ದೇವರ ರಾಜ್ಯವೆಂದರೆ ನಿಮಗೆ ಯಾವ ಅರ್ಥದಲ್ಲಿರಬಲ್ಲದು?
ಯೇಸು ಕ್ರಿಸ್ತನು “ನಿನ್ನ ರಾಜ್ಯವು ಬರಲಿ” ಎಂದು ಆತನ ಶಿಷ್ಯರು ಪ್ರಾರ್ಥಿಸುವಂತೆ ಕಲಿಸಿದನು. (ಮತ್ತಾಯ 6:10) ಯೇಸುವಿನ ಶಿಷ್ಯರೆಂದು ಹೇಳಿಕೊಳ್ಳುವವರಿಂದ ಈ ಮಾತುಗಳು ಎಷ್ಟೊಂದು ಬಾರಿ ದೇವರಿಗೆ ಸಂಬೋಧಿಸಲ್ಪಟ್ಟಿವೆ!
ಆದಾಗ್ಯೂ, ಯೇಸುವು ತನ್ನ ಶಿಷ್ಯರಿಗೆ ದೇವರ ರಾಜ್ಯಕ್ಕಾಗಿ ಪ್ರಾರ್ಥಿಸಲು ಕಲಿಸಿದ್ದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಿದನು. ರಾಜ್ಯವನ್ನು ಅವನ ಸಾರುವಿಕೆಯ ಕಾರ್ಯದ ಪ್ರಧಾನ ವಿಷಯವನ್ನಾಗಿ ಮಾಡಿದನು. ವಾಸ್ತವದಲ್ಲಿ, ಎನ್ಸೈಕ್ಲೊಪೀಡಿಯಾ ಬ್ರಿಟ್ಯಾನಿಕ ಹೇಳುವುದೇನಂದರೆ ದೇವರ ರಾಜ್ಯವು “ಯೇಸುವಿನ ಬೋಧಿಸುವಿಕೆಯ ಪ್ರಧಾನ ವಿಷಯವೆಂದು ಸಾಮಾನ್ಯವಾಗಿ ಪರಿಗಣಿಸಲಾಗಿದೆ.”
ಕ್ರಿಸ್ತನ ಹಿಂಬಾಲಕರು ರಾಜ್ಯಕ್ಕಾಗಿ ಪ್ರಾರ್ಥಿಸುವಾಗ, ಅವರು ನಿಜವಾಗಿ ಯಾವುದಕ್ಕಾಗಿ ಪ್ರಾರ್ಥಿಸುತ್ತಾರೆ? ಅವರಿಗೆ ಮತ್ತು ನಿಮಗೆ ದೇವರ ರಾಜ್ಯವು ಯಾವ ಅರ್ಥದಲ್ಲಿರಸಾಧ್ಯವಿದೆ? ಮತ್ತು ಯೇಸುವು ಅದನ್ನು ಹೇಗೆ ವೀಕ್ಷಿಸಿದನು?
ರಾಜ್ಯದ ಕುರಿತು ಯೇಸುವಿನ ದೃಷ್ಟಿ
ಯೇಸುವು ಅನೇಕ ವೇಳೆಗಳಲ್ಲಿ ತನ್ನನ್ನು “ಮನುಷ್ಯ ಕುಮಾರ” ನೆಂದು ಕರೆಯಿಸಿಕೊಂಡನು. (ಮತ್ತಾಯ 10:23; 11:19; 16:28; 20:18, 28) ಇದು ನಮಗೆ “ಒಬ್ಬ ಮನುಷ್ಯ ಕುಮಾರ” ನ ಕುರಿತಾದ ಪ್ರವಾದಿ ದಾನಿಯೇಲನ ಉಲ್ಲೇಖವನ್ನು ನೆನಪಿಗೆ ತರುತ್ತದೆ. ಭವಿಷ್ಯತ್ತಿನ ಒಂದು ಸ್ವರ್ಗೀಯ ಘಟನೆಯ ಕುರಿತು ದಾನಿಯೇಲನು ಅಂದದ್ದು: “ನಾನು ಕಂಡ ರಾತ್ರಿಯ ಕನಸಿನಲ್ಲಿ ಇಗೋ, ಮನುಷ್ಯ ಕುಮಾರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾ ವೃದ್ಧನನ್ನು ಸಮೀಪಿಸಿದನು, ಅವನನ್ನು ಆತನ ಸನ್ನಿಧಿಗೆ ತಂದರು. ಸಕಲ ಜನಾಂಗ ಕುಲಭಾಷೆಗಳವರು ಅವನನ್ನು ಸೇವಿಸಲೆಂದು ಅವನಿಗೆ ದೊರೆತನವೂ ಘನತೆಯೂ ರಾಜ್ಯವೂ ಕೊಡೋಣವಾದವು.—ದಾನಿಯೇಲ 7:13, 14.
ಈ ಆಳಿಕ್ವೆಯನ್ನು ಅವನು ಪಡೆಯಲಿರುವ ಸಮಯದ ಕುರಿತು ಮಾತಾಡುತ್ತಾ, ಯೇಸುವು ಆತನ ಅಪೊಸ್ತಲರಿಗೆ ಹೇಳಿದ್ದು: “ಮನುಷ್ಯ ಕುಮಾರನು ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವಾಗ ನನ್ನನ್ನು ಹಿಂಬಾಲಿಸಿರುವ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕೂತುಕೊಳ್ಳುವಿರಿ.” ಯೇಸುವು ಇದನ್ನೂ ಹೇಳಿದ್ದನು: “ಮನುಷ್ಯ ಕುಮಾರನು ತನ್ನ ಮಹಿಮೆಯಿಂದ ಬರುವಾಗ . . . ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು. ಆತನು ಆಡುಗಳನ್ನೂ ಕುರಿಗಳನ್ನೂ ಬೇರೆಬೇರೆ ಮಾಡುವ ಪ್ರಕಾರ ಇವರು [ಅನೀತಿವಂತರು] ನಿತ್ಯಶಿಕ್ಷೆಗೂ ನೀತಿವಂತರು ನಿತ್ಯಜೀವಕ್ಕೂ ಹೋಗುವರು.”—ಮತ್ತಾಯ 19:28; 25:31, 32, 46.
ಸಿಂಹಾಸನಗಳಿಗೆ ಮತ್ತು ಎಲ್ಲಾ ಜನಾಂಗಗಳ ಕುರಿತಾದ ಈ ಪ್ರವಾದನಾ ಉಲ್ಲೇಖಗಳು ಸೂಚಿಸುವದೇನಂದರೆ ರಾಜ್ಯವು ಒಂದು ಸರಕಾರವಾಗಿದ್ದು, ಅದರಲ್ಲಿ ಯೇಸು ಮತ್ತು ಅವನ ಕೆಲವು ಹಿಂಬಾಲಕರು ಮಾನವ ಕುಲದ ಮೇಲೆ ಅಧಿಪತಿಗಳಾಗಿರುವರು. ಆ ಸರಕಾರಕ್ಕೆ ಅನೀತಿವಂತರನ್ನು ಮರಣದಲ್ಲಿ ತೆಗೆದು ಹಾಕುವ ಶಕಿಯ್ತಿರುವುದು. ಆದಾಗ್ಯೂ, ರಾಜ್ಯದ ಆಳಿಕ್ವೆಯ ಕೆಳಗೆ, ನೀತಿಯ ಮನೋಭಾವವುಳ್ಳವರು ನಿತ್ಯಜೀವದ ವರದಾನವನ್ನು ಪಡೆಯುವರು.
ಹಾಗಿರುವಲ್ಲಿ, ಸ್ಪಷ್ಟವಾಗಿಗಿ ದೇವರ ರಾಜ್ಯವು ದೈವಿಕವಾಗಿ ಸಂಸ್ಥಾಪಿಸಲಾದ ಒಂದು ಸ್ವರ್ಗೀಯ ಸರಕಾರವಾಗಿರುತ್ತದೆ. ರಾಜ್ಯವು ಚರ್ಚ್ ಆಗಿರುವುದಿಲ್ಲ, ಮತ್ತು ಶಾಸ್ತ್ರಗಳು ಅದರ ಲೌಕಿಕ ದೃಷ್ಟಿಕೋನಕ್ಕೆ ಆಧಾರವನ್ನು ಕೊಡುವುದಿಲ್ಲ. ಇನ್ನೂ ಹೆಚ್ಚಾಗಿ, ಒಂದು ದೇವ-ದತ್ತ ಸರಕಾರವು, ಒಬ್ಬ ವ್ಯಕ್ತಿಯ ಹೃದಯದೊಳಗಿರುವ ಕೇವಲ ಒಂದು ವಿಷಯವಾಗಿರಸಾಧ್ಯವಿಲ್ಲ. ದೇವರ ರಾಜ್ಯವು ಒಂದು ಸರಕಾರವಾಗಿರುವುದರಿಂದ, ನಾವು ಕ್ರೈಸ್ತತ್ವವನ್ನು ಸ್ವೀಕರಿಸಿದಾಗ ನಮ್ಮ ಹೃದಯದೊಳಗಿನ ಒಂದು ವಿಷಯವಾಗುವುದಿಲ್ಲ. ಆದರೆ ರಾಜ್ಯವು ಹೃದಯವನ್ನು ಒಳಗೂಡಿಸುವ ಒಂದು ಸ್ಥಿತಿಯಾಗಿದೆ ಎಂದು ಕೆಲವರು ಏಕೆ ನೆನಸುತ್ತಾರೆ?
ರಾಜ್ಯವು ನಮ್ಮೊಳಗೆ?
ಕೆಲವು ಬೈಬಲ್ ತರ್ಜುಮೆಗಾರರು ಲೂಕ 17:21 ನ್ನು ಭಾಷಾಂತರಿಸುವ ರೀತಿಯಿಂದ, ರಾಜ್ಯವು ನಮ್ಮ ಹೃದಯದಲ್ಲಿದೆ ಎಂದು ಕೆಲವರು ಭಾವಿಸುತ್ತಾರೆ. ನ್ಯೂ ಇಂಟರ್ನ್ಯಾಷನಲ್ ವರ್ಷನ್ ನಿಗನುಸಾರ, ಯೇಸು ಅಲ್ಲಿ ಅಂದದ್ದು: “ದೇವರ ರಾಜ್ಯವು ನಿಮ್ಮೊಳಗೆ ಇದೆ.”
ಇದರ ಕುರಿತಾಗಿ ದ ಇಂಟರ್ಪ್ರೆಟರ್ಸ್ ಡಿಕ್ಶನೆರಿ ಆಫ್ ದಿ ಬೈಬಲ್ ಹೇಳುವುದು: “ಯೇಸುವಿನ ‘ರಹಸ್ಯವಾದದ’ ಇಲ್ಲವೆ ‘ಅಂತರ್ಮುಖತೆಯ’ ಉದಾಹರಣೆಯನ್ನು ಆಗಿಂದಾಗ್ಯೆ ಉಲ್ಲೇಖಿಸಿರುವುದಾದರೂ, ಈ ಅರ್ಥವಿವರಣೆಯು ಮುಖ್ಯವಾಗಿ ಅದರ ಹಳೆಯ ತರ್ಜುಮೆಯಾದ, ‘ನಿಮ್ಮೊಳಗೆ ಇದೆ’ ಎನ್ನುವುದರ ಮೇಲೆ ಆಧಾರಿತವಾಗಿದ್ದು . . . ‘ನಿಮ್ಮ’ [ಯು] ಎಂಬುದರ ಆಧುನಿಕ ಅರ್ಥ ಏಕವಚನದಲ್ಲಿ ಅರ್ಥೈಸಿಕೊಳ್ಳುವದು ಅನುಚಿತವಾಗಿದೆ. ‘ನಿಮ್ಮ’ [ಯು] . . .. ಬಹುವಚನವಾಗಿರುತ್ತದೆ (ಯೇಸುವು ಫರಿಸಾಯರನ್ನು ಉದ್ದೇಶಿಸಿ ಮಾತಾಡುತ್ತಾನೆ—ವಚನ 20) . . . ದೇವರ ರಾಜ್ಯವು ಮನಸ್ಸಿನ ಆಂತರಿಕ ಸ್ಥಿತಿಯಾಗಿದೆ, ಯಾ ವೈಯಕ್ತಿಕ ರಕ್ಷಣೆಯಾಗಿದೆ ಎಂಬ ಸಿದ್ಧಾಂತವು ಈ ವಚನದ ಪೂರ್ವಾಪರ ಸಂಗತಿಗೆ ಮತ್ತು ಹೊಸ ಒಡಂಬಡಿಕೆಯಲ್ಲಿ ಸಾದರಪಡಿಸಲ್ಪಟ್ಟ ಇಡೀ ಯೋಚನೆಗೆ ವಿರೋಧವಾಗಿರುತ್ತದೆ.”
ನ್ಯೂ ಇಂಟರ್ನ್ಯಾಶನಲ್ ವರ್ಷನ್ ನಲ್ಲಿ ಲೂಕ 17:21 ರ ಪಾದಟಿಪ್ಪಣಿಯೊಂದು ತೋರಿಸುವುದೇನಂದರೆ ಯೇಸುವಿನ ಮಾತುಗಳನ್ನು ಈ ರೀತಿಯಲ್ಲಿ ಕೊಡಸಾಧ್ಯವಿದೆ: “ದೇವರ ರಾಜ್ಯವು ನಿಮ್ಮ ನಡುವೆ ಇದೆ.” ಇತರ ತರ್ಜುಮೆಗಳು ಓದುವುದು: “ದೇವರ ರಾಜ್ಯವು ನಿಮ್ಮ ನಡುವೆ ಇದೆ,” ಯಾ “ನಿಮ್ಮ ಮಧ್ಯೆ ಇದೆ.” (ದ ನ್ಯೂ ಇಂಗ್ಲಿಷ್ ಬೈಬಲ್; ದ ಜೆರೂಸಲೇಮ್ ಬೈಬಲ್; ರಿವೈಸ್ಡ್ ಸ್ಟ್ಯಾಂಡರ್ಡ್ ವರ್ಷನ್) ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ ಗನುಸಾರ, ಯೇಸು ಅಂದದ್ದು: “ದೇವರ ರಾಜ್ಯವು ನಿಮ್ಮ ಮಧ್ಯೆ ಇದೆ.” ತಾನು ಸಂಬೋಧಿಸುತ್ತಿದ್ದ ಅಹಂಕಾರಿಗಳಾದ ಫರಿಸಾಯರ ಹೃದಯಗಳೊಳಗೆ ರಾಜ್ಯವು ಇದೆ ಎಂದು ಯೇಸುವು ಅರ್ಥೈಸಲಿಲ್ಲ. ಬದಲಾಗಿ, ದೀರ್ಘಕಾಲದಿಂದ ಕಾದು ನಿಂತಿದ್ದ ಮತ್ತು ರಾಜ-ನೇಮಿತನೋಪಾದಿ, ಯೇಸುವು ಅವರ ನಡುವೆ ಇದ್ದನು. ಆದರೆ ದೇವರ ರಾಜ್ಯವು ಬರುವ ಮೊದಲು ಸ್ವಲ್ಪ ಸಮಯ ದಾಟಿಹೋಗಲಿಕ್ಕಿತ್ತು.
ಅದು ಬರಲಿರುವ ಸಮಯ
ಯೇಸು ಕ್ರಿಸ್ತನ ಕೆಲವು ನಿರ್ದಿಷ್ಟ ಹಿಂಬಾಲಕರು ಸ್ವರ್ಗೀಯ ಮೆಸ್ಸೀಯ ರಾಜ್ಯದಲ್ಲಿ ಅವನೊಂದಿಗೆ ಜೊತೆ ಅಧಿಪತಿಗಳಾಗಲು ಆರಿಸಲ್ಪಟ್ಟಿದ್ದಾರೆ. ಯೇಸುವಿನಂತೆ, ಅವರು ದೇವರಿಗೆ ನಂಬಿಗಸ್ತಿಕೆಯಲ್ಲಿ ಸಾಯುತ್ತಾರೆ ಮತ್ತು ಪರಲೋಕದಲ್ಲಿ ಆತ್ಮ ಜೀವಿಗಳಾಗಿರಲು ಪುನರುತ್ಥಾನಗೊಳಿಸಲ್ಪಡುತ್ತಾರೆ. (1 ಪೇತ್ರ 3:18) ತುಲನಾತ್ಮಕವಾಗಿ ಸಂಖ್ಯೆಯಲ್ಲಿ ಅವರು ಕೊಂಚವೇ ಆಗಿದ್ದು, ಮಾನವ ಕುಲದಿಂದ ಕ್ರಯಕ್ಕೆ ಕೊಂಡುಕೊಳ್ಳಲ್ಪಟ್ಟ 1,44,000 ಅರಸರು ಮತ್ತು ಯಾಜಕರು ಆಗಿರುವರು. (ಪ್ರಕಟನೆ 14:1-4; 20:6) ಯೇಸುವಿನ ಜೊತೆ ಅರಸರುಗಳಲ್ಲಿ ಅವನ ನಂಬಿಗಸ್ತ ಅಪೊಸ್ತಲರುಗಳು ಕೂಡ ಇರುವರು.—ಲೂಕ 12:32.
ಒಂದು ಸಂದರ್ಭದಲ್ಲಿ ಅವನ ಹಿಂಬಾಲಕರೊಂದಿಗೆ ಮಾತಾಡುತ್ತಾ, ಯೇಸುವು ವಾಗ್ದಾನಿಸಿದ್ದು: “ಇಲ್ಲಿ ನಿಂತವರೊಳಗೆ ಕೆಲವರು ಮನುಷ್ಯ ಕುಮಾರನು ತನ್ನ ರಾಜ್ಯದಲ್ಲಿ ಬರುವದನ್ನು ನೋಡುವ ತನಕ ಮರಣ ಹೊಂದುವದಿಲ್ಲ.” (ಮತ್ತಾಯ 16:28) ಆಸಕ್ತಕರವಾಗಿ, ಮುಂದಿನ ವಚನ ಸೂಚಿಸುವುದೇನಂದರೆ ಕೆಲವೇ ದಿವಸಗಳ ನಂತರ ಯೇಸುವಿನ ವಾಗ್ದಾನವು ನೆರವೇರಿತು. ಅವನು ತನ್ನ ಶಿಷ್ಯರಲ್ಲಿ ಮೂವರನ್ನು ಅನಂತರ ಒಂದು ಬೆಟ್ಟದ ಮೇಲೆ ತಕ್ಕೊಂಡು ಹೋದನು, ಅಲ್ಲಿ ಅವರ ಮುಂದೆ ಅವನು ತನ್ನನ್ನು ರೂಪಾಂತರಗೊಳಿಸಿಕೊಂಡನು ಮತ್ತು ಹೀಗೆ ರಾಜ್ಯಮಹಿಮೆಯಲ್ಲಿ ಅವನ ಒಂದು ದರ್ಶನವು ಅವರಿಗಾಯಿತು. (ಮತ್ತಾಯ 17:1-9) ಆದರೆ ರಾಜ್ಯವು ಆ ಸಮಯದಲ್ಲಿ ಸ್ಥಾಪಿಸಲ್ಪಡಲಿಲ್ಲ. ಅದು ಯಾವಾಗ ಸಂಭವಿಸಲಿರುವದು?
ಯೇಸುವಿನ ಸಾಮ್ಯಗಳಲ್ಲೊಂದು ಸೂಚಿಸುವದೇನಂದರೆ ಅವನನ್ನು ತಕ್ಷಣವೇ ಮೆಸ್ಸೀಯ ರಾಜನೋಪಾದಿ ಪಟ್ಟಕ್ಕೇರಿಸಲಾಗುವುದಿಲ್ಲ. ಲೂಕ 19:11-15 ರಲ್ಲಿ, ನಾವು ಹೀಗೆ ಓದುತ್ತೇವೆ: “ . . . ಯೇಸು ತಾನು ಯೆರೂಸಲೇಮಿಗೆ ಸಮೀಪವಾಗಿದದ್ದರಿಂದಲೂ ದೇವರ ರಾಜ್ಯವು ಕೂಡಲೆ ಪ್ರತ್ಯಕ್ಷವಾಗುವ ಹಾಗಿದೆ ಎಂದು ಅವರು ಭಾವಿಸಿದ್ದರಿಂದಲೂ ಇನ್ನೂ ಒಂದು ಸಾಮ್ಯವನ್ನು ಹೇಳಿದನು. ಅದೇನಂದರೆ—ಶ್ರೀಮಂತನಾದ ಒಬ್ಬಾನೊಬ್ಬ ಮನುಷ್ಯನು ತಾನು ರಾಜ್ಯಾಧಿಕಾರವನ್ನು ಪಡೆದುಕೊಂಡು ಹಿಂತಿರುಗಿ ಬರಬೇಕೆಂದು ದೂರದೇಶಕ್ಕೆ ಹೊರಟನು. ಹೊರಡುವಾಗ ತನ್ನ ಆಳುಗಳಲ್ಲಿ ಹತ್ತು ಮಂದಿಯನ್ನು ಕರೆದು ಅವರಿಗೆ ಹತ್ತು ಮೊಹರಿಗಳನ್ನು ಕೊಟ್ಟು—ನಾನು ಬರುವ ತನಕ ವ್ಯಾಪಾರ ಮಾಡಿಕೊಂಡಿರ್ರಿ ಎಂದು ಹೇಳಿ ಹೋದನು. . . . ಆ ಮೇಲೆ ಅವನು ರಾಜ್ಯಾಧಿಕಾರವನ್ನು ಪಡಕೊಂಡು ಹಿಂತಿರುಗಿ ಬಂದು ತಾನು ಹಣವನ್ನು ಕೊಟ್ಟಿದ್ದ ಆಳುಗಳು ವ್ಯಾಪಾರದಿಂದ ಎಷೆಷ್ಟು ಲಾಭ ಸಂಪಾದಿಸಿಕೊಂಡಿದ್ದಾರೆಂದು ತಿಳುಕೊಳ್ಳುವದಕ್ಕಾಗಿ ಅವರನ್ನು ತನ್ನ ಬಳಿಗೆ ಕರಿಸಿದನು.”
ಆ ದಿವಸಗಳಲ್ಲಿ ಒಬ್ಬ ಮನುಷ್ಯನು ಇಸ್ರಾಯೇಲಿನಿಂದ ರೋಮಿಗೆ ಪ್ರಯಾಣಿಸಲು, ರಾಜ್ಯಾಧಿಕಾರವನ್ನು ಪಡೆಯುವ ತನಕ ಪಟ್ಟಣದಲ್ಲಿ ಕಾಯಲು ಮತ್ತು ಅರಸನೋಪಾದಿ ತನ್ನ ಸ್ವದೇಶಕ್ಕೆ ಮರಳಲು ತುಂಬಾ ಸಮಯ ತಕ್ಕೊಳ್ಳುತ್ತಿತ್ತು. ಯೇಸುವು “ಶ್ರೀಮಂತನಾದ ಮನುಷ್ಯನಾಗಿದ್ದನು.” ಸ್ವರ್ಗದಲ್ಲಿರುವ ಅವನ ತಂದೆಯಿಂದ ಆತನು ಅರಸನೋಪಾದಿ ಅಧಿಕಾರವನ್ನು ಪಡೆಯಲಿರುವನು, ಆದರೂ ಮೆಸ್ಸೀಯ ರಾಜನೋಪಾದಿ ಕೂಡಲೆ ಅವನು ಪಟ್ಟಕ್ಕೇರಿಸಲ್ಪಡುವುದಿಲ್ಲ. ಅರಸನೋಪಾದಿ ಅವನು ಹಿಂತಿರುಗುವ ಮುಂಚೆ, ಅವನ ಹಿಂಬಾಲಕರು ರಾಜ್ಯದ ಸುವಾರ್ತೆಯನ್ನು ಘೋಷಿಸುವ ಕೆಲಸದ ವ್ಯವಹಾರವನ್ನು ಗಮನಾರ್ಹವಾದ ಸಮಯದ ತನಕ ಮುಂದರಿಸಲಿರುವರು.
ರಾಜ್ಯವು ಬರುವ ವಿಧ
ಅವನ ರಾಜ್ಯವು ಬರುವಂತೆ ದೇವರನ್ನು ಪ್ರೀತಿಸುವವರು ಪ್ರಾರ್ಥಿಸುವಾಗ, ಅವರು ಏನನ್ನು ವಿನಂತಿಸುತ್ತಾರೆ? ನಿಜ ಶಾಂತಿ ಮತ್ತು ಸಮೃದ್ಧತೆಯನ್ನು ತರುತ್ತೇವೆಂಬ ಅವರ ಆಶ್ವಾಸನೆಗಳನ್ನು ಪೂರೈಸಲು ತಪ್ಪಿರುವ ಮಾನವ-ನಿರ್ಮಿತ ಸರಕಾರಿ ವ್ಯವಸ್ಥಾಪನೆಗಳನ್ನು ನಾಶಗೊಳಿಸುವ ಮೂಲಕ ಆ ಸ್ವರ್ಗೀಯ ರಾಜ್ಯವು ನಿರ್ಣಾಯಕ ಕ್ರಮವನ್ನು ತಕ್ಕೊಳ್ಳಲು ಅವರು ನಿಜವಾಗಿ ಬೇಡುತ್ತಾರೆ. ಈ ಬೆಳವಣಿಗೆಗೆ ಕೈತೋರಿಸುತ್ತಾ ಪ್ರವಾದಿ ದಾನಿಯೇಲನು ಹೀಗೆ ಬರೆದನು: “ಆ ರಾಜರ ಕಾಲದಲ್ಲಿ ಪರಲೋಕ ದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮ ಮಾಡಿ ಶಾಶ್ವತವಾಗಿ ನಿಲ್ಲುವದು.” (ದಾನಿಯೇಲ 2:44) ಇದು ಯಾವಾಗ ಸಂಭವಿಸುವದು?
ಮಾನವ ವ್ಯವಹಾರಗಳಲ್ಲಿ ಒಂದು ಅಸಾಧಾರಣವಾದ ಉತ್-ಪವ್ಲನವನ್ನು ನೋಡಲಿರುವವರ ಸಂತತಿಯೊಳಗೆ ಇದು ನಡೆಯುವದೆಂದು ಯೇಸು ಮುಂತಿಳಿಸಿದನು. ಅವನ “ಸಾನ್ನಿಧ್ಯತೆಯ” ಕುರಿತಾಗಿ, ಯೇಸು ಒಂದು ಸಂಘಟಿತ “ಸೂಚನೆ” ಯನ್ನು ಕೊಟ್ಟನು, ಇದರಲ್ಲಿ ಅಸಾಮಾನ್ಯವಾದ ಯುದ್ಧಗಳು, ಭೂಕಂಪಗಳು, ಬರಗಾಲಗಳು, ಅಂಟುರೋಗಗಳು—ಹೌದು, ದೇವರ ರಾಜ್ಯದ ಸುವಾರ್ತೆಯ ಭೂವ್ಯಾಪಕ ಸಾರುವಿಕೆಯೂ ಒಳಗೊಂಡಿದೆ.—ಮತ್ತಾಯ 24, 25 ಅಧ್ಯಾಯಗಳು; ಮಾರ್ಕ 13 ನೇ ಅಧ್ಯಾಯ; ಲೂಕ 21 ನೇ ಅಧ್ಯಾಯ.
ನಮ್ಮ 20 ನೇ ಶತಮಾನದಲ್ಲಿ—ಈಗಲೇ ನಡೆಯುತ್ತಿರುವ ಘಟನೆಗಳನ್ನು ಯೇಸುವಿನ ಪ್ರವಾದನೆಯು ಒಳಗೂಡಿಸುತ್ತದೆ. ಆದಕಾರಣ, ಮಾನವಕುಲಕ್ಕೆ ಭವ್ಯ ಆಶೀರ್ವಾದಗಳನ್ನು ತರುವ ದೇವರ ರಾಜ್ಯವು ಸಮೀಪದಲ್ಲಿದೆ. ರಾಜ್ಯದ ಆಳಿಕ್ವೆಯ ಪ್ರಯೋಜನಗಳನ್ನು ಆನಂದಿಸುವವರಲ್ಲಿ ನೀವು ಇರಬಹುದು. ಆದರೆ ದೇವರ ರಾಜ್ಯ ನಿಮಗೆ ಮತ್ತು ನಿಮ್ಮ ಪ್ರಿಯರಿಗೆ ಯಾವ ಅರ್ಥದಲ್ಲಿರುವುದು?
ರಾಜ್ಯಾದಾಳಿಕೆಯ ಆಶೀರ್ವಾದಗಳು
ಭೂಸುತ್ತಲೂ ಸಂತೋಷವು ಚಾಲ್ತಿಯಲ್ಲಿರುವುದು. “ಒಂದು ನೂತನಾಕಾಶಮಂಡಲ”—ಸ್ವರ್ಗೀಯ ರಾಜ್ಯ—ದ ಕೆಳಗೆ, “ನೂತನ ಭೂಮಂಡಲ”—ರಾಜ್ಯದ ವಿಧೇಯ ಪ್ರಜೆಗಳ ಒಂದು ಭೌಗೋಲಿಕ ಸಮಾಜವು—ಇರುವುದು. “ದೇವರು ತಾನೇ ಅವರ ಸಂಗಡ ಇರುವನು,” ಎಂದು ಬರೆದನು ಅಪೊಸ್ತಲ ಯೋಹಾನನು. “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು.” ಆಗ ಸಂತೋಷವೊಂದನ್ನು ಬಿಟ್ಟು ಬೇರೆ ಯಾವುದಕ್ಕೂ ಕಾರಣವಿರುವುದಿಲ್ಲ, ಯಾಕಂದರೆ “ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.”—ಪ್ರಕಟನೆ 21:1-4.
ಇನ್ನು ಮುಂದೆ ಮರಣವಿರುವದಿಲ್ಲ. ದುಃಖದ ಈ ಬೀಕರ ಕಾರಣವು ಇನ್ನು ಮುಂದೆ ನಮ್ಮ ಮಿತ್ರರನ್ನು ಮತ್ತು ಪ್ರಿಯರನ್ನು ಕಸಿದುಕೊಳ್ಳುವುದಿಲ್ಲ. “ಮರಣವು ಕಡೇ ಶತ್ರುವಾಗಿ ನಿವೃತ್ತಿಯಾಗುವುದು.” (1 ಕೊರಿಂಥ 15:26) ದೇವರ ನೆನಪಿನಲ್ಲಿರುವವರ ಪುನರುತ್ಥಾನಗಳಿಂದ ಶವಸಂಸ್ಕಾರಗಳು ಸ್ಥಾನಪಲ್ಲಟಗೊಳ್ಳುವಾಗ ಅಲ್ಲಿ ಎಷ್ಟೊಂದು ಆನಂದವಿರುವುದು!—ಯೋಹಾನ 5:28, 29.
ರೋಗ ಮತ್ತು ದುರ್ಬಲತೆಗಳ ಬದಲಿಗೆ ತುಡಿಯುತ್ತಿರುವ ಆರೋಗ್ಯ. ಇನ್ನು ಮುಂದೆ ಶಾರೀರಿಕ ಮತ್ತು ಮಾನಸಿಕ ಅನಾರೋಗ್ಯಗಳಿಂದ ಪೀಡಿತರಾದವರಿಂದ ತುಂಬಿರುವ ಆಸ್ಪತ್ರೆ ಹಾಸಿಗೆಗಳು ಇರುವದಿಲ್ಲ. ಕುಶಲಿಯಾದ ವೈದ್ಯ ಯೇಸು ಕ್ರಿಸ್ತನು “ಜನಾಂಗದವರನ್ನು ವಾಸಿಮಾಡುವದಕ್ಕೆ” ಆತನ ಪ್ರಾಯಶ್ಚಿತ್ತ ಯಜ್ಞದ ಮೌಲ್ಯವನ್ನು ಬಳಸುವನು. (ಪ್ರಕಟನೆ 22:1, 2; ಮತ್ತಾಯ 20:28; 1 ಯೋಹಾನ 2:1, 2) ಭೂಮಿಯಲ್ಲಿದ್ದಾಗ ಅವನು ನಡಿಸಿದಂತಹ ಗುಣಪಡಿಸುವಿಕೆಗಳು, ರಾಜ್ಯದ ಮೂಲಕ ಅವನೇನನ್ನು ಮಾಡಲಿದ್ದಾನೋ ಅದರ ಕೇವಲ ಒಂದು ನಮೂನೆಯಾಗಿದೆ.—ಯೆಶಾಯ 33:24 ಹೋಲಿಸಿರಿ; ಮತ್ತಾಯ 14:14.
ಆಹಾರ ಸಾಮಗ್ರಿಗಳ ಪೂರೈಕೆಯು ಹೇರಳವಾಗಿರುವುವು. ಕೀರ್ತನೆಗಾರನು ಅಂದಂತೆ, “ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗುವದು.” (ಕೀರ್ತನೆ 72:16) ಇದಕ್ಕೆ ಯೆಶಾಯನ ಪ್ರವಾದನೆ ಕೂಡಿಸುವದು: “ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲ ಜನಾಂಗಗಳಿಗೂ ಸಾರವತ್ತಾದ ಮೃಷ್ಟಾನದಿಂದಲೂ ಮಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು.” (ಯೆಶಾಯ 25:6) ಖಂಡಿತವಾಗಿ, ರಾಜ್ಯಾದಾಳಿಕೆಯ ಕೆಳಗೆ ಬರಗಾಲವು ಭೂಮಿಯ ನಿವಾಸಿಗಳನ್ನು ಬಾಧಿಸುವುದಿಲ್ಲ.
ಇಡೀ ಭೂಮಿಯು ಒಂದು ಪರದೈಸವಾಗುವುದು. ಒಬ್ಬ ಪಶ್ಚಾತ್ತಾಪಿ ದುಷ್ಕರ್ಮಿಗೆ ಯೇಸು ಮಾಡಿದ ಆಶ್ವಾಸನೆಯು ಹೀಗೆ ನೆರವೇರಲಿದೆ: “ನನ್ನ ಸಂಗಡ ಪರದೈಸದಲ್ಲಿರುವಿ.” (ಲೂಕ 23:43) ದುಷ್ಟತನದಿಂದ ಶುಚಿಗೊಂಡಿರುವ ಮತ್ತು ಒಂದು ಆಹ್ಲಾದಕರ ತೋಟದಂತಹ ಭೌಗೋಲಿಕವಾಗಿ ಪರಿವರ್ತಿಸಲ್ಪಟ್ಟ ಈ ಭೂಮಿಯ ಮೇಲೆ ನೀವೂ ನಿತ್ಯಜೀವವನ್ನು ಆನಂದಿಸಬಹುದು.—ಯೋಹಾನ 17:3.
ಈ ಅದ್ಭುತಕರ ಪ್ರತೀಕ್ಷೆಗಳು ಎಲ್ಲಾ ವಿಧೇಯ ಮಾನವಕುಲದವರ ಮುಂದೆ ಇಡಲ್ಪಟ್ಟಿವೆ. ಯೆಹೋವನ ಪ್ರೇರಿತ ವಾಕ್ಯವಾದ ಬೈಬಲು ಈ ಆಶೀರ್ವದಿತ ಆಶ್ವಾಸನೆಗಳನ್ನು ಕೊಡುತ್ತದೆ. ಮತ್ತು ದೇವರ ರಾಜ್ಯವೆಂದರೆ ನಿಮಗೆ ಇದೆಲ್ಲವುಗಳು ಇರುವ ಅರ್ಥದಲ್ಲಿರಬಲ್ಲದು. (w92 3/15)
[ಪುಟ 7 ರಲ್ಲಿರುವ ಚಿತ್ರ]
ದೇವರ ರಾಜ್ಯದ ಕುರಿತು ಯೇಸು ಏನಂದನೋ ಅದನ್ನು ನೀವು ನಂಬುತ್ತೀರೋ?