ಪಯನೀಯರ್ ಶುಶ್ರೂಷೆಯ ಆಶೀರ್ವಾದಗಳು
1, 2. ಯಾವ ಆಶೀರ್ವಾದಗಳು ಪಯನೀಯರ್ ಶುಶ್ರೂಷೆಯೊಂದಿಗೆ ನಿಕಟ ಸಂಬಂಧದಲ್ಲಿವೆ, ಮತ್ತು ಏಕೆ?
1 “ಸತ್ಯವನ್ನು ಇತರರೊಂದಿಗೆ ಹಂಚಿಕೊಳ್ಳುವುದರಿಂದ ಬಂದಿರುವ ಸಂತೃಪ್ತಿಯನ್ನು ಇನ್ನಾವ ಕೆಲಸವೂ ತರಸಾಧ್ಯವಿರಲಿಲ್ಲವೆಂಬುದು ನನಗೆ ಗೊತ್ತು” ಎಂಬುದಾಗಿ ಒಬ್ಬ ಪಯನೀಯರನು ತಿಳಿಸುತ್ತಾನೆ. ಇನ್ನೊಬ್ಬ ಪಯನೀಯರಳು ತಿಳಿಸುವುದು: “ಪ್ರತಿದಿನದ ಅಂತ್ಯದಲ್ಲಿ ನನ್ನ ನಿದ್ರೆಯು ಸುಖಕರವಾದದ್ದೂ ನನ್ನ ಹೃದಯ ಆನಂದಭರಿತವಾದದ್ದೂ ಆಗಿರುತ್ತದೆ.” ಪಯನೀಯರ್ ಶುಶ್ರೂಷೆಯ ಆಶೀರ್ವಾದಗಳನ್ನು ಅನುಭವಿಸಿರುವ ಲೋಕಾದ್ಯಂತವಿರುವ ಸಹೋದರ ಸಹೋದರಿಯರ ಪರವಾಗಿ ಈ ಪಯನೀಯರರು ಮಾತಾಡುತ್ತಾರೆ.—ಜ್ಞಾನೋ. 10:22.
2 ದೇವರ ವಾಕ್ಯದ ಜೀವರಕ್ಷಕ ಜ್ಞಾನವನ್ನು ಪಡೆಯುವಂತೆ ಇತರರಿಗೆ ಸಹಾಯಮಾಡುವುದು ನಿಜ ಸಂತೃಪ್ತಿಯನ್ನು ತರುತ್ತದೆ. (ಅ. ಕೃ. 20:35; 1 ಥೆಸ. 2:19, 20) “ಜನರು ತಮ್ಮ ಜೀವಿತಗಳಲ್ಲಿ ಬದಲಾವಣೆಗಳನ್ನು ಮಾಡುವಂತೆ ಪ್ರಚೋದಿಸುವುದರಲ್ಲಿ ದೇವರ ವಾಕ್ಯವು ಎಷ್ಟು ಬಲಶಾಲಿಯಾಗಿದೆ ಎಂಬುದನ್ನು ನೋಡುವುದು ರೋಮಾಂಚಕವೂ ನಂಬಿಕೆವರ್ಧಕವೂ ಆಗಿದೆ,” ಎಂಬುದಾಗಿ ಅನೇಕ ವರುಷಗಳಿಂದ ಪಯನೀಯರನಾಗಿರುವಂಥ ಒಬ್ಬನು ತಿಳಿಸುತ್ತಾನೆ. ಹೌದು, ಇತರರಿಗೆ ಸಹಾಯಮಾಡಲು ಮತ್ತು ಬೈಬಲ್ ಅಧ್ಯಯನಗಳನ್ನು ನಡಿಸಲು ತಮ್ಮನ್ನೇ ಲಭ್ಯಗೊಳಿಸಿಕೊಳ್ಳುವುದರ ಮೂಲಕ ಪಯನೀಯರರು ಇಂಥ ಆಶೀರ್ವಾದಗಳಲ್ಲಿ ಆನಂದಿಸುತ್ತಾರೆ.
3, 4. ಪಯನೀಯರ್ ಸೇವೆಯು ಒಬ್ಬನಿಗೆ ಯೆಹೋವನ ಮೇಲೆ ಆತುಕೊಳ್ಳುವಂತೆ ಹೇಗೆ ಕಲಿಸುತ್ತದೆ, ಮತ್ತು ಇದು ಆತ್ಮಿಕವಾಗಿ ಬೆಳೆಯುವಂತೆ ಒಬ್ಬನಿಗೆ ಹೇಗೆ ಸಹಾಯಮಾಡುತ್ತದೆ?
3 ಯೆಹೋವನ ಮೇಲೆ ಆತುಕೊಳ್ಳುವುದು: ಪ್ರತಿದಿನವೂ ಶುಶ್ರೂಷೆಯಲ್ಲಿ ಒಳಗೊಂಡಿರುವಾಗ ದೇವರ ಆತ್ಮದ ಮೇಲೆ ಆತುಕೊಳ್ಳುವುದು, “ದೇವರಾತ್ಮನಿಂದ ಉಂಟಾಗುವ ಫಲ”ವನ್ನು ಬೆಳೆಸಿಕೊಳ್ಳಲು ಪಯನೀಯರರಿಗೆ ಸಹಾಯಮಾಡುತ್ತದೆ ಮತ್ತು ಇದು ಅವರಿಗೊಂದು ಸಂರಕ್ಷಣೆಯಾಗಿದೆ. (ಗಲಾ. 5:16, 22, 23) ಮಾತ್ರವಲ್ಲದೆ, ಪಯನೀಯರರು ದೇವರ ವಾಕ್ಯವನ್ನು ಕ್ರಮವಾಗಿ ಉಪಯೋಗಿಸುವುದರಿಂದ, ಸತ್ಯವನ್ನು ಸಮರ್ಥಿಸಲು ಮತ್ತು ಇತರರನ್ನು ಬಲಪಡಿಸಲು ಶಾಸ್ತ್ರವಚನಗಳನ್ನು ಉಪಯೋಗಿಸುವುದರಲ್ಲಿ ಅನೇಕವೇಳೆ ನಿಪುಣರಾಗಿರುತ್ತಾರೆ. (2 ತಿಮೊ. 2:15) ಅನೇಕ ದಶಕಗಳಿಂದ ಪಯನೀಯರ್ ಸೇವೆಯನ್ನು ಮಾಡಿರುವ ಒಬ್ಬ ಸಹೋದರನು ಹೇಳುವುದು: “ಪಯನೀಯರ್ ಸೇವೆಯು ನನಗೆ ಬೈಬಲಿನ ಗಾಢವಾದ ಜ್ಞಾನವನ್ನು ಪಡೆದುಕೊಳ್ಳುವಂತೆ ಸಹಾಯಮಾಡಿದೆ. ಅನೇಕ ಜನರು ಯೆಹೋವನನ್ನು ಮತ್ತು ಆತನ ಉದ್ದೇಶಗಳನ್ನು ತಿಳಿದುಕೊಳ್ಳುವಂತೆ ಸಹಾಯಮಾಡಲು ನಾನು ಈ ಜ್ಞಾನವನ್ನು ಉಪಯೋಗಿಸಿದ್ದೇನೆ.” ಎಂಥ ಒಂದು ಆಶೀರ್ವದಿತ ಕೆಲಸ!
4 ರೆಗ್ಯುಲರ್ ಪಯನೀಯರರು ಇತರ ಅನೇಕ ವಿಧಗಳಲ್ಲಿಯೂ ಯೆಹೋವನ ಮೇಲೆ ಆತುಕೊಳ್ಳಬೇಕು. ತಮ್ಮ ಭೌತಿಕ ಆವಶ್ಯಕತೆಗಳನ್ನು ಪೂರೈಸಲು ತಾವು ಪಡುವ ಪ್ರಯತ್ನಗಳನ್ನು ಯೆಹೋವನು ಯಾವ ರೀತಿಯಲ್ಲಿ ಆಶೀರ್ವದಿಸುತ್ತಾನೆ ಎಂಬುದನ್ನು ನೋಡುವಾಗ ಅವರ ನಂಬಿಕೆಯು ಬಲಗೊಳಿಸಲ್ಪಡುತ್ತದೆ. 55 ವರುಷಗಳಿಂದ ರೆಗ್ಯುಲರ್ ಪಯನೀಯರರಾಗಿ ಸೇವೆಸಲ್ಲಿಸುತ್ತಿರುವ 72 ವರುಷ ಪ್ರಾಯದ ಒಬ್ಬ ಸಹೋದರರು ತಿಳಿಸಿದ್ದು: “ಯೆಹೋವನು ನನ್ನನ್ನು ಎಂದಿಗೂ ತೊರೆದಿರುವುದಿಲ್ಲ.” ಅಷ್ಟುಮಾತ್ರವಲ್ಲದೆ, ಪಯನೀಯರರು ತಮ್ಮ ಜೀವನಗಳನ್ನು ಸರಳವಾಗಿ ಇಟ್ಟುಕೊಳ್ಳುವ ಮೂಲಕ, ಜೀವನದ ಅನೇಕ ಚಿಂತೆಗಳಿಂದ ತಮ್ಮನ್ನು ದೂರವಿರಿಸಿಕೊಳ್ಳುತ್ತಾರೆ. ಇದು ನಿಮಗೂ ಅನ್ವಯಿಸುತ್ತದೋ?—ಮತ್ತಾ. 6:22; ಇಬ್ರಿ. 13:5, 6.
5. ಪಯನೀಯರ್ ಸೇವೆಯು ಒಬ್ಬನಿಗೆ ಯೆಹೋವನ ಸಮೀಪಕ್ಕೆ ಬರಲು ಹೇಗೆ ಸಹಾಯಮಾಡುತ್ತದೆ?
5 ದೇವರ ಸಮೀಪಕ್ಕೆ ಬರುವುದು: ಯೆಹೋವನೊಂದಿಗಿನ ನಮ್ಮ ಸಂಬಂಧವು ಅತ್ಯಮೂಲ್ಯವಾದ ಸೊತ್ತಾಗಿದೆ. (ಕೀರ್ತ. 63:3) ಯೆಹೋವನಿಗಾಗಿರುವ ಪ್ರೀತಿಯ ಕಾರಣ ನಾವು ಶುಶ್ರೂಷೆಯಲ್ಲಿ ಪೂರ್ಣವಾಗಿ ಭಾಗವಹಿಸುವಾಗ, ಆ ಸಂಬಂಧವು ಇನ್ನೂ ನಿಕಟವಾಗುತ್ತದೆ. (ಯಾಕೋ. 4:8) 18ಕ್ಕಿಂತಲೂ ಹೆಚ್ಚು ವರುಷಗಳಿಂದ ಪಯನೀಯರ್ ಸೇವೆಯನ್ನು ಮಾಡುತ್ತಿರುವ ಒಬ್ಬ ಸಹೋದರನು ತಿಳಿಸುವುದು: “ಪಯನೀಯರ್ ಸೇವೆಯು, ‘ಯೆಹೋವನು ಉತ್ತಮನೆಂದು ಅನುಭವದಿಂದ ಸವಿದು ನೋಡಲು,’ ಮತ್ತು ದಿನೇದಿನೇ ನಮ್ಮ ಸೃಷ್ಟಿಕರ್ತನೊಂದಿಗೆ ಇನ್ನೂ ಬಲವಾದ ಸಂಬಂಧವನ್ನು ಬೆಳೆಸಲು ಅನುಮತಿಯನ್ನೀಯುತ್ತದೆ.”—ಕೀರ್ತ. 34:8.
6. ಪಯನೀಯರರು ಏನೆಲ್ಲಾ ಹೊಂದಿರಬೇಕು, ಮತ್ತು ಪಯನೀಯರರು ಮಾತ್ರವಲ್ಲ ಇನ್ನಾರು ಸಹ ಪ್ರಯೋಜನವನ್ನು ಪಡೆಯುತ್ತಾರೆ?
6 ಪಯನೀಯರರು, ಪಯನೀಯರ್ ಸೇವೆಯನ್ನು ಮಾಡಸಾಧ್ಯವಾಗುವಂತಹ ಪರಿಸ್ಥಿತಿಗಳನ್ನು ಹೊಂದಿರುವುದರೊಂದಿಗೆ ಬಲವಾದ ನಂಬಿಕೆ, ದೇವರಿಗಾಗಿ ಮತ್ತು ನೆರೆಯವರಿಗಾಗಿ ನೈಜವಾದ ಪ್ರೀತಿ, ಮತ್ತು ತ್ಯಾಗಗಳನ್ನು ಮಾಡಲು ಸಿದ್ಧಮನಸ್ಸನ್ನು ಹೊಂದಿರಬೇಕು. (ಮತ್ತಾ. 16:24; 17:20; 22:37-39) ಹಾಗಿದ್ದರೂ, ಎಲ್ಲಾ ಕಡೆಯಲ್ಲಿರುವ ಪಯನೀಯರರ ಹಸನ್ಮುಖಗಳಿಂದ ರುಜುಪಡಿಸಲ್ಪಟ್ಟಂತೆ, ಪಯನೀಯರ್ ಶುಶ್ರೂಷೆಯ ಆಶೀರ್ವಾದಗಳು ಹೇರಳವಾಗಿವೆ. (ಮಲಾ. 3:10) ಇಂಥ ಆಶೀರ್ವಾದಗಳು ಕೇವಲ ಪಯನೀಯರರಿಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಅವರ ಕುಟುಂಬಗಳು ಮತ್ತು ಅವರ ಸಭೆಯು ಸಹ ಪಯನೀಯರರು ತೋರಿಸುವ ಉತ್ತಮವಾದ ಆತ್ಮದಿಂದ ಬಹಳಷ್ಟು ಪ್ರಯೋಜನವನ್ನು ಪಡೆಯುತ್ತದೆ.—ಫಿಲಿ. 4:23.