ಜೂನ್ 8ರ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 8ರ ವಾರ
ಗೀತೆ 49 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 52 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಸಮುವೇಲ 19-21 (8 ನಿ.)
ನಂ. 1: 2 ಸಮುವೇಲ 19:24-37 (3 ನಿಮಿಷದೊಳಗೆ)
ನಂ. 2: ಸಂತೋಷ ಸಿಗಬೇಕಾದರೆ ಏನು ಮಾಡಬೇಕು?—ಕಿರುಪರಿಚಯ ಪುಟ 22 ಪ್ಯಾರ 1-3 (5 ನಿ.)
ನಂ. 3: ಕಾಯಫ—ವಿಷಯ: ರಕ್ತಾಪರಾಧವುಳ್ಳ ಸತ್ಯದ ವಿರೋಧಿಗಳು ಜಯಗಳಿಸಲ್ಲ—ಮತ್ತಾ 26:65; 27:20, 21; ಯೋಹಾ 11:49-53; 18:12-14; 19:6, 11, 15, 21 (5 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: “ಪೂರ್ವಕಾಲವನ್ನು ನೆನಪಿಗೆ ತಂದುಕೊಳ್ಳಿರಿ.”—ಧರ್ಮೋ. 32:7.
10 ನಿ: “ಪೂರ್ವಕಾಲವನ್ನು ನೆನಪಿಗೆ ತಂದುಕೊಳ್ಳಿರಿ.” ಈ ತಿಂಗಳ ಮುಖ್ಯ ವಿಷಯದ ಮೇಲಾಧಾರಿತವಾದ ಭಾಷಣ. ಧರ್ಮೋಪದೇಶಕಾಂಡ 4:9, 32:7 ಮತ್ತು ಕೀರ್ತನೆ 71:15-18 ನ್ನು ಓದಿ, ವಿವರಿಸಿ. ಹಿಂದೆ ಇದ್ದ ನಮ್ಮ ಸಹೋದರರ ಬಗ್ಗೆ ಮತ್ತು ನಮ್ಮ ಸಂಘಟನೆಯ ಇತಿಹಾಸದ ಬಗ್ಗೆ ತಿಳಿದುಕೊಳ್ಳುವುದರಿಂದ ಸೌವಾರ್ತಿಕರಾದ ನಮಗೆ ಯಾವ ಪ್ರಯೋಜನ ಇದೆ ಎಂದು ವಿವರಿಸಿ. ಕಾವಲಿನಬುರುಜು ಪತ್ರಿಕೆಯಲ್ಲಿ ಬರುವ “ನಮ್ಮ ಸಂಗ್ರಹಾಲಯ” ಎಂಬ ಸರಣಿ ಲೇಖನಗಳನ್ನು ಕುಟುಂಬ ಆರಾಧನೆಯಲ್ಲಿ ಆಗಿಂದಾಗ್ಗೆ ಚರ್ಚಿಸುವಂತೆ ಪ್ರಚಾರಕರಿಗೆ ಹೇಳಿ. ಈ ತಿಂಗಳ ಸೇವಾ ಕೂಟದ ಕಾರ್ಯಕ್ರಮಗಳ ಬಗ್ಗೆ ಚುಟುಕಾಗಿ ತಿಳಿಸುತ್ತಾ ಅವುಗಳು ಮುಖ್ಯ ವಿಷಯಕ್ಕೆ ಹೇಗೆ ಸಂಬಂಧಿಸಿವೆ ಎಂದು ಹೇಳಿ.
20 ನಿ: “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಿಹಿಸುದ್ದಿ! ಕಿರುಹೊತ್ತಗೆ ಉಪಯೋಗಿಸಿ, ಬೈಬಲ್ ಅಧ್ಯಯನ ಆರಂಭಿಸಿ.” ಸೇವಾ ಮೇಲ್ವಿಚಾರಕನಿಂದ ಚರ್ಚೆ. ಹೆಚ್ಚಿನ ಬೈಬಲ್ ಅಧ್ಯಯನಗಳನ್ನು ನಡೆಸಲು ಸಾಧ್ಯ ಎಂದು ತೋರಿಸಲು ಸಭೆಯ ಸೇವಾ ವರದಿಯಲ್ಲಿರುವ ಆಸಕ್ತಿಕರ ಅಂಕಿ ಅಂಶಗಳನ್ನು ತಿಳಿಸಿ. ಚೌಕದಲ್ಲಿ ಕೊಡಲಾಗಿರುವ ನಿರೂಪಣೆಯನ್ನು ಉಪಯೋಗಿಸುತ್ತಾ ಬೈಬಲ್ ಅಧ್ಯಯನ ಆರಂಭಿಸುವುದು ಹೇಗೆಂದು ಒಬ್ಬ ಅನುಭವಿ ಪ್ರಚಾರಕನು/ಳು ಮಾಡಿ ತೋರಿಸಲಿ. ಬೈಬಲ್ ಅಧ್ಯಯನ ನಡೆಸುವಂತೆ ಎಲ್ಲರನ್ನು ಉತ್ತೇಜಿಸಿ.
ಗೀತೆ 29 ಮತ್ತು ಪ್ರಾರ್ಥನೆ