ಪಯನೀಯರ್ ಸೇವೆಯಲ್ಲಿ ಬಿಡದೆ ಮುಂದುವರಿಯುವುದು
ಸುಮಾರು 45,00,000 ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ ಸುವಾರ್ತೆಯನ್ನು ಸಾರುತ್ತಿದ್ದಾರೆ. ಅವರಲ್ಲಿ 6,00,000 ಕ್ಕಿಂತಲೂ ಹೆಚ್ಚಾಗಿ ಪಯನೀಯರರು, ಅಥವಾ ಪೂರ್ಣ ಸಮಯದ ರಾಜ್ಯ ಘೋಷಕರಿದ್ದಾರೆ. ಈ ಪಯನೀಯರರ ಈ ಬಹುದೊಡ್ಡ ಸಮೂಹದಲ್ಲಿರುವವರಲ್ಲಿ 13 ವರ್ಷ ಪ್ರಾಯದವರಿಂದ ಅವರ 90ರ ಪ್ರಾಯದಲ್ಲಿರುವ ನಿವೃತ್ತರನ್ನೂ ಒಳಗೊಂಡಿದೆ. ಅವರು ಎಲ್ಲಾ ಹಿನ್ನೆಲೆಗಳಿಂದ ಮತ್ತು ಜೀವನ ಪಥಗಳಿಂದ ಬಂದವರಾಗಿದ್ದಾರೆ.
ನಿಸ್ಸಂದೇಹವಾಗಿ, ಈ ಎಲ್ಲಾ ಪೂರ್ಣಸಮಯದ ಶುಶ್ರೂಷಕರು ಪಯನೀಯರ್ ಶುಶ್ರೂಷೆಯಲ್ಲಿ ಅಭಿವೃದ್ಧಿಹೊಂದಲು ಬಯಸುತ್ತಾರೆ. ಅನೇಕರು ಅದನ್ನು ತಮ್ಮ ಜೀವನೋದ್ಯೋಗವಾಗಿ ಮಾಡಿಕೊಳ್ಳಲು ಅಪೇಕ್ಷಿಸುತ್ತಾರೆ. ಕೆಲವರು ನಿಶ್ಚಿತವಾದ ಕಾರಣಗಳಿಂದಾಗಿ ಹಾಗೆ ಮಾಡಲು ಅಸಮರ್ಥರಾಗಿದ್ದಾರೆ. ಆದರೂ, ಇತರರು ಆರ್ಥಿಕ ತೊಂದರೆಗಳು, ನ್ಯೂನ ಆರೋಗ್ಯ, ನಿರುತ್ಸಾಹ, ಮತ್ತು ಇತರ ಸಮಸ್ಯೆಗಳಿದ್ದಾಗ್ಯೂ ಪಯನೀಯರ್ ಸೇವೆಯನ್ನು ಮುಂದುವರಿಸಲು ಶಕ್ತರಾಗಿದ್ದಾರೆ. ಆದುದರಿಂದ ಪೂರ್ಣ ಸಮಯದ ಶುಶ್ರೂಷಕರು ಅಂಥ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಪಯನೀಯರ್ ಸೇವೆಯಲ್ಲಿ ಬಿಡದೆ ಮುಂದುವರಿಯಲು ಹೇಗೆ ಸಾಧ್ಯವಿದೆ?
ಆರ್ಥಿಕ ಆವಶ್ಯಕತೆಗಳನ್ನು ತಲಪುವುದು
ಸರ್ವಸಾಮಾನ್ಯವಾಗಿ, ಅಪೊಸ್ತಲ ಪೌಲನು ಮಾಡಿದಂತೆಯೇ, ಪಯನೀಯರರು ಅವರ ವೆಚ್ಚಗಳನ್ನು ಆವರಿಸಲಿಕ್ಕಾಗಿ ಐಹಿಕವಾಗಿ ಕೆಲಸಮಾಡುತ್ತಾರೆ. (1 ಥೆಸಲೊನೀಕ 2:9) ಲೋಕದ ಅತ್ಯಧಿಕ ಭಾಗಗಳಲ್ಲಿ, ಆಹಾರ, ಉಡುಪು, ಆಶ್ರಯ, ಮತ್ತು ವಾಹನ ಸೌಕರ್ಯಗಳ ಗಗನಕ್ಕೇರಿರುವ ಬೆಲೆಗಳನ್ನು ಅವರು ಎದುರಿಸುತ್ತಾರೆ. ಹಲವು ಸಂದರ್ಭಗಳಲ್ಲಿ ಅವರಿಗೆ ಅಗತ್ಯವಿರುವ ಅಂಶಕಾಲಿಕ ಐಹಿಕ ಕೆಲಸವನ್ನು ದೊರಕಿಸಿಕೊಳ್ಳುವುದು ಕಷ್ಟಕರವಾಗಿದೆ. ದೊರಕುವುದಾದರೂ, ಅಂತಹ ಉದ್ಯೋಗಗಳು ಆರೋಗ್ಯವಿಮೆಯ ವಿನಾಯಿತಿಗಳಿಲ್ಲದೆ, ವಾಡಿಕೆಯಾಗಿ ಕೇವಲ ಕನಿಷ್ಠವಾದ ವೇತನವನ್ನು ನೀಡುತ್ತವೆ.
ನಾವು ‘ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡುತ್ತಾ ಇರುವುದಾದರೆ,’ ನಮ್ಮ ಭೌತಿಕ ಆವಶ್ಯಕತೆಗಳನ್ನು ಯೆಹೋವನು ಒದಗಿಸುವನು ಎಂಬ ನಂಬಿಕೆಯು ನಮಗಿರಸಾಧ್ಯವಿದೆ. ಆದುದರಿಂದಲೇ, ಆರ್ಥಿಕ ಒತ್ತಡದ ಕೆಳಗಿರುವಾಗ, ಪಯನೀಯರರು ‘ನಾಳಿನ ವಿಷಯವಾಗಿ ಚಿಂತೆಮಾಡುವ’ ಅಗತ್ಯತೆ ಇರುವುದಿಲ್ಲ. (ಮತ್ತಾಯ 6:25-34) ಅಂತಹ ಸಮಸ್ಯೆಗಳನ್ನು ಬಗೆಹರಿಸಲು ಅವರು ಶ್ರದ್ಧಾ ಪೂರ್ವಕವಾದ ಪ್ರಯತ್ನಗಳನ್ನು ಮಾಡುವಾಗ, ಯೆಹೋವನಲ್ಲಿರುವ ಬಲವಾದ ನಂಬಿಕೆಯು ವಿಪರೀತ ಚಿಂತೆಗಳಿಂದ ಅವರನ್ನು ಕಾಪಾಡುವುದು.
ಒಬ್ಬ ವ್ಯಕ್ತಿಯು ಆರ್ಥಿಕ ತೊಂದರೆಗಳನ್ನು ಎದುರಿಸುವಾಗ, ಪ್ರಾಯಶಃ ವೆಚ್ಚಗಳನ್ನು ಕಡಿಮೆಗೊಳಿಸಬಹುದು. ಕೇವಲ ಭೌತಿಕ ರೀತಿಯ ಅಪೇಕ್ಷೆಗಳನ್ನಲದ್ಲಿದ್ದರೂ, ಆಯವ್ಯಯದಲ್ಲಿ ಕೆಲವೊಂದು ಬದಲಾವಣೆಗಳೊಂದಿಗೆ, ಬಹುಶಃ ಅದು ಆವಶ್ಯಕತೆಗಳನ್ನು ತಲುಪಲು ಸಾಧ್ಯಮಾಡುತ್ತದೆ. ವೆಚ್ಚಗಳನ್ನು ಕಡಿಮೆಗೊಳಿಸಲು, ಕೆಲವು ಪಯನೀಯರರು ಒಂದು ವಾಸದ ಮಹಡಿಯನ್ನು ಬೇರೆ ಕ್ರೈಸ್ತರೊಂದಿಗೆ ಹಂಚಿಕೊಳ್ಳುತ್ತಾರೆ. ಪಯನೀಯರ್ ಸೇವೆಮಾಡುವಂತೆ ಅವರ ಮಕ್ಕಳಿಗೆ ನೆರವಾಗುವುದರಲ್ಲಿ, ಹೆತ್ತವರು ಕೆಲವೊಮ್ಮೆ ಕನಿಷ್ಠ ಬೆಲೆಯ ಅಥವಾ ಉಚಿತವಾದ ವಸತಿಗಳನ್ನು ಒದಗಿಸುತ್ತಾರೆ. ಇತರರು ಆಹಾರ ಮತ್ತು ವಾಹನ ಸೌಕರ್ಯದ ಖರ್ಚುಗಳನ್ನು ನೀಡುವ ಮೂಲಕ ಪಯನೀಯರರಿಗೆ ಸಹಾಯ ಮಾಡುತ್ತಾರೆ. ಆದರೆ ತಮ್ಮನ್ನು ಸ್ವತಃ ಬೆಂಬಲಿಸಿಕೊಳ್ಳಲು ಶಾಸ್ತ್ರೀಯ ಸಮ್ಮತವಾದ ಕರ್ತವ್ಯವು ಅವರಿಗೆ ಇರುವುದರಿಂದ ಪಯನೀಯರರು ಇತರರಿಗೆ ಒಂದು ಹೊರೆಯಾಗಿರಲು ಅಪೇಕ್ಷಿಸರು.—2 ಥೆಸಲೊನೀಕ 3:10-12.
ವಾಹನ ಸೌಕರ್ಯಕ್ಕೆ ತಗಲುವ ಖರ್ಚುಗಳನ್ನು ಇತರ ಪಯನೀಯರರೊಂದಿಗೆ ವೆಚ್ಚಗಳನ್ನು ಹಂಚಿಕೊಳ್ಳುವ ಮೂಲಕ ಕಡಿಮೆಗೊಳಿಸಸಾಧ್ಯವಿದೆ. ಇಬ್ಬರು ಪಯನೀಯರರಿಗೆ ಕಾರುಗಳಿರುವುದಾದರೆ, ಎರಡು ವಾಹನಗಳನ್ನು ಉಪಯೋಗಿಸುವ ವೆಚ್ಚಗಳನ್ನು ವರ್ಜಿಸಲಿಕ್ಕಾಗಿ, ಒಂದೇ ಕಾರನ್ನು ಉಪಯೋಗಿಸಿ ಅವರು ಸಾರುವ ಕೆಲಸದಲ್ಲಿ ಒಟ್ಟಿಗೆ ಒಂದೇ ಕ್ಷೇತ್ರದಲ್ಲಿ, ಕೆಲಸಮಾಡುವಂತೆ ನಿಶ್ಚಯಿಸಬಹುದಾಗಿದೆ. ಮೋಟಾರು ವಾಹನಗಳನ್ನು ಹೊಂದಿರದ ಪಯನೀಯರರು ಹಾಗೆ ಇರುವವರೊಂದಿಗೆ ಜೊತೆಗೂಡಲು ಮತ್ತು ವಾಹನ ಸೌಕರ್ಯಕ್ಕೆ ತಗಲುವ ವೆಚ್ಚಗಳನ್ನು ಭರ್ತಿಮಾಡುವುದರಲ್ಲಿ ಪಾಲುಗಾರರಾಗಲು ಪ್ರಾಯಶಃ ಶಕ್ತರಾಗಬಹುದು. ಮುಖ್ಯವಾಗಿ ಕಾಲ್ನಡಿಗೆಯಿಂದ ಸಮೀಪದ ಟೆರಿಟೊರಿಗಳನ್ನು ಆವರಿಸುವ ಮೂಲಕ ಪ್ರಯಾಣದ ಖರ್ಚುಗಳನ್ನು ಇನ್ನೂ ಕಡಿಮೆಗೊಳಿಸಸಾಧ್ಯವಿದೆ. ಅನೇಕ ದೇಶಗಳಲ್ಲಿ ಪಯನೀಯರರು ಅಗವ್ಗಾಗಿರುವ ಸಾರ್ವಜನಿಕ ವಾಹನಸಂಚಾರದ ಬಳಕೆಯನ್ನು ಮಾಡುತ್ತಾರೆ.
ಆರ್ಥಿಕ ಸಮಸ್ಯೆಗಳನ್ನು ಜಯಿಸಿದವರಲ್ಲಿ ಮತ್ತು ಪೂರ್ಣಸಮಯದ ಸೇವೆಯಲ್ಲಿ ಮುಂದುವರಿದವರಲ್ಲಿ ನ್ಯೂಟನ್ ಕಾಂಟ್ವೆಲ್ ಮತ್ತು ಅವರ ಹೆಂಡತಿಯೂ ಸೇರಿದ್ದಾರೆ. ಅವರು ತಮ್ಮ ಜಮೀನನ್ನು ಮಾರಿದರು ಮತ್ತು 1932 ರಲ್ಲಿ ಮಹಾ ಆರ್ಥಿಕ ಕುಸಿತದ ಸಮಯದಲ್ಲಿ, ಅವರ ಏಳು ಮಕ್ಕಳಲ್ಲಿ ಆರು ಮಕ್ಕಳೊಂದಿಗೆ ಪಯನೀಯರ್ ಸೇವೆಯನ್ನು ಆರಂಭಿಸಿದರು. ಸಹೋದರ ಕಾಂಟ್ವೆಲ್ ಬರೆದದ್ದು: “ನಮ್ಮ ಜಮೀನನ್ನು ಮಾರಿದರ್ದಿಂದ ನಾವು ಪಡಕೊಂಡದ್ದೆಲ್ಲವನ್ನೂ ಬಹಳ ಬೇಗನೆ ಖರ್ಚುಮಾಡಿದೆವು—ಅದರಲ್ಲಿ ಹೆಚ್ಚಿನದನ್ನು ನಾವು ಡಾಕ್ಟರರ ಬಿಲ್ಲುಗಳಿಗಾಗಿ ವ್ಯಯಮಾಡಿದೆವು” ಎಂದು ಸಹೋದರ ಕಾಂಟ್ವೆಲ್ ಬರೆಯುತ್ತಾರೆ. “ನಮ್ಮ ಎರಡನೆಯ ನೇಮಕಕ್ಕೆ ನಾವು ಚಲಿಸಿದಾಗ, ಎರಡು ವಾರಗಳ ಬಾಡಿಗೆಯನ್ನು ಮುಂಗಡವಾಗಿ ಕೊಡಲು ಸಾಕಾಗುವಷ್ಟು ಹಣದೊಂದಿಗೆ ಉಳಿದ ಐದು ಡಾಲರ್ಗಳು ನಮ್ಮಲ್ಲಿದ್ದದ್ದನ್ನು ನಾವು ಜ್ಞಾಪಿಸಿಕೊಳ್ಳುತ್ತೇವೆ. ಆದರೂ, ನಮ್ಮ ಸೇವೆಯಲ್ಲಿ ಶ್ರದ್ಧೆಯಿಂದ ಮುಂದುವರಿಯುವ ತನಕ ಯೆಹೋವನು ಒದಗಿಸುವನು ಎಂದು ನಾವು ತಿಳಿದಿದ್ದೆವು. . . . ಅನೇಕ ವಿಧಗಳಲ್ಲಿ ಖರ್ಚು ಕಡಿಮೆ ಮಾಡಲು ನಾವು ಕಲಿತೆವು. ಉದಾಹರಣೆಗೆ, ಹೊಸ ಟೆರಿಟೊರಿಯೊಂದಕ್ಕೆ ನಾವು ಪ್ರಯಾಣಿಸಿದಾಗ, ನಾನು ಗ್ಯಾಸ್ ಸೇಷ್ಟನ್ನ ಮಾಲಿಕರಲ್ಲಿ ಕೆಲವರೊಂದಿಗೆ ಮಾತಾಡುತ್ತಿದ್ದೆ ಮತ್ತು ನಮ್ಮ ಕ್ರೈಸ್ತ ಕೆಲಸಕ್ಕೆ ಸಂಬಂಧಿಸಿ ಪ್ರತಿ ದಿನ ನಾವು ಮೂರು ಕಾರುಗಳನ್ನು ಉಪಯೋಗಿಸುತ್ತೇವೆಂದು ವಿವರಿಸುತ್ತಿದ್ದೆ. ಇದು ಸಾಮಾನ್ಯವಾಗಿ ನಾವು ಗ್ಯಾಸೊಲೀನನ್ನು ರಿಯಾಯಿತಿಯಲ್ಲಿ ದೊರಕಿಸಿಕೊಳ್ಳಲು ಸಾಧ್ಯಮಾಡುತ್ತಿತ್ತು. ವಾಹನದ ರಿಪೇರಿಯ ಖರ್ಚುಗಳಲ್ಲಿ ಹೆಚ್ಚನ್ನು ಉಳಿಸಲಿಕ್ಕಾಗಿ, ನಮ್ಮ ವಾಹನಗಳ ರಿಪೇರಿಯನ್ನು ನೋಡಿಕೊಳ್ಳಲು ನಮ್ಮ ಗಂಡುಮಕ್ಕಳು ಬೇಗನೆ ಕಲಿತರು.” ಹೀಗೆ ಕಾಂಟ್ವೆಲ್ರು ಆರ್ಥಿಕ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿದರು ಮತ್ತು ಪೂರ್ಣಸಮಯದ ಸೇವೆಯಲ್ಲಿ ಮುಂದುವರಿದರು. ಅವರು 103ರ ಪ್ರಾಯದಲ್ಲಿ ಮರಣಹೊಂದಿದಾಗಲೂ ಸಹೋದರ ಕಾಂಟ್ವೆಲ್ರು ಪಯನೀಯರರ ಪಟ್ಟಿಯಲಿದ್ದರು.
ಅಂಶಕಾಲಿಕ ಕೆಲಸವನ್ನು ದೊರಕಿಸಿಕೊಳ್ಳುವುದು
ಅಂಶಕಾಲಿಕ ಉದ್ಯೋಗಗಳ ಮುಖಾಂತರ ಅನೇಕ ಪಯನೀಯರರು ಆರ್ಥಿಕವಾಗಿ ತಮ್ಮನ್ನು ಬೆಂಬಲಿಸಿಕೊಳ್ಳುತ್ತಾರೆ. ಕೊರಿಂಥದಲ್ಲಿರುವಾಗ ಶುಶ್ರೂಷೆಯಲ್ಲಿ ತನ್ನನ್ನು ಪೋಷಿಸಿಕೊಳ್ಳಲು, ಪೌಲನು ಆತನ ಜೊತೆ ವಿಶ್ವಾಸಿಗಳಾದ ಅಕ್ವಿಲ ಮತ್ತು ಪ್ರಿಸ್ಕಿಲ್ಲರೊಂದಿಗೆ ಗುಡಾರಮಾಡುವವನಾಗಿ ಕೆಲಸ ಮಾಡಿದ್ದನು. (ಅ. ಕೃತ್ಯಗಳು 18:1-11) ಇಂದು, ಆತ್ಮಿಕ ಸಹೋದರರು ಹಲವು ಸಂದರ್ಭಗಳಲ್ಲಿ ಸ್ಥಳಿಕವಾಗಿ ಅಂಶಕಾಲಿಕ ಕೆಲಸವನ್ನು ಪಯನೀಯರರಿಗೆ ನೀಡಲು ಸಂತೋಷಪಡುತ್ತಾರೆ. ಇತರ ಪಯನೀಯರರು ಅಂತಹ ಕೆಲಸವನ್ನು ತಾತ್ಕಾಲಿಕ ಉದ್ಯೋಗಗಳನ್ನು ನೀಡುವ ಉದ್ಯೋಗ ಸಂಸ್ಥೆಗಳಿಂದ ದೊರಕಿಸಿಕೊಳ್ಳುತ್ತಾರೆ. ದೇವರಲ್ಲಿ ನಂಬಿಕೆ ಮತ್ತು ಹಾಗೆಯೆ ಉದ್ಯೋಗದ ಕುರಿತು ನಿರ್ಣಯಗಳನ್ನು ಮಾಡುವುದರಲ್ಲಿ ಆತನ ಮಾರ್ಗದರ್ಶನಕ್ಕಾಗಿ ಮನಃಪೂರ್ವಕವಾದ ಪ್ರಾರ್ಥನೆಯು ಆವಶ್ಯವಾಗಿದೆ.—ಜ್ಞಾನೋಕ್ತಿ 15:29.
ಒಬ್ಬ ಪಯನೀಯರನು ಅಂದದ್ದು: “ಪ್ರಾರ್ಥನಾಪೂರ್ವಕವಾದ ಪರಿಶೀಲನೆಯಿಂದ ಅಧಿಕ ಬಲವನ್ನು ಸೆಳೆದುಕೊಂಡ ಅನಂತರ, ನನ್ನ ಮೇಲ್ವಿಚಾರಕರಿಗೆ ನಾನು ತಿಳಿಯಪಡಿಸಿದ್ದೇನಂದರೆ ನನ್ನ ಶುಶ್ರೂಷಾ ಕೆಲಸವು ಒಂದು ಗಂಭೀರವಾದ ವೈಯಕ್ತಿಕ ಜವಾಬ್ದಾರಿಯಾಗಿದೆ ಮತ್ತು ಪೂರ್ಣಸಮಯದ ಸ್ಥಾನವನ್ನು ಅಂಗೀಕರಿಸಲು ನಾನು ಅಸಮರ್ಥನಾಗಿದ್ದೇನೆ. ಮುಂದಿನ ಬುಧವಾರ, ನಾನು ಅಂಶಕಾಲಿಕ ಆಧಾರದ ಮೇಲೆ ಉದ್ಯೋಗವನ್ನು ಪುನಃ ಪರಿಗಣಿಸುವೆನೊ ಎಂದು ನನಗೆ ಕೇಳಲ್ಪಟ್ಟಿತು. ನಾನು ಸಂತೋಷದಿಂದ ಒಪ್ಪಿಕೊಂಡೆನು.” ಪ್ರಾರ್ಥನೆಯ ಶಕ್ತಿಯನ್ನು ಕೀಳಂದಾಜು ಮಾಡಬೇಡಿರಿ, ಮತ್ತು ನಿಮ್ಮ ಪ್ರಾರ್ಥನೆಗಳನ್ನು ಕ್ರಿಯೆಗಳಿಂದ ಅನುಸರಿಸಿರಿ.
ಅಂಶಕಾಲಿಕ ಕೆಲಸವನ್ನು ಹುಡುಕುವುದರಲ್ಲಿ ಅವರ ಉದ್ದೇಶವು ತಮ್ಮನ್ನು ಶುಶ್ರೂಷೆಯಲ್ಲಿ ಪೋಷಿಸಿಕೊಳ್ಳುವುದೇ ಆಗಿದೆಯೆಂದು ಭಾವಿ ಯಜಮಾನರಿಗೆ ಹೇಳುವುದನ್ನು ಪಯನೀಯರರು ಸೂಕ್ತವಾಗಿ ಕಂಡುಕೊಳ್ಳಬಹುದು. ಅವರು ಲಭ್ಯವಿರುವ ದಿವಸಗಳನ್ನು ಮತ್ತು ಒಂದು ವಾರದಲ್ಲಿ ಉದ್ಯೋಗವೊಂದಕ್ಕೆ ಅವರು ವಿನಿಯೋಗಿಸಲು ಸಾಧ್ಯವಿರುವ ತಾಸುಗಳ ಕುರಿತು ಅವರು ಹೇಳಬಹುದಾಗಿದೆ. ಇಬ್ಬರು ಸಹೋದರಿಯರು ಕಾನೂನು ಸಮ್ಮತವಾದ ಸಂಸ್ಥೆಯೊಂದರಲ್ಲಿ, ಅವರಲ್ಲಿ ಪ್ರತಿಯೊಬ್ಬಳು ವಾರವೊಂದಕ್ಕೆ ಎರಡೂವರೆ ದಿನಗಳು ಕೆಲಸಮಾಡಲು ಸಮ್ಮತಿಸುತ್ತಾ, ಒಂದು ಪೂರ್ಣಸಮಯದ ಉದ್ಯೋಗವನ್ನು ಹಂಚಿಕೊಳ್ಳಲು ಶಕ್ತರಾದರು. ಅವರು ವಾಚ್ ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ನ್ನು ಹಾಜರಾಗುವ ಮತ್ತು ಮಿಷನೆರಿಗಳಾಗಿ ನೇಮಕವನ್ನು ಸ್ವೀಕರಿಸುವ ತನಕ ಪಯನೀಯರರೋಪಾದಿ ಇದು ಅವರನ್ನು ಪೋಷಿಸಿತು.
ವಿವಿಧ ರೀತಿಯ ಶಾಸ್ತ್ರೀಯ ಸಮ್ಮತವಾದ ಕೆಲಸಗಳನ್ನು ಜೊತೆ ವಿಶ್ವಾಸಿಗಳೊಂದಿಗೆ ಮತ್ತು ಇತರರೊಂದಿಗೆ ಮಾತಾಡುವ ಮೂಲಕ ಅಥವಾ ವಾರ್ತಾಪತ್ರಿಕೆಯ ಜಾಹೀರಾತುಗಳನ್ನು ಸಂಪರ್ಕಿಸುವ ಮೂಲಕ ಕಂಡುಕೊಳ್ಳಸಾಧ್ಯವಿದೆ. ನಮ್ರತೆಯು ಸಹಾಯಕಾರಿಯಾಗಿದೆ, ಏಕಂದರೆ, ಇದು ಪಯನೀಯರರನ್ನು ಅವರು ಮಾಡುವ ಕೆಲಸದ ರೀತಿಯ ಕುರಿತು ಹೆಚ್ಚು ಆಯ್ಕೆಮಾಡುವವರಾಗಿರದಂತೆ ಕಾಯುವುದು. (ಹೋಲಿಸಿರಿ ಯಾಕೋಬ 4:10.) ಪಯನೀಯರ್ ಸೇವೆಯನ್ನು ಮುಂದುವರಿಸಲು ಅವರು ದೈನ್ಯ ಭಾವನೆಯ ಅಥವಾ ಕೀಳು ಕೆಲಸವೆಂದು ಕೆಲವು ಜನರು ಪರಿಗಣಿಸುವ ಐಹಿಕ ಕೆಲಸವನ್ನು ಮಾಡುವ ಅಗತ್ಯವಿರಬಹುದು. ಅಂತಹ ಕೆಲಸವನ್ನು ಒಪ್ಪಿಕೊಂಡಿರುವುದಾದರೆ, ಮತ್ತು ಬೇರೆ ಯಾವುದೋ ಒಂದನ್ನು ಅಪೇಕ್ಷಿಸಲ್ಪಟ್ಟಿದ್ದರೆ, ಪ್ರಾಯಶಃ ಕೊನೆಯಲ್ಲಿ ಒಂದು ಬದಲಾವಣೆಯು ಉದ್ಯೋಗದಲ್ಲಿ ಸಾಧ್ಯವಾಗಬಹುದು.
ನ್ಯೂನ ಆರೋಗ್ಯ ಮತ್ತು ನಿರುತ್ಸಾಹ
ಗಂಭೀರವಾದ ಆರೋಗ್ಯ ಸಮಸ್ಯೆಗಳ ಕಾರಣದಿಂದ ಕೆಲವರು ತಮ್ಮ ಪಯನೀಯರ್ ಸೇವೆಯನ್ನು ನಿಲ್ಲಿಸಬೇಕಾಗುತ್ತದೆ. ಈ ವಿಷಯದಲ್ಲಿ ಪಯನೀಯರರು ದುಡುಕುವವರಾಗಿರದಿದ್ದರೆ, ಹೇಗಾದರೂ, ಒಂದು ಅಸ್ವಸ್ಥತೆಯು ಗುಣಪಡಿಸಸಾಧ್ಯವಿದೆ ಅಥವಾ ಅವರು ಪಯನೀಯರ್ ಸೇವೆಯನ್ನು ಮುಂದುವರಿಸುವಂತೆ ಆರೋಗ್ಯವು ಸಾಕಷ್ಟು ಉತ್ತಮಗೊಳ್ಳಸಾಧ್ಯವಿದೆ ಎಂದು ಅವರು ಕಂಡುಕೊಳ್ಳಬಹುದು. ಅನೇಕರು ಆರೋಗ್ಯ ಸಮಸ್ಯೆಗಳಿದ್ದಾಗ್ಯೂ ಪಯನೀಯರ್ ಸೇವೆಯನ್ನು ಮಾಡಸಾಧ್ಯವಿದೆ ಯಾಕಂದರೆ ಅವರು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಾರೆ, ಅವರಿಗೆ ಅನುಕೂಲವಾದ ಒಂದು ಆಹಾರ ಕ್ರಮಕ್ಕೆ ಅಂಟಿಕೊಂಡಿರುತ್ತಾರೆ, ಮತ್ತು ಅಗತ್ಯವಿರುವ ವಿಶ್ರಾಂತಿ ಮತ್ತು ವ್ಯಾಯಾಮವನ್ನು ಪಡಕೊಳ್ಳುತ್ತಾರೆ. ಪಯನೀಯರ್ ಸಹೋದರಿಯೊಬ್ಬಳು ಸಂಧಿವಾತದಿಂದ ಎಷ್ಟೊಂದು ಪೀಡಿತಳಾಗಿದ್ದಳೆಂದರೆ ಶುಶ್ರೂಷೆಯಲ್ಲಿ ಮನೆಯಿಂದ ಮನೆಗೆ ನಡೆಯಲು ಅವಳಿಗೆ ಸಹಾಯದ ಅಗತ್ಯವಿತ್ತೆಂದು ಸಂಚಾರ ಮೇಲ್ವಿಚಾರಕರೊಬ್ಬರು ಗಮನಿಸಿದರು. (ಅ. ಕೃತ್ಯಗಳು 20:20) ಆದರೂ, ಅವಳು ಮತ್ತು ಅವಳ ಗಂಡನು 33 ಮನೆ ಬೈಬಲ್ ಅಭ್ಯಾಸಗಳನ್ನು ನಡೆಸುತ್ತಿದ್ದರು ಮತ್ತು ದೇವರ ಸತ್ಯವನ್ನು 83 ಜನರು ಸ್ವೀಕರಿಸುವಂತೆ ಅವರು ಸಹಾಯ ಮಾಡಿದ್ದರು. ಸಕಾಲದಲ್ಲಿ ಅವಳ ಆರೋಗ್ಯವು ಉತ್ತಮಗೊಂಡಿತು, ಮತ್ತು 11 ವರ್ಷಗಳ ಅನಂತರ ಅವಳು ಪಯನೀಯರ್ ಸೇವಾ ಶಾಲೆಯನ್ನು ಹಾಜರಾದಳು, ಮತ್ತು ಅವಳ ಸಂಧಿವಾತವು ವಾಸಿಯಾಗಿತ್ತು.
ನಿರುತ್ಸಾಹವು ಕೆಲವರಿಗೆ ಪಯನೀಯರ್ ಶುಶ್ರೂಷೆಯನ್ನು ಬಿಟ್ಟುಬಿಡಲು ಕಾರಣವಾಗಬಹುದು. (ಜ್ಞಾನೋಕ್ತಿ 24:10) ಒಬ್ಬ ಪಯನೀಯರನು ಸಂಚಾರ ಮೇಲ್ವಿಚಾರಕರೊಬ್ಬರಿಗೆ ಹೇಳಿದ್ದು: “ನಾನು ಪಯನೀಯರ್ ಸೇವೆಯನ್ನು ನಿಲ್ಲಿಸುತ್ತೇನೆ. . . . ನನಗೆ ಬೆಲೆಪಟ್ಟಿಗಳನ್ನು ಪಾವತಿ ಮಾಡಲಿಕ್ಕಿದೆ.” ಇಪ್ಪತ್ತು ಡಾಲರ್ ಬೆಲೆಯ ಕನ್ನಡಕವು ಅವನಿಗೆ ಆವಶ್ಯವಿತ್ತು. “ಕೇವಲ 20 ಡಾಲರ್ ಅಗತ್ಯವಿರುವ ಕಾರಣದಿಂದಾಗಿ ಪಯನೀಯರ್ ಸೇವೆಯನ್ನು ನೀನು ನಿಲ್ಲಿಸುತೀಯ್ತೋ?” ಎಂದು ಮೇಲ್ವಿಚಾರಕರು ಕೇಳಿದರು. ಒಂದು ದಿನ ಸ್ಥಳಿಕ ಕಾಫಿತೋಟದಲ್ಲಿ ಕೆಲಸಮಾಡಿ, 20 ಡಾಲರ್ಗಳನ್ನು ಸಂಪಾದಿಸಿ, ಕನ್ನಡಕವನ್ನು ಕೊಂಡುಕೊಳ್ಳುವಂತೆ ಮತ್ತು ಪಯನೀಯರ್ ಸೇವೆಯನ್ನು ಮುಂದುವರಿಸುವಂತೆ ಆ ಪಯನೀಯರನಿಗೆ ಸೂಚಿಸಲಾಯಿತು. ಕಾರಿನ ರಿಪೇರಿಯ ದುಬಾರಿ ಖರ್ಚಿನ ಕುರಿತಾದ ನಿರುತ್ಸಾಹವು ಮೂಲಭೂತ ಸಮಸ್ಯೆಯಾಗಿತ್ತೆಂದು ಹೆಚ್ಚಿನ ಸಂಭಾಷಣೆಯು ಬಹಿರಂಗಪಡಿಸಿತು. ಬಹು ದೂರದ ಕ್ಷೇತ್ರಗಳಿಗೆ ಬದಲಾಗಿ ಪ್ರತಿದಿನ ಕೆಲವು ಕಿಲೊಮೀಟರುಗಳ ವೃತ್ತ ಕ್ಷೇತ್ರದೊಳಗೆ ವಾಹನವನ್ನು ಉಪಯೋಗಿಸುವ ಮೂಲಕ ಪಯನೀಯರನು ಖರ್ಚುಗಳನ್ನು ಕಡಿಮೆಮಾಡಬಹುದೆಂದು ಶಿಫಾರಸ್ಸು ಮಾಡಲಾಯಿತು. ಅವನ ಆತ್ಮಿಕತೆಯನ್ನು ಕಾಪಾಡಿಕೊಳ್ಳುವಂತೆ ಸಹ ಅವನಿಗೆ ಸಲಹೆ ಕೊಡಲ್ಪಟ್ಟಿತು. ಪಯನೀಯರನು ಸಲಹೆಯನ್ನು ಅನ್ವಯಿಸಿಕೊಂಡನು ಮತ್ತು ಆರು ತಿಂಗಳುಗಳ ಅನಂತರ ಗಿಲ್ಯಾದ್ ಶಾಲೆಯನ್ನು ಹಾಜರಾಗುವ ಅವನ ಕರೆಯನ್ನು ಸ್ವೀಕರಿಸಿದನು. ಪದವಿ ಪಡೆದುಕೊಂಡ ಅನಂತರ ಅವನು ಹೊರ ದೇಶವೊಂದಕ್ಕೆ ನೇಮಕವನ್ನು ಹೊಂದಿದನು ಮತ್ತು ಅವನ ಮರಣದ ತನಕ ಅನೇಕ ವರ್ಷಗಳವರೆಗೆ ಅಲ್ಲಿ ನಂಬಿಗಸ್ತಿಕೆಯಿಂದ ಸೇವೆ ಮಾಡಿದನು. ಹೌದು, ನಿರುತ್ಸಾಹಕ್ಕೆ ನಾವು ವಶವಾಗದಿರುವುದಾದರೂ, ಯೆಹೋವನು ನಮ್ಮೊಂದಿಗಿದ್ದಾನೆಂಬದನ್ನು ಮನಸ್ಸಿನಲ್ಲಿಡುವುದಾದರೆ, ಮಹಾ ಆಶೀರ್ವಾದಗಳು ಆಗಿಂದಾಗ್ಗೆ ಫಲಿಸುತ್ತವೆ.
ನಿಮ್ಮ ಸೇವಾ ಸುಯೋಗವನ್ನು ನಿಧಿಯಾಗಿ ಭದ್ರಪಡಿಸಿರಿ
ಕೊರತೆಗಳು ಮತ್ತು ಉಪವಾಸಗಳಂತಹ ಪರೀಕೆಗ್ಷಳಿದ್ದಾಗ್ಯೂ, ಪೌಲನು ಆತನ ಶುಶ್ರೂಷೆಯನ್ನು ಒಂದು ನಿಕ್ಷೇಪದೋಪಾದಿ ವೀಕ್ಷಿಸಿದನು. (2 ಕೊರಿಂಥ 4:7; 6:3-6) ಆಫ್ರಿಕ, ಏಷ್ಯಾ, ಪೂರ್ವ ಯೂರೋಪ್, ಮತ್ತು ಬೇರೆ ಕಡೆಗಳಲ್ಲಿ ಇಂದು ಕಷ್ಟ ಮತ್ತು ಹಿಂಸೆಗಳ ಎದುರಿನಲ್ಲಿಯೂ, ಯೆಹೋವನ ಸೇವಕರಲ್ಲಿ ಅನೇಕರು ಅವರ ಪಯನೀಯರ್ ಸೇವಾ ಸುಯೋಗಗಳನ್ನು ಭದ್ರವಾಗಿ ಹಿಡಿದುಕೊಂಡಿದ್ದಾರೆ. ಆದುದರಿಂದ, ಪರೀಕ್ಷೆಗಳು ಎದುರಾದಾಗ, ಯೆಹೋವನನ್ನು ಸ್ತುತಿಗಾಗಿರುವ ಈ ಸೇವಾ ಸುಯೋಗದಲ್ಲಿ ಮುಂದುವರಿಯಲು ಪ್ರತಿಯೊಂದು ಪ್ರಯತ್ನವನ್ನು ಮಾಡಿರಿ.
ತಮ್ಮ ಜೀವನ ಶೈಲಿಯನ್ನು ಅವರು ಸರಳ ಮಾಡಿರುವ ಕಾರಣದಿಂದ ಮಾತ್ರವೇ ಅಧಿಕಾಂಶ ಪಯನೀಯರರು ಪೂರ್ಣಸಮಯದ ಸಾರುವ ಕೆಲಸವನ್ನು ಪ್ರವೇಶಿಸಲು ಶಕ್ತರಾದರು. ಪೌಲನಂತೆ, ಅವರು ಪ್ರಾಪಂಚಿಕ ಆಕರ್ಷಣೆಗಳನ್ನು ಪ್ರತಿರೋಧಿಸಿದ್ದಾರೆ ಮತ್ತು “ಅನ್ನವಸ್ತ್ರ” ಗಳಿಂದ ತೃಪ್ತಿಯನ್ನು ಬೆಳೆಸಿಕೊಂಡರು. ಪಯನೀಯರ್ ಸೇವೆಯಲ್ಲಿ ಮುಂದುವರಿಯಲು, ಅವರು ಅಗತ್ಯವಾದ ವಿಚಾರಗಳೊಂದಿಗೆ ಸಂತೃಪ್ತರಾಗಿ ಇರುವ ಆವಶ್ಯಕತೆಯಿದೆ. (1 ತಿಮೊಥೆಯ 6:8) ಪ್ರಾಪಂಚಿಕ ಐಶ್ವರ್ಯಗಳಿಗಿಂತಲೂ ಅವುಗಳನ್ನು ಪ್ರಮುಖ ಸ್ಥಾನದಲ್ಲಿಡುವಾಗ, ನಮ್ಮ ದೇವದತ್ತ ಸುಯೋಗಗಳನ್ನು ನಿಧಿಯಾಗಿ ಭದ್ರಪಡಿಸುವುದರಿಂದ ಸಂತೋಷವು ಫಲಿಸುತ್ತದೆ.
ದೃಷ್ಟಾಂತಿಸಲು: ವಾಷಿಂಗ್ಟನ್, ಡಿ.ಸಿ.ಯಲ್ಲಿ ಸರಕಾರಿ ಅಧಿಕಾರಿಗಳಿಗೆ ರಾಜ್ಯ ಅಭಿರುಚಿಗಳನ್ನು ಪ್ರತಿನಿಧಿಸಲು ಆ್ಯನನ್ಟ್ ಕೋರ್ಬೆರ್ ಸುಯೋಗಹೊಂದಿದರು. ಕೆಲವು ಸಮಯದ ತನಕ ಅವರು ಒಬ್ಬ ಪಯನೀಯರರಾಗಿ ಸೇವೆಮಾಡಿದರು ಮತ್ತು 1950 ರುಗಳಲ್ಲಿ ಸರ್ಕಿಟ್ ಮೇಲ್ವಿಚಾರಕರಾಗಿದ್ದರು. ಒಮ್ಮೆ ಅವರ ಹಿಂದಿನ ವ್ಯಾಪಾರ ಸಹವಾಸಿಗಳಲ್ಲಿ ಕೆಲವರು ತಮಗಾಗಿ ಹತ್ತು ಲಕ್ಷ ಡಾಲರುಗಳಷ್ಟು ಮೊತ್ತದ ಲಾಭವನ್ನು ಗಳಿಸಲು ಅವರನ್ನು ಸಮರ್ಥರನ್ನಾಗಿ ಮಾಡುವ ಒಂದು ಯೋಜನೆಯೊಂದಿಗೆ ಅವರನ್ನು ಸಮೀಪಿಸಿದರು. ಆದಾಗ್ಯೂ, ಹಾಗೆ ಮಾಡಲು ಅದಕ್ಕಾಗಿ ಸುಮಾರು ಒಂದು ವರ್ಷದ ವರೆಗೆ ತನ್ನೆಲ್ಲಾ ಸಮಯವನ್ನು ವ್ಯಾಪಾರ ವ್ಯವಹಾರಗಳಿಗಾಗಿ ಮೀಸಲಾಗಿಡುವುದು ಅಗತ್ಯವಾಗಿತ್ತು. ಮಾರ್ಗದರ್ಶನಕ್ಕಾಗಿ ಮತ್ತು ಸ್ವಸ್ಥ ಮನಸ್ಸಿನ ಆತ್ಮಕ್ಕಾಗಿ ಪ್ರಾರ್ಥಿಸಿದ ಬಳಿಕ, ಅವರು ಅಂದದ್ದು: “ಕೇವಲ ಒಂದು ವರ್ಷಕ್ಕಾಗಿ ಅಲ್ಲ, ಪ್ರಪಂಚದಲ್ಲಿರುವ ಎಲ್ಲಾ ಹಣಕ್ಕೂ, ಇಲ್ಲಿ ಯೆಹೋವನನ್ನು ಸೇವಿಸುವ ನನ್ನ ಅದ್ಭುತಕರವಾದ ಸುಯೋಗಗಳನ್ನು ತೊರೆಯಲು ನನಗೆ ಸಾಧ್ಯವಿಲ್ಲ. ವಾಷಿಂಗ್ಟನ್ನಲ್ಲಿರುವ ನನ್ನ ಸಹೋದರರನ್ನು ಸೇವಿಸುವುದು ನನಗೆ ಹೆಚ್ಚು ಅಮೂಲ್ಯವಾಗಿದೆ, ಮತ್ತು ಇಲ್ಲಿ ದೇವರ ಆಶೀರ್ವಾದ ನನಗಿದೆಯೆಂದು ನಾನು ತಿಳಿದಿದ್ದೇನೆ. ಹತ್ತು ಲಕ್ಷ ಡಾಲರ್ಗಳನ್ನು ನಾನು ಗಳಿಸುವುದರಲ್ಲಿ ಸಂದೇಹವಿಲ್ಲ, ಆದರೆ ಅಂತಹ ರೀತಿಯ ಜೀವಿತದ ವರ್ಷಾಂತ್ಯದಲ್ಲಿ, ಆತ್ಮಿಕವಾಗಿ ಅಥವಾ ಶಾರೀರಿಕವಾಗಿಯೂ ನಾನು ಹೇಗಿರುವೆನು?” ಆದುದರಿಂದಲೇ ಅವರು ಬೇಡಿಕೆಯನ್ನು ನಿರಾಕರಿಸಿದರು. ತದ್ರೀತಿಯ ವಿಧಾನದಿಂದ ಅವರ ಸುಯೋಗಗಳನ್ನು ನಿಧಿಯಾಗಿ ಭದ್ರಪಡಿಸಿಕೊಳ್ಳುವುದು ಅನೇಕರಿಗೆ ಪಯನೀಯರ್ ಸೇವೆಯಲ್ಲಿ ಮುಂದುವರಿಯುವಂತೆ ಸಹಾಯಮಾಡುತ್ತದೆ.
ಎಂತಹ ಮಹಾ ಆಶೀರ್ವಾದಗಳನ್ನು ಪಯನೀಯರರು ಆನಂದಿಸುತ್ತಾರೆ! ಯೆಹೋವನ ಮಹಿಮೆಯುಳ್ಳ ರಾಜತ್ವದ ಕುರಿತು ಮಾತಾಡುವುದರಲ್ಲಿ ಅನೇಕ ತಾಸುಗಳನ್ನು ಕಳೆಯುವುದು ಒಂದು ಆಶೀರ್ವಾದವಾಗಿದೆ. (ಕೀರ್ತನೆ 145:11-13) ಶುಶ್ರೂಷೆಗಾಗಿ ಅಷ್ಟೊಂದು ಸಮಯವನ್ನು ಮೀಸಲಾಗಿಡುವುದರಿಂದ, ಬಡವರಿಗೆ ಮತ್ತು ಹಿಂಸಿಸಿಸಲ್ಪಟ್ಟವರಿಗೆ, ಅಸ್ವಸ್ಥ ಮತ್ತು ನಿರ್ಗತಿಕರಿಗೆ, ಮತ್ತು ತೀವ್ರವಾಗಿ ಸಂಕಟದಲ್ಲಿರುವ ಇತರರಿಗೆ ಮತ್ತು ಒಂದು ಭದ್ರವಾದ ನಿರೀಕ್ಷೆಯ ಅಗತ್ಯವಿರುವವರಿಗೆ ಆತ್ಮಿಕ ಸಂತೈಸುವಿಕೆಯನ್ನು ತರುವಂತಹ ಆಶೀರ್ವಾದಗಳನ್ನು ಪಯನೀಯರರು ಹೊಂದಿದ್ದಾರೆ. ಆದುದರಿಂದಲೇ, ಪೂರ್ಣಸಮಯದ ಸಾರುವ ಕೆಲಸದಲ್ಲಿ ಪ್ರವೇಶಿಸುವಂತೆ ನಮಗೆ ಪರಿಸ್ಥಿತಿಗಳು ಅನುಮತಿಸುವುದಾದರೆ, ನಿಶ್ಚಯವಾಗಿ ಅನೇಕ ಆಶೀರ್ವಾದಗಳನ್ನು ನಾವು ಆನಂದಿಸುವೆವು. ‘ಯೆಹೋವನ ಆಶೀರ್ವಾದವು ಭಾಗ್ಯದಾಯಕ’ವಾಗಿದೆ. (ಜ್ಞಾನೋಕ್ತಿ 10:22) ಮತ್ತು ಅನೇಕ ರಾಜ್ಯ ಘೋಷಕರು ಸಂತೋಷದಿಂದ ಪಯನೀಯರ್ ಸೇವೆಯಲ್ಲಿ ಮುಂದುವರಿಯುತ್ತಿರುವುದು ಆತನ ಸಹಾಯ ಮತ್ತು ಆಶೀರ್ವಾದದಿಂದಲೇ ಆಗಿದೆ.