ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g91 10/8 ಪು. 22-23
  • ಆ ಸುಂದರ ಕೋಫು ಸ್ಫಟಿಕಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆ ಸುಂದರ ಕೋಫು ಸ್ಫಟಿಕಗಳು
  • ಎಚ್ಚರ!—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸ್ಫಟಿಕಗಳೆಂದರೇನು?
  • ಖನಿಜದಿಂದ ಕೌಶಲ್ಯಕೃತಿಗೆ
  • ವಿಶೇಷವಾದ ಒಂದು ರೀತಿಯ ನಿಕ್ಷೇಪ ಹುಡುಕುವಿಕೆ
    ಎಚ್ಚರ!—1993
ಎಚ್ಚರ!—1991
g91 10/8 ಪು. 22-23

ಆ ಸುಂದರ ಕೋಫು ಸ್ಫಟಿಕಗಳು

ಜಪಾನಿನ ಎಚ್ಚರ! ಬಾತ್ಮೀದಾರನಿಂದ

ಸ್ಫಟಿಕಾಭರಣಗಳ ಅಥವಾ ಕೆತ್ತನೆಯ ಕೃತಿಗಳ ಸೌಂದರ್ಯದಿಂದ ನೀವೆಂದಾದರೂ ಮುಗ್ಧರಾಗಿದ್ದೀರೋ? ಆಗಿರಬಹುದು. ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ಹೇಗೋ ಹಾಗೆ ನಿಮಗೂ ಅವು ಹೇಗೆ ಮಾಡಲ್ಪಟ್ಟಿವೆಂದು ಬಹುಶಃ ಗೊತ್ತಿರಲಿಕ್ಕಿಲ್ಲ. ಇದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ಪ್ರಖ್ಯಾತ ಫ್ಯೂಜಿ ಪರ್ವತದ ವಾಯುವ್ಯಕ್ಕಿರುವ ಜಪಾನಿನ ಕೋಫು ಶಹರಕ್ಕೆ ನಾವೀಗ ಹೋಗೋಣ. ಇದು ಲೋಕದ ದೊಡ್ಡ ರತ್ನ-ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ.

ಮೊತ್ತಮೊದಲಾಗಿ, ನಾವು ಲ್ಯಾಪಿಡರಿ ರಿಸರ್ಚ್‌ ಇನ್‌ಸಿಟ್ಟ್ಯೂಟನ್ನು ಸಂದರ್ಶಿಸೋಣ. ಇಲ್ಲಿನ ಸಿಬ್ಬಂಧಿಯು, ಪುರಾತನ ಕಾಲದಲ್ಲಿ ಜಪಾನಿ ಯೋದ್ಧರು ಸ್ಫಟಿಕವನ್ನು ತಮ್ಮ ಬಾಣಗಳ ಮೂತಿಯಾಗಿ ಬಳಸುತ್ತಿದ್ದ ಅಗೆತಶಾಸ್ತ್ರ ಸಂಶೋಧನೆಗಳ ಕುರಿತು ನಮಗೆ ತಿಳಿಸುತ್ತಾರೆ. ಕೆಲವು ಬಾಣ ಮೂತಿಗಳು ಪ್ರಾಯಶಃ ಕ್ರಿಸ್ತನ ಕಾಲದಷ್ಟು ಹಿಂದಿನವುಗಳು. ಧರ್ಮದಲ್ಲಿ ಸ್ಫಟಿಕಗಳು ವಹಿಸಿದ ಪಾತ್ರದ ಕುರಿತೂ ನಾವು ತಿಳಿದೆವು. ಶಿಂಟೋ ಧರ್ಮವು ನಿಸರ್ಗ ವಸ್ತುಗಳಾದ ಸೂರ್ಯ, ಬೆಟ್ಟಗಳು, ವೃಕ್ಷಗಳು ಮತ್ತು ಶಿಲೆಗಳ ಸುತ್ತಲೂ ಕೇಂದ್ರೀಕರಿಸಿದೆ. ಅಸಾಮಾನ್ಯವಾದ ಯಾವುದೇ ಒಂದು ವಸ್ತುವು ಪೂಜ್ಯವಸ್ತುವಾಗಿ ಕಾಣಲ್ಪಡುತ್ತದೆ. ಹೀಗೆ, ಅಸಾಮಾನ್ಯವಾದ ಹರಳುಗಳು ಕಾಣಸಿಕ್ಕಿದಾಗ, ಅವುಗಳನ್ನು ಸ್ಥಳೀಕ ಗುಡಿಗಳಲ್ಲಿ ಜೋಪಾಸನೆ ಮಾಡಲಾಗುತ್ತಿತ್ತು.

ಜಪಾನಿನ ಜಹಗೀರ ಪದ್ಧತಿಯ ಯುಗದಲ್ಲಿ ಹರಳುಗಳನ್ನು ಕೊಳ್ಳುವದು ಮತ್ತು ಮಾರುವುದು ಬಹಳ ಅಪರೂಪವಾಗಿತ್ತು. ಆದರೆ 1867ರಲ್ಲಿ, ಚಕ್ರವರ್ತಿ ಮೈಜೀ ಆಳಲಾರಂಭಿಸಿದನು ಮತ್ತು ಆ ಮೇಲೆ ಬೇಗನೇ ಜಹಗೀರ ಪದ್ಧತಿಯು ಕೊನೆಗೊಂಡಿತು. ಈ ಬದಲಾವಣೆಯೊಂದಿಗೆ, ಜನರು ಸ್ಫಟಿಕವನ್ನು ಅಗೆದು ತೆಗೆಯಲು ಮತ್ತು ಮಾರಲು ಈಗ ಸ್ವತಂತ್ರರಾದರು. ಹೀಗೆ, ಕೊಫೂವಿನ ಸ್ಫಟಿಕ ಕೈಗಾರಿಕೆಯು ಜನಿಸಿತು.

ಸ್ಫಟಿಕಗಳೆಂದರೇನು?

ಯಮನಾಶಿ ಯೂನಿರ್ವಸಿಟಿಯ ಪ್ರೊಫೆಸರ್‌ ಕೆನ್ರೋ ಟ್ಸುನಾಡ ಉತ್ತರಿಸುವದು: “‘ಸ್ಫಟಿಕ’ ಎಂಬ ಶಬ್ದವನ್ನು, ಕಣರೇಣುಗಳು ಒಂದು ಕ್ರಮದಲ್ಲಿ, ಪುನಃ ಪುನಃ ಅಳವಡಿಸಶಕ್ತನಾದ ಏರ್ಪಾಡುಳ್ಳ ಯಾವುದೇ ಘನ ಪಧಾರ್ಥಕ್ಕೆ ಸೂಚಿಸಬಹುದು. ವಜ್ರಗಳು, ಹಿಮಸ್ಫಟಿಕಗಳು ಮತ್ತು ಸಾಮಾನ್ಯ ಉಪ್ಪು ಸಹಾ ರಚನೆಯಲ್ಲಿ ಸ್ಫಟಿಕಮಣಿಯಂತಿವೆ.

ಸ್ಫಟಿಕಗಳು ಬಂದದ್ದು ಎಲ್ಲಿಂದ? ಪ್ರೊಫೆಸರ್‌ ಟ್ಸುನಾಡೊ ಉತ್ತರಿಸುವದು: “ಸ್ಫಟಿಕ ಶಿಲೆಗಳು ಭೂಮಿಯ ಮೇಲ್ಪದರದಲ್ಲಿರುವ ಎರಡು ಅತ್ಯಂತ ಸಮೃದ್ಧ ಘಟಕಗಳಾದ ಸಿಲಿಕನ್‌ ಮತ್ತು ಆಮ್ಲಜನಕದಿಂದ ಮಾಡಲ್ಪಟ್ಟಿವೆ, ಭೂಮಿಯು ಸೃಷ್ಟಿಸಲ್ಪಟ್ಟ ನಂತರ, ಅದು ಘನೀಭವಿಸಿತು ಮತ್ತು ಹಗುರವಾದ ರಸಾಯನಿಕ ವಸ್ತುಗಳು ಮೇಲ್ಭಾಗದಲ್ಲಿ ತೇಲತೊಡಗಿದವು. ಇವು ಘನೀಭವಿಸಿದಂತೆ, ಒಂದು ತೆಳ್ಳಗಿನ ಶಿಲಾಪದರಾಗಿ ರೂಪುಗೊಂಡವು. ಭೂಮಿಯ ಅಡಿಯಲ್ಲಿರುವ ಬಿಸಿಯಾದ ಶಿಲಾ ಒರಟುಮಿಶ್ರಣವು ಸಹಾ ಕೆಲವೊಮ್ಮೆ ಈ ಪದರನ್ನು ಬಿರಿದು ಹೊರಬರುತ್ತದೆ. ಫಲಿತಾಂಶ: ಜ್ವಾಲಾಮುಖಿ. ಬೇರೆ ಸಮಯಗಳಲ್ಲಿ ಈ ಒರಟು ಮಿಶ್ರಣವು ಭೂಮಿಯ ಮೇಲ್ಪದರದ ಕೆಳಗೆ ಒಂದು ದಿನ್ನೆಯನ್ನು ಮಾಡುವಷ್ಟೇ ಎತ್ತರಕ್ಕೆ ಬರುತ್ತದೆ.” ಈ ಬಿಸಿ ಒರಟು ಮಿಶ್ರಣದ ಸದಾ ಏಳಿಕೆಯು ಮತ್ತು ನಿಧಾನ ಘನೀಭವಿಸುವಿಕೆಯು, ಶತಮಾನಗಳು ಸಂದಂತೆ, ಶುಭ್ರವಾದ ಸ್ಫಟಿಕ ಶಿಲೆಗಳನ್ನು ಉಂಟುಮಾಡಲು ಸರಿಸಮವಾದ ಘಟಕಾಂಶ, ಉಷ್ಣತೆ ಮತ್ತು ಒತ್ತರವನ್ನು ಒದಗಿಸುತ್ತದೆ.

“ಅವುಗಳ ಆಕಾರ ಮತ್ತು ಗಾತ್ರವು ಎಷ್ಟೇ ಇರಲಿ,” ಪ್ರೊಫೆಸರರು ಮುಂದುವರಿಸುವುದು, “ಈ ಹರಳುಗಳಿಗೆ ಯಾವಾಗಲೂ ಆರು ಅಂಚುಗಳಿವೆ. ಅವುಗಳ ನುಣುಪಾದ, ಚಪ್ಪಟೆ ಮೇಲ್ಭಾಗಗಳು 60 ಡಿಗ್ರಿ ಸಮಕೋನದಲ್ಲಿ ಸಂಧಿಸಿ, ಮೇಲೆ ಒಂದು ಬಿಂದುವಿಗೆ ಬರುತ್ತವೆ. ಇವುಗಳು, ಎಷ್ಟೋ ಹೆಚ್ಚು ಉಷ್ಣ ಮತ್ತು ಒತ್ತರಗಳ ಕೆಳಗೆ ರೂಪಗೊಂಡ ವಜ್ರಗಳಷ್ಟು ಕಠಿಣವಿಲದ್ಲಿದ್ದರೂ, ಮೋಹ್ಸ್‌ ಮಾಪಕದಲ್ಲಿನ ಏಳರಷ್ಟು ಕಠಿಣತೆ ಇವಕ್ಕಿವೆ, ಇವಕ್ಕೆ ತುಲನೆಯಲ್ಲಿ ನೀಲರತ್ನ ಮತ್ತು ಮಾಣಿಕ್ಯಕ್ಕೆ ಇರುವ ಕಠಿಣತೆ ಒಂಭತ್ತು. ಮತ್ತು ಅವುಗಳ ಗಾತ್ರ ಸಹಾ ತೀರಾ ದೊಡ್ಡದಿರಬಲ್ಲದು.”

ಖನಿಜದಿಂದ ಕೌಶಲ್ಯಕೃತಿಗೆ

ಕೊಫೂವಿನ ದೊಡ್ಡ ಕಾರ್ಖಾನೆಗಳೊಂದರ ಮಾಲಕ, ಶ್ರೀ ಮೊಮೋಸ್‌, ಈ ಸ್ಫಟಿಕಗಳು ತಮ್ಮ ಒರಟು ರೂಪದಿಂದ ತೆಗೆಯಲ್ಪಟ್ಟು ಸುಂದರವಾದ ರತ್ನಗಳಾಗಿ ಹೇಗೆ ಮಾರ್ಪಡುತ್ತವೆ ಎಂದು ತೋರಿಸಲು ಸೌಜನ್ಯದಿಂದ ಒಪ್ಪಿದರು. “ಗತ ವರ್ಷಗಳಲ್ಲಿ,” ಶ್ರೀ ಮಾಮೋಸ್‌ ಹೇಳುವುದು, “ಇಲ್ಲಿ ಬಳಸಲ್ಪಟ್ಟ ಹೆಚ್ಚಿನ ಸ್ಫಟಿಕಗಳು ಜಪಾನಿನಲ್ಲಿ ಅಗೆದು ತೆಗೆದವುಗಳು. ಈಗ, ಆರ್ಥಿಕ ಕಾರಣಗಳಿಂದಾಗಿ, ಜಪಾನಿನಲ್ಲಿ ಅವುಗಳ ಗನಿಗಾರಿಕೆ ನಡಿಯುವದಿಲ್ಲ. ಸುಮಾರು 480 ಟನ್ನುಗಳಿಗಿಂತಲೂ ಹೆಚ್ಚು ಸ್ಫಟಿಕಗಳು ಪ್ರತಿ ವರ್ಷ ಆಮದು ಮಾಡಲ್ಪಡುತ್ತವೆ, ಹೆಚ್ಚಿನವು ಬ್ರಾಜಿಲ್‌ನಿಂದ; ಹಲವು ಶಿಲೆಗಳು ಆಫ್ರಿಕ, ಪಶ್ಚಿಮ ಜರ್ಮನಿ ಮತ್ತು ಅಮೆರಿಕದಿಂದಲೂ ಬರುತ್ತವೆ.”

ಈ ಶಿಲೆಗಳನ್ನು ರೊಟ್ಟಿಯನ್ನು ಹೋಳು ಮಾಡುವಂತೆ ಕಾರ್ಬೊರಂಡಂ ಧಾರೆಯಿಂದ ಹೋಳುಗಳನ್ನಾಗಿ ಮಾಡಲಾಗುತ್ತದೆ. ಅನಂತರ ಮುಖ್ಯ ಕಾರೇಗಾರನು ಶಿಲೆಯ ಮೇಲೆ ಗುರುತು ಮಾಡಿ ಪ್ರತಿಯೊಂದು ರತ್ನವನ್ನು ಆಕಾರಕ್ಕೆ ಸರಿಯಾಗಿ ಕತ್ತರಿಸಿ ರೂಪು ಕೊಡುತ್ತಾನೆ. ಸುಲಭವಾಗಿ ಕೊರೆಯಲು ಶಿಲ್ಪಿಯು ರತ್ನಗಳನ್ನು ಒಂದು ಉದ್ದವಾದ ಕೋಲಿಗೆ ಅಂಟಿಸುತ್ತಾನೆ. ಅನಂತರ, ಒಂದು ಚರಕದ ಮೇಜಲ್ಲಿ ಕೂತು, ಕೌಶಲ್ಯದಿಂದ ಕಣಪಟ್ಟೆಯನ್ನು ಕೈಯಿಂದ ಉಜ್ಜಿ ನಯಮಾಡುತ್ತಾನೆ. ಅವನು ಅಂಡಾಕಾರದ, ಕಾಂತಿಯುಳ್ಳ, ಉಜ್ವಲ ಪಚ್ಛೆಹಸುರಿನ ಅಥವಾ ಬೇರೆ ಸುಂದರವಾದ ಕಚ್ಚುಗಳನ್ನು ಮಾಡಬಹುದು. ಆ ಮೇಲೆ, ಹರಳುಗಳನ್ನು ಒಂದು ಆವರ್ತಿಸುವ ಮೇಜಿನ ಮೇಲೆ ಮೆರುಗಿಸಲಾಗುತ್ತದೆ. ಪ್ರತಿಯೊಂದು ಹರಳನ್ನು ಅತ್ಯುತ್ತಮ ಕೌಶಲ್ಯದ ಕೃತಿಯಾಗಿ ಮಾರ್ಪಡಿಸಲಾಗುತ್ತದೆ.

ಈ ಹರಳುಗಳನ್ನು ಅಕ್ಕಸಾಲಿಗನು ಸೊಬಗಿನ ರತ್ನಾಭರಣಗಳಾಗಿ ಶೃಂಗರಿಸುವಾಗ ಅದರ ಮೂಲ್ಯತೆ ಮತ್ತು ಸೌಂದರ್ಯವು ಬಹಳವಾಗಿ ಹೆಚ್ಚುತ್ತದೆ. ನಾವು ಸ್ಥಳೀಕ ರತ್ನಗಾರನನ್ನು ಸಂದರ್ಶಿಸಿ ಒಂದು ಕಂಗೊಳಿಸುವ ರತ್ನದ ಹರಳುಗಳ ಪ್ರದರ್ಶನೆಯನ್ನು ನೋಡುತ್ತೇವೆ. ಈ ಹರಳುಗಳಿಂದ ಹಲವಾರು ತರತರದ ವಸ್ತುಗಳನ್ನು ತಯಾರಿಸ ಬಹುದೆಂಬದನ್ನು ನಾವು ಗಮನಿಸಿದೆವು: ಬ್ರೋಚುಗಳು, ಕಫ್‌ಲಿಂಕ್ಸ್‌ಗಳು, ಕಾಗದಭಾರಗಳು, ಟೈಟ್ಯಾಕ್‌ಗಳು, ಲೋಲಕ ಪದಕಗಳು. ಮತ್ತು ಗೋಡೆಯ ಮೇಲೆ ಫ್ಯೂಜೀ ಪರ್ವತ, ವರ್ಣರಂಜಿತ ಪಕ್ಷಿಗಳ ಮತ್ತು ಪ್ರಖ್ಯಾತ ಜಪಾನಿ ಮತ್ಸ್ಯಗಳ ಚಿತ್ತವೇಧಕ ಪ್ರದರ್ಶನಗಳು.

ರತ್ನಗಾರರು ರತ್ನಗಳ ನೈಸರ್ಗಿಕ ಸೌಂದರ್ಯವನ್ನು ಬೆಳಗಿಸಲು ಬಂಗಾರ, ಪಾಟ್ಲಿನಮ್‌, ಬಿಳಿಬಂಗಾರ ಅಥವಾ ಬೆಳ್ಳಿಯನ್ನು ಅಸಂಖ್ಯಾತ ರೀತಿಯಲ್ಲಿ ಬಳಸುತ್ತಾರೆ. ವಜ್ರಗಳಂಥ ಅಮೂಲ್ಯ ಹರಳುಗಳನ್ನು ಸ್ಫಟಿಕಗಳೊಂದಿಗೆ ಜೋಡಿಸುವ ಮೂಲಕ, ಅವುಗಳ ಶೋಭಾಯಮಾನ ಮತ್ತು ಬೆಲೆಯು ಬಹಳಷ್ಟು ಹೆಚ್ಚುತ್ತದೆ. ಆದರೆ ಕಡಿಮೆ ಶೋಭೆಯಚ್ಚಿನ ಚಿಕ್ಕಚಿಕ್ಕ ಸ್ಫಟಿಕ ಶಿಲೆಗಳು ಈಗ ಕೈಗಡಿಯಾರಗಳಲ್ಲಿ, ಟೆಲಿವಿಷನ್‌ಗಳಲ್ಲಿ, ರೇಡಿಯೋ ಮತ್ತು ಇತರ ಇಲೆಕ್ಟ್ರಾನಿಕ್‌ ಸಾಧನಗಳಲ್ಲಿ ಆಂದೋಲಕಗಳಾಗಿ ಕಾರ್ಯನಡಿಸುತ್ತವೆ. ಮತ್ತು ಭವಿಷ್ಯದಲ್ಲಿ ಯಾವ ಉಪಯೋಗಕ್ಕೆ ಅವುಗಳು ಹಾಕಲ್ಪಡಲಿವೆಯೋ ಯಾರಿಗೆ ಗೊತ್ತು? ಈ ಮಧ್ಯೆ, ನಾವಾದರೋ, ಅವುಗಳ ಪ್ರಕಾಶಮಾನವಾದ ಸೌಂದರ್ಯವನ್ನು ಕೌತುಕದಿಂದ ಕಣ್ಣಿಕ್ಕಿ ನೋಡುವುದರಲ್ಲಿ ಸಂತುಷ್ಟರಾಗಿದ್ದೇವೆ. (g90 4/8)

[ಪುಟ 23 ರಲ್ಲಿರುವ ಚಿತ್ರ ಕೃಪೆ]

Yamanashi Jewelry Museum

The Shakado Museum of Jomon Culture

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ