ಜೂನ್ 15ರ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 15ರ ವಾರ
ಗೀತೆ 43 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 53, 54 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಸಮುವೇಲ 22-24 (8 ನಿ.)
ನಂ. 1: 2 ಸಮುವೇಲ 22:21-32 (3 ನಿಮಿಷದೊಳಗೆ)
ನಂ. 2: ಕಾಯಿನ—ವಿಷಯ: ಬುದ್ಧಿಮಾತಿಗೆ ತೋರಿಸುವ ಪ್ರತಿಕ್ರಿಯೆಯಿಂದ ನಾವು ಯಾವ ರೀತಿಯ ವ್ಯಕ್ತಿ ಅಂತ ಗೊತ್ತಾಗುತ್ತದೆ—ಆದಿ 4:1-15; ಗಲಾ 5:19, 20; ಯಾಕೋ 1:14, 15. (5 ನಿ.)
ನಂ. 3: ದೇವರ ಮಾತು ಕೇಳುವುದರಿಂದ ಮತ್ತು ಪ್ರೀತಿ ತೋರಿಸುವುದರಿಂದ ಸಂತೋಷ ಸಿಗುತ್ತದೆ—ಕಿರುಪರಿಚಯ ಪುಟ 22 ಪ್ಯಾರ 4-6 (5 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: “ಪೂರ್ವಕಾಲವನ್ನು ನೆನಪಿಗೆ ತಂದುಕೊಳ್ಳಿರಿ.”—ಧರ್ಮೋ. 32:7.
12 ನಿ: ಬೈಬಲಿನಲ್ಲಿ ನಿಮಗೆ ಯಾರೆಂದರೆ ಇಷ್ಟ? ಸಂದರ್ಶನ ಮತ್ತು ಭಾಷಣ. ಈ ಭಾಗದ ಆರಂಭದಲ್ಲಿ ಇಬ್ಬರು ಅಥವಾ ಮೂವರು ಮಕ್ಕಳ ಸಂದರ್ಶನ ಮಾಡಿ. ‘ಬೈಬಲಿನಲ್ಲಿರುವವರಲ್ಲಿ ನಿನಗೆ ಯಾರೆಂದರೆ ಇಷ್ಟ? ಆ ಬೈಬಲ್ ವ್ಯಕ್ತಿ ಏನು ಮಾಡಿದರು? ನೀನೂ ಅವರಂತಿರಲು ಏನು ಮಾಡಬೇಕಂತಿದ್ದೀಯಾ?’ ಎಂಬ ಪ್ರಶ್ನೆಗಳನ್ನು ಕೇಳಿ. ನಂತರ ನಿಮ್ಮ ಭಾಷಣವನ್ನು ಮುಂದುವರಿಸಿ. ಮಹಾ ಬೋಧಕನಿಂದ ಕಲಿಯಿರಿ, ಬೈಬಲ್ ಕಥೆಗಳ ನನ್ನ ಪುಸ್ತಕ ಮತ್ತು ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕಗಳಿಂದ ಮಕ್ಕಳು ಹೇಗೆ ಪ್ರಯೋಜನ ಪಡೆಯಬಹುದೆಂದು ತಿಳಿಸಿ. ‘ಪೂರ್ವಕಾಲದಲ್ಲಿ’ ನಂಬಿಗಸ್ತರು ಹೇಗಿದ್ದರು ಅಂತ ಮಕ್ಕಳಿಗೆ ಕಲಿಸಲು ಹೆತ್ತವರು ಈ ಪುಸ್ತಕಗಳನ್ನು ಉಪಯೋಗಿಸಬಹುದು.—ಧರ್ಮೋ. 32:7.
18 ನಿ: “ಅನುಭವಸ್ಥ ಪ್ರಚಾರಕರಿಂದ ಕಲಿಯಿರಿ.” ಚರ್ಚೆ. ಎರಡನೇ ಪ್ಯಾರ ಚರ್ಚಿಸುವಾಗ, ಅನುಭವಸ್ಥ ಪ್ರಚಾರಕನೊಂದಿಗೆ ಸೇವೆ ಮಾಡಿದ್ದರಿಂದ ಯಾವ ಪ್ರಯೋಜನ ಪಡೆದರೆಂದು ಸಭಿಕರನ್ನು ಕೇಳಿ.
ಗೀತೆ 4 ಮತ್ತು ಪ್ರಾರ್ಥನೆ