ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಿಹಿಸುದ್ದಿ! ಕಿರುಹೊತ್ತಗೆ ಉಪಯೋಗಿಸಿ, ಬೈಬಲ್ ಅಧ್ಯಯನ ಆರಂಭಿಸಿ
ಏಕೆ ಪ್ರಾಮುಖ್ಯ: ಜನರನ್ನು ಶಿಷ್ಯರನ್ನಾಗಿ ಮಾಡಬೇಕೆಂದರೆ, ನಮಗೆಲ್ಲರಿಗೂ ದೇವರ ವಾಕ್ಯವನ್ನು ಚೆನ್ನಾಗಿ ಕಲಿಸಲು ಗೊತ್ತಿರಬೇಕು. (ಮತ್ತಾ. 28:19,20) ನಮಗೆ ಕೊಡಲಾಗಿರುವ ಸಾಧನಗಳನ್ನು ಬಳಸುವುದರಿಂದ ಇತರರಿಗೆ ಸತ್ಯವನ್ನು ಚೆನ್ನಾಗಿ ಕಲಿಸಬಹುದು. ಅಂಥ ಸಾಧನಗಳಲ್ಲೊಂದು ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಗೆಯಾಗಿದೆ. ಇತರರಿಗೆ ಸತ್ಯವನ್ನು ಕಲಿಸಲು ಸುಲಭವಾಗುವಂಥ ರೀತಿಯಲ್ಲಿ ಈ ಕಿರುಹೊತ್ತಗೆಯನ್ನು ತಯಾರಿಸಲಾಗಿದೆ. ಇದನ್ನು ಉಪಯೋಗಿಸಿ, ಮೊದಲನೇ ಭೇಟಿಯಲ್ಲೇ ಬೈಬಲ್ ಅಧ್ಯಯನವನ್ನು ಆರಂಭಿಸಬಹುದು.
ಈ ತಿಂಗಳು ಇದನ್ನು ಮಾಡಲು ಪ್ರಯತ್ನಿಸಿ:
‘ಬೈಬಲ್ ಅಧ್ಯಯನ ನಡೆಸಬೇಕೆಂಬ ಮನಸ್ಸನ್ನು ಕೊಡಪ್ಪಾ’ ಅಂತ ಯೆಹೋವನಿಗೆ ಪ್ರಾರ್ಥಿಸಿ. ಜೊತೆಗೆ, ಒಂದು ಬೈಬಲ್ ಅಧ್ಯಯನಕ್ಕಾಗಿ ಮತ್ತು ಸತ್ಯವನ್ನು ಇತರರಿಗೆ ಚೆನ್ನಾಗಿ ಕಲಿಸಲಿಕ್ಕಾಗಿ ಸಹಾಯ ಮಾಡುವಂತೆ ಬೇಡಿಕೊಳ್ಳಿ.—ಫಿಲಿ. 2:13.
ಕುಟುಂಬ ಆರಾಧನೆ ಅಥವಾ ವೈಯಕ್ತಿಕ ಅಧ್ಯಯನ ಮಾಡುವಾಗ ಈ ಕಿರುಹೊತ್ತಗೆಯನ್ನು ಹೇಗೆ ಕೊಡಬಹುದೆಂದು ಚೆನ್ನಾಗಿ ತಯಾರಿಸಿ. ಹೀಗೆ ಮಾಡಿದರೆ, ಸೇವೆಗೆ ಹೋದಾಗ ಧೈರ್ಯದಿಂದ ಮಾತಾಡಲು ಮತ್ತು ಬೈಬಲ್ ಅಧ್ಯಯನ ಆರಂಭಿಸಲು ಸಾಧ್ಯವಾಗುತ್ತದೆ.
ಎಚ್ಚರಿಕೆ: ನೀವು ಮನೆ ಬಾಗಿಲಲ್ಲಿ ನಿಂತು ಮಾತಾಡುವಾಗ ಯಾರಾದರೂ ನಿಮ್ಮನ್ನು ಗಮನಿಸುತ್ತಾ ಇರುವುದಾದರೆ ಹೆಚ್ಚು ಸಮಯ ಅಲ್ಲಿ ನಿಲ್ಲಬೇಡಿ.