆಸಲ್ಪಡುತ್ತವೆ.
ಹೆಚ್ಚಿನ ಜೀಪ್ನಿಗಳು—ಚಕ್ರಬಾಣ, ಸೀಸದ ಧಾತುಲೇಪಿತ ಕುದುರೆಗಳು, ಚೂಪಾದ ಬಾವುಟಗಳು, ದ್ವನಿಯಾಕರ್ಷಣ ತಂತಿಗಳು (ಜೀಪ್ನಿಯಲ್ಲಿ ರೇಡಿಯೋ ಇಲ್ಲದಿದ್ದರೂ ಸಹಾ) ಮುಂತಾದ ಇತರ ಕಂಗೊಳಿಸುವ ಶೃಂಗಾರ ಸಾಮಗ್ರಿಗಳಿಂದಲೂ ಅಲಂಕೃತವಾಗಿವೆ—ಎಲ್ಲವೂ ಪ್ರವಾಸಿಗಳನ್ನು ಆಕರ್ಷಿಸಲಿಕ್ಕಾಗಿ ರಚಿಸಲ್ಪಟ್ಟವುಗಳು. ಒಂದು ಜೀಪ್ನಿಯ ಛಾವಣಿಯು 12, 14, ಅಥವಾ ಅದಕ್ಕಿಂತಲೂ ಹೆಚ್ಚು ಕನ್ನಡಿಗಳಿಂದ (ಯಾವ ವ್ಯಾವಹಾರ್ಯ ಕೆಲಸಕ್ಕೂ ಬಾರದ) ತುಂಬಿರುವುದನ್ನು ನೀವು ಕಾಣಬಹುದು ಮತ್ತು ಈ ಎಲ್ಲಾ ಅಲಂಕಾರಗಳ ತೊಡಕಿನ ಮಧ್ಯೆ ಡ್ರೈವರನಿಗೆ ತಾನೆಲ್ಲಿಗೆ ಹೋಗುತ್ತೇನೆಂದು ಕಾಣುತ್ತದೋ ಎಂದು ನೀವು ಯೋಚಿಸಬಹುದು. ಆದರೆ ಅವನದನ್ನು ಸರಾಗವಾಗಿ ನಿರ್ವಹಿಸುವಂತೆ ತೋರುತ್ತದೆ.
ಯಾವ ಜೀಪ್ನಿಯು ನಿಮ್ಮನ್ನು ನಿಮ್ಮ ಸ್ಥಳಕ್ಕೆ ಮುಟ್ಟಿಸುತ್ತದೆ ಎಂದು ನಿಮಗೆ ಹೇಗೆ ಗೊತ್ತು? ಅವೆಲ್ಲವೂ ಎದುರಲ್ಲಿ ಮತ್ತು ಪಕ್ಕದಲ್ಲಿ ತಮ್ಮ ಕ್ರಮದ ಪಥ ಫಲಕಗಳನ್ನು ಹಾಕುತ್ತವೆ. ಆದರೆ, ವೇಗದಿಂದೋಡುವ ಆ ಜೀಪ್ನಿಗಳನ್ನು ನಿಮಗಾಗಿ ನಿಲ್ಲುವಂತೆ ಮಾಡುವುದು ಹೇಗೆ? ಅದೇನೂ ಕಷ್ಟವಲ್ಲ. ಜೀಪ್ನಿಯಲ್ಲಿ ಪಯಣಿಸಲು ನೀವು ಕೊಂಚವೂ ಆಸಕ್ತಿ ತೋರಿಸದಿದ್ದರೂ, ಸಾಧಾರಣವಾಗಿ ಡ್ರೈವರನು ತನ್ನ ವಾಹನವನ್ನು ನಿಲ್ಲಿಸಿ, ನಿಮ್ಮನ್ನು ತೆಗೆದುಕೊಂಡು ಹೋಗಲು ತೀರಾ ಸಂತೋಷಿಸುವನು. ನೀವು ನಿಮ್ಮ ಕೈಯಿಂದ ಸಂಜ್ಞೆ ಮಾಡಲೂಬಹುದು. ಅಥವಾ ತನ್ನ ಹಾರ್ನ್ ನುಡಿಸುವ ಮೂಲಕ ಅವನೇ ನಿಮ್ಮನ್ನು ಆಕರ್ಷಿಸುವನು, ಬರೇ ಹಾಂಕ್-ಹಾಂಕ್ ಶಬ್ದದಿಂದಲ್ಲ, ಮನಸೆಳೆಯುವ ಸಂಗೀತ ನಾದವನ್ನು ಆಡಿಸುವ ಮೂಲಕ.
ನಾವೀಗ ಜೀಪ್ನಿಯನ್ನು ಏರೋಣ. ಹಿಂದಿನಿಂದ ಮೇಲೆ ಹತ್ತುವಾಗ ಜೀಪಿನ ಎರಡೂ ಪಕ್ಕದಲ್ಲಿ ಮೆತ್ತೆದಿಂಬಿನ ಒಂದು ಬೆಂಚನ್ನು ನೀವು ಕಾಣುತ್ತೀರಿ. ಪ್ರಯಾಣಿಕರು ಒಬ್ಬರಿಗೊಬ್ಬರು ಮುಖಮಾಡಿ, ಒಬ್ಬರಿಗೊಬ್ಬರ ಮೊಣಗಂಟುಗಳು ತಾಗುತ್ತವೋ ಎಂಬಷ್ಟು ಹತ್ತಿರ ಕೂತಿರುತ್ತಾರೆ. ನೀವು ಬಗ್ಗಿಕೊಂಡೇ (ಮಾಡು ಬಲು ತಗ್ಗು) ಹತ್ತಿ, ಬರಿದಾದ ಜಾಗಕ್ಕೆ ನಿಮ್ಮನ್ನು ನಡಿಸಿಕೊಂಡು ಹೋಗಿ, ಕೂತುಬಿಡುತ್ತೀರಿ. ಜನರು ಹತ್ತುತ್ತಿರುವಂತೆಯೇ, ನಿಮ್ಮೆದುರಿನ ಇಕ್ಕಟ್ಟಾದ ತೆರಪು ಜಾಗವು ಗಂಟು ಮೂಟೆ, ಕೋಳಿಗಳು, ಮಕ್ಕಳು ಅಥವಾ ಕಾಯಿಪಲ್ಯಗಳ ಗೋಣಿಗಳಿಂದ ತುಂಬುತ್ತದೆ. ವಿಂಡ್ಶೀಲ್ಡ್ನ ಮೇಲಿರುವ ಒಂದು ಉದ್ದವಾದ ಕನ್ನಡಿಯು ಡ್ರೈವರನಿಗೆ ತನ್ನ ಹಿಂದಿನ ವಾಹನ ಸಂಚಾರವನ್ನು ತೋರಿಸುತ್ತದೆ ಮತ್ತು ಯಾರು ಹತ್ತುತ್ತಾರೆ ಮತ್ತು ಇಳಿಯುತ್ತಾರೆ ಹಾಗೂ ಯಾರು ತೆರ ಕೊಟ್ಟಿದ್ದಾನೆ ಯಾ ಕೊಡಲಿಲ್ಲ ಎಂದೂ ತೋರಿಸುತ್ತದೆ.
ನಿಮ್ಮ ಪ್ರಯಾಣ ತೆರ ಎಷ್ಟು? ಬಹಳ ಅಗವ್ಗೆಂದು ನಾವು ಹೇಳಿದೆವು. ಮನಿಲಾದಲ್ಲಿ ಕೇವಲ 75 ಸೆಂಟವಸ್ (ಅಮೆರಿಕನ್ 4¢)ನಲ್ಲಿ ಸುಮಾರು ಎರಡೂವರೆ ಮೈಲು ಪ್ರಯಾಣ ಮಾಡಬಹುದು. ಪ್ರಯಾಣಿಕರು ತೆರ ಕೊಡುವಂತೆ ಉತ್ತೇಜಿಸಲು ಅನೇಕ ಡ್ರೈವರರು “ಯೂದನು ತೆರಕೊಡಲಾರನೆಂದು ದೇವರಿಗೆ ಗೊತ್ತುಂಟು” ಎಂಬ ಸಂಜ್ಞೆಯನ್ನು ಪ್ರಧಾನವಾಗಿ ಪ್ರದರ್ಶಿಸುತ್ತಾರೆ.a ಕನ್ನಡಿಯ ಮೇಲೆ ಅಥವಾ ಹತ್ತಿರ ಡ್ರೈವರನ ಸ್ವಂತ ಪವಿತ್ರ ಪೀಠ ಮತ್ತು⁄ಯಾ ಅವನ ಮೆಚ್ಚಿನ ಹೆಣ್ಣಿನ ಚಿತ್ರವು ಇಡಲ್ಪಡಲೂ ಬಹುದು.
ನೀವೀಗ ಒರಗಿ ಕೂತುಕೊಂಡು, ನಿಮ್ಮ ಸವಾರಿಯನ್ನು ಆನಂದಿಸಬಹುದು, ಮತ್ತು ನೀವೆಲ್ಲಿದ್ದೀರೆಂದು ಕಣ್ಣಿಟ್ಟುನೋಡುತ್ತಾ ಇದ್ದು, ಇಳಿಯುವ ಸ್ಥಳ ಬಂದಾಗ ಡ್ರೈವರನಿಗೆ ಹೇಳಬಹುದು. ಎದುರಿನ ಇನ್ನೊಂದು ಜೀಪ್ನಿಗೆ ಹೊಡೆಯಲು ಕೇವಲ ಕೆಲವೇ ಇಂಚು ತಪ್ಪಿದರೂ ಅದರ ಯಾವ ಗೋಚರವೂ ಇಲ್ಲದೆ ಡ್ರೈವರನು ಜನಸಂದಣಿಯ ಮಧ್ಯೆ ಅಡಾತ್ಡಿಡಿಯ್ಡಾಗಿ ಅದನ್ನು ನಡಿಸುವಾಗಲೂ, ವಾಹನ ಬಹು ತೀವ್ರವಾಗಿ ಓಡುವುದು ನಿಮಗೆ ಅಚ್ಚರಿಯನ್ನುಂಟು ಮಾಡಬಹುದು.
ಜೀಪ್ನಿ ಬಂದದ್ದು ಎಲ್ಲಿಂದ?
ಸೌಲ್ ಲೊಕಾರ್ಟ್ನು ಇದನ್ನು ದಿ ಕಂಪೀಟ್ಲ್ ಗೈಡ್ ಟು ದ ಫಿಲಿಪ್ಪೀನ್ಸ್ ಪುಸ್ತಕದಲ್ಲಿ ಉತ್ತರಿಸುತ್ತಾನೆ: “ಜೀಪ್ನಿಯು ತನ್ನ ಜನನಕ್ಕೆ, 2ನೇ ಲೋಕಯುದ್ದದಲ್ಲಿ ಮಿಕ್ಕುಳಿದ ಜೀಪ್ಗಳಿಗೆ ಋಣಿಯಾಗಿದೆ. ಅವನ್ನು ಪ್ರಯಾಣಿಕರನ್ನು ಒಯ್ಯುವ ವಾಹನಗಳಾಗಿ ಪರಿವರ್ತಿಸಲಾಯಿತು, ಮುಂಚಿನ ಜೀಪ್ಗಳು ತೀರಾ ಚಿಕ್ಕದಾಗಿದ್ದವು. ಅಂದಿನಿಂದ, ಜೀಪ್ನಿಗಳನ್ನು ಉದ್ದ ಹಾಗೂ ಹೆಚ್ಚು ಜನರು ಹಿಡಿಸುವಂತೆ ಮಾಡಲಾಗಿದೆ—ಈಗ 17 ಪ್ರಯಾಣಿಕರು ಅದರಲ್ಲಿ ಕೂಡ್ರಬಹುದು.
ಮರೀಶಿಯೋ ಡಿ ಗುಯಾ 1948ರಲ್ಲಿ ಜೀಪ್ನಿ ನಡಿಸಲಾರಂಬಿಸಿದನು. ಆದರೆ 1979ರಲ್ಲಿ ಅವನು ತನ್ನ ಕಾಲತಖ್ತೆ ಬದಲಾಯಿಸಿ, ಅರ್ಧ ದಿನ ಮಾತ್ರ ಕೆಲಸ ಮಾಡತೊಡಗಿದ. ಈ ರೀತಿಯಲ್ಲಿ ಅವನು ತನ್ನ ಮನೆವಾರ್ತೆಯ ಏಳು ಮಂದಿ ಸದಸ್ಯರನ್ನು ಸಲಹುತ್ತಿದ್ದನು ಮತ್ತು ಮಧ್ಯಾಹ್ನ ಮತ್ತು ಆದಿತ್ಯವಾರವನ್ನು ಪೂರ್ಣ ಸಮಯದ ಶುಶ್ರೂಷಕ ಸೇವೆಯಲ್ಲಿ ಕಳೆಯುತ್ತಿದ್ದನು. ಹೆಚ್ಚಿನ ಡ್ರೈವರರು ತಮ್ಮ ಜೀಪ್ನಿಯಲ್ಲಿ ರಾಕ್ ಅಥವಾ ಸಿನೇಮಾ ತಾರೆಗಳ ಚಿತ್ರಗಳನ್ನು ತೂಗಹಾಕುತ್ತಾರೆ, ಮರೀಶಿಯೋ ಹೇಳುವದು: “ಪ್ರಯಾಣಿಕರಿಗೆ ಓದಲಾಗುವಂತೆ ನಾನು ನನ್ನ ಜೀಪ್ನಿಯ ಒಳಮೈಯಲ್ಲಿ ಬೈಬಲ್ ವಚನಗಳನ್ನು ಹಚ್ಚಿದೆನು.”
ಪ್ರಯಾಣಿಕರು ಹೇಗೆ ಪ್ರತಿಕ್ರಿಯೆ ತೋರಿಸಿದರು? ಅವನನ್ನುವದು: “ನನ್ನ ಧರ್ಮ ಯಾವದೆಂದು ಕೆಲವರು ಕೇಳಿದರು. ಇದರಿಂದಾಗಿ ನಾನು ಜನರಿಗೆ ಸಾರಲು ಶಕ್ತನಾದೆ ಮತ್ತು ಅವರು ಪ್ರಯೋಜನ ಹೊಂದಿದರು. ನನ್ನ ಜೀಪ್ನಿಯ ಹೆಚ್ಚಿನ ಪ್ರಯಾಣಿಕರು ತಾವೇನು ಓದಿದರೋ ಅದರಲ್ಲಿ ಆನಂದಿಸಿದರು, ಮತ್ತು ಅಂದದ್ದು: ‘ನಿನ್ನ ಜೀಪ್ನಿ ನಿಜವಾಗಿ ಒಳ್ಳೆಯದು. ಎಲ್ಲಾ ಜೀಪ್ನಿಗಳೂ ಹೀಗಿದ್ದರೆ ಎಷ್ಟು ಒಳ್ಳೇದಿತ್ತು. ಯಾವುವೇ ತಿಳಿಗೇಡಿ ವಸ್ತುಗಳನ್ನು ಹಚ್ಚುವದಕ್ಕಿಂತ, ಓದಿ ಯೋಚಿಸುವಂತೆ ಮಾಡುವ ದೇವರ ವಚನಗಳು ಅಲ್ಲಿರುತ್ತಿದ್ದವು.’”
ಜನಸಾಗಣೆಗಾಗಿ ಈ ಜೀಪ್ನಿಯನ್ನು ಒಂದು ಪರಿಣಾಮಕಾರಿ ಮತ್ತು ವ್ಯಾವಹಾರಿಕ ವ್ಯವಸ್ಥೆಯನ್ನಾಗಿ ಮಾಡುವದು ಯಾವದೆಂದು ನಿಮಗೀಗ ಗೊತ್ತಾಯಿತೋ? ಕೆಲವರಾದರೋ ಇದನ್ನು ಒಪ್ಪುವದಿಲ್ಲ, ಜೀಪ್ನಿಯು ಅನಾವಶ್ಯಕವಾದ ಸಂದಣಿ ಮತ್ತು ಮಲಿನತೆಯನ್ನು ಉಂಟು ಮಾಡುತ್ತದೆ ಎಂದವರು ದೂರುತ್ತಾರೆ, ವಿಶೇಷವಾಗಿ ಮನಿಲಾದಲ್ಲಿ. ಬೇರೆ ತರದ ಸಾರ್ವಜನಿಕ ವಾಹನಾದಿಗಳಿಂದ ಅದು ಸ್ಥಾನಪಲ್ಲಟವಾಗುವದನ್ನು ಕಾಣಲೂ ಕೆಲವರು ಬಯಸುತ್ತಾರೆ. ಹೀಗೆ, ಮನಿಲಾದ ಬುಲೆಟಿನ್ ಟುಡೇಯಲ್ಲಿ ಈ ಶೀರ್ಷಿಕೆಯ ಲೇಖನವು ಬಂದಿತ್ತು: “ಜೀಪ್-ಸೌಲಭ್ಯವನ್ನು ನಿಲ್ಲಿಸುವ ಆಲೋಚನೆ.” ಆದರೆ, ಅಂಥ ಒಂದು ಸಂಗತಿಯು ಭವಿಷ್ಯದಲ್ಲಿ ಬೇಗನೇ ಸಂಭವಿಸುವ ಸಂಭವನೀಯತೆ ಇಲ್ಲ. ಮಿಲ್ಯಾಂತರ ಜನರು ಜೀಪ್ನಿಯ ಮೇಲೆ ತಮ್ಮ ನಿತ್ಯದ ಪ್ರಯಾಣಕ್ಕಾಗಿ ಮಾತ್ರವೇ ಅಲ್ಲ ತಮ್ಮ ಜೀವನೋಪಾಯಕ್ಕಾಗಿಯೂ ಆತುಕೊಂಡಿದ್ದಾರೆ. (g89 11/22)
[ಅಧ್ಯಯನ ಪ್ರಶ್ನೆಗಳು]
a ಇದೊಂದು ಆಂಗ್ಲ ಶಬ್ದಾಂತರಗಳ ಆಟ. ಸ್ಥಳೀಕ ಭಾಷೆಯಲ್ಲಿ “ಜೂಡಸ್” ಶಬ್ದ ರೂಪವು “ಹೂ ಡಸ್” ಎಂಬ ಇಂಗ್ಲಿಷ್ ಶಬ್ದಗಳಂತೆ ಉಚ್ಚರಿಸಲ್ಪಡುತ್ತದೆ.
[ಪುಟ 26 ರಲ್ಲಿರುವ ಚಿತ್ರ ಕೃಪೆ]
Courtesy of Sarao Motors, Inc.