ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g91 10/8 ಪು. 28
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಗಂಗಾ ಮಾಲಿನ್ಯತೆ
  • ಮಾರಕ ಪಕ್ಷಿ-ವಿಕ್ರಯ
  • ಮಕ್ಕಳ ಮೇಲೆ ಒತ್ತಡ
  • ಕ್ಯಾಥಲಿಕರು ಮತ್ತು ಬೈಬಲ್‌
  • ಜಾಣ ಕೂಸುಗಳು
  • ಏಯ್ಡ್ಸ್‌ ಹದಿಹರೆಯದವರಿಗೆ ಆಪತ್ಕಾಲ
    ಎಚ್ಚರ!—1992
  • ಏಯ್ಡ್ಸ್‌ ಮಕ್ಕಳು ಅದಕ್ಕೆ ತೆರುವ ಹೃದಯದ್ರಾವಕ ಬೆಲೆ
    ಎಚ್ಚರ!—1992
  • ಏಯ್ಡ್ಸ್‌—ನಾನು ಗಂಡಾಂತರದಲ್ಲಿರುವೆನೊ?
    ಎಚ್ಚರ!—1993
  • ಏಯ್ಡ್ಸ್‌ ಹೆತ್ತವರು ಮತ್ತು ಮಕ್ಕಳು ಅರಿತಿರಬೇಕಾದ ಸಂಗತಿ
    ಎಚ್ಚರ!—1992
ಎಚ್ಚರ!—1991
g91 10/8 ಪು. 28

ಜಗತ್ತನ್ನು ಗಮನಿಸುವುದು

ಗಂಗಾ ಮಾಲಿನ್ಯತೆ

ಹಿಂದೂಗಳಿಗೆ, 1,500 ಮೈಲು ಉದ್ದದ ಗಂಗಾ ನದಿಯು ಭಾರತದಲ್ಲಿ ಅತ್ಯಂತ ಪವಿತ್ರ ನದಿ. ಪ್ರತಿ ವರ್ಷ ಆ ನದೀ ತೀರದಲ್ಲಿ ಕಟ್ಟಿಗೆಯ ಚಿತೆಗಳ ಮೇಲೆ ಸುಡಲ್ಪಡುವ ಸಾವಿರಾರು ಶವಗಳು ಮತ್ತು ಅವುಗಳ ಬೂದಿ, ಸಂಸ್ಕಾರ ಪದ್ಧತಿಗನುಸಾರ ನದಿಯೊಳಗೆ ಎಸೆಯಲ್ಪಡುತ್ತವೆ. ಆದರೆ ಕಟ್ಟಿಗೆ ಮತ್ತು ಹಣದ ಅಭಾವದಿಂದಾಗಿ, ಸಾವಿರಾರು ಅರೆ-ದಹಿತ ಶವಗಳು ಈಗ ನದಿಯೊಳಗೆ ಎಸೆಯಲ್ಪಡುತ್ತಾ ಇವೆ. ಈ ಶವಗಳು ಮತ್ತು ಸತ್ತ ಅಸಂಖ್ಯಾತ ಪಶುಗಳ ಹೆಣಗಳು, ಒಂದು ಗಂಭೀರವಾದ ಆರೋಗ್ಯ ಸಮಸ್ಯೆಯನ್ನುಂಟು ಮಾಡಿದೆ. ಟೈಮ್ಸ್‌ ಆಫ್‌ ಲಂಡನ್‌ ಪತ್ರಿಕೆಯ ದೆಹಲಿ ವರದಿಗಾರನು ಬರೆಯುವದು: “ಗಿಡುಗಗಳು ಕೂತಿರುವ ಉಬ್ಬಿದ ಹೆಣಗಳು ತೇಲಾಡುತ್ತಾ ಹೋಗುವಾಗ, ಹಿಂದೂ ಯಾತ್ರಿಕರು ಹೊಲಸು ನಾರುವ ಪವಿತ್ರ ನೀರಿನಲ್ಲಿ ಚೆಲ್ಲಾಡುತ್ತಾ ಕುಣಿಯುತ್ತಾ ಇರುತ್ತಾರೆ.” ಈ ಸಂದುಕಟ್ಟನ್ನು ನಿವಾರಿಸುವ ಪ್ರಯತ್ನದಲ್ಲಿ, ಉತ್ತರ ಪ್ರದೇಶ ಸರಕಾರವು, ನದಿಯಲ್ಲಿ ವಾಸಿಸುವ ಮಾಂಸಭಕ್ಷಕ ಆಮೆಗಳನ್ನು ಈಗ ಕಾಪಾಡುತ್ತಲಿಲದೆ ಮತ್ತು ವೃದ್ಧಿಸುತ್ತಲಿದೆ. “ಎಳೆಯ ಆಮೆಗಳು ಮೀನು ಮತ್ತು ಚಿಕ್ಕ ಪಶುಗಳ ಕೊಳೆತ ಮಾಂಸವನ್ನು ತಿನ್ನಲಾರಂಭಿಸುತ್ತಾ, ಕ್ರಮೇಣ ಹೆಣಗಳನ್ನೂ ತಿನ್ನ ತೊಡಗುತ್ತವೆ,” ಎಂದು ಮುಖ್ಯ ವನ್ಯ-ಜೀವಿ ಪಾಲಕನು ತಿಳಿಸುತ್ತಾನೆ. ಆದರೆ, ಅವನನ್ನುವದು, ಈಜುವವರನ್ನು ಅವು ಬೆದರಿಸಲಾರವು. (g90 8/22)

ಮಾರಕ ಪಕ್ಷಿ-ವಿಕ್ರಯ

ವನ್ಯ-ಪಕ್ಷಿ ವ್ಯಾಪಾರವು ಪ್ರತಿ ವರ್ಷ ಮಿಲ್ಯಾಂತರ ಹಕ್ಕಿಗಳ ಸಾವಿಗೆ ಕಾರಣವಾಗಿದೆ—ಅಂದಾಜು ಸಂಖ್ಯೆಯು ನೂರು ಮಿಲಿಯ ಮೃತ ಪಕ್ಷಿಗಳಷ್ಟೂ ಏರಿದೆ. “ಮಾರಲ್ಪಡುವ ಒಂದು ಪಕ್ಷಿಯ ಹಿಂದೆ ಹಿಡಿಯಲ್ಪಡುವ ಐದು ವನ್ಯ ಪಕ್ಷಿಗಳಾದರೂ ಸಾಯುತ್ತವೆ” ಎಂದು ದಕ್ಷಿಣ ಆಫ್ರಿಕದ ಪರ್ಸನಾಲಿಟಿ ಪತ್ರಿಕೆಯು ತಿಳಿಸುತ್ತದೆ. ವಿಜಾತೀಯ ಪಕ್ಷಿಗಳನ್ನು ಹಿಡಿಯಲು ಕೆಲವು ವ್ಯಾಪಾರಿಗಳು, ಗೂಡುಗಳಿರುವ ಮರಗಳನ್ನೇ ಕಡಿದು, ಪಾರಾಗಿ ಉಳಿಯಬಹುದಾದ ಎಳೆ ಪಕ್ಷಿಗಳನ್ನು ಹಿಡಿಯುತ್ತಾರೆ. ಇನ್ನೊಂದು ವಿಧಾನವು ಪಕ್ಷಿಗಳ ಗುಂಪಿಗೇ ಕಿರುಗುಂಡುಗಳನ್ನೆಸೆದು, ರೆಕ್ಕೆಯಲ್ಲಿ ತುಸು ಗಾಯಗೊಂಡು ನೆಲಕ್ಕೆ ಬೀಳುವ ಪಕ್ಷಿಗಳನ್ನು ಸೆರೆಹಿಡಿಯುವದೇ. ಅನಂತರ, ಪಕ್ಷಿಗಳನ್ನು ಸಜೀವವಾಗಿಡುವ ಮತ್ತು ದೂರದೇಶಗಳಿಗೆ ವಿಮಾನದ ಮೂಲಕ ರವಾನಿಸುವ ದೊಡ್ಡ ಕೆಲಸವು ಹಿಂಬಾಲಿಸುತ್ತದೆ. ಅಲ್ಲಿಗೆ ತಲಪುವಾಗ ಅವು ಹೆಚ್ಚಾಗಿ ಸಾಯುವದೂ ಉಂಟು. ಇದರಲ್ಲಿರುವ ಲಾಭವಾದರೂ ಏನು? ಪರ್ಸನಾಲಿಟಿ ವಿವರಿಸುವದು: “ವಿಕ್ರಯವಾಗುವ ಪಕ್ಷಿಗಳ ಸಂಖ್ಯೆ ಸಾಧಾರಣ ವರ್ಷಕ್ಕೆ ಐವತ್ತು ಲಕ್ಷವೆಂದು ಅಂದಾಜಾಗಿದೆ. ಆದರೆ ಇದರಲ್ಲಿ ಕಳ್ಳಸಾಗಣೆಯಾಗುವ ಅಪಾರ ಸಂಖ್ಯೆಯು ಸೇರಿರುವುದಿಲ್ಲ. . . . ಪಕ್ಷಿ-ಮೆಚ್ಚುಗರು ಮತ್ತು ಸಂಗ್ರಹಗಾರರು ಬಾಚಿಕೊಳ್ಳ ಬಯಸುವ ಆದರೆ ಸಂರಕ್ಷಿತ ಪಕ್ಷಿ-ಜಾತಿಗಳಿಗಾಗಿ, 2,50,000 ಡಾಲರುಗಳನ್ನು ತೆರಲೂ ಸಿದ್ಧರಾಗಿರುತ್ತಾರೆ.” (g90 5/22)

ಮಕ್ಕಳ ಮೇಲೆ ಒತ್ತಡ

ಅಧಿಕತಮ ಒತ್ತಡದಿಂದ ಮಕ್ಕಳು ವಿರಹಿತರಲ್ಲ. ಬ್ರಾಜಿಲ್ಯನ್‌ ಪತ್ರಿಕೆ ಸೂಪರ್‌ಇಂಟ್ರೆಸೆಂಟೆ ವರದಿ ಮಾಡುವದೇನಂದರೆ ಜಾಗತಿಕ ಆರೋಗ್ಯ ಸಂಸ್ಥೆಗೆ ಅನುಸಾರವಾಗಿ, “ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರತಿ ಐದು ಮಕ್ಕಳಲ್ಲಿ ಒಂದು ಒತ್ತಡಕ್ಕೆ ಒಳಗಾಗುತ್ತದೆ.” ಈ ಒತ್ತಡಕ್ಕೆ ಕೊಡಲ್ಪಟ್ಟ ಅತ್ಯಂತ ಸಾಮಾನ್ಯ ಕಾರಣಗಳು “ಹೆತ್ತವರ ಪ್ರತ್ಯೇಕವಾಸ ಮತ್ತು ಅತಿ ಹೆಚ್ಚು ಶಾಲಾಗೆಲಸ.” ಪತ್ರಿಕೆಯು, ಯೂನಿರ್ವಸಿಟಿ ಆಫ್‌ ಸಾವೊ ಪೌಲೋದಲ್ಲಿ ಮಕ್ಕಳ ರೋಗ ಶಾಸ್ತ್ರದ ಪ್ರೊಫೆಸರರಾದ ಪ್ರಾನ್ಸಿಸ್‌ಕೋ ಡಿಫ್ಲೊರ್‌ರರ ಮಾತನ್ನು ಉದ್ಧರಿಸುತ್ತಾ, ವಿವರಿಸುವದು: “ಮಕ್ಕಳಲ್ಲಿ ಹೃದಯರೋಗದ ಸಮಸ್ಯೆಗಳು ತೋರಿಬರುವದಿಲ್ಲ ಯಾಕಂದರೆ ಇನ್ನೂ ಬೆಳೆಯುತ್ತಿರುವ ಹೃದಯವು ಒತ್ತಡದ ಹೊರೆಯನ್ನು ನಿರ್ವಹಿಸಬಲ್ಲದು. ಆದರೆ ಹೊಟ್ಟೆ ಮತ್ತು ರೋಗರಕ್ಷೆಯ ವ್ಯವಸ್ಥೆಯ ಹೀಗಿರುವದಿಲ್ಲ. ಆದ್ದರಿಂದ, ಮಕ್ಕಳಲ್ಲಿ ಒತ್ತಡವು ಸಾಮಾನ್ಯವಾಗಿ ನ್ಯೂನ ಪಚನಕ್ರಿಯೆ, ಪದೆಪದೇ ನೆಗಡಿ ಮತ್ತು ಎಲ್ಲಾ ತರದ ಸೂಕ್ಷ್ಮಸಂವೇದಿ ಖಾಯಿಲೆಗಳಿಗೆ ಕಾರಣವಾಗುತ್ತದೆ.” (g90 9/8)

ಕ್ಯಾಥಲಿಕರು ಮತ್ತು ಬೈಬಲ್‌

ಕ್ಯಾಥಲಿಕರಿಗೆ ಸಾಂಪ್ರದಾಯಿಕವಾಗಿ ಇರುವ ಬೈಬಲ್‌ ಜ್ಞಾನವು ಕೊಂಚವೇ ಎಂದು ಆಸ್ಟ್ರೇಲಿಯದ ಸಿಡ್ನಿ ಶಹರದ ಸಭಾ ಪಾದ್ರಿಯೊಬ್ಬರು ಬಹಿರಂಗವಾಗಿ ಒಪ್ಪಿದ್ದಾರೆ ಎಂದು ಸಿಡ್ನಿ ಡೈಲಿ ಮಿರರ್‌ ಹೇಳಿದೆ. ಈ ಬೈಬಲ್‌ ಜ್ಞಾನದ ಕೊರತೆಯನ್ನು ಸರಿಪಡಿಸಲು ಕ್ಯಾಥಲಿಕ ಚರ್ಚು ಸಿಡ್ನಿ ಶಹರದಲ್ಲೆಲ್ಲಾ ಎಂಟು ಉಪನಗರ ಕೇಂದ್ರಗಳಲ್ಲಿ ಬೈಬಲ್‌ ಶಿಕ್ಷಣ ವರ್ಗಗಳನ್ನು ನಡಿಸಲು ನಿರ್ಣಯಿಸಿದೆ. ಈ ಯೋಜಿತ ವರ್ಗವು 4-5 ವಾರಗಳವು ಮತ್ತು ಸುಮಾರು 2000 ಮಂದಿ ಅದಕ್ಕೆ ಹಾಜರಾಗುವರೆಂದು ನಿರೀಕ್ಷಿಸಲಾಗಿದೆ. ಕ್ಯಾಥಲಿಕ ಚರ್ಚು ಮತ್ತು ಬೈಬಲು “ಹೆಚ್ಚಿನ ಆರಾಧಕರಿಗೆ ಜೊತೆ ಜೊತೆಯಾಗಿ ಹೋಗುವದಿಲ್ಲ” ಎಂದು ಹೇಳುತ್ತಾ, ಡೈಲೀ ಮಿರರ್‌ ಯುಕ್ತವಾಗಿಯೇ ತನ್ನ ಲೇಖನಕ್ಕೆ “ನಂಬಿಗಸ್ತರು ಹಿಂದೆ ಮೂಲಪಾಠಕ್ಕೆ” ಎಂಬ ಶೀರ್ಷಿಕೆ ಕೊಟ್ಟಿತು. (g90 9/8)

ಜಾಣ ಕೂಸುಗಳು

ಜನಿಸಿದ ಕೂಸುಗಳಿಗಿರುವ ಸಾಮರ್ಥ್ಯಗಳನ್ನು ನಿರ್ಧರಿಸುವಲ್ಲಿ ವಿಜ್ಞಾನಿಗಳು ಅಧಿಕಾಧಿಕ್ಯವಾಗಿ ನಿಪುಣರಾಗುತ್ತಿದ್ದು, “ಆಗಲೇ ಜನಿಸಿದ ಕೂಸು ‘ಒಂದು ಸಮರ್ಥ ಶಿಶು’ ಎಂಬ ಅಂಗೀಕಾರಕ್ಕೆ ನಡಿಸಿದೆ,” ಎಂದು ಲಂಡನ್‌ ವಾರ್ತಾಪತ್ರ ದ ಟೈಮ್ಸ್‌ ವರದಿ ಮಾಡಿದೆ. “ನಂಬಿಕೆಗೆ ಪ್ರತಿಕೂಲವಾಗಿ, ಕೂಸುಗಳು ಉಚ್ಛಮಟ್ಟದ ಚುರುಕುಬುದ್ಧಿಯೊಂದಿಗೆ ಹುಟ್ಟುತ್ತವೆ.” ತಾವು ಕಾಣುವ ವಸ್ತುಗಳ ಅರ್ಥವನ್ನು ಬೇಗನೇ ತಿಳಿಯಲಾರಂಭಿಸುತ್ತವೆ. ಸಂಶೋಧಕರಲೊಬ್ಬರಾದ, ಎಕ್ಸೀಟರ್‌ ಯೂನಿರ್ವಸಿಟಿಯ ಡಾ. ಎಲನ್‌ ಸೇಟ್ಲರ್‌ ಹೇಳುವದು: “ಹುಟ್ಟಿದ ಕ್ಷಣದಿಂದಲೇ ಕೂಸುಗಳು ಲೋಕದ ಕುರಿತು ಕಲಿಯಬಲ್ಲವು. ಹೊಸ ಕೂಸು ತನ್ನ ತಾಯಿಯನ್ನು ಮತ್ತು ಇತರರನ್ನು ನೋಟದಿಂದ, ಶಬ್ದ ಮತ್ತು ವಾಸನೆಯಿಂದ ಗುರುತು ಹಿಡಿಯಬಲ್ಲದು. ಗರ್ಭದಲ್ಲಿ ಸಹಾ ಅದು ಬಹಳಷ್ಟನ್ನು ಕಲಿಯತ್ತದೆ ಎಂದು ರುಜುವಾತು ತೋರಿಸುತ್ತದೆ.” ಕೂಸುಗಳು “ಕೇವಲ ಉಣಿಸಲು ಕಾಯುತ್ತಾ ಇರುವ ಅನನ್ಯತೆಯ ಮೂಟೆಯಲ್ಲ,” ಮತ್ತು ಅತಿ ಚಿಕ್ಕ ಪ್ರಾಯದಿಂದಲೇ ಶಿಶುಗಳು ಯೋಜಿಸುವ ಮೂಲಕ ಕ್ರಿಯೆಗೈಯಬಲ್ಲವು, ಪರೀಕ್ಷಾ ಪ್ರಯೋಗದಿಂದಲ್ಲ ಎಂದು ಹಲವಾರು ಅಂತರಾಷ್ಟ್ರೀಯ ಸಂಶೋಧನೆಗಳು ತೋರಿಸುತ್ತಿವೆ ಎಂದು ದ ಟೈಮ್ಸ್‌ ಗಮನಿಸಿದೆ. (g90 5/22)

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ