ದೇವ-ದತ್ತ ಸ್ವಾತಂತ್ರ್ಯದ ಉದ್ದೇಶವನ್ನು ವ್ಯರ್ಥಮಾಡಿಕೊಳ್ಳಬೇಡಿರಿ
“ಯೆಹೋವನ ಆತ್ಮವು ಎಲ್ಲಿದೆಯೋ ಅಲ್ಲಿ ಸ್ವಾತಂತ್ರ್ಯ ಇದೆ.”—2 ಕೊರಿಂಥ 3:17, NW.
1. ಯೆಶಾಯ 65:13, 14 ಯೆಹೋವನ ಸಾಕ್ಷಿಗಳಿಗೆ ಏಕೆ ಅನ್ವಯಿಸುತ್ತದೆ?
ಯೆಹೋವನು ಸ್ವಾತಂತ್ರ್ಯದ ದೇವರಾಗಿದ್ದಾನೆ. ಮತ್ತು ದೇವ-ದತ್ತ ಸ್ವಾತಂತ್ರ್ಯವು ಎಂಥ ಒಂದು ಆಶೀರ್ವಾದವಾಗಿರುತ್ತದೆ! ಅವನ ಸಮರ್ಪಿತ ಸೇವಕರಿಗೆ ಅಂಥ ಸ್ವಾತಂತ್ರ್ಯವಿರುವುದರಿಂದ, ಸಾರ್ವಭೌಮ ಪ್ರಭುವಾದ ಯೆಹೋವನ ಈ ಮಾತುಗಳು ಅವರಿಗೆ ಅನ್ವಯಿಸುತ್ತವೆ: “ಇಗೋ, ನನ್ನ ಸೇವಕರು ಊಟಮಾಡುವರು, ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ನೀವು ದಾಹಗೊಳ್ಳುವಿರಿ; ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು, ನೀವು ಆಶಾಭಂಗಪಡುವಿರಿ. ಇಗೋ, ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು, ನೀವೋ ಮನೋ-ವ್ಯಥೆಯಿಂದ ಮೊರೆಯಿಟ್ಟು, ಆತ್ಮಕ್ಲೇಶದಿಂದ ಗೋಳಾಡುವಿರಿ.”—ಯೆಶಾಯ 65:13, 14.
2. ಯೆಹೋವನ ಜನರು ಆತ್ಮಿಕವಾಗಿ ಸಮೃದ್ಧರಾಗಿರುವುದು ಏಕೆ?
2 ದೇವರ ಜನರು ಈ ಆತ್ಮಿಕತೆಯ ಸಮೃದ್ಧ ಸ್ಥಿತಿಯನ್ನು ಆನಂದಿಸುತ್ತಾರೆ ಏಕೆಂದರೆ ಅವರು ಅವನ ಆತ್ಮದಿಂದ ಯಾ ಕಾರ್ಯಕಾರಿ ಶಕಿಯ್ತಿಂದ ನಡಿಸಲ್ಪಡುತ್ತಿದ್ದಾರೆ. ಅಪೊಸ್ತಲ ಪೌಲನು ಹೇಳಿದ್ದು: “ಯೆಹೋವನು ಆತ್ಮನಾಗಿದ್ದಾನೆ; ಯೆಹೋವನ ಆತ್ಮವು ಎಲ್ಲಿದೆಯೋ ಅಲ್ಲಿ ಸ್ವಾತಂತ್ರ್ಯ ಇದೆ.” (2 ಕೊರಿಂಥ 3:17, NW.) ದೇವ-ದತ್ತ ಸ್ವಾತಂತ್ರ್ಯದ ಉದ್ದೇಶವೇನು? ಮತ್ತು ಅದನ್ನು ಪೂರ್ಣವಾಗಿ ಉಪಯೋಗಿಸುವರೆ ನಮ್ಮಿಂದ ಏನು ಅಪೇಕ್ಷಿಸಲ್ಪಡುತ್ತದೆ?
ದೇವರಿಗಿರುವ ಸ್ವಾತಂತ್ರ್ಯ
3. ದೇವರಿಗೆ ಯಾವ ರೀತಿಯ ಸ್ವಾತಂತ್ರ್ಯವಿದೆ, ಮತ್ತು ಯಾಕೆ?
3 ಯೆಹೋವನಿಗೊಬ್ಬನಿಗೆ ಮಾತ್ರ ಸಂಪೂರ್ಣ ಸ್ವಾತಂತ್ರ್ಯವು ಇದೆ. ಅವನ ಸೃಷ್ಟಿಜೀವಿಗಳಲ್ಲಿ ಯಾರೂ ಅವನ ಸ್ವಾತಂತ್ರ್ಯವನ್ನು ಮಿತಗೊಳಿಸಲು ಶಕ್ಯರಲ್ಲ ಏಕೆಂದರೆ ಅವನು ಸರ್ವಶಕ್ತನಾದ ದೇವರು ಮತ್ತು ವಿಶ್ವ ಸಾರ್ವಭೌಮನಾಗಿದ್ದಾನೆ. ನಂಬಿಗಸ್ತ ಮನುಷ್ಯ ಯೋಬನಂದಂತೆ, “ಆತನನ್ನು ತಳ್ಳುವವರು ಯಾರು? ನೀನು ಏನು ಮಾಡುತ್ತಿ ಎಂದು ಆತನನ್ನು ಕೇಳುವವರಾರು?” (ಯೋಬ 9:12) ತದ್ರೀತಿಯಲ್ಲಿ ಬಬಿಲೊನ್ಯ ಅರಸನಾದ ನೆಬೂಕದ್ನೆಚ್ಚರನು ಇದನ್ನು ಅಂಗೀಕರಿಸುವಂತೆ ಬಲಾತ್ಕರಿಸಲ್ಪಟ್ಟನು: “ಯಾರೂ ಆತನ [ದೇವರ] ಕೈಯನ್ನು ಹಿಂದಕ್ಕೆ ತಳ್ಳಲಾರರು, ನೀನು ಏನು ಮಾಡುತ್ತೀ ಎಂದು ಯಾರೂ ಕೇಳಲಾರರು.”—ದಾನಿಯೇಲ 4:35.
4. ಯೆಹೋವನು ತನ್ನ ಸ್ವಾತಂತ್ರ್ಯವನ್ನು ಹೇಗೆ ಮೇರೆಯೊಳಗೆ ಇಡುತ್ತಾನೆ?
4 ಆದಾಗ್ಯೂ, ಯೆಹೋವನ ಸ್ವಂತ ನೀತಿಯುಕ್ತ ಸೂತ್ರಗಳು ಆ ಸಂಪೂರ್ಣ ಸ್ವಾತಂತ್ರ್ಯವನ್ನು ಮೇರೆಯೊಳಗೆ ಇಡುತ್ತವೆ. “ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವವನಲ್ಲವೇ?” ಎಂದು ಕೇಳುತ್ತಾ ಸೊದೋಮಿನ ನಿವಾಸಿಗಳ ಕುರಿತಾಗಿ ಅಬ್ರಹಾಮನು ಚಿಂತೆಯನ್ನು ವ್ಯಕ್ತಪಡಿಸಿದಾಗ ಇದು ಚಿತ್ರಿತವಾಗುತ್ತದೆ. ದೇವರ ಪ್ರತಿಕ್ರಿಯೆಯು ಸೂಚಿಸುತ್ತದೇನಂದರೆ ಸರಿಯಾದದ್ದನ್ನು ಮಾಡುವ ಜವಾಬ್ದಾರಿಯನ್ನು ಅವನು ಒಪ್ಪಿಕೊಳ್ಳುತ್ತಾನೆ. ಅದರಲ್ಲಿ ಯಾವ ನೀತಿಯುಳ್ಳ ನಿವಾಸಿಳು ಉಳಿದಿದ್ದರೆ ಅವನು ಸೊದೋಮನ್ನು ನಾಶಮಾಡುತ್ತಿರಲಿಲ್ಲ. (ಆದಿಕಾಂಡ 18:22-33) ಅವನ ಪ್ರೀತಿ ಮತ್ತು ವಿವೇಕ ಅವನನ್ನು ಕೋಪಿಸುವುದರಲ್ಲಿ ನಿಧಾನಿಯಾಗಿ ಮಾಡುವುದರಿಂದ ಮತ್ತು ಅವನು ಸ್ವ-ನಿಯಂತ್ರಣವನ್ನು ಕಾಪಾಡಿಕೊಳ್ಳುವುದರಿಂದ, ದೇವರು ತನ್ನ ಸ್ವಾತಂತ್ರ್ಯವನ್ನು ಕೂಡ ಮೇರೆಯೊಳಗೆ ಇಡುತ್ತಾನೆ.—ಯೆಶಾಯ 42:14.
ಮಾನವ ಸ್ವಾತಂತ್ರ್ಯದ ಪರಿಮಿತಿಗಳು
5. ಮಾನವ ಸ್ವಾತಂತ್ರ್ಯವನ್ನು ಮಿತಗೊಳಿಸುವ ಕೆಲವು ಅಂಶಗಳು ಯಾವುವು?
5 ಯೆಹೋವನಿಗೆ ಸಂಪೂರ್ಣ ಸ್ವಾತಂತ್ರ್ಯವಿದ್ದರೂ, ಇತರರೆಲ್ಲರೂ ತಮ್ಮ ಸ್ವಭಾವ, ಸಾಮರ್ಥ್ಯಗಳು ಮತ್ತು ನಿವಾಸದ ಕ್ಷೇತ್ರ ಹಾಗೂ ಪಾಪಪೂರ್ಣ ಮಾನವರ ಮಿತಿಗೊಳಗಾದ ಸದ್ಯದ ಆಯುಷ್ಕಾಲದಂತಹ ವಾಸ್ತವತೆಗಳ ಮಿತಿಗಳೊಳಗೆ ಕಾರ್ಯನಡಿಸುತ್ತಾರೆ. ಯೆಹೋವನು ಮನುಷ್ಯನಿಗಾಗಿ ಇಟ್ಟ ಕ್ಷೇತ್ರದೊಳಗೆ ಕಾರ್ಯನಡಿಸಲು ಪರಿಪೂರ್ಣ ಸ್ವಾತಂತ್ರ್ಯದೊಂದಿಗೆ ದೇವರು ಮನುಷ್ಯನನ್ನು ಸೃಷ್ಟಿಮಾಡಿದನು. ಮಾನವ ಸ್ವಾತಂತ್ರ್ಯವು ಮಿತಿಗೊಳಪಟ್ಟಿದೆಯೇ ಹೊರತು ಸಂಪೂರ್ಣವಾಗಿರುವದಿಲ್ಲ ಎಂಬುದಕ್ಕೆ ಇತರ ಅನೇಕ ಕಾರಣಗಳು ಅಲ್ಲಿರುತ್ತವೆ.
6. ದೇವರಿಗೆ ಹೊಣೆಗಾರಿಕೆಯು ನಮ್ಮ ಸ್ವಾತಂತ್ರ್ಯದ ಮೇಲೆ ಯಾವ ಪ್ರಭಾವವನ್ನು ಬೀರುತ್ತದೆ?
6 ಮೊದಲಾಗಿ, ಮಾನವ ಸ್ವಾತಂತ್ರ್ಯವು ಮಿತಿಯುಳ್ಳದ್ದಾಗಿದೆ ಯಾಕಂದರೆ ಅವನ ಉದ್ದೇಶವನ್ನು ಪೂರೈಸಲಿಕ್ಕಾಗಿ ದೇವರು ಮಾನವನನ್ನು ಸೃಷ್ಟಿಮಾಡಿದನು. ಯೆಹೋವನು ‘ಪ್ರಭಾವ ಮಾನಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದಾನೆ; ಸಮಸ್ತವನ್ನು ಸೃಷ್ಟಿಸಿದಾತನು ಆತನೇ; ಎಲ್ಲವು ಆತನ ಚಿತ್ತದಿಂದಲೇ ಇದ್ದವು, ಆತನ ಚಿತ್ತದಿಂದಲೇ ನಿರ್ಮಿತವಾದವು.’ (ಪ್ರಕಟನೆ 4:11) ಆದುದರಿಂದ ಮಾನವರು ನಡಿಸಲ್ಪಡಬೇಕಾದ ನಿಯಮಗಳನ್ನು ತಕ್ಕದ್ದಾಗಿ ಮಾಡಿರುವ, ಆತನ ನಿರ್ಮಾಣಿಕನಿಗೆ ಮಾನವನು ಲೆಕ್ಕ ಸಲ್ಲಿಸಲಿಕ್ಕಿದೆ. ಪುರಾತನ ಇಸ್ರಾಯೇಲಿನಲ್ಲಿ ಮೋಶೆಯ ನಿಯಮದ ಕೆಳಗೆ, ಆತನ ನಾಮವನ್ನು ನಿಂದಿಸುವ ಅಥವಾ ಸಬ್ಬತ್ ನಿಯಮವನ್ನು ಮುರಿಯುವ ವ್ಯಕ್ತಿಗಳನ್ನು ಮರಣಕ್ಕೆ ಒಳಪಡಿಸುವದನ್ನು ದೇವರು ಆವಶ್ಯಕತೆಯದ್ದಾಗಿ ಮಾಡಿದನು. (ವಿಮೋಚನಕಾಂಡ 20:7; 31:14, 15; ಯಾಜಕಕಾಂಡ 24:13-16; ಅರಣ್ಯಕಾಂಡ 15:32-36) ಕ್ರೈಸ್ತರಾಗಿರುವ ನಾವು ನಿಯಮಶಾಸ್ತ್ರದ ಕೆಳಗೆ ಇಲ್ಲದಿರುವುದಾದರೂ, ನಮ್ಮ ಸ್ವಾತಂತ್ರ್ಯವು ಸೀಮಿತವಾಗಿದೆ, ಯಾಕಂದರೆ ನಾವು, ನಮ್ಮ ನ್ಯಾಯಾಧಿಪತಿ, ವಿಧಿವಿಧಾಯಕನು ಮತ್ತು ರಾಜನು ಆದ ಯೆಹೋವನಿಗೆ ಲೆಕ್ಕ ಒಪ್ಪಿಸಬೇಕಾಗಿದೆ.—ಯೆಶಾಯ 33:22; ರೋಮಾಪುರ 14:12.
7, 8. (ಎ) ಭೌತಿಕ ನಿಯಮಗಳು ಮಾನವ ಸ್ವಾತಂತ್ರ್ಯವನ್ನು ಹೇಗೆ ಮಿತಗೊಳಿಸುತ್ತವೆ? (ಬಿ) ಮಾನವರೋಪಾದಿ ನಮ್ಮ ಸ್ವಾತಂತ್ರ್ಯವನ್ನು ದೇವರ ಇನ್ಯಾವ ನಿಯಮಗಳು ಮಿತಗೊಳಿಸುತ್ತವೆ?
7 ಎರಡನೆಯದಾಗಿ, ದೇವರ ಭೌತಿಕ ನಿಯಮಗಳಿಂದಾಗಿ ಮಾನವ ಸ್ವಾತಂತ್ರ್ಯವು ಮಿತವುಳ್ಳದ್ದಾಗಿದೆ. ಉದಾಹರಣೆಗೆ ಗುರುತ್ವಾಕರ್ಷಣೆಯ ನಿಯಮದಿಂದಾಗಿ, ಒಬ್ಬ ಮನುಷ್ಯನು ಒಂದು ಗಗನಚುಂಬಿ ಕಟ್ಟಡದಿಂದ ಹಾರಿದರೆ, ತನ್ನನ್ನೇ ಗಾಯಗೊಳಿಸಿಕೊಳ್ಳದೆ ಯಾ ಕೊಲ್ಲಲ್ಪಡದೆ ಇರುವದರ ಹೊರತು ಇದನ್ನು ಮಾಡಲಾರನು. ಸ್ಪಷ್ಟವಾಗಿಗಿ, ದೇವರ ಭೌತಿಕ ನಿಯಮಗಳು ನಿರ್ದಿಷ್ಟ ಸಂಗತಿಗಳನ್ನು ಮಾಡಲು ಮಾನವನ ಸ್ವಾತಂತ್ರ್ಯವನ್ನು ಮಿತಿಗೊಳಪಡಿಸುತ್ತವೆ.
8 ಮೂರನೆಯದಾಗಿ, ದೇವರ ನೈತಿಕ ನಿಯಮಗಳಿಂದಾಗಿ ಮಾನವ ಸ್ವಾತಂತ್ರ್ಯವು ಮಿತವಾಗಿದೆ. ಗಲಾತ್ಯ 6:7, 8 ರಲ್ಲಿ ಪೌಲನು ಬರೆದಿರುವದರ ನೆರವೇರಿಕೆಯನ್ನು ನೀವು ಹೆಚ್ಚಿನಾಂಶ ಅವಲೋಕಿಸಿರಬಹುದು: “ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ಏನನ್ನು ಬಿತುತ್ತಾನೋ ಅದನ್ನೇ ಕೊಯ್ಯಬೇಕು. ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು. ಆತ್ಮನನ್ನು ಕುರಿತು ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.” ನಿರ್ವಿವಾದವಾಗಿ, ಯೆಹೋವ ದೇವರ ನೈತಿಕ ನಿಯಮಗಳೂ ನಮ್ಮ ಸ್ವಾತಂತ್ರ್ಯವನ್ನು ಮಿತಗೊಳಿಸುತ್ತವೆ, ಆದರೆ ನಾವು ಜೀವವನ್ನು ಪಡೆಯಲು ನಾವು ಅವುಗಳಿಗೆ ವಿಧೇಯರಾಗುವ ಜರೂರಿಯಿದೆ.
9. ನಾವು ಮಾನವ ಸಮಾಜದ ಭಾಗವಾಗಿರುವುದು ನಮ್ಮ ಸ್ವಾತಂತ್ರ್ಯವನ್ನು ಹೇಗೆ ಮಿತಗೊಳಿಸುತ್ತದೆ?
9 ನಾಲ್ಕನೆಯದಾಗಿ, ಮಾನವ ಸ್ವಾತಂತ್ರ್ಯವು ಮಿತಗೊಳಪಡಿಸಲ್ಪಟ್ಟಿದೆ ಯಾಕಂದರೆ ಅವನು ಮಾನವ ಸಮಾಜದ ಒಂದು ಭಾಗವಾಗಿರುತ್ತಾನೆ. ಈ ಕಾರಣದಿಂದ, ಇತರರ ಸ್ವಾತಂತ್ರ್ಯದೊಂದಿಗೆ ಅನ್ಯಾಯವಾಗಿ ಅಡ್ಡವಾಗದಷ್ಟರ ಮಟ್ಟಿಗೆ ಅವನಿಗೆ ಸ್ವಾತಂತ್ರ್ಯವಿರಬೇಕಾಗುತ್ತದೆ. ಕ್ರೈಸ್ತರು ಸರಕಾರಿ “ಮೇಲಧಿಕಾರಿಗಳಿಗೆ” ಅಧೀನರಾಗಿರಬೇಕು, ನಾವು ಎಷ್ಟರ ತನಕ ದೇವರ ನಿಯಮವನ್ನು ಮುರಿಯುವುದಿಲ್ಲವೋ ಅಷ್ಟರ ತನಕ ಅವುಗಳಿಗೆ ವಿಧೇಯರಾಗಬೇಕು. (ರೋಮಾಪುರ 13:1; ಅ.ಕೃತ್ಯಗಳು 5:29) ಉದಾಹರಣೆಗೆ, ಕರ ಸಲ್ಲಿಸುವ, ಎಷ್ಟೊಂದು ವೇಗದಲ್ಲಿ ವಾಹನಗಳನ್ನು ನಡಿಸಬೇಕೆಂಬುದರ ಕುರಿತಾದ ಮತ್ತು ಇತ್ಯಾದಿ ಇತರ ನಿಯಮಗಳಿಗೆ ವಿಧೇಯರಾಗಲೇಬೇಕು. “ಕೈಸರನ” ಅಂಥ ನಿಯಮಗಳಿಗೆ ನಾವು ವಿಧೇಯರಾಗತಕ್ಕದ್ದು ಎಂಬ ವಾಸ್ತವಾಂಶವು ತಾನೇ ದೇವ-ದತ್ತ ನಮ್ಮ ಸ್ವಾತಂತ್ರ್ಯವು ಸಂಪೂರ್ಣವಲ್ಲ ಎಂದು ತೋರಿಸುತ್ತದೆ.—ಮಾರ್ಕ 12:17; ರೋಮಾಪುರ 13:7.
ಸಂಬಂಧಕ ಸ್ವಾತಂತ್ರ್ಯ ಏಕೆ?
10, 11. ಯೆಹೋವನು ಮಾನವರಿಗೆ ಸಂಬಂಧಕ ಸ್ವಾತಂತ್ರ್ಯವನ್ನು ಏಕೆ ಕೊಟ್ಟನು?
10 ದೇವರು ಮಾನವನಿಗೆ ಸಂಬಂಧಕ ಸ್ವಾತಂತ್ರ್ಯವನ್ನು ಏಕೆ ಕೊಟ್ಟನು? ಅವರ ಒಳ್ಳೆಯ ನುಡಿಗಳ ಮತ್ತು ನಡತೆಯ ಮೂಲಕ ಅವನಿಗೆ ಘನತೆ ಮತ್ತು ಸ್ತುತಿಯನ್ನು ತರಬಹುದಾದ ಬುದ್ಧಿಜೀವಿಗಳು ಸೃಷ್ಟಿಕರ್ತನಿಗೆ ಭೂಮಿಯ ಮೇಲೆ ಇರುವಂತಹದ್ದು ಒಂದು ಕಾರಣವಾಗಿತ್ತು. ಮಾನವರು ಇದನ್ನು ಮಾಡಶಕ್ತರಾದರೂ, ಪ್ರಾಣಿಗಳು ಇದನ್ನು ಮಾಡಶಕ್ತರಲ್ಲ. ಹುಟ್ಟರಿವಿನಿಂದ ನಡಿಸಲ್ಪಡುವ ಪ್ರಾಣಿಗಳು, ನೈತಿಕ ನಡತೆಯ ಕುರಿತು ಏನೂ ಬಲ್ಲವರಲ್ಲ. ನೀವು ಒಂದು ನಾಯಿಗೆ ಏನಾದರೂ ತಕ್ಕೊಳ್ಳದಿರುವಂತೆ ತರಬೇತು ನೀಡಬಹುದು, ಆದರೆ ಕಳ್ಳತನ ಮಾಡುವುದರ ತಪ್ಪು ಏನೆಂದು ನೀವು ಅದಕ್ಕೆ ಕಲಿಸಶಕ್ತರಾಗಿರುವುದಿಲ್ಲ. ಒಂದು ಪ್ರಾಣಿಗೆ ಅದರ ಕಾರ್ಯಗಳನ್ನು ಕಾರ್ಯಕ್ರಮ ನಿಗದಿಗೊಳಿಸಿ (ಪ್ರೋಗ್ರಾಮ್ ಮಾಡಿ) ಹಾಕುವಂತೆ ಅದಿರಬಹುದು, ಆದರೆ ದೇವರಿಗೆ ಸ್ತುತಿ ಮತ್ತು ಗೌರವವನ್ನು ತರುವ ತೀರ್ಮಾನಗಳನ್ನು ಅದು ಮಾಡಶಕ್ತವಾಗಿಲ್ಲ, ಆದರೆ ಮನುಷ್ಯನಾದರೋ ಪ್ರೀತಿಯ ಮತ್ತು ಗಣ್ಯತೆಯ ಕಾರಣದಿಂದ ತನ್ನ ರಚಕನನ್ನು ಸೇವಿಸುವಂತೆ ಸ್ವಾತಂತ್ರ್ಯದಿಂದ ಆಯ್ಕೆಯನ್ನು ಮಾಡಶಕ್ತನು.
11 ದೇವರು ಮಾನವನ ಪ್ರಯೋಜನಕ್ಕಾಗಿ ಮತ್ತು ಸಂತೋಷಕ್ಕಾಗಿ ಕೂಡ ಈ ಸ್ವಾತಂತ್ರ್ಯವನ್ನು ಕೊಡುತ್ತಾನೆ. ರಚನಾತ್ಮಕ ಮತ್ತು ಸಂಶೋಧಕ, ದಯಾಪರತೆ ಮತ್ತು ಸಹಕಾರಿ ಮನೋಭಾವದವರಾಗಿರುವ ಮೂಲಕ ಅವರು ತಮ್ಮ ಸಂಬಂಧಕ ಸ್ವಾತಂತ್ರ್ಯವನ್ನು ಚಲಾಯಿಸಬಹುದು. ತಮ್ಮ ಕಸುಬು ಮತ್ತು ವಾಸಸ್ಥಾನದ ಸ್ಥಳದಂತಹ ವಿಷಯಗಳಲ್ಲಿ ಕೂಡ ಮಾನವರಿಗೆ ಆಯ್ಕೆಯ ಸ್ವಾತಂತ್ರವಿರುತ್ತದೆ. ಇಂದು, ಅರ್ಥಿಕ ಮತ್ತು ರಾಜಕೀಯ ವಾಸ್ತವಾಂಶಗಳು ಕೆಲವೊಮ್ಮೆ ಆ ಆಯ್ಕೆಯ ಸ್ವಾತಂತ್ರ್ಯವನ್ನು ಸೀಮಿತಗೊಳಿಸುತ್ತದೆ, ಆದರೆ ಅದು ಮಾನವ ದುರಾಶೆಯ ಕಾರಣದಿಂದಲೇ ಹೊರತು, ಮಾನವ ಕುಲವನ್ನು ಮೂಲದಲ್ಲಿ ದೇವರು ರಚಿಸಿದ ವಿಧದಿಂದಾಗಿ ಅಲ್ಲ.
12. ಅಧಿಕಾಂಶ ಮಾನವ ಕುಲವು ಏಕೆ ದಾಸತ್ವದಲ್ಲಿದೆ?
12 ಮಾನವರಿಗೆ ಯೆಹೋವನು ಬಹಳಷ್ಟು ಸ್ವಾತಂತ್ರ್ಯವನ್ನು ಕೊಟ್ಟಿರುವನಾದರೂ, ಬಹು ಸಂಖ್ಯಾತರು ಇಂದು ಕಂಗೆಡಿಸುವ ಬಂಧನದಲ್ಲಿರುತ್ತಾರೆ. ಏನು ಸಂಭವಿಸಿತು? ಮೊದಲನೆಯ ಮಾನವ ಜೋಡಿಯಾದ ಆದಾಮ ಹವ್ವರು ದೇವ-ದತ್ತ ಸ್ವಾತಂತ್ರ್ಯದ ಉದ್ದೇಶವನ್ನು ಕಳೆದುಕೊಂಡರು. ಅವರು ತಮ್ಮ ಸ್ವಾತಂತ್ರ್ಯದ ದೈವಿಕ ಮಿತಿಗಳನ್ನು ದಾಟಿ ಹೊರಗೆ ಹೋದರು ಮತ್ತು ಯೆಹೋವನು ಸಾರ್ವಭೌಮ ಪ್ರಭುವಿನೋಪಾದಿ ಅವರ ಮೇಲೆ ದೇವರ ಹಕ್ಕಿನ ಆಡಳಿತೆಗೆ ಸವಾಲನ್ನೆಸೆದರು. (ಆದಿಕಾಂಡ 3:1-7; ಯೆರೆಮೀಯ 10:10; 50:31) ದೇವರನ್ನು ಘನಪಡಿಸುವುದರಲ್ಲಿ ತಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸುವುದರಲ್ಲಿ ಸಂತೃಪ್ತರಾಗದೆ, ಸರಿ ಯಾವುದು ಮತ್ತು ತಪ್ಪು ಯಾವುದು ಎಂಬುದನ್ನು ಸ್ವತಂತ್ರವಾಗಿ ನಿರ್ಣಯಿಸಲು, ಅವರು ಅದನ್ನು ಸ್ವಾರ್ಥತೆಯಿಂದ ಬಳಸಿದರು, ಆ ಮೂಲಕ ಯೆಹೋವನ ವಿರುದ್ಧವಾಗಿರುವ ಅವನ ದಂಗೆಯಲ್ಲಿ ಸೈತಾನನೊಂದಿಗೆ ಕೂಡಿಕೊಂಡರು. ಆದಾಗ್ಯೂ, ಅಧಿಕ ಸ್ವಾತಂತ್ರ್ಯವನ್ನು ಪಡೆಯುವುದರ ಬದಲು, ಪಾಪಿಗಳಾದ ಆದಾಮ, ಹವ್ವರು ಕಠಿಣಕರ ನಿರ್ಬಂಧಗಳಿಗೆ ಮತ್ತು ದಾಸ್ವತಕ್ಕೆ ಅಧೀನರಾದರು, ಹೀಗೆ ಅವರ ಸ್ವಾತಂತ್ರ್ಯದಲ್ಲಿ ಕುಂದುಂಟಾಯಿತು ಮತ್ತು ಕೊನೆಗೆ ಮರಣ ಬಂತು. ಅವರ ಸಂತತಿಯವರು ಸ್ವಾತಂತ್ರ್ಯದ ಈ ನಷ್ಟವನ್ನು ಬಾಧ್ಯತೆಯಾಗಿ ಹೊಂದಿದರು. “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.” “ಪಾಪವು ಕೊಡುವ ಸಂಬಳ ಮರಣ.”—ರೋಮಾಪುರ 3:23; 5:12; 6:23.
13. ಸೈತಾನನು ಮಾನವರನ್ನು ಯಾಕೆ ಗುಲಾಮರನ್ನಾಗಿ ಮಾಡಶಕ್ತನಾಗಿದ್ದಾನೆ?
13 ಏದೇನಿನಲ್ಲಿನ ದಂಗೆಯ ಕಾರಣದಿಂದಾಗಿ, ಆದಾಮ ಮತ್ತು ಅವನ ಸಂತಾನವು ಪಿಶಾಚನಾದ ಸೈತಾನನ ದಾಸತ್ವದೊಳಗೆ ಬಂದರು. ಯಾಕೆ, “ಇಡೀ ಲೋಕವು ಕೆಡುಕನ ವಶದಲ್ಲಿ ಬಿದಿದ್ದೆ!” (1 ಯೋಹಾನ 5:19) ಅವನ ಉಚ್ಛ ಶಕ್ತಿ ಮತ್ತು ಸಾಮರ್ಥ್ಯದಿಂದಾಗಿಯೇ ಸೈತಾನನು ದೇವರಿಂದ ಅಗಲಿಸಲ್ಪಟ್ಟ ಮಾನವಕುಲವನ್ನು ವಂಚಿಸಿ, ಗುಲಾಮರನ್ನಾಗಿ ಮಾಡಶಕ್ತನಾಗಿದ್ದಾನೆ. ಇನ್ನೂ ಹೆಚ್ಚಾಗಿ, ಸ್ವಾರ್ಥಿಯಾದ ಮನುಷ್ಯರು ಜೊತೆ ಮಾನವರ ಮೇಲೆ ಅಧಿಕಾರ ಚಲಾಯಿಸಿ, ಹಾನಿಗೆ ನಡಿಸಿದ್ದಾರೆ. (ಪ್ರಸಂಗಿ 8:9) ಹೀಗಿರುವುದರಿಂದ, ಸರ್ವಸಾಮಾನ್ಯ ಮಾನವಕುಲವು ಇಂದು ಪಾಪ ಮತ್ತು ಮರಣ, ಸೈತಾನ ಮತ್ತು ಅವನ ದೆವ್ವಗಳಿಗೆ ಮತ್ತು ಲೋಕದ ರಾಜಕೀಯ, ಆರ್ಥಿಕ ಮತ್ತು ಧಾರ್ಮಿಕ ಸಂಸ್ಥಾಪನೆಗಳಿಗೆ ಗುಲಾಮರಾಗಿರುತ್ತಾರೆ.
ನಿಜ ಸ್ವಾತಂತ್ರ್ಯವು ಸಾಧ್ಯಮಾಡಲ್ಪಟ್ಟಿರುವುದು
14. ನಿಜ ಸ್ವಾತಂತ್ರ್ಯತೆಯ ಮಾನವ ಕುಲದ ನಿರೀಕ್ಷೆಯು ಯಾವುದರೊಂದಿಗೆ ಕಟ್ಟಲ್ಪಟ್ಟಿದೆ?
14 ಪಾಪ, ಮರಣ, ಮತ್ತು ಪಿಶಾಚನು ಹಾಗೂ ಅವನ ಲೋಕದಿಂದ ಸ್ವಾತಂತ್ರ್ಯವನ್ನು ಪಡೆಯುವುದು, ತನ್ನ ಸ್ವಂತ ವಿಶ್ವಸಾರ್ವಭೌಮತೆಯ ಯುಕ್ತತೆಯ ಕುರಿತಾದ ವಾದಾಂಶವನ್ನು ಇತ್ಯರ್ಥಗೊಳಿಸುವ ದೇವರ ನಿರ್ಧಾರದೊಂದಿಗೆ ಕಟ್ಟಲ್ಪಟ್ಟಿದೆ. ಸೈತಾನನು ಈ ವಾದಾಂಶವನ್ನು ಎಬ್ಬಿಸಿದರ್ದಿಂದ, ಫರೋಹನು ಸ್ವಲ್ಪ ಸಮಯಕ್ಕೆ ಅಸ್ತಿತ್ವದಲ್ಲಿರಲು ಆತನು ಅನುಮತಿಸಿದಂತೆ, ಯೆಹೋವನು ಸೈತಾನನನ್ನು ಅಸ್ತಿತ್ವದಲ್ಲಿರುವಂತೆ ಸಮಯವನ್ನು ಕೊಟ್ಟಿರುತ್ತಾನೆ. ಇದು ಯಾಕಂದರೆ ಯೆಹೋವನು ತನ್ನ ಶಕ್ತಿಯನ್ನು ಪೂರ್ಣವಾಗಿ ಪ್ರದರ್ಶಿಸಲು ಮತ್ತು ಇಡೀ ಲೋಕದಲ್ಲಿ ಅವನ ಹೆಸರು ಘೋಷಿಸಲ್ಪಡಲಿಕ್ಕಾಗಿಯೇ. (ವಿಮೋಚನಕಾಂಡ 9:15, 16) ದೇವರು ಶೀಘ್ರದಲ್ಲಿಯೇ ವಿಶ್ವ ಸಾರ್ವಭೌಮನಾಗಿ ತನ್ನನ್ನು ಸಮರ್ಥಿಸಿಕೊಳ್ಳಲಿಕ್ಕಿದ್ದಾನೆ ಮತ್ತು ಸೈತಾನನು, ಆದಾಮ ಮತ್ತು ಹವ್ವರ ದಂಗೆಯ ಮೂಲಕ ತನ್ನ ಪವಿತ್ರ ನಾಮದ ಮೇಲೆ ತಂದಿರುವ ಅಪಮಾನವನ್ನು ತೆಗೆಯುವ ಮೂಲಕ ಅವನ ಪವಿತ್ರ ನಾಮವನ್ನು ಸಮರ್ಥಿಸಲಿರುವನು. ಹೀಗೆ, ಯೆಹೋವನಿಗೆ ಭಯಪಡುವವರು ಪಾಪ ಮತ್ತು ಮರಣದ ದಾಸತ್ವದಿಂದ ಬಿಡುಗಡೆಗೊಳಿಸಲ್ಪಡುವರು ಮತ್ತು ದೇವ-ದತ್ತ ಸ್ವಾತಂತ್ರ್ಯದ ಒಂದು ಹೊಸ ಲೋಕದೊಳಗೆ ತರಲ್ಪಡುವರು.—ರೋಮಾಪುರ 8:19-23.
15. ಮಾನವಕುಲಕ್ಕೆ ಸ್ವಾತಂತ್ರ್ಯವನ್ನು ಪುನಃ ಸ್ಥಾಪಿಸುವುದರಲ್ಲಿ ಯೇಸುವು ಯಾವ ಪಾತ್ರವನ್ನು ಆಡಿದನು?
15 ಮಾನವಕುಲಕ್ಕೆ ಸ್ವಾತಂತ್ರ್ಯವನ್ನು ಪುನಃಸ್ಥಾಪಿಸಲು, ದೇವರು ತನ್ನ ಮಗನನ್ನು ಒಬ್ಬ ಮಾನವನನ್ನಾಗಿ ಈ ಭೂಮಿಗೆ ಕಳುಹಿಸಿದನು. ಆತನ ಪರಿಪೂರ್ಣ ಮಾನವ ಜೀವವನ್ನು ಸ್ವಂತ ಇಚ್ಛೆಯಿಂದ ಬಿಟ್ಟು ಕೊಡುವ ಮೂಲಕ, ದೇವರ ಮಗನಾದ ಯೇಸು ಕ್ರಿಸ್ತನು ಮಾನವ ಕುಲವನ್ನು ಬಿಡುಗಡೆಗೊಳಿಸಲು ಆಧಾರವಾಗಿರುವ, ವಿಮೋಚನಾ ಯಜ್ಞವನ್ನು ಒದಗಿಸಿದನು. (ಮತ್ತಾಯ 20:28) ಅವನು ಸ್ವಾತಂತ್ರ್ಯದ ಒಂದು ಸಂದೇಶವನ್ನೂ ಘೋಷಿಸಿದನು. ಅವನ ಶುಶ್ರೂಷೆಯ ಆರಂಭದಲ್ಲಿ, ಈ ಮಾತುಗಳನ್ನು ತನಗೆ ಅನ್ವಯಿಸಿದನು: “ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿ ಮಾಡುವದಕ್ಕೂ ಸೆರೆಯವರಿಗೆ ಬಿಡುಗಡೆಯಾಗುವುದನ್ನು, ಬಂಧಿಗಳಿಗೆ ಕದ ತೆರೆಯುವದನ್ನು ಪ್ರಸಿದ್ಧಪಡಿಸುವುದಕ್ಕೂ . . . ನನ್ನನ್ನು ಕಳುಹಿಸಿದ್ದಾನೆ.”—ಯೆಶಾಯ 61:1; ಲೂಕ 4:16-21.
16. ನಿಜ ಸ್ವಾತಂತ್ರ್ಯವನ್ನು ಪಡೆಯಲಿಕ್ಕಾಗಿ ಮೊದಲನೆಯ ಶತಮಾನದ ಯೆಹೂದ್ಯರು ಯಾವ ಹೆಜ್ಜೆಗಳನ್ನು ತಕ್ಕೊಳ್ಳಬೇಕಾಗಿತ್ತು?
16 ಜನರು ಆ ಸ್ವಾತಂತ್ರ್ಯವನ್ನು ಹೇಗೆ ಗಳಿಸುವರು? ಯೇಸು ಹೇಳಿದ್ದು: “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿದ್ದು ಸತ್ಯವನ್ನು ತಿಳುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು.” ಹೀಗೆ, ಯೇಸುವಿನ ಹಿಂಬಾಲಕರು ಆತ್ಮಿಕ ಸ್ವಾತಂತ್ರ್ಯದಲ್ಲಿ ಆನಂದಿಸುತ್ತಾರೆ. (ಯೋಹಾನ 8:31, 32, 36) ಮುಂದೆ, ಯೇಸು ರೋಮನ್ ಪ್ರಾಂತ್ಯಾಧಿಪತಿ ಪೊಂತ್ಯ ಪಿಲಾತನಿಗೆ ಹೀಗಂದನು. “ನಾನು ಸತ್ಯದ ವಿಷಯದಲ್ಲಿ ಸಾಕ್ಷಿ ಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ. ಸತ್ಯಪರರೆಲ್ಲರು ನನ್ನ ಮಾತಿಗೆ ಕಿವಿಗೊಡುತ್ತಾರೆ.” (ಯೋಹಾನ 18:37) ಯೇಸುವಿನಿಂದ ಸಾರಲ್ಪಟ್ಟ ಮತ್ತು ದೃಷ್ಟಾಂತಿಸಲ್ಪಟ್ಟ ಸತ್ಯವನ್ನು ಸ್ವೀಕರಿಸಿದ ಯೆಹೂದ್ಯರು ತಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಟ್ಟರು, ತಮ್ಮ ತಪ್ಪು ಮಾರ್ಗಕ್ರಮವನ್ನು ಸರಿಪಡಿಸಿದರು, ಯೆಹೋವನಿಗೆ ತಮ್ಮನ್ನೇ ನೀಡಿಕೊಂಡರು ಮತ್ತು ಯೇಸುವಿನಂತೆ ದೀಕ್ಷಾಸ್ನಾನ ಪಡೆದರು. (ಮತ್ತಾಯ 3:13-17; ಅ. ಕೃತ್ಯಗಳು 3:19) ಈ ರೀತಿಯಲ್ಲಿ ಅವರು ಸಂಬಂಧಕ ದೇವ-ದತ್ತ ಸ್ವಾತಂತ್ರ್ಯದಲ್ಲಿ ಆನಂದಿಸಶಕ್ತರಾದರು.
17. ಯೆಹೋವನು ತನ್ನ ಸೇವಕರಿಗೆ ಯಾಕೆ ಸ್ವಾತಂತ್ರ್ಯವನ್ನು ಕೊಡುತ್ತಾನೆ?
17 ಯೆಹೋವನು ತನ್ನ ನಿಷ್ಠಾವಂತ ಸೇವಕರಿಗೆ ಸ್ವಾತಂತ್ರ್ಯವನ್ನು ಪ್ರಾಮುಖ್ಯವಾಗಿ ಅವನ ಸ್ವಂತ ಸಾರ್ವಭೌಮತೆಯ ಸಮರ್ಥನೆಗಾಗಿಯೂ, ಆದರೆ ಅವರ ನೆಮ್ಮದಿ ಮತ್ತು ಪ್ರಯೋಜನಕ್ಕಾಗಿಯೂ ಕೊಟ್ಟಿರುತ್ತಾನೆ. ಅವನ ಸಾಕ್ಷಿಗಳಾಗಿ, ಯಾಜಕರ ಒಂದು ರಾಜ್ಯದೋಪಾದಿ ಅವನನ್ನು ಘನತೆಗೊಳಿಸಲು ಶಕ್ತರನ್ನಾಗಿ ಮಾಡಲು, ಅವನು ಇಸ್ರಾಯೇಲ್ಯರನ್ನು ಐಗುಪ್ತ್ಯದ ದಾಸತ್ವದಿಂದ ಬಿಡುಗಡೆಗೊಳಿಸಿದನು. (ವಿಮೋಚನಕಾಂಡ 19:5, 6; ಯೆಶಾಯ 43:10-12) ತದ್ರೀತಿಯಲ್ಲಿ, ಮುಖ್ಯವಾಗಿ ಅವನ ಆಲಯವನ್ನು ಪುನಃ ಕಟ್ಟಿಸಲು ಮತ್ತು ಸತ್ಯಾರಾಧನೆಯನ್ನು ಪುನಃ ಸ್ಥಾಪಿಸಲು ಯೆಹೋವನು ಅವನ ಜನರನ್ನು ಬಬಿಲೊನ್ಯ ಬಂಧೀವಾಸದಿಂದ ಹೊರತಂದನು. (ಎಜ್ರ 1:2-4) ಬಂಧೀವಾಸಿಗಳು ತಮ್ಮ ಸ್ವಂತ ಐಹಿಕ ಸೌಕರ್ಯಗಳಲ್ಲಿ ಮಾತ್ರ ಆಸಕ್ತರಾಗಿದ್ದಾಗ, ದೇವರ ಮುಂದೆ ಅವರ ಹಂಗುಗಳ ವಿಷಯದಲ್ಲಿ ಅವರನ್ನು ಎಚ್ಚರಿಸಲು ಯೆಹೋವನು ತನ್ನ ಪ್ರವಾದಿಗಳಾದ ಹಗ್ಗಾಯ ಮತ್ತು ಜೆಕರ್ಯರನ್ನು ಕಳುಹಿಸಿದನು. ಅವರ ದೇವ-ದತ್ತ ಸ್ವಾತಂತ್ರ್ಯವು ಹೀಗೆ ಸರಿಯಾದ ಸ್ಥಾನದಲ್ಲಿ ಹಾಕಲ್ಪಟ್ಟಿರುವುದು, ದೇವರ ಮಹಿಮೆಗೆ, ಆಲಯದ ಪೂರ್ಣಗೊಳಿಸುವಿಕೆಗೆ ಮತ್ತು ಆತನ ಜನರ ನೆಮ್ಮದಿ ಹಾಗೂ ಕ್ಷೇಮಕ್ಕೆ ಕೂಡ ನಡಿಸಿತು.
ದೇವ-ದತ್ತ ಸ್ವಾತಂತ್ರ್ಯದ ಉದ್ದೇಶವನ್ನು ಕಳಕೊಳ್ಳದಿರುವುದು
18. ಯೆಹೋವನ ಆಧುನಿಕ ದಿನದ ಸೇವಕರು ದೇವ-ದತ್ತ ಸ್ವಾತಂತ್ರ್ಯದ ಉದ್ದೇಶವನ್ನು ಕಳಕೊಂಡಿಲ್ಲ ಎಂದು ಏಕೆ ಹೇಳಬಹುದು?
18 ದೇವರ ಆಧುನಿಕ ದಿನದ ಸೇವಕರ ಕುರಿತಾಗಿ ಏನು? ಒಂದು ಸಂಸ್ಥೆಯೋಪಾದಿ, ಅವರು ದೇವ-ದತ್ತ ಸ್ವಾತಂತ್ರ್ಯದ ಉದ್ದೇಶವನ್ನು ಕಳಕೊಂಡಿರುವುದಿಲ್ಲ. 1870 ಗಳಲ್ಲಿ, ಬಬಿಲೊನ್ಯ ತಪ್ಪುಗಳಿಂದ ಅವರು ಬಿಡುಗಡೆಗೊಳ್ಳಲು ಆರಂಭಿಸಿದರು ಮತ್ತು ಹೆಚ್ಚಿನ ಕ್ರೈಸ್ತ ಸ್ವಾತಂತ್ರ್ಯವನ್ನು ಆನಂದಿಸಿದರು. ಜ್ಞಾನೋಕ್ತಿ 4:18 ಕ್ಕೆ ಇದು ಹೊಂದಿಕೆಯಲ್ಲಿತ್ತು. ಅದನ್ನುವುದು: “ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.” ಆದರೂ, ಪುರಾತನ ಕಾಲದ ದೇವ ಜನರು ಸ್ವಲ್ಪ ಸಮಯದ ತನಕ ಬಬಿಲೊನ್ಯ ಬಂಧೀವಾಸದೊಳಗೆ ಕೊಂಡೊಯ್ಯಲ್ಪಟ್ಟಂತೆ, 1918 ರಲ್ಲಿ ಯೆಹೋವನು ಸೇವಕರು ಕೆಲವೊಂದು ಮಟ್ಟಿಗೆ ಮಹಾ ಬಬಿಲೊನಿನ ದಾಸತ್ವದೊಳಗೆ ಬಂದರು. (ಪ್ರಕಟನೆ 17:1, 2, 5) ಸಾಂಕೇತಿಕ “ಎರಡು ಸಾಕ್ಷಿಗಳು” ಆತ್ಮಿಕವಾಗಿ ಸತ್ತುಬಿದ್ದಿರುವಾಗ, ಸುಳ್ಳುಧರ್ಮದ ಲೋಕ ಸಾಮ್ರಾಜ್ಯದ ಸದಸ್ಯರು ಹರ್ಷಪಟ್ಟರು. ಆದರೆ ದೇವರ ಅಪಾತ್ರ ಕೃಪೆಯಿಂದಾಗಿ, 1919 ರಲ್ಲಿ ಅವನ ಅಭಿಷಿಕ್ತ ಸೇವಕರು ಪುನಃಶ್ಚೇತನಗೊಳಿಸಲ್ಪಟ್ಟರು, ಆತ್ಮಿಕವಾಗಿ ಬಿಡುಗಡೆಗೊಳಿಸಲ್ಪಟ್ಟರು. (ಪ್ರಕಟನೆ 11:3, 7-11) ಅವರ ದೇವ-ದತ್ತ ಸ್ವಾತಂತ್ರ್ಯವನ್ನು ಉಪಯೋಗಕ್ಕೆ ಹಾಕುತ್ತಾ ಅವರು ಸರ್ವೋನ್ನತನ ಉತ್ಸಾಹಭರಿತ ಸಾಕ್ಷಿಗಳಾದರು. ಆದುದರಿಂದ 1931 ರಲ್ಲಿ ಅವರು ಯೆಹೋವನ ಸಾಕ್ಷಿಗಳೆಂಬ ಹೆಸರನ್ನು ಆನಂದದಿಂದ ಅಂಗೀಕರಿಸಿದ್ದು ಎಷ್ಟೊಂದು ತಕ್ಕದ್ದಾಗಿದೆ! (ಯೆಶಾಯ 43:10-12) ನಿರ್ದಿಷ್ಟವಾಗಿ 1935 ರಿಂದ, ಈ ಭೂಮಿಯ ಮೇಲೆ ನಿತ್ಯಜೀವವನ್ನು ಪಡೆಯಲು ಆಶಿಸುವ “ಒಂದು ಮಹಾ ಸಮೂಹವು” ಅಭಿಷಿಕ್ತ ಸಾಕ್ಷಿಗಳೊಂದಿಗೆ ಜತೆಗೂಡಿದ್ದಾರೆ. ಅವರೂ ದೇವ-ದತ್ತ ಸ್ವಾತಂತ್ರ್ಯದ ಉದ್ದೇಶವನ್ನು ಕಳಕೊಳ್ಳುತ್ತಿಲ್ಲ.—ಪ್ರಕಟನೆ 7:9-17.
19, 20. (ಎ) ಯೆಹೋವನ ಜನರು ತಮ್ಮ ದೇವ-ದತ್ತ ಸ್ವಾತಂತ್ರ್ಯವನ್ನು ಒಳ್ಳೆಯ ಉಪಯೋಗಕ್ಕೆ ಹಾಕುವ ಒಂದು ಗಮನಾರ್ಹ ಮಾರ್ಗ ಯಾವುದು? (ಬಿ) ದೇವರು ಅವರಿಗೆ ಕೊಟ್ಟಿರುವ ಸ್ವಾತಂತ್ರ್ಯದ ಒಳ್ಳೆಯ ಉಪಯೋಗವನ್ನು ಯೆಹೋವನ ಸಾಕ್ಷಿಗಳು ಬೇರೆ ಯಾವ ಪ್ರಮುಖ ರೀತಿಯಲ್ಲಿ ಬಳಸುತ್ತಾರೆ?
19 ಯೆಹೋವನ ಜನರು ಅವರ ದೇವ-ದತ್ತ ಸ್ವಾತಂತ್ರ್ಯವನ್ನು ವಿಶೇಷವಾಗಿ ಎರಡು ಗಮನಾರ್ಹ ರೀತಿಗಳಲ್ಲಿ ಒಳ್ಳೆಯ ಉಪಯೋಗಕ್ಕೆ ಹಾಕುತ್ತಿದ್ದಾರೆ. ಒಂದು ವಿಷಯವೇನಂದರೆ, ಅವರದನ್ನು ಒಂದು ಯಥಾರ್ಥವಾದ ಮಾರ್ಗವನ್ನು ಬೆನ್ನಟಲ್ಟು ಉಪಯೋಗಿಸುತ್ತಾರೆ. (1 ಪೇತ್ರ 2:16) ಮತ್ತು ಅವರಿಗೆ ಎಂಥ ಒಂದು ಒಳ್ಳೆಯ ಪ್ರಖ್ಯಾತಿ ಇದೆ! ಉದಾಹರಣೆಗಾಗಿ, ಸ್ವಿಟ್ಜರ್ಲ್ಯಾಂಡಿನ ಜ್ಯೂರಿಕ್ನಲ್ಲಿರುವ ಒಂದು ರಾಜ್ಯ ಸಭಾಗೃಹದಲ್ಲಿ ಒಬ್ಬ ಮನುಷ್ಯನು ಒಳಪ್ರವೇಶಿಸಿದನು, ಮತ್ತು ಒಬ್ಬ ಯೆಹೋವನ ಸಾಕ್ಷಿಯಾಗಲು ತಾನು ಬಯಸುತ್ತೇನೆ ಎಂದು ಹೇಳಿದನು. ಯಾಕೆ ಎಂದು ಪ್ರಶ್ನಿಸಲ್ಪಟ್ಟಾಗ, ಅವನು ತಿಳಿಸಿದ್ದೇನಂದರೆ ಅವನ ಸಹೋದರಿ ಒಬ್ಬ ಸಾಕ್ಷಿಯಾಗಿದಳ್ದು ಮತ್ತು ಅನೈತಿಕತೆಗಾಗಿ ಅವಳನ್ನು ಬಹಿಷ್ಕರಿಸಲಾಯಿತು, ಅವನಂದದ್ದು: ‘ಅಂಥ ಸಂಸ್ಥೆಯನ್ನು—ಯಾವುದು ಕೆಟ್ಟ ನಡತೆಯನ್ನು ಸಹಿಸುವುದಿಲ್ಲವೋ ಅದನ್ನು—ನಾನು ಸೇರಲು ಬಯಸುತ್ತೇನೆ.’ ಸಕಾರಣದಿಂದಲೇ ನ್ಯೂ ಕ್ಯಾಥಲಿಕ್ ಎನ್ಸೈಕ್ಲೊಪೀಡಿಯಾ ವು ಗಮನಿಸಿದ್ದೇನಂದರೆ ಯೆಹೋವನ ಸಾಕ್ಷಿಗಳು “ಲೋಕದಲ್ಲಿನ ಉತ್ತಮ ನಡಾವಳಿಯ ಗುಂಪುಗಳಲ್ಲಿ ಒಂದಾಗಿರುತ್ತದೆ” ಎಂಬ ಸತ್ಕೀರ್ತಿಯನ್ನು ಪಡೆದಿದೆ.
20 ಯೇಸು ಮಾಡಿದಂತೆ, ರಾಜ್ಯದ ಸುವಾರ್ತೆಯನ್ನು ಪ್ರಚಾರ ಮಾಡುವ ನಿಯೋಗವನ್ನು ಪೂರೈಸುವ ಮೂಲಕವೂ ಯೆಹೋವನ ಸಾಕ್ಷಿಗಳು ತಮ್ಮ ದೇವ-ದತ್ತ ಸ್ವಾತಂತ್ರ್ಯವನ್ನು ಬಳಸುತ್ತಾರೆ. (ಮತ್ತಾಯ 4:17) ಬಾಯಿಮಾತಿನಿಂದ ಮತ್ತು ಮುದ್ರಿತ ಪುಟಗಳ ಮೂಲಕ, ಅವರು ವಿಧಿವತ್ತಾಗಿ ಮತ್ತು ಅವಿಧಿಯಾಗಿ, ಹೀಗೆ ಎರಡು ರೀತಿಗಳಲ್ಲೂ ಅವರು ಯೆಹೋವನ ರಾಜ್ಯವನ್ನು ಪ್ರಕಟಪಡಿಸುತ್ತಿದ್ದಾರೆ. ಹಾಗೆ ಮಾಡುವುದರಿಂದ ಅವರ ನಂಬಿಕೆಯನ್ನು ದೃಢಗೊಳಿಸುವ ಮತ್ತು ಅವರ ನಿರೀಕ್ಷೆಯನ್ನು ಉಜ್ವಲಗೊಳಿಸುವ ಮೂಲಕ ಅವರು ತಾವೇ ಮಹತ್ತರವಾದ ಪ್ರಯೋಜನವನ್ನು ಪಡೆಯುತ್ತಾರೆ. ಇನ್ನೂ ಹೆಚ್ಚಾಗಿ, ಈ ಚಟುವಟಿಕೆಯು, ಅವರನ್ನು ಮತ್ತು ಅವರಿಗೆ ಕಿವಿಗೊಡುವವರನ್ನು ರಕ್ಷಿಸಲು ಉಪಯುಕ್ತವಾಗಿದೆ. (1 ತಿಮೊಥಿ 4:16) ಈ ಚಟುವಟಿಕೆಯ ಕುರಿತಾಗಿ ಡೈನಮಿಕ್ ರಿಲಿಜ್ಯಸ್ ಮೂವ್ಮೆಂಟ್ ಪುಸ್ತಕವು ಹೇಳುವುದು: “ಸಾಕ್ಷಿಗಳು ಮಾಡುವಂತೆ, ತಮ್ಮ ಧರ್ಮಕ್ಕಾಗಿ ಇಷ್ಟು ಶ್ರಮಪಡುವ ಸದಸ್ಯರನ್ನು ಇನ್ನಿತರ ಗುಂಪುಗಳಲ್ಕಿ ಕಾಣಸಿಗುವುದು ಕಷ್ಟಕರ.”
21. ಯೆಹೋವನು ಆತನ ಜನರ ಶುಶ್ರೂಷೆಯನ್ನು ಆಶೀರ್ವದಿಸುತ್ತಿದ್ದಾನೆಂಬದಕ್ಕೆ ಯಾವ ರುಜುವಾತಿದೆ?
21 ನಮ್ಮ ದೇವ-ದತ್ತ ಸ್ವಾತಂತ್ರ್ಯದ ಉದ್ದೇಶವನ್ನು ನಡಿಸುವುದರಲ್ಲಿ ಯೆಹೋವನು ನಮ್ಮನ್ನು ಎಷ್ಟೊಂದು ಆಶೀರ್ವದಿಸಿದ್ದಾನೆ!—ಕಳೆದ ವರ್ಷದ ಸೇವಾ ವರದಿಯಲ್ಲಿ ಇದನ್ನು ನೋಡಬಹುದು—ರಾಜ್ಯ ಪ್ರಚಾರಕರಲ್ಲಿ 40 ಲಕ್ಷಕ್ಕಿಂತಲೂ ಹೆಚ್ಚಿನ ಉನ್ನತ ಸಂಖ್ಯೆಯು, ಇವರೊಂದಿಗೆ ಯೇಸುವಿನ ಮರಣದ ಜ್ಞಾಪಕಾಚರಣೆಗೆ 1 ಕೋಟಿಗಿಂತಲೂ ಹೆಚ್ಚಿನ ಜನರು ಹಾಜರಿದ್ದರು. ಒಂದು ಸಮೀಕ್ಷೆಯಲ್ಲಿ, ಆಯರ್ಲೇಂಡಿನಲ್ಲಿ ಕ್ರಮಾನುಗತವಾಗಿ 29 ಮಾಸಿಕ ಪ್ರಚಾರಕರ ಉಚ್ಛಾಂಕಗಳಿದ್ದವು, ಮೆಕ್ಸಿಕೊಗೆ 80 ತಿಂಗಳುಗಳಲ್ಲಿ 78 ಪರಮಾಂಕಗಳಿದ್ದವು; ಮತ್ತು ಜಾಪಾನಿಗೆ ಒಂದು ಸರಣಿಯಲ್ಲಿ 153 ಉಚ್ಛಾಂಕಗಳಿದ್ದವು!
ನಿಮ್ಮ ದೇವ-ದತ್ತ ಸ್ವಾತಂತ್ರ್ಯದ ಒಳ್ಳೆಯ ಉಪಯೋಗ ಮಾಡಿರಿ
22. ನಮ್ಮನ್ನು ನಾವೇ ಕೇಳಿಕೊಳ್ಳಬಹುದಾದ ವಿಚಾರ-ಪ್ರೇರಕ ಪ್ರಶ್ನೆಗಳ ಸಾರವೇನು?
22 ಯೆಹೋವನ ಸಮರ್ಪಿತ ಸಾಕ್ಷಿಗಳಲ್ಲಿ ನೀವು ಒಬ್ಬರಾಗಿರುವುದಾದರೆ, ದೇವರು ನಿಮಗೆ ಕೊಟ್ಟಿರುವ ಸ್ವಾತಂತ್ರ್ಯದ ಸದುಪಯೋಗವನ್ನು ಮಾಡುತ್ತಾ ಇದ್ದೀರೊ? ನಮ್ಮಲ್ಲಿ ಪ್ರತಿಯೊಬ್ಬರು ಸ್ವಂತವಾಗಿ ತಮಗೆ ಹೀಗೆ ಕೇಳಿಕೊಳ್ಳಬಹುದು: ‘ತಪ್ಪು ನಡತೆಯಿಂದಾಗಿ ಯಾರಾದರೂ ಎಡವಿ ಬೀಳುವುದನ್ನು ತಪ್ಪಿಸುವಂತೆ ನನ್ನ ದೇವ-ದತ್ತ ಸ್ವಾತಂತ್ರ್ಯವನ್ನು ಉಪಯೋಗಿಸುವಾಗ ನಾನು ಜಾಗೃತನಾಗಿರುತ್ತೇನೊ? ದೇವರ ನಿಯಮವನ್ನು ಮೊದಲು ಇಡುವದಾದರೂ, ನಾನು ನ್ಯಾಯ ನಿಷ್ಠೆಯಿಂದ ಕೈಸರನ ನಿಯಮಗಳಿಗೆ ವಿಧೇಯನಾಗುತ್ತೇನೊ? ಸಭೆಯ ಹಿರಿಯರೊಂದಿಗೆ ನಾನು ಪೂರ್ಣವಾಗಿ ಸಹಕರಿಸುತ್ತೇನೊ? ಸುವಾರ್ತೆಯನ್ನು ಸಾರುವುದರಲ್ಲಿ ನಾನು ನನ್ನ ದೇವ-ದತ್ತ ಸ್ವಾತಂತ್ರ್ಯವನ್ನು ಪೂರ್ಣವಾಗಿ ಉಪಯೋಗಿಸುತ್ತಿದ್ದೇನೊ? “ಕರ್ತನ ಕೆಲಸದಲ್ಲಿ ಹೆಚ್ಚನ್ನು ಮಾಡುವದರಲ್ಲಿ” ನಾನು ಯಾವಾಗಲೂ ಮಗ್ನನಾಗಿರುತ್ತೇನೊ? ನನ್ನ ಶುಶ್ರೂಷೆಯನ್ನು ವಿಸ್ತರಿಸಲು, ಸಭೆಯಲ್ಲಿ ಹೆಚ್ಚಿನ ಜವಾಬ್ದಾರಿಕೆಗಳಿಗೆ ಯಾ ಪೂರ್ಣ ಸಮಯದ ಸೇವೆಗಾಗಿ ಎಟಕಿಸಿಕೊಳ್ಳುವ ಮೂಲಕ ನನ್ನ ದೇವ-ದತ್ತ ಸ್ವಾತಂತ್ರ್ಯವನ್ನು ಉತ್ತಮ ಉಪಯೋಗಕ್ಕೆ ಹಾಕಲು ಸಾಧ್ಯತೆಗಳಿರುವಾಗ, ನಾನು ಅತಿ ಹೆಬ್ಬಯಕೆಯಿಂದ ಒಂದು ಲೌಕಿಕ ಜೀವನೋಪಾಯದ ಬೆನ್ನಟ್ಟುತ್ತಾ ಇದೇನ್ದೊ?’—1 ಕೊರಿಂಥ 15:58.
23. ದೇವ-ದತ್ತ ಸ್ವಾತಂತ್ರ್ಯದ ಉದ್ದೇಶವನ್ನು ಕಳಕೊಳ್ಳದಂತೆ ನಾವೇನು ಮಾಡಬೇಕು?
23 ನಾವೆಲ್ಲರೂ “ಯೆಹೋವನು ಸರ್ವೂತಮ್ತನೆಂದು ಅನುಭವ ಸವಿದು” ನೋಡೋಣ. (ಕೀರ್ತನೆ 34:8,ಬಿ) ನಾವು ಆತನಲ್ಲಿ ಭರವಸೆಯನ್ನು ಇಡೋಣ, ಆತನ ನಿಯಮಗಳನ್ನು ಅನುಸರಿಸೋಣ, ಮತ್ತು ಆತನ ರಾಜ್ಯವನ್ನು ಉತ್ಸಾಹದಿಂದ ಪ್ರಕಟಪಡಿಸುವ ಮೂಲಕ ಆತನ ಪವಿತ್ರ ನಾಮವನ್ನು ಘನಪಡಿಸೋಣ. ನೆನಪಿಡಿರಿ, ಏನಂದರೆ “ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು.” (2 ಕೊರಿಂಥ 9:6) ಆದುದರಿಂದ, ನಾವು ಯೆಹೋವನಿಗೆ ಪೂರ್ಣ ಹೃದಯದ ಸೇವೆಯನ್ನು ಸಲ್ಲಿಸೋಣ ಮತ್ತು ನಮ್ಮ ದೇವ-ದತ್ತ ಸ್ವಾತಂತ್ರ್ಯದ ಉದ್ದೇಶವನ್ನು ನಾವು ಕಳೆದುಕೊಳ್ಳಲಿಲ್ಲವೆಂಬುದನ್ನು ತೋರಿಸೋಣ.
ನೀವು ಹೇಗೆ ಉತ್ತರಿಸುವಿರಿ?
▫ ದೇವರಿಗೆ ಯಾವ ರೀತಿಯ ಸ್ವಾತಂತ್ರ್ಯವಿದೆ?
▫ ಮಾನವ ಸ್ವಾತಂತ್ರ್ಯಕ್ಕೆ ಯಾವ ಪರಿಮಿತಿಗಳಿವೆ?
▫ ನಿಜ ಸ್ವಾತಂತ್ರ್ಯ ಹೇಗೆ ಸಾಧ್ಯಮಾಡಲ್ಪಟ್ಟಿದೆ?
▫ ದೇವ-ದತ್ತ ಸ್ವಾತಂತ್ರ್ಯದ ಉದ್ದೇಶವನ್ನು ಕಳಕೊಳ್ಳುವದನ್ನು ತಡೆಯಲು ನಾವೇನು ಮಾಡಬೇಕು?
[ಪುಟ 9 ರಲ್ಲಿರುವ ಚಿತ್ರ]
ಮಾನವ ಸ್ವಾತಂತ್ರ್ಯವು ಗುರುತ್ವಾಕರ್ಷಣದ ನಿಯಮದಂತಹ ವಾಸ್ತವಾಂಶಗಳಿಂದ ಮಿತಗೊಳಿಸಲ್ಪಟ್ಟಿದೆ