ದೇವರ ರಾಜ್ಯ ಅನೇಕರಿಗೆ ಯಾವ ಅರ್ಥದಲ್ಲಿರುತ್ತದೆ?
ಯೇಸು ಕ್ರಿಸ್ತನು ಅನೇಕಾವರ್ತಿ ದೇವರ ರಾಜ್ಯದ ಕುರಿತು ಮಾತಾಡಿದನು. ಇದರ ಕುರಿತಾಗಿ ಏಚ್. ಜಿ. ವೆಲ್ಸ್ರು ಬರೆದದ್ದು: “ಸ್ವರ್ಗ ರಾಜ್ಯವೆಂದು ಅವನೇನನ್ನು ಕರೆದನೋ ಅದರ ಕುರಿತಾದ ಬೋಧನೆಗೆ ಯೇಸುವು ಬಹಳಷ್ಟು ಪ್ರಾಮುಖ್ಯತೆಯನ್ನು ಕೊಟ್ಟನು ಮತ್ತು ಕ್ರೈಸ್ತ ಚರ್ಚುಗಳ ಕ್ರಮವಿಧಾನಗಳಲ್ಲಿ ಮತ್ತು ಬೋಧನೆಗಳಲ್ಲಿ ಅದಕ್ಕೆ ತುಲನಾತ್ಮಕವಾಗಿ ಕೊಡುವ ನಿಕೃಷ್ಟತೆಯು ಗಮನಾರ್ಹವಾಗಿದೆ. ಪರಲೋಕ ರಾಜ್ಯದ ಈ ಬೋಧನೆಯು ಯೇಸುವಿನ ಪ್ರಮುಖ ಕಲಿಸುವಿಕೆಯಾಗಿತ್ತು ಮತ್ತು ಕ್ರೈಸ್ತ ಮತಸೂತ್ರಗಳಲ್ಲಿ ಅದು ಕೇವಲ ಚಿಕ್ಕ ಪಾತ್ರವನ್ನು ಆಡುತ್ತದೆ, ಆದರೂ ಮಾನವ ಆಲೋಚನೆಯನ್ನು ಕೆರಳಿಸಿದ ಮತ್ತು ಪರಿವರ್ತನೆಗೊಳಿಸಿದ ಅತಿ ಕ್ರಾಂತಿಕಾರಕ ಸಿದ್ಧಾಂತಗಳಲ್ಲಿ ಇದು ಒಂದಾಗಿರುತ್ತದೆ.”
ದೇವರ ರಾಜ್ಯದ ಕುರಿತಾಗಿ ಚರ್ಚುಗಳಿಗೆ ಏಕೆ ಇಷ್ಟು ಕೊಂಚ ಹೇಳಲಿಕ್ಕಿರುತ್ತದೆ? ರಾಜ್ಯದ ಕುರಿತಾಗಿರುವ ಅನಿಶ್ಚಯತೆಯು ಒಂದು ಕಾರಣವಾಗಿರಬಹುದು. ಅದರ ಕುರಿತು ಯಾವ ಅಭಿಪ್ರಾಯಗಳು ಪ್ರಚಲಿತದಲ್ಲಿರುತ್ತವೆ?
ರಾಜ್ಯವು ವೀಕ್ಷಿಸಲ್ಪಟ್ಟಿರುವ ವಿಧ
ಕೆಲವರು ದೇವರ ರಾಜ್ಯವನ್ನು ಕ್ಯಾಥಲಿಕ್ ಚರ್ಚಿನೊಂದಿಗೆ ಗುರುತಿಸಿದ್ದಾರೆ. ಸಾ. ಶ. 325 ನೆಯ ವರ್ಷದಲ್ಲಿ ಬಿಶಪರುಗಳು ಸಾಮ್ರಾಟ ಕಾನ್ಸ್ಟೆಂಟೀನ್ನನ್ನು ನಿಕೇಯಾದ ಕೌನ್ಸಿಲಿನಲ್ಲಿ ಅವರ ಮುಖಂಡನಾಗಿ ಸ್ವೀಕರಿಸಿದ ನಂತರ, ಚರ್ಚು ರಾಜಕೀಯದಲ್ಲಿ ಸೇರ್ಪಡೆಗೊಂಡಿತು, ಮತ್ತು ರಾಜ್ಯವು ಈಗಾಗಲೇ ಬಂದಿದೆ ಎಂದು ಜನರಿಗೆ ಹೇಳಲಾಯಿತು. ಎನ್ಸೈಕ್ಲೊಪಿಡೀಯಾ ಬ್ರಿಟ್ಯಾನಿಕ ವಿವರಿಸುತ್ತದೇನಂದರೆ ಆಗಸ್ಟೀನ್ನ (ಸಾ.ಶ. 354-430) ದೇವತಾಶಾಸ್ತ್ರಕ್ಕನುಸಾರ, “ಚರ್ಚಿನ ಸ್ಥಾಪನೆಯೊಂದಿಗೆ ದೇವರ ರಾಜ್ಯವು ಈ ಲೋಕದಲ್ಲಿ ಈಗಾಗಲೇ ಆರಂಭಗೊಂಡಿದೆ” ಮತ್ತು “ಚರ್ಚಿನ ಪವಿತ್ರ ಸಂಸ್ಕಾರಗಳಲ್ಲಿ ಅದು ಈಗಾಗಲೇ ಹಾಜರಿಯಲ್ಲಿರುತ್ತದೆ.”
ದೇವರ ರಾಜ್ಯವನ್ನು ಒಂದು ಮಾನವ ಗುರಿಸಾಧನೆಯೋಪಾದಿ ಇತರರು ವೀಕ್ಷಿಸುತ್ತಾರೆ. ಅದೇ ಎನ್ಸೈಕ್ಲೊಪೀಡಿಯಾವು ಹೇಳುವುದು: “ಪ್ರಾಟೆಸ್ಟಂಟ್ ಚರ್ಚುಗಳು . . . ಬಲುಬೇಗನೆ ಪ್ರಾಂತೀಯ ಚರ್ಚುಗಳಾದವು,” ಬರಲಿರುವ ದೇವರ ರಾಜ್ಯದ ಬರೋಣದ ಕುರಿತಾಗಿರುವ “ಅಂತ್ಯ-ಕಾಲದ ನಿರೀಕ್ಷಣೆಯನ್ನು ಅದುಮಿದರು.” ಏಚ್. ಜಿ. ವೆಲ್ಸ್ ಹೀಗೆ ಬರೆದರು: “ಮನುಷ್ಯರು ದೇವರ ರಾಜ್ಯ ಮತ್ತು ಮಾನವಕುಲದ ಸಹೋದರತ್ವದ ಮೇಲೆ ಅವರ ಜೀವಿತಗಳನ್ನು ಕೇಂದ್ರೀಕರಿಸುವುದರಿಂದ, ಜೀವಿಸುವ ವಾಸ್ತವಿಕತೆಗಳ ಕಡೆಗೆ, ಫ್ರಾನ್ಸ್ ಮತ್ತು ಇಂಗ್ಲೆಂಡ್, ಪವಿತ್ರ ರಶ್ಯ, ಸ್ಪೆಯಿನ್, ಪ್ರಶ್ಯಗಳ ಕಡೆಗೆ ತಿರುಗಿಸಿದರು ಎಂದು ಭಾಸವಾಗುತ್ತದೆ, . . . ಅವುಗಳು ಯೂರೋಪಿನ ವಾಸ್ತವಿಕ ಮತ್ತು ಜೀವಂತ ದೇವರುಗಳಾಗಿದ್ದವು.”
ಆಧುನಿಕ ಸಮಯಗಳಲ್ಲಿಯೂ, ರಾಜ್ಯವನ್ನು ಲೌಕಿಕವನ್ನಾಗಿ ಮಾಡಲಾಗಿದೆ. ಎನ್ಸೈಕ್ಲೊಪೀಡಿಯಾ ಬ್ರಿಟ್ಯಾನಿಕ ವಿವರಿಸುವುದು: “ಭವಿಷ್ಯದ ಪರಿಪೂರ್ಣ ಸಮಾಜವನ್ನು ಒಂದು ರೂಪುಗೊಳ್ಳುವ ಮತ್ತು ವ್ಯವಸ್ಥಾಪಿತ ರೀತಿಯಲ್ಲಿ ಮಾನವನು ತಾನೇ ತಯಾರಿಸಬೇಕು ಮತ್ತು ‘ನಿರೀಕ್ಷಣೆ ಮಾಡುವುದು’ ಮತ್ತು ‘ಕಾದುನಿಲ್ಲುವುದು’ ಮಾನವ ಮುಂತೊಡುಗುವಿಕೆಯಿಂದ ಸ್ಥಾನಪಲ್ಲಟಗೊಳಿಸಲ್ಪಟ್ಟಿದೆ ಎಂಬದು ಮೂಲಭೂತ ಮನೋಭಾವನೆಯ ವೈಶಿಷ್ಟ್ಯತೆಯಾಗಿದೆ.” “ಸಾಮಾಜಿಕ ಸುವಾರ್ತೆ” ಯ ಕುರಿತಾಗಿ ಅದೇ ಪರಾಮರ್ಶ ಕೃತಿಯು ಮುಂದರಿಸುವುದು: “ಈ ಚಳುವಳಿಯು ದೇವರ ರಾಜ್ಯದ ಕ್ರೈಸ್ತ ಸಂದೇಶವನ್ನು ಮುಖ್ಯವಾಗಿ, ಸಮಾಜದ ಲೌಕಿಕ ಸ್ಥಿತಿಗಳನ್ನು ಪುನಃ ವ್ಯವಸ್ಥಾಪನೆಗೊಳಿಸಲು ಮುಂದೊತ್ತುವುದು ದೇವರ ರಾಜ್ಯದ ನೀತಿಶಾಸ್ತ್ರದ ಒಂದರ್ಥವಾಗಿದೆ ಎಂದು ದೃಷ್ಟಿಸಲ್ಪಟ್ಟಿತು.”
ಹಲವಾರು ಯೆಹೂದ್ಯರು ಕೂಡ ರಾಜ್ಯವು ಒಂದು ಮಾನವ ಗುರಿಸಾಧನೆಯಾಗಿ ವೀಕ್ಷಿಸಿರುತ್ತಾರೆ. 1937 ರಲ್ಲಿ ಅಮೆರಿಕದ ಒಹಾಯೊ, ಕೊಲಂಬಸ್ನಲ್ಲಿ ನಡೆದ ಒಂದು ಸುಧಾರಕ ರಬ್ಬೀಗಳ ಸಮ್ಮೇಳನವು ಹೇಳಿದ್ದು: “ಭೂಮಿಯ ಮೇಲೆ ದೇವರ ರಾಜ್ಯ, ವಿಶ್ವವ್ಯಾಪೀ ಸಹೋದರತ್ವ, ನ್ಯಾಯ, ಸತ್ಯ ಮತ್ತು ಶಾಂತಿಯ ಸ್ಥಾಪನೆಗಾಗಿ ಎಲ್ಲಾ ಮನುಷ್ಯರೊಂದಿಗೆ ಸಹಕರಿಸುವುದನ್ನು ನಾವು ಒಂದು ಐತಿಹಾಸಿಕ ಕೆಲಸವಾಗಿ ಎಣಿಸುತ್ತೇವೆ. ಇದು ನಮ್ಮ ಉದ್ಧಾರತ್ಮಕ (ಮೆಸ್ಸೀಯಾನಿಕ್) ಗುರಿಯಾಗಿದೆ.”
ವ್ಯಾಪಕವಾಗಿ ವೀಕ್ಷಿಸಲ್ಪಟ್ಟಿರುವ ಇನ್ನೊಂದು ಅಭಿಪ್ರಾಯವೇನಂದರೆ ದೇವರ ರಾಜ್ಯವು ಒಬ್ಬನ ಹೃದಯದ ಪರಿಸ್ಥಿತಿಯಾಗಿದೆ. ಅಮೆರಿಕದಲ್ಲಿ, ಉದಾಹರಣೆಗಾಗಿ, 1925 ರ ಸದರ್ನ್ ಬಾಪ್ಟಿಸ್ಟ್ ಅಧಿವೇಶನವು ಘೋಷಿಸಿದ್ದು: “ಪ್ರತಿಯೊಂದು ಮಾನವ ಸಂಬಂಧದಲ್ಲಿ ವ್ಯಕ್ತಿಯ ಹೃದಯ ಹಾಗೂ ಜೀವಿತದಲ್ಲಿ ಮತ್ತು ವ್ಯವಸ್ಥಾಪಿತ ಸಮಾಜದ ಪ್ರತಿಯೊಂದು ರೂಪ ಮತ್ತು ಸಂಘಟನೆಯಲ್ಲಿ ದೇವರ ಆಳಿಕ್ವೆಯು ತಾನೇ ದೇವರ ರಾಜ್ಯವಾಗಿದೆ. . . . ಮನುಷ್ಯನ ಪ್ರತಿಯೊಂದು ಆಲೋಚನೆ ಮತ್ತು ಇಚ್ಛೆ ಕ್ರಿಸ್ತನ ಚಿತ್ತದೊಂದಿಗೆ ಸೆರೆಹಿಡಿಯಲ್ಪಟ್ಟಾಗ, ದೇವರ ರಾಜ್ಯವು ಸಂಪೂರ್ಣವಾಗುವುದು.”
ಹಾಗಾದರೆ, ಚರ್ಚು ದೇವರ ರಾಜ್ಯವಾಗಿದೆಯೇ? ಆ ರಾಜ್ಯವು ಐಹಿಕ ಮಾಧ್ಯಮಗಳ ಮೂಲಕ ತರಲ್ಪಡುವುದೋ? ಅದು ಹೃದಯದ ಒಂದು ಸ್ಥಿತಿಯಾಗಿರುವುದೋ? ಮತ್ತು ದೇವರ ರಾಜ್ಯವು ನಿಮಗೆ ಯಾವ ಅರ್ಥದಲ್ಲಿರಸಾಧ್ಯವಿದೆ? (w92 3/15)